ಕೈ ತುಂಬಾ ಸಂಪಾದಿಸೋ ಈ ಗಣ್ಯರ ಎಜ್ಯುಕೇಶನ್ ಕೇಳಿದ್ರೆ ಶಾಕ್ ಆಗ್ತೀರಾ

By Kavya

ಶಾಲೆ ಅರ್ಧಕ್ಕೆ ನಿಲ್ಲಿಸುವುದು ಎಂದ್ರೆ ಅವರ ಜೀವನ ಕೂಡಾ ಅಲ್ಲಿಗೆ ಮುಗಿಯಿತು ಎಂದು ನಮ್ಮ ಸಮಾಜ ಮಾತನಾಡಿಕೊಳ್ಳುತ್ತದೆ. ನಿಮಗೆ ಬುಕ್ಸ್, ಶಾಲೆ, ಪಾಠ , ಕಾಲೇಜು ಇವೆಲ್ಲಾ ಆಸಕ್ತಿ ಇಲ್ಲ ಎಂದಾದ್ರೆ ಅಲ್ಲಿಗೆ ಡ್ರಾಪ್ ಔಟ್ ಮಾಡ್ತೀರಾ. ಆದ್ರೆ ನಿಮ್ಮ ಈ ನಿರ್ಧಾರಕ್ಕೆ ನಿಮ್ಮ ಮನೆಯವರು ನಿಮ್ಮನ್ನ ತಿರಸ್ಕಾರ ಭಾವನೆಯಿಂದ ನೋಡಬಹುದು. ಇನ್ನು ನಿಮಗೆ ಭವಿಷ್ಯವೇ ಇಲ್ಲ ಅನ್ನೋ ತರಹ ಮಾತನಾಡಿಕೊಳ್ಳಬಹುದು.

ಪ್ರಸಿದ್ಧ ಗಣ್ಯರ ಎಜ್ಯುಕೇಶನ್ ಎಷ್ಟು ಗೊತ್ತಾ !

 

ಆದ್ರೆ ನಿಮಗೆ ಗೊತ್ತಾ ಸಮಾಜದಲ್ಲಿ ಇದೀಗ ಗಣ್ಯರು ಎನಿಸಿಕೊಂಡಿರುವ ಅದೆಷ್ಟೋ ವ್ಯಕ್ತಿಗಳು ಶಾಲಾ ಜೀವನವನ್ನ ಅರ್ಧಕ್ಕೆ ತಿಲಾಂಜಲಿ ಬಿಟ್ಟವರು ಎಂದು. ಇಂದು ಕೆರಿಯರ್ ಇಂಡಿಯಾ ನಿಮಗೆ ಅಂತಹ ಗಣ್ಯರ ಬಗ್ಗೆ ಮಾಹಿತಿ ನೀಡುತ್ತಿದೆ. ಶಾಲೆ ಅರ್ಧಕ್ಕೆ ಬಿಟ್ಟರೂ ಇಂದಿಗೂ ಸಕ್ಸಸ್ ಫುಲ್ ಉದ್ಯಮಿ ಹಾಗೂ ಯಶಸ್ವೀ ವ್ಯಕ್ತಿಯರ ಕಿರು ಪರಿಚಯ ನಿಮಗೆ ಮಾಡಿಕೊಡಲಿದೆ.

also read: ರೆಸ್ಯೂಮ್‍ನಲ್ಲಿ ಏನೆಲ್ಲಾ ಇರಬಾರದು ಎಂದು ಇಲ್ಲಿದೆ ನೋಡಿ!

