ಮನೆಯೇ ಮೊದಲ ಪಾಠ ಶಾಲೆ: ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ!

Posted By:

ಮನೆಯೇ ಮೊದಲ ಪಾಠ ಶಾಲೆ,ತಾಯಿಯೇ ಮೊದಲ ಗುರು.. ಹೌದು, ಮಕ್ಕಳಿಗೆ ಇಂದಿಗೂ ಮೊದಲ ಶಾಲೆ ಮನೆಯಾಗಿರುತ್ತದೆ, ಹಿಂದೆಲ್ಲ ಮಕ್ಕಳನ್ನು ಐದರಿಂದ ಆರು ವರ್ಷದವರೆಗೂ ಮನೆಯಲ್ಲಿ ಪೋಷಿಸಿ ನಂತರ ಶಾಲೆಗಳಿಗೆ ಸೇರಿಸುತ್ತಿದ್ದರು.

ಪರೀಕ್ಷೆ ತಯಾರಿ: ಪೋಷಕರ ಗಮನಕ್ಕೆ ಕೆಲವು ವಿಚಾರಗಳು

ಆದರೆ ಈಗ ಕಾಲ ಬದಲಾಗಿದೆ. ಎಲ್ಲೆಡೆ ಪ್ರಿ ಸ್ಕೂಲ್ ಗಳು ತಲೆ ಎತ್ತಿದ್ದು, ಮಗುವಿಗೆ ಮೂರು ವರ್ಷಕ್ಕೂ ಮೊದಲೇ ಶಾಲೆಗಳ ಪರಿಚಯವಾಗುತ್ತಿದೆ. ಪ್ರಿ ಸ್ಕೂಲ್ಗಳಿಗೆ ಸೇರಿಸುವ ಮುನ್ನ ಮಕ್ಕಳಿಗೆ ಮನೆಯಲ್ಲಿಯೇ ಕೆಲವೊಂದು ಮಾಹಿತಿಗಳನ್ನು ನೀಡಿ ಕೆಲವು ಅಭ್ಯಾಸಗಳನ್ನು ಕಳಿಸುವುದು ಒಳ್ಳೆಯದು.

ಪೋಷಕರೆ ಮೊಬೈಲ್ ಮತ್ತು ಬ್ಲೂವೇಲ್ ಚಾಲೆಂಜ್ ನಂಥ ಆಟಗಳ ಬಗ್ಗೆ ಎಚ್ಚರವಿರಲಿ

ಮನೆಯೇ ಮೊದಲ ಪಾಠ ಶಾಲೆ

ಪುಟ್ಟ ಮಕ್ಕಳು ರಾತ್ರಿ ತಡವಾಗಿ ಮಲಗಿ, ಬೆಳಿಗ್ಗೆ ತಡವಾಗಿ ಏಳುವುದು ಸಾಮಾನ್ಯ ಮತ್ತು ಅವುಗಳಿಗೆ ನಿದ್ದೆ ಹೆಚ್ಚು, ಹಾಗಾಗಿ ಮಕ್ಕಳನ್ನು ಶಾಲೆಗೇ ಸೇರಿಸುವ ಮುನ್ನ ಬೆಳಿಗ್ಗೆ ಬೇಗ ಏಳುವ ಅಭ್ಯಾಸ ಮಾಡಿಸುವುದು ಸೂಕ್ತ. ಇಲ್ಲವಾದಲ್ಲಿ ಶಾಲೆ ಪ್ರಾರಂಭವಾದ ದಿನಗಳಲ್ಲಿ ನೀವು ಕಷ್ಟ ಅನುಭವಿಸಬೇಕಾಗುತ್ತದೆ. ಇದರೊಂದಿಗೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು, ರಾತ್ರಿ ಬೇಗನೆ ಮಲಗುವುದು ಮೊದಲಾದ ಅಭ್ಯಾಸಗಳನ್ನು ಸಹ ರೂಡಿ ಮಾಡಬೇಕು.

