ಬೇಸಿಗೆಯ ರಜೆಯಲ್ಲಿ ಮಕ್ಕಳನ್ನು ಚಟುವಟಿಕೆಗಳಲ್ಲಿ ತೊಡಗಿಸಲು ಇಲ್ಲಿದೆ 10 ಸಲಹೆಗಳು

ಬೇಸಿಗೆ ಬಂತು ಬೇಸಿಗೆ ರಜೆ ಮೋಜು ಮಸ್ತಿಯ ಹೊತ್ತು, ಶಾಲೆಯ ಬಂದ್ ಮಾಡಿ ಲೈಫ್ ನಲ್ಲಿ ಎಂಜಾಯ್ ಮಾಡಿ ಅಂತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಖುಷಿ ಪಡುವ ಸಮಯ ಬಂದೇ ಬಿಡ್ತು. ಖುಷಿ ಪಡೋದು ಸರಿ ಆದರೆ ಈ ರಜೆಯಲ್ಲಿ ಏನ್ ಮಾಡಬೇಕು? ಎಲ್ಲಿಗೆ ಹೋಗಬೇಕು? ಅಪ್ಪ ಅಮ್ಮನಿಗೆ ಮಕ್ಕಳನ್ನ ಎಲ್ಲಿಗಾದರೂ ಕರೆದುಕೊಂಡಲು ಸಮಯವಿದೆಯೇ? ಪೋಷರು ಮಕ್ಕಳಿಗೆ ಯಾವ ರೀತಿ ಕಾಳಜಿ ವಹಿಸಬೇಕು? ಇದೆಲ್ಲದರ ಬಗ್ಗೆ ಅನೇಕ ಪೋಷಕರು ಯೋಚನೆಯೇ ಮಾಡೋದಿಲ್ಲ.

ರಜೆಯಲ್ಲಿ ಮಕ್ಕಳನ್ನು ಮನೆಯಲ್ಲಿ ಕೂರಿಸುವುದು ಅಥವಾ ನಾಲ್ಕು ಗೋಡೆಗಳ ಮಧ್ಯೆ ಬಂಧಿಸುವುದು ಎಷ್ಟು ಸರಿ? ಕೆಲವು ಪೋಷಕರಿಗೆ ವೃತ್ತಿ ಬದುಕಿನ ಜಂಜಾಟದಿಂದಾಗಿ ಮಕ್ಕಳ ಬಗೆಗೆ ಹೆಚ್ಚಿನ ಕಾಳಜಿ ವಹಿಸಲು ಆಗದೇ ಇರಬಹುದು. ಆದರೆ ಮಕ್ಕಳಿಗೆ ಪ್ರತಿನಿತ್ಯ ಕಾಳಜಿ ವಹಿಸುವ ಬಗೆಗಿಂತ ಈ ರಜೆಯಲ್ಲಿ ಅವರನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯಯುತವಾಗಿಡುವುದೇ ಬಹುದೊಡ್ಡ ಜವಾಬ್ದಾರಿಯಾಗಿರುತ್ತದೆ. ಹಾಗಾಗಿ ಪೋಷಕರು ಅವರನ್ನು ಯಾವ ರೀತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು ಎನ್ನುವುದಕ್ಕೆ ಇಲ್ಲಿದೆ ಸಲಹೆಗಳು.

1 ಬೇಸಿಗೆ ಶಿಬಿರಗಳಿಗೆ ಸೇರಿಸಿ:
 

1 ಬೇಸಿಗೆ ಶಿಬಿರಗಳಿಗೆ ಸೇರಿಸಿ:

ಮಕ್ಕಳನ್ನು ಬೇಸಿಗೆ ಶಿಬಿರಗಳಿಗೆ ಸೇರಿಸಿ ಇದರಿಂದ ಮಕ್ಕಳು ಹಲವು ಅಪರಿಚಿತ ಮಕ್ಕಳೊಂದಿಗೆ ಬೆರೆಯುವ ಮತ್ತು ಓದುವುದರ ಜೊತೆಗ ಇನ್ನಿತರೆ ಚಟುವಟಿಕೆಗಳಲ್ಲಿ ಕಲಿಕೆಯನ್ನು ಪ್ರಾರಂಭಿಸಲು ಸಹಾಯವಾಗುತ್ತದೆ. ಇನ್ನೂ ಮನೆ ಮತ್ತು ಶಾಲೆ ಇದಿಷ್ಟರಲ್ಲೆ ಕಾಲ ಕಳೆಯುವ ಮಕ್ಕಳಿಗೆ ಈ ರೀತಿಯ ಚಟುವಟಿಕೆಗಳು ನಿಜಕ್ಕೂ ತುಂಬಾನೆ ಚೈತನ್ಯ ನೀಡುತ್ತದಲ್ಲದೇ ಮಕ್ಕಳ ರಜೆಯ ಸಮಯವನ್ನು ಉಪಯುಕ್ತವಾಗಿ ಬಳಕೆ ಮಾಡಿದಂತಾಗುತ್ತದೆ ಹಾಗಾಗಿ ಮಕ್ಕಳನ್ನು ಶಿಬಿರಗಳಿಗೆ ಸೇರಿಸಿ ಮಕ್ಕಳನ್ನು ಮಾನಸಿಕವಾಗಿ ಉಲ್ಲಾಸದಿಂದಿಡಲು ಪ್ರಯತ್ನ ಪಡಿ.