1. ಬಿಲ್ ಗೇಟ್ಸ್

1. ಬಿಲ್ ಗೇಟ್ಸ್

ಮೈಕ್ರೋಸಾಫ್ಟ್ ಪರಿಚಯಸಿರುವ ಬಿಲ್ ಗೇಟ್ಸ್ ಕೂಡಾ ತಮ್ಮ 19ನೇ ವರ್ಷಕ್ಕೆ ಶಿಕ್ಷಣಕ್ಕೆ ಫುಲ್ ಸ್ಟಾಪ್ ನೀಡಿದ್ದಾರೆ. ಅಲ್ಟೈರ್ ಮೈಕ್ರೋ ಕಂಪ್ಯೂಟರ್ ಇನ್ ಪಾಪುಲರ್ ಎಲೆಕ್ಟ್ರಾನಿಕ್ಸ್ ಮ್ಯಾಗಜಿನ್ ಓದಿದ ಬಳಿಕ ಶಿಕ್ಷಣ ಅರ್ಧಕ್ಕೆ ಬಿಡುವ ನಿರ್ಧಾರ ಕೈಗೊಂಡಿದ್ದ ಬಿಲ್ ಗೇಟ್ಸ್. ಆದ್ರೆ ಇದೀಗ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಬಿಲ್ ಗೇಟ್ಸ್‌ ಹೆಸರೂ ಕೂಡಾ ಇದೆ.

2. ಮಾರ್ಕ್ ಜುಕರ್ ಬರ್ಗ್

2. ಮಾರ್ಕ್ ಜುಕರ್ ಬರ್ಗ್

ಹಾರ್ಡ್ವಾರ್ಡ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಾರ್ಕ್ ಜುಕರ್ ಬರ್ಗ್, ತಮ್ಮ 19ನೇ ವಯಸ್ಸಿಗೆ ಶಿಕ್ಷಣವನ್ನ ಡ್ರಾಪ್ ಮಾಡಿದ್ದಾರೆ. ಆದ್ರೆ ಇದೀಗ ಇವರು ಸೋಶಲ್ ಮೀಡಿಯಾದ ಕಿಂಗ್ ಎಂದೇ ಫೇಮಸ್ ಆಗಿದ್ದಾರೆ. ಫೇಸ್ ಬುಕ್ ನ್ನ ಜನರಿಗೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

3. ಮುಖೇಶ್ ಅಂಬಾನಿ
 

3. ಮುಖೇಶ್ ಅಂಬಾನಿ

ಎಂಬಿಎ ಕೋರ್ಸನ್ನ ಅರ್ಧಕ್ಕೆ ಬಿಟ್ಟು, ಉದ್ಯಮಕ್ಕೆ ಕೈ ಹಾಕಿದ ಮುಖೇಶ್ ಇದೀಗ ರಿಲಯನ್ಸ್ ಇಂಡಸ್ಟ್ರಿಯ ಮ್ಯಾನೇಜಿಂಗ್ ಡೈರೆಕ್ಟರ್ ಕೂಡಾ ಆಗಿದ್ದಾರೆ. ಅಷ್ಟೇ ಅಲ್ಲ ಇವರು ಜಗತ್ತಿನ ೯ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ಮ್ಯಾಗಜಿನ್ ಒಂದರಲ್ಲಿ ಪ್ರಕಟವಾಗಿತ್ತು.

4. ಅಜೀಂ ಪ್ರೇಮ್ ಜಿ

4. ಅಜೀಂ ಪ್ರೇಮ್ ಜಿ

ಐಟಿ ಸಂಸ್ಥೆ ವಿಪ್ರೋದ ಮುಖ್ಯಸ್ಥರಾಗಿರುವ ಅಜೀಂ ಪ್ರೇಮ್ ಜಿ ಕೂಡಾ ಕಾಲೇಝು ಶಿಕ್ಷಣವನ್ನ ಅರ್ಧಕ್ಕೆ ಬಿಟ್ಟವರು. ತನ್ನ ೨೧ನೇ ವಯಸ್ಸಿಗೆ ಕಂಪನಿ ನಡೆಸಲು ಪ್ರಾರಂಭಿಸಿದ್ದ ಇವರು ಇಂದು ಪ್ರಸಿದ್ಧ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಹಾಗೂ ಇದೀಗ ಇವರ ನೆಟ್ ಆದಾಯ ೧೧ ಬಿಲಿಯನ್ ಡಾಲರ್ ಇದೆ.

