ಹವ್ಯಾಸಗಳನ್ನು ಬದಲಾಯಿಸಿದ್ರೆ ಯಶಸ್ಸು ನಿಮ್ಮದಾಗುತ್ತದೆ...

ಯಾರು ತಾನೇ ಜೀವನದಲ್ಲಿ ಮುಂದೆ ಬರಲು ಇಚ್ಛಿಸೋದಿಲ್ಲ. ಯಶಸ್ಸು ಎನ್ನೋದು ಎಲ್ಲರಿಗೂ ಸಿಗೋದಿಲ್ಲ. ಅದು ಕೆಲವೇ ಕೆಲವು ಜನರ ಕೈ ಹಿಡಿಯುತ್ತದೆ. ಯಶಸ್ಸು ನಮಗೆ ಸಿಗಬೇಕಾದರೆ ನಮ್ಮ ಪ್ರಯತ್ನ ಕೂಡಾ ಮುಖ್ಯ.

By Kavya

ಪ್ರತಿಯೊಬ್ಬ ಪ್ರೊಫೆಶನಲ್ ವ್ಯಕ್ತಿಗೂ ಕಾಡುವ ಮಿಲಿಯನ್ ಡಾಲರ್ ಪ್ರಶ್ನೆ ಎಂದರೆ ಜೀವನದಲ್ಲಿ ಯಶಸ್ಸನ್ನು ಕಾಣೋದು ಹೇಗೆ ಎಂಬುದು. ಬಹಳಷ್ಟು ಯುವಕರು ಸಕ್ಸಸ್‌ಫುಲ್ ವ್ಯಕ್ತಿಗಳನ್ನು ಹಿಂಬಾಲಿಸಲು ಪ್ರಯತ್ನಿಸುತ್ತಾರೆ.

ಹವ್ಯಾಸಗಳನ್ನು ಬದಲಾಯಿಸಿದ್ರೆ ಯಶಸ್ಸು ನಿಮ್ಮದಾಗುತ್ತದೆ...

ಅವರ ದಾರಿಯಲ್ಲೇ ನಡೆಯಲು ಪ್ರಯತ್ನಿಸುತ್ತಾರೆ, ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯನ್ನು ಅನುಸರಿಸುವುದು ಟ್ರೆಂಡ್ ಆಗಿರಬಹುದು. ಆದರೆ ಶಾಲೆಯನ್ನು ಅರ್ಧದಲ್ಲೇ ತ್ಯಜಿಸಿದ ಪ್ರತಿಯೊಬ್ಬ ವ್ಯಕ್ತಿಯೂ ಸ್ಟೀವ್ ಜಾಬ್ಸ್ ಆಗಲು ಸಾಧ್ಯವಿಲ್ಲ ಅನ್ನೋದನ್ನು ಅವರು ಅರ್ಥಮಾಡಿಕೊಳ್ಳಬೇಕು.

1. ಬೆಳಗ್ಗೆ ಬೇಗನೇ ಎದ್ದೇಳಿ

1. ಬೆಳಗ್ಗೆ ಬೇಗನೇ ಎದ್ದೇಳಿ

ಬೆಳಗ್ಗೆ ಬೇಗ ಏಳೋದು ಯಶಸ್ವಿ ವ್ಯಕ್ತಿಯ ಲಕ್ಷಣವಾಗಿದೆ. ಬೆಳಗ್ಗೆ ಏಳೋದರಿಂದ ನೂರಾರು ಪ್ರಯೋಜನಗಳಿವೆ, ಹಲವರು ರಾತ್ರಿ ತಡರಾತ್ರಿಯವರೆಗೆ ಕೆಲಸ ಮಾಡುತ್ತಾ ಇರುವುದು ಬೆಳಗ್ಗೆ ತಡವಾಗಿ ಏಳುವುದಕ್ಕೆ ಕಾರಣ ನೀಡುತ್ತಾರೆ.

ಬೆಳಗ್ಗೆ 1 ಗಂಟೆ ಮುಂಚಿತವಾಗಿ ಏಳೋದರಿಂದ ನಿಮ್ಮ ದಿನನಿತ್ಯದ ಕೆಲಸಕ್ಕೆ ಹೆಚ್ಚು ಸಮಯ ನೀಡಿದಂತಾಗುತ್ತದೆ. ನಿಮ್ಮ ಮೆದುಳು ಶಾರ್ಪ್ ಆಗುತ್ತದೆ. ಆಫೀಸ್‌ಗೆ ತಡವಾಯಿತೆಂದು ಗಡಿಬಿಡಿಯಲ್ಲಿ ಓಡುವ ಅಗತ್ಯ ಇರೋದಿಲ್ಲ. ಬಸ್‌ ಮಿಸ್ ಆಗುವ ಪ್ರಮಾದವೂ ಇರೋದಿಲ್ಲ.

