ನೀವು ಸಕ್ಸಸ್ ಫುಲ್ ಕಾಲೇಜು ವಿದ್ಯಾರ್ಥಿ ಆಗಬೇಕಾದ್ರೆ ಈ ಹವ್ಯಾಸ ರೂಡಿಸಿಕೊಳ್ಳಿ

Written By: Nishmitha B

ಕಾಲೇಜಿನ ಮೊದಲ ದಿನ ವಿದ್ಯಾರ್ಥಿಗಳು ತುಂಬಾ ಖುಷಿ ಹಾಗೂ ಕಾತುರದಿಂದ ಇರುತ್ತಾರೆ. ಪ್ರತಿಯೊಂದು ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕೆಂದು ಮೊದಲೇ ನಿಶ್ಚಯಿಸಿ ಕಾಲೇಜು ಮೆಟ್ಟಿಲು ಹತ್ತುತ್ತಾರೆ. ಅಷ್ಟೇ ಅಲ್ಲ ಅದಕ್ಕಾಗಿ ಎಕ್ಸ್ಟ್ರಾ ಕ್ಲಾಸ್ ತೆಗೋ ಬೇಕು, ಹಾರ್ಡ್ ಸ್ಟಡಿ ಮಾಡಬೇಕು ಎಂದು ಏನೇನೋ ಪ್ಲ್ಯಾನ್ ಕೂಡಾ ಮಾಡಿಕೊಂಡಿರುತ್ತಾರೆ. ಆದ್ರೆ ಹೆಚ್ಚಿನ ವಿದ್ಯಾರ್ಥಿಗಳು ಈ ಪ್ಲ್ಯಾನ್ ಕಾರ್ಯರೂಪಕ್ಕೆ ತರುವಲ್ಲಿ ವಿಫಲರಾಗುತ್ತಾರೆ

ಕೆಲವೊಂದು ಹವ್ಯಾಸಗಳನ್ನ ನೀವು ರೂಪಿಸಿಕೊಂಡರೆ ನೀವು ಕೂಡಾ ಯಶಸ್ವೀ ವಿದ್ಯಾರ್ಥಿಯಾಗುವುದರಲ್ಲಿ ಅನುಮಾನವೇ ಇಲ್ಲ. ಆ ಹವ್ಯಾಸಗಳು ಯಾವುವು ಎಂಬ ಮಾಹಿತಿ ನಾವು ನಿಮಗೆ ನೀಡುತ್ತೇವೆ ಓದಿ

1 ಸ್ನೇಹಿತರ ಆಯ್ಕೆ:

ಕಾಲೇಜು ಎಂಟ್ರಿ ಆದೋಡನೆ ನಾವು ಹಲವಾರು ವಿದ್ಯಾರ್ಥಿಗಳನ್ನ ಭೇಟಿಯಾಗುತ್ತೇವೆ. ಅವರಲ್ಲಿ ಕೆಲವರು ನಮಗೆ ಸ್ನೇಹಿತರಾಗಿ ಬಿಡುತ್ತಾರೆ. ನಾವು ಸ್ನೇಹಿತರ ಆಯ್ಕೆಗೆ ಹೆಚ್ಚು ಒತ್ತು ಕೊಡುವುದಿಲ್ಲ, ಆದ್ರೆ ಸ್ಮಾರ್ಟ್ ವಿದ್ಯಾರ್ಥಿಗಳು ಏನು ಮಾಡುತ್ತಾರೆ ಅಂದ್ರೆ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಫ್ರೆಂಡ್‌ಶಿಪ್ ಮಾಡಿಕೊಳ್ಳುತ್ತಾರೆ

2 ಸಹಪಾಠಿಗಳ ಜತೆ ಕನೆಕ್ಟ್ ಆಗಿರಿ:

ಸ್ನೇಹಿತರ ಆಯ್ಕೆ ಮಾಡುವಾಗ ಸ್ವಲ್ಪ ಕೇರ್‌ಫುಲ್ ಆಗಿರಿ. ಸ್ನೇಹಿತರ ಜತೆ ಒಡನಾಟದಿಂದಿರಿ. ಅವರಲ್ಲಿ ನಿಮ್ಮೆಲ್ಲಾ ಸಮಸ್ಯೆಯನ್ನ ಶೇರ್ ಮಾಡಿಕೊಳ್ಳುತ್ತಾ ಇರಿ. ಇದರಿಂದ ನಿಮಗೆ ಏನಾದ್ರೂ ಸಮಸ್ಯೆಗಳು ಬಂದೊದಗಿದಾಗಾ ಅವರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಇನ್ನು ಹಾಗಾಂತ ಲಾಭಕ್ಕಾಗಿ ಯಾರ ಫ್ರೆಂಡ್‌ಶಿಪ್ ಕೂಡಾ ಮಾಡಬೇಡಿ