ಹೊಸ ವಿಚಾರ ಹೇಳಿಕೊಡಿ

ಮಗುವಿಗೆ ಪ್ರತಿನಿತ್ಯ ಹೊಸ ಶಬ್ಧಗಳನ್ನು ಬರೆಯುವುದನ್ನು, ಓದುವುದನ್ನು ಹೇಳಿಕೊಡಿ. ಅವರಿಗೆ ವಸ್ತುಗಳನ್ನು ತೋರಿಸುವುದರ ಮೂಲಕ ಹೇಳಿಕೊಡುವುದರಿಂದ ಮತ್ತಷ್ಟು ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತದೆ ಹಾಗು ಶಾಲೆಯಲ್ಲಿ ಪಾಠ ಮಾಡುವಾಗ ಇನ್ನೂ ಚೆನ್ನಾಗಿ ಅರ್ಥವಾಗಿ ಮಕ್ಕಳು ಬೇಗನೆ ಗ್ರಹಿಸುತ್ತಾರೆ.

ಎಲ್ಲರೊಡನೆ ಬೆರೆಯುವ ಅಭ್ಯಾಸ

ನಿಮ್ಮ ಮಗು ನಿಮ್ಮನ್ನು ಬಿಟ್ಟರೆ ಬೇರೆ ಮಕ್ಕಳೊಂದಿಗೆ ಬೇರೆಯದೇ ಇದ್ದರೆ, ಮೊದಲು ಅವರನ್ನು ಎಲ್ಲ ಮಕ್ಕಳೊಂದಿಗೆ ಆಟವಾಡಲು ಕರೆದುಕೊಂಡು ಹೋಗಿ. ಹೀಗೆ ಮಾಡುವುದರಿಂದ, ಇತರೆ ಮಕ್ಕಳೊಂದಿಗೆ ಬೆರೆತು ಆಟ ಆಡುವುದನ್ನು ಕಲಿಯುತ್ತಾರೆ. ಮಕ್ಕಳೊಂದಿಗೆ ಹೇಗೆ ಮಾತನಾಡಬೇಕು, ಶಾಲೆಯಲ್ಲಿ ಶಿಕ್ಷಕಿಯರೊಂದಿಗೆ ಹೇಗೆ ವರ್ತಿಸಬೇಕು ಎಂದು ನೀವು ನಿಮ್ಮ ಮಗುವಿಗೆ ಮೊದಲೇ ಹೇಳಿಕೊಡಬೇಕು.

ಸ್ವತಂತ್ರವಾಗಿ ಕೆಲಸ ಮಾಡುವುದನ್ನು ರೂಢಿಸಿ

ಹಸಿವಾದಾಗ ಮಗುವಿಗೆ ತಾನೇ ಊಟ ಮಾಡುವಂತೆ ಅಭ್ಯಾಸ ಮಾಡಿಸಿ.ಇದರೊಂದಿಗೆ ಆಚೆ ಅಪರಿಚಿತ ವ್ಯಕ್ತಿಗಳು ನೀಡುವ ಆಹಾರ ತಿನ್ನದಂತೆ ತಿಳಿ ಹೇಳಿ ಹಾಗು ಶಾಉಚಾಲಯ ಬಳಸುವುದನ್ನು ಹೇಳಿಕೊಡಿ. ತಮ್ಮ ತಮ್ಮ ಆಟದ ವಸ್ತುವನ್ನು ತಾವೇ ಜೋಡಿಸುವಂತೆ ಹೇಳಿಕೊಡಿ. ಹೀಗೆ ಮಾಡುವುದರಿಂದ ಶಾಲೆಯಲ್ಲಿ ಬೇರೆ ಮಕ್ಕಳೊಂದಿಗೆ ಬೆರೆತು ಆಟವಾಡುವಾಗ ಸ್ವಲ್ಪ ಏರು-ಪೇರಾದರು ಅದನ್ನು ನಿರ್ಲಕ್ಷಿಸಿ ಹೊಂದಿಕೊಂಡು ಹೋಗುವುದನ್ನು ಕಲಿಯುತ್ತಾರೆ.

English summary
Potty training isn't the only skill your child may need to know before heading to preschool. Here are a few important things you should consider before committing to a preschool.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia