Independence Day Celebrations During Covid-19: ಕೊರೋನಾ ಸಮಸ್ಯೆ ನಡುವೆ ಆಚರಣೆ ಮಾಡುವುದು ಹೇಗೆ?

ಆಗಸ್ಟ್ 15 ರಂದು ಭಾರತವು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಿಕೊಳ್ಳುತ್ತಿದೆ. ಪ್ರತೀ ವರ್ಷ ಆಗಸ್ಟ್ 15 ರಂದು ದೇಶದಲ್ಲಿ ಬಹಳ ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತದೆ. ಆದರೆ ಈ ಬಾರಿ ಈ ಸಂಭ್ರಮಾಚರಣೆಯನ್ನು ಕೊರೋನಾ ಕಿತ್ತುಕೊಂಡಿದೆ.

ಸ್ವಾತಂತ್ರ್ಯ ದಿನದಂದು ಮನೆಯಲ್ಲೇ ಹೇಗೆ ಆಚರಣೆ ಮಾಡಬಹುದು ಗೊತ್ತಾ ?

ಕೊರೋನಾ ಸೋಂಕು ಭಾರತಕ್ಕೆ ಬಂದಾಗಿನಿಂದಲೂ ಜನ ಜೀವನ ಏರುಪೇರಾಗಿದೆ. ಹೀಗಿರುವ ಸಂದರ್ಭದಲ್ಲಿ ಶಾಲಾ ಕಾಲೇಜುಳ ಆರಂಭ ನಿಧಾನಗತಿಯಲ್ಲಿದೆ. ಹೀಗಾಗಿ ಈ ವರ್ಷ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಗೆ ಅಡ್ಡಿಯಾಗಿದೆ. ಹಾಗಾದ್ರೆ ವಿದ್ಯಾರ್ಥಿಗಳು ಮನೆಯಲ್ಲೇ ಯಾವ ರೀತಿ ಆಚರಣೆಯನ್ನು ಮಾಡಬಹುದು ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತದೆ. ಇದನ್ನು ಓದಿ ನಂತರ ನೀವು ಕೂಡ ಮನೆಯಲ್ಲೇ ಆಚರಣೆಯನ್ನು ಮಾಡಿ.

ಸ್ವಾತಂತ್ರ್ಯ ದಿನಾಚರಣೆಯ ಇತಿಹಾಸ ತಿಳಿಸಿ:

ಸ್ವಾತಂತ್ರ್ಯ ದಿನಾಚರಣೆಯ ಇತಿಹಾಸ ತಿಳಿಸಿ:

ಈ ವರ್ಷ ಸ್ವಾತಂತ್ರ್ಯ ದಿನಾಚರಣೆಯನ್ನು ವಿದ್ಯಾರ್ಥಿಗಳು ಮನೆಯಲ್ಲೇ ಆಚರಿಸುವ ಸಂದರ್ಭವಿರುವುದರಿಂದ ಈ ದಿನದ ಇತಿಹಾಸ ಮತ್ತು ಮಹತ್ವವನ್ನು ಮಕ್ಕಳಿಗೆ ತಿಳಿಸಿ. ಇದರಿಂದ ಮಕ್ಕಳಿಗೆ ಆಚರಣೆಯ ಬಗ್ಗೆ ತಿಳಿಯುವುದು ಹಾಗೂ ಅವರೂ ಈ ದಿನದ ಆಚರಣೆಯನ್ನು ರೂಡಿಯಲ್ಲಿಡುತ್ತಾರೆ.

