Rajyotsava Celebration Ideas : ಈ ಭಾರಿ ವಿಶೇಷವಾಗಿ ಕನ್ನಡ ರಾಜ್ಯೋತ್ಸವನ್ನು ಆಚರಿಸುವುದು ಹೇಗೆ ?

ಕನ್ನಡ ರಾಜ್ಯೋತ್ಸವ ಆಚರಿಸುವುದು ಹೇಗೆ ಇಲ್ಲಿದೆ ಮಾಹಿತಿ

ಈ ಭಾರಿಯ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವನ್ನು ಆಚರಿಸುವುದು ಹೇಗೆ ? ಈ ಬಗ್ಗೆ ನೀವು ಕೂಡ ಯೋಚನೆ ಮಾಡುತ್ತಿದ್ದೀರಾ ? ಹಾಗಾದ್ರೆ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವುದು ಹೇಗೆ ಎನ್ನುವುದಕ್ಕೆ ಕರಿಯರ್ ಇಂಡಿಯಾ ಸಲಹೆ ನೀಡುತ್ತಿದೆ. ಇದನ್ನು ಸಂಪೂರ್ಣವಾಗಿ ಓದಿ ನೀವು ಈ ರೀತಿಯಾಗಿ ಆಚರಣೆ ಮಾಡಲು ಮರೆಯದಿರಿ.

ರಾಜ್ಯೋತ್ಸವದ ಇತಿಹಾಸ ಮತ್ತು ಪ್ರಾಮುಖ್ಯತೆ ತಿಳಿಸಿ:

ರಾಜ್ಯೋತ್ಸವದ ಇತಿಹಾಸ ಮತ್ತು ಪ್ರಾಮುಖ್ಯತೆ ತಿಳಿಸಿ:

ನಿಮ್ಮ ಮಕ್ಕಳಿಗೆ ಈ ದಿನದ ಇತಿಹಾಸ, ಪ್ರಾಮುಖ್ಯತೆ, ಆಚರಣೆ ಮತ್ತು ಮಹತ್ವಗಳ ಕುರಿತು ತಿಳಿಸಿ. ಆಗ ನಿಮ್ಮ ಮಕ್ಕಳು ಕೂಡ ಈ ದಿನದ ಮಹತ್ವವನ್ನು ತಿಳಿಯುವರು.

ವಿಶೇಷ ಅಡುಗೆ ಮಾಡಿ:

ವಿಶೇಷ ಅಡುಗೆ ಮಾಡಿ:

ಈ ದಿನ ಸಾಮಾನ್ಯವಾಗಿ ಎಲ್ಲರಿಗೂ ರಜೆ ಇರುತ್ತದೆ ಹಾಗಾಗಿ ಈ ದಿನದ ಆಚರಣೆ ವಿಶೇಷವಾಗಿರಲಿ. ಕನ್ನಡ ರಾಜ್ಯೋತ್ಸವ ದಿನದಂದು ಮನೆಯವರೆಲ್ಲರಿಗೂ ವಿಶೇಷವಾಗಿ ಅಡುಗೆ ಮಾಡಿ. ಮಕ್ಕಳಿಗೆ ಇಷ್ಟವಾಗುವಂತೆ ಕೆಂಪು ಮತ್ತು ಹಳದಿ ಬಣ್ಣದಲ್ಲಿ ಕಂಗೊಳಿಸುವಂತೆ ಅಡುಗೆಯನ್ನು ತಯಾರಿ ಮಾಡಿ. ಆಗ ಅಡುಗೆಯೂ ವಿಶೇಷವಾಗಿರುತ್ತೆ ಮತ್ತು ಮಕ್ಕಳಿಗೂ ಪ್ರಿಯವಾಗುತ್ತೆ.

ವಿಶೇಷ ಚಟುವಟಿಕೆಗಳನ್ನು ನೀಡಿ:
 

ವಿಶೇಷ ಚಟುವಟಿಕೆಗಳನ್ನು ನೀಡಿ:

ಇತಿಹಾಸ ತಿಳಿದಾಯ್ತು, ಅಡುಗಡೆ ಬಡಿಸಿದ್ದೂ ಆಯ್ತು ಹಾಗಾದ್ರೆ ಮಕ್ಕಳಿಗೆ ಇನ್ನಷ್ಟು ಚಟುವಟಿಕೆಗಳನ್ನು ನೀಡಲು ದಿನದಲ್ಲಿ ಸಮಯ ಉಳಿದಿದೆ ಅಂತ ಆಯ್ತು. ಕನ್ನಡ ಭಾಷೆಯ ಕುರಿತು ಮಕ್ಕಳಿಗೆ ಉಕ್ತಲೇಖನ ನೀಡುವುದು, ಪ್ರಬಂಧ ಬರೆಸುವುದು, ಭಾವುಟದ ಚಿತ್ರ ಬಿಡಿಸುವುದು ಇತ್ಯಾದಿ ಚಟುವಟಿಕೆಗಳನ್ನು ನೀಡಿ. ಇದರಿಂದ ಮಕ್ಕಳಿಗೆ ಭಾಷೆಯ ಮೇಲೆ ಅಭಿಮಾನ ಹೆಚ್ಚುವುದು. ಅವರಿಗೂ ಕನ್ನಡ ಕಲಿಕೆಯ ಬಗ್ಗೆ ಆಸಕ್ತಿ ಮೂಡುವುದು.