5. ಸ್ಮೃತಿ ಇರಾನಿ

5. ಸ್ಮೃತಿ ಇರಾನಿ

ಇಂಡಿಯನ್ ಹ್ಯೂಮನ್ ರಿಸೋರ್ಸ್ ಡೆವಲಪ್ ಮೆಂಟ್ ಮಿನಿಸ್ಟರ್ ಸ್ಮೃತಿ ಇರಾನಿ 12ನೇ ತರಗತಿ ವರೆಗೆ ಮಾತ್ರ ಶಿಕ್ಷಣಾಭ್ಯಾಸ ಮಾಡಿದ್ದಾರೆ. ಆದ್ರೆ ೨೦೧೩ನಲ್ಲಿ ಇವರು ಕಾಮರ್ಸ್ ಕೋರ್ಸ್ ಮಾಡಿದ್ದರು ಎಂಬ ಮಾತುಗಳು ಕೂಡಾ ಕೇಳಿ ಬಂದಿವೆ.

6 ಸಚಿನ್ ತೆಂಡೂಲ್ಕರ್

6 ಸಚಿನ್ ತೆಂಡೂಲ್ಕರ್

ಕ್ರಿಕೆಟ್ ಗಾಡ್ ಎಂದೇ ಫೇಮಸ್ ಆಗಿರುವ ಸಚಿನ್ ತೆಂಡೂಲ್ಕರ್ ಕೂಡಾ ತಮ್ಮ 16ನೇ ವರ್ಷಕ್ಕೆ ಶಿಕ್ಷಣವನ್ನ ಅರ್ಧಕ್ಕೆ ಬಿಟ್ಟಿದ್ದಾರೆ. ಶಾಲೆಗೆ ಹೋಗದೇ ಗ್ರೌಂಡ್ ಗೆ ಹೋಗಿ ಪ್ರ್ಯಾಕ್ಟೀಸ್ ಮಾಡುತ್ತಿದ್ದ ಸಚಿನ್, ಇದೀಗ ಕ್ರಿಕೆಟ್ ಗಾಡ್ ಎಂದೇ ಫೇಮಸ್.

7. ಮೇರಿಕೋಮ್:

7. ಮೇರಿಕೋಮ್:

5 ಬಾರಿ ವರ್ಲ್ಡ್ ಅಮೆಚರ್ ಬಾಕ್ಸಿಂಗ್ ಚಾಂಪಿಯನ್ ಹಾಗೂ ಒಲಿಂಪಿಕ್ ಮೆಡಲಿಸ್ಟ್ ಅಷ್ಟೇ ಅಲ್ಲ ಇದೀಗ ಎರಡು ಮಕ್ಕಳ ತಾಯಿಯಾಗಿರುವ ಬಾಕ್ಸರ್ ಮೇರಿಕೋಮ್ ಕೂಡಾ ಬರೀ 8ನೇ ತರಗತಿ ವರಗೆ ಮಾತ್ರ ಕಲಿತಿದ್ದು. 8 ನೇ ತರಗತಿ ಬಳಿಕ ಮತ್ತೆಂದೂ ಶಾಲೆಯನ್ನ ಮುಖನೇ ಮಾಡಿಲ್ಲ ಈ ಕ್ರೀಡಾ ಸಾಧಕಿ. ಇತ್ತೀಚೆಗೆ ಇವರ ಜೀವನಾಧರಿತ ಕತೆಯೊಂದರ ಸಿನಿಮಾ ತಯಾರಾಗಿದ್ದು, ಮೇರಿಕಾಮ್ ಪಾತ್ರದಲ್ಲಿ ನಟಿ ಪ್ರಿಯಾಂಕ ಚೋಪ್ರಾ ಉತ್ತಮವಾಗಿ ನಟಿಸಿದ್ದರು

8 ಅಮೀರ್ ಖಾನ್

8 ಅಮೀರ್ ಖಾನ್

ಬಾಲಿವುಡ್‌ನ ಫೇಮಸ್ ನಟ ಅಮೀರ್ ಖಾನ್, ವರ್ಷಕ್ಕೆ ಒಂದೇ ಸಿನಿಮಾ ಮಾಡಿದ್ರೂ ಅಮೀರ್ ಅಭಿನಯದ ಹೆಚ್ಚಿನ ಸಿನಿಮಾಗಳೆಲ್ಲಾ ಸೂಪರ್ ಹಿಟ್. ಈ ಮಧ್ಯೆ ಸತ್ಯಮೇವ ಜಯತೇ ಅನ್ನೋ ಪ್ರೋಗ್ರಾಂ ಮಾಡಿ ಕೂಡಾ ಇವರು ಸಖತ್ ಫೇಮಸ್ ಆಂಕರ್ ಎಂದೆನಿಸಕೊಂಡಿದ್ದರೂ ಕೂಡಾ. ಇವರು ತಮ್ಮ 17ನೇ ವರ್ಷಕ್ಕೆಶಿಕ್ಷಣಕ್ಕೆ ಬೈ ಬೈ ಹೇಳಿ ಬಣ್ಣದ ಜಗತ್ತಿಗೆ ಕಾಲಿಟ್ಟು ಇಂದು ಫೇಮಸ್ ನಟರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.