3 ತರಗತಿಗೆ ಹಾಜರಾಗಿ:

ಇನ್ನು ಕಾಲೇಜು ಸೇರಿದ ತಕ್ಷಣ ವಿದ್ಯಾರ್ಥಿಗಳು ರೆಕ್ಕೆ ಬಂದ ಹಕ್ಕಿಯಂತಾಗುತ್ತಾರೆ. ಸ್ಟಡಿ ವಿಚಾರವೊಂದು ಪಕ್ಕಕ್ಕಿಟ್ಟು ಮತ್ತೆಲ್ಲಾ ವಿಚಾರದಲ್ಲೂ ಸದಾ ಮುಂದಿರುತ್ತಾರೆ. ನಿವು ಯಶಸ್ವೀ ವಿದ್ಯಾರ್ಥಿಯಾಗಬೇಕಾದ್ರೆ ಸ್ಟಡೀಸ್ ಗೆ ಹೆಚ್ಚು ಪ್ರಾಮುಖ್ಯತೆ ನೀಡಿ. ಅದಕ್ಕಾಗಿ ಕ್ಲಾಸ್ ಬಂಕ್ ಮಾಡದೇ ಪ್ರತೀ ಕ್ಲಾಸ್‌ಗೂ ಹಾಜರಾಗಿ. ಇದರಿಂದ ಸಬ್‌ಜೆಕ್ಟ್ಮ ಸಿಲೇಬಸ್, ಪರೀಕ್ಷೆಗೆ ಸಂಬಂಧಪಟ್ಟಂತೆ ಹೊಸ ಹೊಸ ವಿಷಯಗಳು ನಿಮಗೆ ತಿಳಿಯುವುದು

4 ಶಿಕ್ಷಕರ ಜತೆ ಕನೆಕ್ಟ್ ಆಗಿರಿ

ಆಕ್ಟೀವ್ ಇರುವ ವಿದ್ಯಾರ್ಥಿಗಳು ಇದನ್ನ ಮಾಡುತ್ತಾರೆ. ಅವರು ಕೇವಲ ಕಾಲೇಜಿಗೆ ಹೋಗಿ ಪಾಠ ಕೇಳಿ ಮನೆಗೆ ಹಿಂತಿರುಗುದಿಲ್ಲ. ಬದಲಿಗೆ ತಮಗೆ ಏನೇ ಡೌಟ್ ಇದ್ರೂ ಅದು ಪಾಠದ ವಿಷಯ ಇರಬಹುದು ಇಲ್ಲ ವೈಯಕ್ತಿಕ ವಿಚಾರವಿರಬಹುದು ಶಿಕ್ಷಕರ ಜತೆ ಮಾತನಾಡಿ ಪರಿಹರಿಸಿಕೊಳ್ಳುತ್ತಾರೆ. ಶಿಕ್ಷಕರ ಜತೆ ಆಯೋಗ್ಯಯುತ ಸಂವಹನ ಮಾಡುತ್ತಾರೆ. ಶಿಕ್ಷಕರ ಜತೆ ಫ್ರೆಂಡ್ಲಿ ರಿಲೇಶನ್‌ಶಿಪ್ ಏರ್ಪಟ್ಟರೆ ನಿಮ್ಮಲ್ಲಿ ಒಂದು ರೀತಿಯ ಕಾಂಫಿಡೆಂಟ್ ಮನೋಭಾವ ಬೆಳೆಯುವುದು

5 ಸಲಹೆ ಪಡೆದುಕೊಳ್ಳಿ:

ಜ್ಞಾನ ಇರುವ ವಿದ್ಯಾರ್ಥಿಗಳು ಯಾವಾಗಲೂ ಇತರರ ಸಲಹೆ ಸ್ವೀಕರಿಸುತ್ತಾರೆ . ಅವರು ಶಿಕ್ಷಕರಿಂದ ಇರಬಹುದು ಇಲ್ಲ ಇತರ ವಿದ್ಯಾರ್ಥಿಗಳಿಂದ ಇರಬಹುದು ಸಲಹೆ ಸ್ವೀಕರಿಸಲು ತಯಾರಿರುತ್ತಾರೆ. ನೀವು ಸ್ಮಾರ್ಟ್ ಎಂದು ಅಂದುಕೊಂಡಿದ್ದರೆ ನೀವು ಕೂಡಾ ಹೊಸ ಹೊಸ ವಿಚಾರಗಳನ್ನ ಸ್ವೀಕರಿಸಲು ಸಿದ್ಧರಿರಿ.