 

2. ನಿಮ್ಮ ದಿನಚರಿಯನ್ನು ಮುಂಚಿತವಾಗಿ ನಿರ್ಧರಿಸಿ

2. ನಿಮ್ಮ ದಿನಚರಿಯನ್ನು ಮುಂಚಿತವಾಗಿ ನಿರ್ಧರಿಸಿ

ಸಾಕಷ್ಟು ವ್ಯಕ್ತಿಗಳು ತಮ್ಮ ದಿನಚರಿಯನ್ನು ಮುಂಚಿತವಾಗಿ ನಿರ್ಧರಿಸಿರುತ್ತಾರೆ. ಹಾಗಾಗಿ ಬೆಳಗ್ಗೆ ಎದ್ದಾಗಿನಿಂದ ಅದರ ಪ್ರಕಾರವೇ ಕೆಲಸ ಮುಗಿಸುತ್ತಾರೆ. ಇದರಿಂದ ಅವರ ದಿನಚರಿಯು ಶಿಸ್ತಿನಲ್ಲಿ ಸಾಗುತ್ತದೆ. ಹೀಗೆ ಮಾಡುವುದರಿಂದ ನೀವು ಕೇವಲ ಆಫೀಸ್ ಕೆಲಸಗಳಿಗೆ ಮಾತ್ರವಲ್ಲ ನಿಮ್ಮ ವೈಯಕ್ತಿಕ ಕೆಲಸಗಳಿಗೂ ಸಮಯವನ್ನು ನೀಡಬಹುದು.

3. ವ್ಯಾಯಾಮಮಾಡಿ, ಆರೋಗ್ಯದಿಂದಿರಿ

3. ವ್ಯಾಯಾಮಮಾಡಿ, ಆರೋಗ್ಯದಿಂದಿರಿ

ಆರೋಗ್ಯವೇ ಭಾಗ್ಯ ಎನ್ನುವುದನ್ನು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಕ್ಸಸ್ ಮಂತ್ರವನ್ನಾಗಿಸಬೇಕು. ಯಶಸ್ವಿ ವ್ಯಕ್ತಿಗಳು ಆರೋಗ್ಯವಾಗಿರುವುದರ ಮಹತ್ವವನ್ನು ಅರಿಯುತ್ತಾರೆ. ಅದಕ್ಕಾಗಿ ತಮ್ಮ ದಿನಚರಿಯಲ್ಲಿ ಕೆಲವು ಸಮಯವನ್ನು ವ್ಯಾಯಾಮಕ್ಕಾಗಿ ವಿನಿಯೋಗಿಸುತ್ತಾರೆ. ನಿಮ್ಮ ಆರೋಗ್ಯ ಕೂಡಾ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅದಕ್ಕಾಗಿ ಉತ್ತಮ ಆರೋಗ್ಯ ನಿಮ್ಮದಾಗಿಸಬೇಕಾದರೆ ಇವತ್ತಿನಿಂದಲೇ ವ್ಯಾಯಾಮ ಪ್ರಾರಂಭಿಸಿ.

4. ಜೀವನದಲ್ಲಿ ಸಣ್ಣ ಗುರಿಯನ್ನು ಹೊಂದಿ

4. ಜೀವನದಲ್ಲಿ ಸಣ್ಣ ಗುರಿಯನ್ನು ಹೊಂದಿ

ನಿಮ್ಮ ಗುರಿಯ ಬಗ್ಗೆ ಕ್ಲಿಯರ್ ಆಗಿರಿ. ಪ್ರತಿಯೊಬ್ಬರಿಗೂ ಜೀವನದಲ್ಲಿ ವಿಭಿನ್ನ ಗುರಿ ಇರುತ್ತದೆ. ನಿಮ್ಮ ಗುರಿ ಆದಷ್ಟು ಸಣ್ಣ ಸಣ್ಣದಾಗಿದ್ದರೆ ಅವುಗಳನ್ನು ಸಾಧಿಸಲು ಸುಲಭವಾಗುತ್ತದೆ. ಅದೇ ನೀವು ದೊಡ್ಡ ದೊಡ್ಡ ಗುರಿಯನ್ನು ಹೊಂದಿದ್ದರೆ ನಿಮ್ಮ ಅದನ್ನು ಸಾಧಿಸುವ ಭರದಲ್ಲಿ ನಿಮ್ಮ ಜೀವನವೇ ಮುಗಿದು ಹೋಗಬಹುದು. ಮುಖ್ಯವಾಗಿ ನಿಮ್ಮ ಜೀವನದ ಗುರಿಯ ಬಗ್ಗೆ ಸಕಾರಾತ್ಮಕ ಗುಣವನ್ನು ಹೊಂದಿರಿ.