ಉತ್ತಮ ಸಂದೇಶ ಉಳ್ಳ ಪುಸ್ತಕ ಓದಿ:

ಉತ್ತಮ ಸಂದೇಶ ಉಳ್ಳ ಪುಸ್ತಕ ಓದಿ:

ದೇಶ ಭಕ್ತಿ ಎಂದರೆ ಅದು ಒಂದು ದಿನದ ಆಚರಣೆಯಲ್ಲ. ಹಾಗಾಗಿ ಮಕ್ಕಳಿಗೆ ಇಂದು ಉತ್ತಮ ಸಂದೇಶ ಇರುವ ಹಾಗೂ ದೇಶದ ಕುರಿತಾದ ಮಾಹಿತಿಯುಳ್ಳ ಉತ್ತಮ ಪುಸ್ತಕ ಓದುವಂತೆ ಸಹಕರಿಸಿ. ಇದರಿಂದ ಅವರಲ್ಲಿ ಪುಸ್ತಕ ಓದುವ ಅಭ್ಯಾಸ ಪ್ರಾರಂಭವಾಗುತ್ತದೆ.

ದೇಶಭಕ್ತಿ ಗೀತೆಗಳನ್ನು ಕೇಳಿ:

ದೇಶಭಕ್ತಿ ಗೀತೆಗಳನ್ನು ಕೇಳಿ:

ಈ ಬಾರಿ ಶಾಲಾ ಕಾಲೇಜುಗಳನ್ನು ಇನ್ನೂ ತೆರೆಯದ ಕಾರಣ ಮನೆಯಲ್ಲಿ ಸ್ವಾತಂತ್ರ್ಯ ದಿನವನ್ನು ದೇಶ ಭಕ್ತಿಗಳನ್ನು ಕೇಳುವ ಮೂಲಕ ಆಚರಣೆಯನ್ನು ಮಾಡಬಹುದು. ಅಂತರ್ಜಾಲದಲ್ಲಿ ಲಭ್ಯವಿರುವ ದೇಶಭಕ್ತಿ ಗೀತೆಗಳನ್ನು ಮಕ್ಕಳಿಗೆ ಕೇಳಿಸಿ. ಇದರಿಂದ ಮಕ್ಕಳಿಗೂ ದೇಶಭಕ್ತಿ ಮೂಡುವುದು.

ಫ್ಯಾಮಿಲಿಗಾಗಿ ಸ್ಪೇಶಲ್ ಕುಕ್:

ಫ್ಯಾಮಿಲಿಗಾಗಿ ಸ್ಪೇಶಲ್ ಕುಕ್:

ಎಲ್ಲೆಡೆ ಕೊರೋನಾ ಸುದ್ದಿ ಕೇಳಿ ಬೇಸತ್ತ ಮನಸ್ಸಿಗೆ ಸ್ವಲ್ಪ ರಿಲ್ಯಾಕ್ಸ್ ನೀಡಿ. ಈ ದಿನ ಫ್ಯಾಮಿಲಿ ಜೊತೆ ಸ್ವಲ್ಪ ಕಾಲ ಕಳೆಯಿರಿ ಜೊತೆಗೆ ಅವರಿಗಾಗಿ ಮನೆಯಲ್ಲೇ ಏನಾದ್ರು ಸ್ಪೇಶಲ್ ಅಡುಗೆ ಮಾಡಿ ಬಡಿಸಿ. ಹಾ ಮತ್ತೊಂದು ವಿಷಯ ನೀವು ಮಾಡುವ ಅಡುಗೆ ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದ್ದರೆ ಮತ್ತೂ ಚೆಂದ. ಇನ್ನು ಮನೆ ತುಂಬಾ ಪುಟ್ಟ ಮಕ್ಕಳಿದ್ದರೆ, ಇಲ್ಲ ಅತಿಥಿಗಳಿದ್ದರೆ ಅವರಿಗೆ ಸ್ವಾತಂತ್ರ್ಯ ದಿನಾಚರಣೆ ಥೀಮ್ ನ ಅಡುಗೆ ಮಾಡಿ ಬಡಿಸಿ ಇದರಿಂದ ಅವರಿಗೆ ನಿಜಕ್ಕೂ ಸಪ್ರೈಸ್ ಆಗುವುದು.

ಗಾಳಿಪಟ ಹಾರಿಸಿ:

ಗಾಳಿಪಟ ಹಾರಿಸಿ:

ಹಿಂದಿನ ಕಾಲದಲ್ಲಿ ಈ ದಿನ ಮನೆ ಟೇರಸ್ ಮೇಲೆ ಹೋಗಿ ಎಲ್ಲರೂ ಗಾಳಿಪಟ ಹಾರಿಸುತ್ತಿದ್ದರು. ಇಂದಿಗೂ ಕೆಲವೆಡೆ ಮುಖ್ಯವಾಗಿ ದೆಹಲಿ, ಲಖ್ನೋ ಹಾಗೂ ಹೈದ್ರಾಬಾದ್ ಮುಂತಾದೆಡೆ ಆ ಸಂಪ್ರದಾಯ ಹಾಗೆಯೇ ಇದೆ. ನೀವು ಕೂಡಾ ಯಾಕೆ ಅದನ್ನ ಟ್ರೈ ಮಾಡಬಾರದು. ನಿಮ್ಮ ಮನೆ ಮಂದಿಯ ಜತೆ ಟೇರಸ್ ಮೇಲೆ ಹೋಗಿ ಗಾಳಿಪಟ ಹಾರಿಸಿ. ಕೊರೋನಾ ಇರುವ ಕಾರಣ ಆಚೆ ಹೋಗದೆ ಮನೆಯ ಟೆರೇಸ್ ಮೇಲೆಯೇ ಅಚರಿಸುವುದು ಒಳಿತು.

ದೇಶ ಭಕ್ತಿಯ ಕಥೆಯನ್ನೊಳಗೊಂಡ ಸಿನಿಮಾ ನೋಡಿ:

ದೇಶ ಭಕ್ತಿಯ ಕಥೆಯನ್ನೊಳಗೊಂಡ ಸಿನಿಮಾ ನೋಡಿ:

ಈ ಸಂದರ್ಭದಲ್ಲಿ ಹೊರಗಡೆ ಹೋಗುವುದು ಒಳಿತಲ್ಲ ಹಾಗಾಗಿ ಮನೆಯಲ್ಲೇ ದೇಶ ಭಕ್ತಿಯ ಕಥೆಯನ್ನು ಒಳಗೊಂಡ ಸಿನಿಮಾವನ್ನ ಮಕ್ಕಳಿಗೆ ಹಾಗೂ ಮನೆಮಂದಿಗೆಲ್ಲಾ ತೋರಿಸಿ. ಮನೆಯಲ್ಲೇ ಥಿಯೇಟರ್ ವಾತಾವರಣ ನಿರ್ಮಿಸಿ, ಫಾಪ್ ಕಾರ್ನ್ ತಿನ್ನುತ್ತಾ ಸಿನಿಮಾ ನೋಡಿ ಎಂಜಾಯ್ ಮಾಡಿ.

ಮನೆಯಲ್ಲೇ ವಿವಿಧ ಆಟಗಳನ್ನು ಆಡಿ:

ಮನೆಯಲ್ಲೇ ವಿವಿಧ ಆಟಗಳನ್ನು ಆಡಿ:


ಇಡೀ ದಿನ ಮನೆಯಲ್ಲೇ ಕಾಳ ಕಳೆಯೋದ್ರಲ್ಲಿ ಬೇಜಾರಾದಾಗ ಪೋಷಕರು ಮಕ್ಕಳಿಗೆ ವಿವಿಧ ಆಟಗಳನ್ನು ಆಡಲು ಸಹಾಯ ಮಾಡಿ. ಮನೆಯ ಆವರಣದಲ್ಲೇ ಆಡುವ ಆಟಗಳನ್ನು ಅವರಿಗೆ ಪರಿಚಯಿಸಿ ಹಾಗೂ ಅಂತಹ ಆಟಗಳಲ್ಲಿ ಅವರೊಂದಿಗೆ ನೀವೂ ಪಾಲ್ಗೊಳ್ಳಿ. ಇದರಿಂದ ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯ ಹೆಚ್ಚುವುದು ಮತ್ತು ದಿನ ಹೆಚ್ಚು ಸಂತಸದಿಂದ ಕೂಡಿರುವುದು.

For Quick Alerts
ALLOW NOTIFICATIONS  
For Daily Alerts

English summary
Here we explain on how to celebrate independence day at home during coronavirus in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X