2 ಸ್ವಿಮ್ಮಿಂಗ್ ಕ್ಲಾಸ್‌ಗಳಿಗೆ ಸೇರಿಸಿ:

2 ಸ್ವಿಮ್ಮಿಂಗ್ ಕ್ಲಾಸ್‌ಗಳಿಗೆ ಸೇರಿಸಿ:

ಶಾಲಾ ದಿನಗಳಲ್ಲಿ ಆಚೆ ಕಳುಹಿಸಿದರೆ ಓದಲು ಸಮಯ ಕಡಿಮೆಯಾದೀತು ಎನ್ನುವ ಭಯದಿಂದ ಪೋಷಕರು ಮಕ್ಕಳನ್ನು ಯಾವುದೇ ಚಟುವಟಿಕೆಗಳಿಗೆ ಪ್ರೇರೇಪಿಸುವುದಿಲ್ಲ ಹಾಗಾಗಿ ಈ ಬೇಸಿಗೆಯಲ್ಲಿ ಮಕ್ಕಳನ್ನು ಸ್ವಿಮ್ಮಿಂಗ್ ತರಬೇತಿಗಳಿಗೆ ಸೇರಿಸಿ ಇದರಿಂದ ಮಕ್ಕಳಿಗೂ ಖುಷಿಯಾಗುತ್ತೆ ಜೊತೆಗೆ ಮಕ್ಕಳು ಈಜನ್ನು ಕಲಿಯುತ್ತಾರೆ ಹಾಗೇ ದೈಹಿಕವಾಗಿಯೂ ಆರೋಗ್ಯವಾಗಿರಲು ಹೆಚ್ಚು ಪ್ರಯೋಜನಕಾರಿಯಾಗುತ್ತದೆ.

3 ಹವ್ಯಾಸಗಳಿಗೆ ಪ್ರಾಮುಖ್ಯತೆ ನೀಡಿ:

3 ಹವ್ಯಾಸಗಳಿಗೆ ಪ್ರಾಮುಖ್ಯತೆ ನೀಡಿ:

ಮಕ್ಕಳಿಗೆ ಏನಿಷ್ಟ ಎನ್ನುವುದನ್ನು ತಿಳಿದುಕೊಳ್ಳಿ ಚಿತ್ರಕಲೆ, ಹಾಡುಗಾರಿಕೆ ಅಥವಾ ಭರತನಾಟ್ಯ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಿ. ಇದರಿಂದ ಮಕ್ಕಳಲ್ಲಿ ಕಲೆಯ ಅಭಿರುಚಿ ಹೆಚ್ಚಾಗುತ್ತದೆ ಜೊತೆಗೆ ಮಕ್ಕಳ ಮನಸ್ಸು ಇಂತಹ ಚಟುವಟಿಕೆಗಳಿಂದ ಚಿಗುರುತ್ತದೆ. ಈ ಹವ್ಯಾಸಗಳಿಂದಲೂ ಅವರ ಬದುಕಿನ ಉದ್ದೇಶ ಮತ್ತು ಗುರಿಗಳು ಇನ್ನಷ್ಟು ಧೃಡವಾಗುತ್ತವೆ.

4 ಕ್ರೀಡಾ ಚಟುವಟಿಕೆಗಳಿಗೆ ಸೇರಿಸಿ:
 

4 ಕ್ರೀಡಾ ಚಟುವಟಿಕೆಗಳಿಗೆ ಸೇರಿಸಿ:

ಮಕ್ಕಳನ್ನು ಮಾನಸಿಕವಾಗಿ ಕಲಿಕೆಗೆ ಒಡ್ಡುವುದರ ಜೊತೆಗೆ ಮಕ್ಕಳಿಗೆ ಕ್ರೀಡೆಗಳ ಮಹತ್ವವನ್ನು ತಿಳಿಸಿಕೊಡಿ ಆಗ ಕ್ರೀಡೆಯ ಮಹತ್ವದ ಜೊತೆಗೆ ಅವರ ಆಸಕ್ತಿಯ ಬಗೆಗೆ ಒಲವು ತೋರಲು ಸಹಾಯವಾಗುತ್ತದೆ. ಇದರಿಂದ ಶಾರೀರಿಕ ಆರೋಗ್ಯದ ಕಾಳಜಿಯ ಜೊತೆಗೆ ಇಂದಿನ ದಿನಗಳಲ್ಲಿ ನಾವು ನೋಡುತ್ತಿರುವ ಮಕ್ಕಳ ಬೊಜ್ಜಿನ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಸಹಾಯವಾಗುತ್ತದೆ.