6 ಇತರ ಚಟುವಟಕೆಯಲ್ಲೂ ಪಾಲ್ಗೊಳ್ಳಿ

ಇಡೀ ದಿನ ಬರೀ ಪುಸ್ತಕಕ್ಕೆ ಮಾತ್ರ ಅಂಟಿಕೊಂಡಿರಬೇಡಿ ಬದಲಿಗೆ ಕಾಲೇಜಿನಲ್ಲಿ ನಡೆಯುವ ಇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ. ಕಾಲೇಜು ಫಂಕ್ಷನ್‌ನಲ್ಲಿ ಲವಲವಿಕೆಯಿಂದ ಭಾಗವಹಿಸಿ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದಲೂ ನೀವು ತುಂಬಾನೇ ಕಲಿಯಬಹುದು

7 ಗಾಸಿಪ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ:

ಇನ್ನು ನೀವು ಟಾಪರ್ ಆಗಬೇಕು ಎಂದುಕೊಂಡಿದ್ದರೆ ಗಾಸಿಪ್ ಗಳ ಬಗ್ಗೆ ಯಾವತ್ತೂ ತಲೆಕೆಡಿಸಿಕೊಳ್ಳಬೇಡಿ. ಗಾಸಿಪ್ ಬಗ್ಗೆ ಹೆಚ್ಚಿನ ಫೋಕಸ್ ಕೊಡದೇ ನಿಮ್ಮ ಬಗ್ಗೆ ಯಾರು ಏನು ಮಾತಾಡಿಕೊಂಡ್ರು ಡೋಂಟ್ ಕೇರ್ ಆಗಿರಿ

8 ನಿರಂತರ ಅಧ್ಯಯನ

ನಾಳೆಯಿಂದ ಸ್ಟಡಿ ಇಲ್ಲ ಇವತ್ತಿನಿಂದ ಸ್ಟಡಿ ಸ್ಟಾರ್ಟ್ ಮಾಡಬೇಕು ಎಂದು ಅತೀ ಹೆಚ್ಚಿನ ವಿದ್ಯಾರ್ಥಿಗಳು ತಮ್ಮಲ್ಲೇ ಅಂದುಕೊಳ್ಳುತ್ತಾರೆ. ಆದರೆ ಯಾವತ್ತೂ ಓದಲು ಪ್ರಾರಂಭಿಸುವುದಿಲ್ಲ, ಆದ್ರೆ ಪರೀಕ್ಷೆ ದಿನ ಹತ್ತಿರ ಬಂದಂತೆ ಧೈರ್ಯಗೆಡುತ್ತಾರೆ ವಿದ್ಯಾರ್ಥಿಗಳು. ಹಾಗಾಗಿ ಪರೀಕ್ಷೆ ಇರಲಿ, ಇರದೇ ಇರಲಿ ಪ್ರತಿದಿನ ಒಂದಿಷ್ಟು ಅಂತ ಓದಿಕೊಂಡು ಬರುತ್ತಾ ಇರಿ. ಇದರಿಂದ ನಿಮಗೆ ಎಕ್ಸಾಂ ವೇಳೆ ಯಾವುದೇ ಸಮಸ್ಯೆಯಾಗುವುದಿಲ್ಲ ನೀವು ಧೈರ್ಯವಾಗಿ ಬರೆಯಬಹುದು

9 ಆರೋಗ್ಯವಂತರಾಗಿರಿ

ಸ್ಮಾರ್ಟ್ ವಿದ್ಯಾರ್ಥಿಗಳು ಸ್ಟಡೀಸ್ ಜತೆ ಆರೋಗ್ಯಕ್ಕೂ ಹೆಚ್ಚಿನ ಮಹತ್ವ ನೀಡುತ್ತಾರೆ. ಅನಾರೋಗ್ಯದಿಂದ ದೂರವಿರಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ಆರೋಗ್ಯಯುತ ಆಹಾರವನ್ನ ಸೇವಿಸುತ್ತಾರೆ. ವರ್ಕೌಟ್ ಕೂಡಾ ಮಾಡುತ್ತಾರೆ. ಇದರಿಂದ ನೀವು ನಿಮ್ಮ ಗುರಿ ತಲುಪುವಾಗ ನಿಮ್ಮನ್ನ ಆರೋಗ್ಯ ಸಮಸ್ಯೆ ಕಾಡುವುದಿಲ್ಲ

English summary
Para:Our first day of college is full of aspirations and endeavours. We desire to thrive in every activity we participate in. We make effective plans, study hard, go to extra classes and do everything it takes to be one of those best students in college. In the end, we often see many students going ahead despite us trying as hard

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia