ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 99% ರಷ್ಟು ಅಂಕಗಳಿಸಿ ಶಾಲೆಗೆ ಟಾಪರ್ ಆಗ್ಬೇಕಾ ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎನ್ನುವುದು ಜೀವನದ ಬಹುದೊಡ್ಡ ಘಟ್ಟ ಇಲ್ಲಿ ಬೋರ್ಡ್ ಎಕ್ಸಾಂ ಇರತ್ತೆ ಮತ್ತು ಇಲ್ಲಿ ನಿಮ್ಮ ಶಾಲಾ ಶಿಕ್ಷಕರು ನಿಮಗೆ ಅಂಕಗಳನ್ನು ನೀಡುವುದಿಲ್ಲ. ನಿಮಗೆ ಬೋರ್ಡ್‌ನಿಂದ ಫಲಿತಾಂಶ ಪ್ರಕಟವಾಗುತ್ತದೆ ಎನ್ನುವುದನ್ನು ಕೇಳಿ ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ತುಸು ಭಯಗೊಂಡು ಪರೀಕ್ಷೆಯನ್ನು ಎದುರಿಸುತ್ತಾರೆ. ಆದರೆ ವಿದ್ಯಾರ್ಥಿಗಳು ಈ ಬಗೆಗೆ ಭಯ ಪಡುವ ಅಗತ್ಯವಿಲ್ಲ. ಯಾಕೆಂದರೆ ನಿಮಗಿದು ಮೊದಲ ಬೋರ್ಡ್ ಎಕ್ಸಾಂ ಎನ್ನುವ ಕಾರಣದಿಂದ ಹೀಗೆ ಭಾವಿಸುವುದು ಸಹಜ ಆದರೆ ಇದ್ಯಾವುದಕ್ಕೂ ಎದೆಗೊಡದೆ ನೀವು ಪರೀಕ್ಷೆಯ ಕಡೆಗೆ ಗಮನಹರಿಸುವುದ ಒಳಿತು.

 

ವಿದ್ಯಾರ್ಥಿಗಳು ವರ್ಷವಿಡೀ ತಾವು ಓದಿದನ್ನು ನೆನಪಿನಲ್ಲಿಟ್ಟುಕೊಂಡು ಧೈರ್ಯದಿಂದ ಪರೀಕ್ಷಾ ಕೇಂದ್ರದಲ್ಲಿ ಗಮನಕೊಟ್ಟು ಪರೀಕ್ಷೆಯನ್ನು ಬರೆದಿದ್ದಲ್ಲಿ ಫಲಿತಾಂಶಕ್ಕಾಗಿ ಭಯ ಪಡುವ ಅಗತ್ಯವೇ ಇಲ್ಲ. ಟಾಪರ್ಸ್ ಆಗೋಕೆ ಮತ್ತು 99% ರಷ್ಟು ಅಂಕಗಳನ್ನು ಪಡೆಯಬೇಕೆಂಬ ಆಸೆಯನ್ನ ಹೊತ್ತಿರುವ ವಿದ್ಯಾರ್ಥಿಗಳು ಏನೆಲ್ಲಾ ಮಾಡಬೇಕು ಅನ್ನೋದನ್ನ ಇಲ್ಲಿ ತಿಳಿಯಿರಿ ಖಂಡಿತಾ ನೀವು ಟಾಪರ್ಸ್ ಆಗೋದು ಖಚಿತ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ  ಶೇ 99% ರಷ್ಟು ಅಂಕಗಳಿಸಲು ಸರಳ ಸೂತ್ರ

ಧನಾತ್ಮಕ ಚಿಂತನೆ:

ಪ್ರತಿಯೊಬ್ಬ ವ್ಯಕ್ತಿಗಳ ಬದುಕಿಗೂ ಬೇಕಿರುವುದು ಧನಾತ್ಮಕ ಚಿಂತನೆಗಳು ಯಾಕಂದ್ರೆ ಬಾಳಲ್ಲಿ ಬರುವ ಅದೆಷ್ಟೋ ಕತ್ತಲೆಗಳಿಗೆ ಬೆಳಕು ನೀಡುವುದೇ ಈ ಧನಾತ್ಮಕ ಚಿಂತನೆಗಳು. ಇನ್ನೂ ವಿದ್ಯಾರ್ಥಿಗಳ ಬಾಳನ್ನು ಬೆಳಗುವ ವಿದ್ಯಾಭ್ಯಾಸ ಹಂತದಲ್ಲಿ ತಾವು ಧನಾತ್ಮಕ ಚಿಂತನೆಗಳನ್ನು ಹೆಚ್ಚು ಹೊಂದಿದಷ್ಟು ಅವರ ಆತ್ಮವಿಶ್ವಾಸ ಹೆಚ್ಚುತ್ತದೆ ಅಂದುಕೊಂಡ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತವೆ ಇನ್ನೂ ಮನಸ್ಸಿನಲ್ಲಿ ಯಾವುದೇ ಗೊಂದಲಗಳಿಗೆ ಎಡಮಾಡದೆ ವಿದ್ಯಾರ್ಥಿಯ ವಿದ್ಯಾಭ್ಯಾಸ ಹಂತವನ್ನು ಸುಗಮವಾಗಿ ಸಾಗಲು ಪ್ರೇರಣೆ ನೀಡುತ್ತವೆ.
ಹಾಗಾಗಿ ವಿದ್ಯಾರ್ಥಿಗಳು ತಾವು ಮಾಡುವ ಕೆಲಸದ ಮೇಲೆ ಗಮನವಿಡಬೇಕು, ಓದಿನ ಬಗೆಗೆ ಹೆಚ್ಚು ಆಸಕ್ತಿ ವಹಿಸಿ ತಮ್ಮ ಗುರಿಯೆಡೆಗೆ ತಮ್ಮ ಚಿತ್ತವನ್ನು ಹರಿಸಿ ತಮ್ಮ ಯಶಸ್ಸಿನ ದಾರಿಯನ್ನು ಸುಗಮವಾಗಿಡಲು ಧನಾತ್ಮಕ ಚಿಂತನೆಗಳನ್ನು ಕೈಗೊಳ್ಳಬೇಕು.

 

ಪರೀಕ್ಷಾ ಹಿಂದಿನ ದಿನ ಏನು ಮಾಡಬೇಕು?

ಅಯ್ಯೋ ನಾಳೆ ಪರೀಕ್ಷೆ ಚೆನ್ನಾಗಿ ಓದಿಕೊಳ್ಳೋಣ ಅಂತ ರಾತ್ತಿಯೆಲ್ಲಾ ನಿದ್ದೆಗೆಟ್ಟು ಓದಿದ್ರೆ ಕೆಲಸ ಹಾಳು ಅಂತಾನೆ ಅರ್ಥ. ನಿಜ ಹೇಳ್ಬೇಂದ್ರೆ ಪರೀಕ್ಷೆಯ ಹಿಂದಿನ ದಿನ ವಿದ್ಯಾರ್ಥಿಗಳು ಯಾವುದೇ ಚಿಂತೆಗೆ ಒಳಗಾಗದೆ ಅರಾಮಾಗಿ ಊಟ ಮಾಡಿ ವಿಶ್ರಾಂತಿ ತೆಗೆದುಕೊಳ್ಳುವುದು ಒಳಿತು ಇಲ್ಲಾಂದ್ರೆ ನಿದ್ರೆ ಇಲ್ಲದ ಕೇವಲ ತಲೆಯಲ್ಲಿ ಟೆನ್ಷನ್ ತುಂಬಿಕೊಂಡು ಇದ್ರೆ ಪರೀಕ್ಷಾ ವೇಳೆ ಯಾವ ವಿಷಯವೂ ನೆನಪಾಗುವುದಿಲ್ಲ. ನಿದ್ರೆ ಇಲ್ಲದೆ ಪರೀಕ್ಷೆಗೆ ಹೋದರೆ ತಲೆಯಲ್ಲಿರುವ ಮೆದುಳು ಸರಿಯಾಗಿ ಕಾರ್ಯನಿರ್ವಹಿಸದೆ ನಿಮ್ಮ ಅಮೂಲ್ಯವಾದ ಪರೀಕ್ಷೆಯನ್ನು ಹಾಳುಗೆಡುವಲ್ಲಿ ನೀವೇ ಕಾರಣವಾಗಬಹುದು. ಹಾಗಾಗಿ ವಿದ್ಯಾರ್ಥಿಗಳು ಹೆಚ್ಚು ಗೊಂದಲಕ್ಕೊಳಗಾಗದೆ ನಿಶ್ಚಿಂತೆಯಿಂದ ವಿಶ್ರಾಂತಿ ಮಾಡಿ ಪರೀಕ್ಷೆಯಲ್ಲಿ ಹಾಜರಾದಲ್ಲಿ ಖಂಡಿತಾ ನೀವು ಅಂದುಕೊಂಡಂತೆ ಒಳ್ಳೆ ಮಾರ್ಕ್ಸ್ ತಗೊಳ್ಳಬಹುದು.