ಕನ್ನಡ ಕುರಿತ ರಸಪ್ರಶ್ನೆ ಆಯೋಜಿಸಿ:

ಕನ್ನಡ ಕುರಿತ ರಸಪ್ರಶ್ನೆ ಆಯೋಜಿಸಿ:

ನಿಮ್ಮ ಮಕ್ಕಳು ನಿಮ್ಮ ಜೊತೆ ಸೇರಿ ಕನ್ನಡ ರಾಜ್ಯೋತ್ಸವನ್ನು ಆಚರಿಸುತ್ತಿದ್ದಾರೆ. ಹಾಗಾದ ಮೇಲೆ ನೀವು ಯಾಕೆ ಮಕ್ಕಳಿಗೆ ರಸಪ್ರಶ್ನೆ ಏರ್ಪಡಿಸಬಾರದು ? ಹೌದು ರಸಪ್ರಶ್ನೆ ಎಂದಾಗ ಇದರಿಂದ ಮಕ್ಕಳಲ್ಲಿರುವ ಜ್ಞಾನ ಹೆಚ್ಚುತ್ತದೆ ಮತ್ತು ಅವರಲ್ಲಿರುವ ಕನ್ನಡದ ಜ್ಞಾನದ ಬಗ್ಗೆ ನಿಮಗೂ ತಿಳಿಯುತ್ತದೆ. ಹಾಗಾಗಿ ನೀವು ನಿಮ್ಮ ಮಕ್ಕಳಿಗೆ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡ ಕುರಿತಾದ ರಸಪ್ರಶ್ನೆಯನ್ನು ಆಯೋಜಿಸಿ.

ಕನ್ನಡದಲ್ಲಿ ಪತ್ರ ಬರೆಸಿ:

ಕನ್ನಡದಲ್ಲಿ ಪತ್ರ ಬರೆಸಿ:

ಸಾಮಾನ್ಯವಾಗಿ ಶಾಲೆಯ ದಿನಗಳಲ್ಲಿ ಪಾಠ ಕೇಳುವಾಗ ಅಥವಾ ಅಗತ್ಯವಿದ್ದ ಸಂದರ್ಭದಲ್ಲಿ ಮಾತ್ರ ಮಕ್ಕಳು ಪತ್ರ ಬರೆಯುತ್ತಾರೆ. ಆದರೆ ಈ ದಿನ ಮಕ್ಕಳಿಗೆ ಸಂಫೂರ್ಣವಾಗಿ ಕನ್ನಡದಲ್ಲಿ ಪತ್ರ ಬರೆಯುವಂತೆ ಹೇಳಿ. ಉದಾಹರಣೆಗೆ ಪೋಷಕರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿ ಅಥವಾ ಶಾಲೆಗಳಲ್ಲಿ ಆಚರಿಸಲಾಗುತ್ತಿದ್ದ ಕನ್ನಡ ರಾಜ್ಯೋತ್ಸವದ ಆಚರಣೆಯ ಕುರಿತು ಪತ್ರ ಬರೆಯುವಂತೆ ಹೇಳಿ. ಇದರಿಂದ ಅವರಿಗೆ ಕನ್ನಡ ಭಾಷೆ ಮೇಲಿನ ಪ್ರೀತಿ ಹೆಚ್ಚುವುದು ಮತ್ತು ಪತ್ರ ಬರೆಯುವುದರ ಮಹತ್ವ ತಿಳಿಯುವುದು.

ಕನ್ನಡ ಪುಸ್ತಕಗಳನ್ನು ಓದಲು ಕೊಳ್ಳಿ:

ಕನ್ನಡ ಪುಸ್ತಕಗಳನ್ನು ಓದಲು ಕೊಳ್ಳಿ:

ಈಗೆಲ್ಲಾ ಆನ್‌ಲೈನ್ ಕಲಿಕೆ ಹೆಚ್ಚು. ಈ ನಡುವೆ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಕೂಡ ತಗ್ಗಿದೆ. ಹಾಗಾಗಿ ಈ ದಿನದ ಪ್ರಯುಕ್ತ ಒಳ್ಳೆಯ ಪುಸ್ತಕಗಳನ್ನು ಕೊಂಡು ಮಕ್ಕಳಿಗೆ ಓದಲು ನೀಡಿ. ಇನ್ನು ನೀವು ಕೂಡ ಉತ್ತಮ ಪುಸ್ತಕಗಳನ್ನು ಕೊಂಡು ಓದಲು ಪ್ರಯತ್ನಿಸಿ. ಇದರಿಂದ ಕನ್ನಡ ಪುಸ್ತಕಗಳನ್ನು ಓದಲು ಅವರಿಗೂ ಒಲವು ಮೂಡುತ್ತದೆ ಮತ್ತು ಅವರಲ್ಲಿ ಕನ್ನಡದ ಪ್ರೇಮ ಹೆಚ್ಚುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Here we are giving the ideas on how to celebrate kannada rajyotsava? here are the tips Read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X