5 ಸಂಬಂಧಗಳ ಬಗೆಗೆ ಅರಿವು ಮೂಡಿಸಿ :

5 ಸಂಬಂಧಗಳ ಬಗೆಗೆ ಅರಿವು ಮೂಡಿಸಿ :

ಈಗಿನ ದಿನಗಳಲ್ಲಿ ಕೂಡ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿರುವುದರ ಜೊತೆಗೆ ಮಕ್ಕಳಲ್ಲಿ ಸಂಬಂಧಗಳ ಮೌಲ್ಯದ ಅರಿವು ಕುಂಠಿತಗೊಳ್ಳುತ್ತಿದೆ. ಹಾಗಾಗಿ ಈ ರಜೆಯ ಸಂದರ್ಭದಲ್ಲಿಯಾದರೂ ಮಕ್ಕಳನ್ನು ಕುಟುಂಬದ ಜೊತೆ ಬೆರೆಯಲು ಅವಕಾಶ ನೀಡಿ ಇದರಿಂದ ಮಕ್ಕಳ ಮನಸ್ಸು ಸಂತಸದಿಂದ ಇರುವುದಲ್ಲದೇ ಜೀವನದಲ್ಲಿ ಸಂಪರ್ಕ ಎಷ್ಟು ಮುಖ್ಯ ಎನ್ನುವುದೂ ಅರ್ಥವಾಗುತ್ತದೆ.

6 ಮನೆಪಾಠ ಹೇಳಿಕೊಡಿ:

6 ಮನೆಪಾಠ ಹೇಳಿಕೊಡಿ:

ಪೋಷಕರು ಮನೆಪಾಠ ಅಂದರೆ ಕೇವಲ ಓದಿನ ಬಗೆಗೆ ಎಂದು ಚಿಂತಿಸುತ್ತೀರಿ ಹೌದು ಆದರೆ ಮನೆ ಪಾಠ ಅಂದರೆ ಮಕ್ಕಳು ಹೇಗೆ ಇನ್ನೊಬರೊಡನೆ ಮಾತನಾಡಬೇಕು? ಯಾವ ರೀತಿಯಾಗಿ ಇನ್ನೊಬ್ಬರನ್ನ ಗೌರವಿಸಬೇಕು? ಹೊರಗಡೆ ಅಪರಿಚಿತರೊಡನೆ ಎಷ್ಟು ಸಂವಹನ ಮಾಡುವ ಅಗತ್ಯವಿದೆ? ಅವರ ಮಾನಸಿಕ ಸ್ಥಿಮಿತಗಳು ಹೇಗಿರಬೇಕು ಎನ್ನುವುದರ ಬಗೆಗೆ ಮನೆಯಲ್ಲಿ ಅವರಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿಕೊಡಿ.

7 ಕಥೆ ಹೇಳುವ ಅಭ್ಯಾಸ ಮಾಡಿ:

7 ಕಥೆ ಹೇಳುವ ಅಭ್ಯಾಸ ಮಾಡಿ:

ಎಷ್ಟೋ ಮಕ್ಕಳು ರಜೆಯಲ್ಲಿ ಟಿವಿ, ಮೊಬೈಲ್ ಮುಂದೆ ಕುಳಿತೇ ರಜೆಯನ್ನ ಕಳೆಯುವುದುಂಟು ಆದರೆ ಇದರಿಂದ ಆರೋಗ್ಯ ಇನ್ನಷ್ಟು ಹಾಳಾಗುತ್ತದೆಯೇ ಹೊರತು ಮತ್ತೇನು ಸಿಗುವುದಿಲ್ಲ. ಮಕ್ಕಳಿಗೆ ಕಾರ್ಟೂನ್ ಗೊತ್ತಿರುತ್ತದೆ ಆದರೆ ಅಜ್ಜಿ ಹೇಳುವ ಕತೆಗಳ ಪರಿಚಯವೇ ಇರುವುದಿಲ್ಲ ಹಾಗಾಗಿ ಮನೆಯಲ್ಲಿ ಸಂಜೆ ಒಳ್ಳೆ ನೀತಿ ಕತೆಗಳನ್ನು ಹೇಳುವ ಮೂಲಕ ಅವರಿಗೆ ಬದುಕಿನ ನೀತಿಗಳನ್ನು ತಿಳಿಸಿಕೊಡಿ.