ಪರೀಕ್ಷಾ ಸಮಯ ಮುನ್ನ ಮಾಡಬೇಕಿರುವುದು ಏನು?

ಇನ್ನೇನು ಪರೀಕ್ಷೆಗೆ ಒಂದು ತಾಸು ಇದೆ ಅನ್ನೋವಾಗ ಸಹಪಾಠಿಗಳ ಬಳಿ ಓದಿನ ಬಗೆಗೆ ಏನನ್ನು ಚರ್ಚಿಸಿ ಇನ್ನಷ್ಟು ಗೊಂದಲಕ್ಕೆ ಒಳಗಾಗ ಬೇಡಿ. ಮನಸ್ಸನ್ನು ಒಂದು ತಾಸು ಆರಾಮಾಗಿ ಖುಷಿಯಾಗಿಡಿ. ಆದರೆ ಪರೀಕ್ಷಾ ದಿನದಂದು ಬೆಳಗ್ಗೆ ಎದ್ದಾಗ ಒಂದು ತಾಸು ಮುಖ್ಯವಿಷಯಗಳನ್ನು ಒಮ್ಮೆ ಮನನ ಮಾಡಿಕೊಳ್ಳಿ ಇದು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವ ತಂತ್ರ ಆದೀತು ಹಾಗಾಗಿ ಹೀಗೆ ಮಾಡಿದ್ರೆ ಹೆಚ್ಚು ಉಪಯೋಗಕಾರಿಯಾಗುತ್ತದೆ.

ಪರೀಕ್ಷೆ ಬರೆಯುವ ಮುನ್ನ ಹೀಗೆ ಮಾಡಿ:

ಟೆನ್ಷನ್ ನಲ್ಲಿ ಪರೀಕ್ಷೆಗೆ ಹೋಗುವುದನ್ನ ಬಿಟ್ಟು ಪರೀಕ್ಷೆಗೆ ಬೇಕಿರುವ ಎಲ್ಲಾ ಪರಿಕರಗಳು ಅಂದರೆ ಪೆನ್ಸಿಲ್ , ಪೆನ್ ,ಸ್ಕೇಲ್ ಇತರೆ ಪರಿಕರಗಳು ನಿಮ್ಮ ಬಳಿ ಇವೆಯೇ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಿ. ಅಗತ್ಯ ವಸ್ತುಗಳು ಇಲ್ಲದಿದ್ದಲ್ಲಿ ಒಮ್ಮೊಮ್ಮೆ ನಿಮ್ಮ ಅಮೂಲ್ಯ ಪರೀಕ್ಷಾ ಸಮಯವನ್ನು ಹಾಳು ಮಾಡಿದ್ದೀತು ಹಾಗಾಗಿ ಈ ಬಗ್ಗೆ ಎಚ್ಚರ ವಹಿಸಿ.
ಇನ್ನೂ ಪರೀಕ್ಷೆಯಲ್ಲಿ ನೀಡಲಾಗಿರುವ ಇನ್‌ಸ್ಟ್ರಕ್ಷನ್ ಗಳನ್ನು ಸರಿಯಾಗಿ ಓದಿಕೊಳ್ಳಿ ಯಾಕಂದ್ರೆ ಅನೇಕ ವಿದ್ಯಾರ್ಥಿಗಳು ಎಡವಿ ಬೀಳೋದು ಇಲ್ಲಿಯೇ. ಹಾಗಾಗಿ ಇನ್‌ಸ್ಟ್ರಕ್ಷನ್ ಗಳನ್ನು ಸರಿಯಾಗಿ ಗಮನಿಸಿ ಪರೀಕ್ಷೆಯನ್ನು ಬರೆಯಿರಿ.