 

 

5. ಓದುವುದು

5. ಓದುವುದು

ಯಾವುದೇ ಪ್ರಸಿದ್ಧ ವ್ಯಕ್ತಿಯ ಜೀವನಚರಿತ್ರೆ ಅಥವಾ ಲೇಖನಗಳನ್ನು ಓದಿ. ಓದುವುದನ್ನು ಸಕ್ಸಸ್ ಮಂತ್ರವನ್ನಾಗಿಸಿ. ಹಾಗಂತ ಫೇಸ್‌ಬುಕ್‌ನಲ್ಲಿ ಅಥವಾ ಟ್ವಿಟ್ಟರ್‌ನಲ್ಲಿ ಹಾಕಲಾಗಿರುವುದನ್ನು ಓದುವುದು ಲೆಕ್ಕಕ್ಕೇ ಬರೋದಿಲ್ಲ. ಪುಸ್ತಕಗಳನ್ನು ಓದುವುದರಿಂದ ಅದು ನಿಮ್ಮ ಜ್ಞಾನವೂ ಹೆಚ್ಚುತ್ತದೆ. ಜೊತೆಗೆ ಹೊಸ ವಿಚಾರಗಳನ್ನು ಕಲಿಯಲು ಸಿಗುತ್ತದೆ.

6. ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸುವುದು

6. ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸುವುದು

ವಸ್ತುಗಳನ್ನು ಜೋಡಿಸಿ ಇಡುವುದಕ್ಕೂ ಸಕ್ಸಸ್‌ಗೂ ಏನು ಸಂಬಂಧ ಎಂದು ನೀವಂದುಕೊಳ್ಳಬಹುದು. ಆದರೆ ಇದು ಪ್ರತಿನಿತ್ಯ ನಿಮಗೆ ಚಾಲೇಂಜ್‌ನ್ನು ಹೇಗೆ ಸ್ವೀಕರಿಸಬೇಕು ಎನ್ನುವುದನ್ನು ಕಲಿಸಿಕೊಡುತ್ತದೆ. ನೀವು ನಿಮ್ಮ ಡೆಸ್ಕ್‌ನ್ನು ಶುಚಿಯಾಗಿ ಅಚ್ಚುಕಟ್ಟಾಗಿ ಇಟ್ಟಿದ್ದೀರೆಂದಾರೆ ಅದು ನಿಮ್ಮ ಬಗ್ಗೆ ಪಾಸಿಟಿವ್ ಯೋಚನೆಯನ್ನು ನೀಡುತ್ತದೆ. ಸಮಯದ ಉಳಿತಾಯವೂ ಆಗುತ್ತದೆ. ವಸ್ತುಗಳಿಗಾಗಿ ಪರದಾಡಬೇಕೆಂದೇನಿಲ್ಲ.

7. ಏಕಾಂತವಾಗಿ ಸಮಯ ಕಳೆಯಿರಿ

7. ಏಕಾಂತವಾಗಿ ಸಮಯ ಕಳೆಯಿರಿ

ಬಹಳಷ್ಟು ಮಂದಿಗೆ ತಮ್ಮ ಬ್ಯುಸಿ ಶೆಡ್ಯೂಲ್‌ನಿಂದಾಗಿ ಆಫೀಸ್ ಕೆಲಸ ಹಾಗೂ ವೈಯಕ್ತಿಕ ಕೆಲಸವನ್ನು ಮ್ಯಾನೇಜ್ ಮಾಡೋದು ಬಹಳ ಕಷ್ಟ. ಆಫೀಸ್‌ನ ವರ್ಕರ್ಸ್‌ , ಫ್ಯಾಮಿಲಿ ಸದಸ್ಯರು ಜೊತೆಗಿದ್ದಾಗ ಅದನ್ನು ತಮಗಾಗಿ ಸಮಯ ತೆಗೆದುಕೊಳ್ಳುವುದು ಅಸಾಧ್ಯವೇ ಸರಿ. ನಿಮಗಾಗಿ ಸಮಯ ತೆಗೆದುಕೊಳ್ಳುವುದೆಂದರೆ ಬರೀ ನಿದ್ದೆ ಮಾಡುವುದು, ಟಿವಿ ನೋಡೋದು, ಸಾಮಾಜಿಕ ತಾಣಗಳನ್ನು ನೋಡುವುದಲ್ಲ. ಬದಲಾಗಿ ನಿಮ್ಮ ಜೀವನದ ಬಗ್ಗೆ ಯೋಚಿಸುವುದು. ಸರಿಯಾದ ಹಾದಿಯಲ್ಲಿ ಸಾಗುತ್ತಿದೆಯೋ, ಅದರಲ್ಲಿ ತಾನು ಸಂತುಷ್ಟನಾಗಿದ್ದೇನೋ ಎನ್ನುವುದರ ಬಗ್ಗೆ ಯೋಚಿಸಿ.

For Quick Alerts
ALLOW NOTIFICATIONS  
For Daily Alerts

English summary
every young entrepreneur who dropped out of college would turn out to be Steve Jobs with Apple Inc. So, while following successful people might be a trend, it certainly does not guarantee success.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X