9. ಐಶ್ವರ್ಯ ರೈ

9. ಐಶ್ವರ್ಯ ರೈ

ನೀಲಿ ಕಂಗಳ ಚೆಲುವೆ ಐಶ್ ಕೂಡಾ ಶಾಲೆ ಶಿಕ್ಷಣವನ್ನ ಅರ್ಧಕ್ಕೆ ನಿಲ್ಲಿಸಿದವರು. ಆರ್ಕಿಟೆಕ್ಚರಲ್ ಕೋರ್ಸ್ ಮಾಡುತ್ತಿದ್ದ ಈ ಚೆಲುವೆ ಶಿಕ್ಷಣವನ್ನ ಅರ್ಧಕ್ಕೆ ಬಿಟ್ಟು, ಬಣ್ಣದ ಜಗತ್ತಿಗೆ ಜಿಗಿದ ಸುಂದರಿ.

10. ಸಲ್ಮಾನ್ ಖಾನ್

10. ಸಲ್ಮಾನ್ ಖಾನ್

ಬಾಲಿವುಡ್‌ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೆನಿಸಿಕೊಂಡಿರುವ ಸಲ್ಮಾನ್ ಖಾನ್ ಅದೆಷ್ಟೋ ಹುಡುಗಿಯರ ನೆಚ್ಚಿನ ಹೀರೋ. ಕಾಲೇಜು ಹೀರೋ ಪಾತ್ರಗಳಲ್ಲಿ ಸಖತ್ ಹಾಟ್ ಆಗಿ ಮಿಂಚಿದ್ದ ಸಲ್ಲು, ರಿಯಲ್ ಲೈಫ್ ನಲ್ಲಿ ಶಾಲಾ ಶಿಕ್ಷಣದ ಬಳಿಕ ಕಾಲೇಜು ಮೆಟ್ಟಿಲು ಹತ್ತಿಯೇ ಇಲ್ಲ.

11. ಅಕ್ಷಯ್ ಕುಮಾರ್

11. ಅಕ್ಷಯ್ ಕುಮಾರ್

ಬ್ಲಾಕ್ ಬೆಲ್ಟ್ ಅಕ್ಷಯ್ ಕುಮಾರ್ ಆಕ್ಟಿಂಗ್ ನಲ್ಲೂ ಎತ್ತಿದ ಕೈ. ಸಮಾಜದ ಕಾಳಜಿ ಕತೆಯನ್ನೊಳಗೊಂಡ ಸಿನಿಮಾದಲ್ಲಿ ಇದೀಗ ಹೆಚ್ಚಾಗಿ ನಟಿಸುವ ಅಕ್ಷಯ್ ಪದವಿ ಶಿಕ್ಷಣ ಕಂಪ್ಲೀಟ್ ಮಾಡದೇ ಕಾಲೇಜು ಶಿಕ್ಷಣವನ್ನ ಅರ್ಧಕ್ಕೆ ನಿಲ್ಲಿಸಿದ್ದಾರೆ.

also read: ಸಕ್ಸಸ್ ಜನರು ಎಲ್ಲದರಲ್ಲೂ ಸಕ್ಸಸ್ ಕಾಣುತ್ತಾರೆ ಯಾಕೆ ಗೊತ್ತಾ?

For Quick Alerts
ALLOW NOTIFICATIONS  
For Daily Alerts

English summary
If you do not like books and colleges and classes, you would still stick around pretending that you do, and finish your college come what may, be it dragging yourself through it.Here we are going to share famous and successful people are school dropouts, that stirred the world with their outstanding contributions, and none of them were high on school or college education.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more