ಟೈಂ ಮ್ಯಾನೇಜ್ಮೆಂಟ್ ಹೇಗೆ ಮಾಡೋದು:

ಪರೀಕ್ಷೆಯಲ್ಲಿ ಕೇಳಲಾಗಿರುವ ಎಲ್ಲಾ ಪ್ರಶ್ನೆಗಳನ್ನು ಒಮ್ಮೆ ಓದಿಕೊಳ್ಳಿ ನಂತರ ಯಾವ ಪ್ರಶ್ನೆಯು ಅತೀ ಹೆಚ್ಚು ಅಂಕಗಳನ್ನು ಒಳಗೊಂಡಿರುತ್ತದೆ ಮತ್ತು ಯೋಚಿಸಿ ಉತ್ತರ ಬರೆಯಲು ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆಯೋ ಅಂತ ಪ್ರಶ್ನೆಗೆ ಉತ್ತರಿಸಲು ಪ್ರಾರಂಭಿಸಿ.ಯಾಕೆಂದ್ರೆ ವಿದ್ಯಾರ್ಥಿಗಳು ಮೊದಲು ಕಡಿಮೆ ಅಂಕಗಳ ಪ್ರಶ್ನೆಗಳನ್ನು ಉತ್ತರಿಸಲು ಹೋಗಿ ಕೊನೆಯಲ್ಲಿ ಸಮಯದ ಅಭಾವ ಉಂಟಾದಾಗ ಉತ್ತರವನ್ನು ಯೋಚಿಸಲು ಸಮಯವಿಲ್ಲದೆ ಏನೋ ಗೀಚಿ ಬರುವುದರಿಂದಲೂ ಒಳ್ಳೆಯ ಅಂಕಗಳನ್ನು ಪಡೆಯುವಲ್ಲಿ ವಿಫಲರಾಗುತ್ತಾರೆ.

ಮನಸ್ಸನ್ನು ವಿಚಲಿತಗೊಳಿಸೋ ಅಂಶಗಳು:

ಒಂದು ಅಂಕಗಳ ಯಾವುದೋ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಅನ್ನೋ ಚಿಂತೆ ನಿಮ್ಮ ಮೆದುಳಿಗೆ ಘಾಸಿ ಮಾಡಬಹುದು ಆಗ ಕೆಲವು ನಿಮಿಷ ಸಮಾಧಾನವಾಗಿ ಚಿಂತಿಸಿ ಉತ್ತರ ನೆನಪಾಗುತ್ತದೆ. ಇನ್ನೂ ಯಾವುದೋ ಒಂದು ಪ್ರಶ್ನೆಗೆ ಉತ್ತರಿಸುವ ಹೊತ್ತಿಗೆ ಈ ಪ್ರಶ್ನೆಯ ಬದಲು ಬೇರೊಂದು ಪ್ರಶ್ನೆಗೆ ಉತ್ತರಿಸಬಹುದಿತ್ತು ಎಂದು ಗೊಂದಲಕ್ಕೀಡು ಮಾಡಿಕೊಳ್ಳಬೇಡಿ ಯಾಕಂದ್ರೆ ಅದು ನಿಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಹಾಗಾಗಿ ಆತ್ಮವಿಶ್ವಾಸವನ್ನು ಎಲ್ಲಿಯೂ ಕಳೆದುಕೊಳ್ಳದಂತೆ ಕೇಳಲಾದ ಪ್ರಶ್ನೆಗೆ ಉತ್ತಿರುಸವಲ್ಲಿ ಗಮನವನ್ನು ಕೇಂದ್ರೀಕರಿಸಿ.