8 ಹೊರ ಪ್ರಪಂಚವನ್ನು ಪರಿಚಯಿಸಿ:

8 ಹೊರ ಪ್ರಪಂಚವನ್ನು ಪರಿಚಯಿಸಿ:

ಮಕ್ಕಳಿಗೆ ಹೊರ ಪ್ರಪಂಚವನ್ನು ಪರಿಚಯಿಸಿ ಎಂದರೆ ನಾಲ್ಕುಗೋಡೆಗಳಿಂದ ಹೊರ ನಡೆಸುವುದು ಎಂದರ್ಥವಲ್ಲ. ಮನೆ ಮತ್ತು ಶಾಲೆಯಿಂದಾಚೆ ಪ್ರಪಂಚ ಹೇಗಿದೆ? ತಾನು ಯಾಕೆ ಚೆನ್ನಾಗಿ ಓದಬೇಕು? ತಾನು ಯಾಕೆ ವಿದ್ಯಾವಂತನಾಗಬೇಕು ಎನ್ನುವುದರ ಅರಿವಾಗಬೇಕಿದೆ ಹಾಗಾಗಿ ಮಕ್ಕಳ ಜೊತೆಗೆ ಒಳ್ಳೆಯ ಸ್ಥಳಗಳಿಗೆ ಭೇಟಿ ಕೊಡಿ ಆಗ ಮಕ್ಕಳಿಗೆ ಹೊಸ ಜಾಗಗಳ ಪರಿಚಯವಾಗುತ್ತದೆ ಅಲ್ಲಿನ ಜನರೊಡನೆ ಬೆರೆಯಲು ಅವಕಾಶ ಸಿಗುತ್ತದೆ. ಇದರಿಂದ ಅವರ ಮನಸ್ಸು ಇನ್ನಷ್ಟು ಆಸಕ್ತಿದಾಯಕವಾಗಿ ಕೆಲಸ ಮಾಡುತ್ತದೆ.

9: ವಿಭಿನ್ನ ಪುಸ್ತಕಗಳನ್ನು ಓದಲು ನೀಡಿ:

9: ವಿಭಿನ್ನ ಪುಸ್ತಕಗಳನ್ನು ಓದಲು ನೀಡಿ:

ಪ್ರತಿನಿತ್ಯ ಶಾಲೆ , ಪಾಠ ಮತ್ತು ಹೋಂ ವರ್ಕ್ ಮಾಡಿದ ಮಕ್ಕಳಿಗೆ ವಿಭಿನ್ನ ಪುಸ್ತಕಗಳನ್ನು ಓದಲು ನೀಡಿ ಇದ್ರಿಂದ ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚುತ್ತದೆ ಮತ್ತು ಸಾಮಾನ್ಯ ಜ್ಞಾನ ಬೆಳೆಯುತ್ತದೆ. ನಾಳಿನ ಬದುಕಿನ ಚಿತ್ರಣವನ್ನು ಅರಿಯಲು ಸಹಾಯಕವಾಗುತ್ತದೆ.

10: ಪರಿಸರದ ಕಾಳಜಿಯನ್ನು ಮಾಡುವ ಬಗೆಗೆ ಅರಿವು ಮೂಡಿಸಿ:

10: ಪರಿಸರದ ಕಾಳಜಿಯನ್ನು ಮಾಡುವ ಬಗೆಗೆ ಅರಿವು ಮೂಡಿಸಿ:

ಬೆಳೆಯುವ ಮಕ್ಕಳಲ್ಲಿ ಪರಿಸರದ ಕಾಳಜಿಯ ಅರಿವು ಮೂಡಿಸದಿದ್ದರೆ ನಾಳೆ ಪರಿಸರದ ಕಾಳಜಿ ಮಾಡೋರು ಯಾರು? ಹಾಗಾಗಿ ಮಕ್ಕಳಲ್ಲಿ ಪರಿಸರದ ಬಗೆಗೆ ಒಂದಷ್ಟು ಮಾಹಿತಿಯನ್ನು ನೀಡಿ. ಗಿಡ ನೆಡುವುದು ಹೇಗೆ ಪೋಷಿಸುವುದು ಹೇಗೆ ಮತ್ತು ಯಾಕೆ ನೆಡಬೇಕು ಇದರಿಂದ ಏನು ಲಾಭ ಎನ್ನುವುದರ ಮಾಹಿತಿಯ ಜೊತೆಗೆ ಆ ಚಟುವಟಿಕೆಗಳಲ್ಲಿ ತೊಡಗಿಸಿ ಇದರಿಂದ ನಾಳಿನ ದಿನಗಳನ್ನು ನಿಶ್ಚಿಂತೆಯಾಗಿ ಕಳೆಯಲು ಮಕ್ಕಳಿಗೂ ಸಹಾಯವಾದೀತು

For Quick Alerts
ALLOW NOTIFICATIONS  
For Daily Alerts

English summary
Here we are giving 10 tips to parents about children activities in summer vacations
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more