ಅಕ್ಷರಗಳನ್ನು ಮುದ್ದಾಗಿ ಬರೆದ್ರೆ ಮಾರ್ಕ್ಸ್ ಸಿಗುತ್ತೆ:

ಹೌದು ಇದು ಎಲ್ಲಿರಿಗೂ ಗೊತ್ತಿರೋ ವಿಚಾರ ಆದರೆ ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚು ಯೋಚನೆ ಮಾಡೋದಿಲ್ಲ. ನೀವು 99%ರಷ್ಟು ಅಂಕ ಪಡೆಯಬೇಕು ಅಂತ ಇದ್ರೆ ಮೊದಲು ನಿಮ್ಮ ಅಕ್ಷರಗಳನ್ನು ಮುದ್ದಾಗಿ ಬರೆಯುವ ಬಗೆಗೆ ಹೆಚ್ಚು ಕಾಳಜಿವಹಿಸಿ. ನಿಮ್ಮ ಅಕ್ಷರಗಳು ಹೇಗಿರಬೇಕು ಅಂದ್ರೆ ಎಕ್ಸಾಮಿನರ್ ನಿಮ್ಮ ಅಕ್ಷರಗಳನ್ನು ನೋಡಿ ಅಟ್ರಾಕ್ಟ್ ಆಗ್ಬೇಕು, ತುಂಬಾ ಮುಖ್ಯವಾದ ವಿಷಯಗಳ ಕೆಳಗೆ ಗೆರೆಯನ್ನು ಹಾಕಿ , ಆದಷ್ಟು ತಪ್ಪು ಬರೆಯುವುದು ಮತ್ತು ಕಾಟ್ ಮಾಡುವುದನ್ನು ತಡೆಯಿರಿ ಆಗ ಕ್ಲೀನ್ ಹಾಳೆ ನಿಮ್ಮ ಮುದ್ದಾದ ಬರಹ ಉತ್ತಮ ಅಂಕ ಗಳಿಸೋಕು ಕಾರಣವಾಗಬಹುದು.

ಪರೀಕ್ಷೆ ಮುಗಿದ ನಂತರ ಮಾಡಬೇಕಿರೋದೇನು?

ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆದಿದ್ದೇನೆ ಅಂತ ಹೊರಗೋಗುವ ತಪ್ಪನ್ನು ಮಾತ್ರ ನೀವು ಮಾಡಲೇಬೇಡಿ. ಯಾಕಂದ್ರೆ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ ನಂತರ ಒಮ್ಮೆ ಉತ್ತರ ಪತ್ರಿಕೆಯನ್ನು ಪರಿಶೀಲಿಸಿಕೊಳ್ಳಿ ಎಲ್ಲಾ ಪ್ರಶ್ನೆಗಳ ಉತ್ತರಗಳ ನಂಬರ್ ಅನ್ನು ಸರಿಯಾಗಿ ಹಾಕಿದ್ದೀರಾ ಇಲ್ಲವಾ ಮತ್ತು ಉತ್ತರ ಬರೆಯುವಾಗ ಏನಾದರೂ ತಪ್ಪು ಮಾಡಿದ್ದೀರಾ ಅಥವಾ ಯಾವುದಾದರೂ ಪ್ರಶ್ನೆಗೆ ಉತ್ತರಿಸಲು ಮರೆತಿದ್ದೀರೇ ಎಂದು ಚೆಕ್ ಮಾಡಿಕೊಳ್ಳಿ ಇದ್ರಿಂದಾನೆ ಅನೇಕ ವಿದ್ಯಾರ್ಥಿಗಳು ಅಂಕಗಳನ್ನು ಕಳೆದುಕೊಂಡಿದ್ದಾರೆ ಮತ್ತು ಇನ್ನಷ್ಟು ವಿದ್ಯಾರ್ಥಿಗಳು ಎಚ್ಚೆತ್ತುಕೊಂಡು ಚೆಕ್ ಮಾಡಿಕೊಂಡಾಗ ಉತ್ತಮ ಅಂಕಗಳನ್ನು ಗಳಿಸಿರುತ್ತಾರೆ.

For Quick Alerts
ALLOW NOTIFICATIONS  
For Daily Alerts

English summary
Here we are giving tips for students how to get 99% marks in SSLC and how to become a toppers.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X