World Environment Day 2022 Celebration Ideas: ವಿಶ್ವ ಪರಿಸರ ದಿನವನ್ನು ಈ ಭಾರಿ ವಿದ್ಯಾರ್ಥಿಗಳು ಹೇಗೆಲ್ಲಾ ಆಚರಿಸಬಹುದು ?

ಲಾಕ್‌ಡೌನ್ ನಲ್ಲಿ ವಿಶ್ವ ಪರಿಸರ ದಿನವನ್ನು ಮನೆಯಲ್ಲೇ ವಿದ್ಯಾರ್ಥಿಗಳು ಹೇಗೆಲ್ಲಾ ಆಚರಿಸಬಹುದು ? ಇಲ್ಲಿದೆ ಮಾಹಿತಿ

ನಿಮಗೆಲ್ಲರಿಗೂ ಗೊತ್ತೇ ಇದೆ ಜೂನ್ ೫ರಂದು ವಿಶ್ವ ಪರಿಸರ ದಿನ. ಪ್ರತೀ ವರ್ಷ ಜೂನ್ 5 ರಂದು ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ಆದರೆ ಈ ಬಾರಿ ಪರಿಸರ ದಿನದ ಆಚರಣೆಯನ್ನು ಕೊರೋನಾ ಕಿತ್ತುಕೊಂಡಿದೆ. ಏಕೆಂದರೆ ಕೊರೋನಾ ಹಾವಳಿಯಿಂದ ರಾಜ್ಯದಲ್ಲಿ ಲಾಕ್‌ಡೌನ್ ಅನ್ನು ಜೂನ್ 14ರ ವರೆಗೆ ಘೋಷಿಸಲಾಗಿದೆ. ಹೀಗಿರುವಾಗ ವಿದ್ಯಾರ್ಥಿಗಳು ಮನೆಯಲ್ಲೇ ಯಾವ ರೀತಿ ಆಚರಣೆಯನ್ನು ಮಾಡಬಹುದು ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ. ಇದನ್ನು ಓದಿ ನಂತರ ನೀವು ಕೂಡ ಮನೆಯಲ್ಲೇ ಆಚರಣೆಯನ್ನು ಮಾಡಿ.

ವಿಶ್ವ ಪರಿಸರ ದಿನದ ಇತಿಹಾಸ ತಿಳಿಸಿ:

ಪರಿಸರ ಕುರಿತು ಜಾಗೃತಿ ಮೂಡಿಸುವ ದಿನವಿದಾಗಿದ್ದು, ನಿಮ್ಮ ಮಕ್ಕಳಿಗೆ ಈ ದಿನದ ಇತಿಹಾಸ, ಥೀಮ್ ಮತ್ತು ಮಹತ್ವವನ್ನು ತಿಳಿಸಿ. ಅವರನ್ನು ಜಾಗೃತರನ್ನಾಗಿ ಮಾಡಿ, ಏಕೆಂದರೆ ಇಂದಿನ ಮಕ್ಕಳಿಗೆ ಅರಿವು ಮೂಡಿಸಿದಾಗ ಮಾತ್ರ ನಾಳಿನ ಭವಿಷ್ಯಕ್ಕೆ ಅವರು ಬುನಾದಿಯನ್ನು ಹಾಕಿಕೊಳ್ಳುತ್ತಾರೆ. ಮಕ್ಕಳಲ್ಲಿಯೂ ಪರಿಸರದ ಕಾಳಜಿ ಮೂಡುತ್ತದೆ ಮತ್ತು ಅವರೂ ಜಾಗೃತರಾಗುತ್ತಾರೆ.

ಮನೆಯ ಆವರಣದಲ್ಲಿ ಗಿಡ ನೆಡಿಸಿ:

ಈ ದಿನ ಶಾಲಾ ಕಾಲೇಜುಗಳನ್ನು ಗಿಡ ನೆಡುವ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗುತ್ತದೆ. ಆದರೆ ಲಾಕ್‌ಡೌನ್ ಇರುವ ಕಾರಣ ಶಾಲಾ ಕಾಲೇಜುಗಳು ಬಂದ್ ಆಗಿವೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಪರಿಸರ ಕಾಳಜಿಯನ್ನು ಮೂಡಿಸುವ ಸಲುವಾಗಿ ಮೆನೆಯ ಆವರಣದಲ್ಲಿ ಗಿಡ ನೆಡಲು ಪ್ರೇಪರೇಪಿಸಿ.

ಪರಿಸರದ ಚಿತ್ರ ಬಿಡಿಸಲು ಹೇಳಿ:

ಮಕ್ಕಳಿಗೆ ಚಿತ್ರ ಬಿಡುವುದು ಅಂದ್ರೆ ಸಾಮಾನ್ಯವಾಗಿ ಇಷ್ಟವಾಗುತ್ತದೆ ಹಾಗಾಗಿ ಈ ದಿನ ಅವರಿಗೆ ಪರಿಸರದ ಸೌಂದರ್ಯವನ್ನು ಬಣ್ಣಿಸುವಂತಹ ಚಿತ್ರವನ್ನು ಬಿಡಿಸಲು ಹೇಳಿ. ಇದರಿಂದ ಅವರಲ್ಲಿ ಪರಿಸರದೆಡೆಗಿನ ಆಲೋಚನೆಗಳು ಉತ್ತಮ ರೀತಿಯಲ್ಲಿ ಬೆಳೆಯುತ್ತವೆ. ಹಾಗೆಯೇ ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿ ಮೂಡುತ್ತದೆ.

ಪರಿಸರದ ಅಭಿವೃದ್ಧಿ ಮತ್ತು ಉಳಿವಿಕೆ ಕುರಿತಾದ ಪುಸ್ತಕ ಓದಿ:

ವಿಶ್ವ ಪರಿಸರ ದಿನ ಎಂದರೆ ಅದು ಒಂದು ದಿನದ ಆಚರಣೆಯಲ್ಲ. ಹಾಗಾಗಿ ಮಕ್ಕಳಿಗೆ ಪರಿಸರ ಕುರಿತಾದ ಉತ್ತಮ ಸಂದೇಶ ಇರುವ ಹಾಗೂ ವಿವಿಧ ಉದಾಹರಣೆಗಳೊಂದಿಗೆ ಮಾಹಿತಿಯುಳ್ಳ ಉತ್ತಮ ಪುಸ್ತಕ ಓದುವಂತೆ ಸಹಕರಿಸಿ. ಇದರಿಂದ ಅವರಲ್ಲಿ ಪುಸ್ತಕ ಓದುವ ಅಭ್ಯಾಸ ಪ್ರಾರಂಭವಾಗುತ್ತದೆ. ಹಾಗೆಯೇ ಪರಿಸರದ ಉಳಿವಿನ ಅಗತ್ಯತೆ ಅವರಿಗೆ ಅರಿವಾಗುತ್ತದೆ. ಪರಿಸರದ ಏಳಿಗೆ ಕುರಿತಾದ ಮತ್ತಷ್ಟು ವಿಚಾರಗಳು ಅವರಲ್ಲಿ ಮೂಡುತ್ತವೆ.

ಪರಿಸರ ಗೀತೆಗಳನ್ನು ಕೇಳಿಸಿ:

ಈ ಬಾರಿ ಶಾಲಾ ಕಾಲೇಜುಗಳನ್ನು ಇನ್ನೂ ತೆರೆಯದ ಕಾರಣ ಹಾಗೂ ಲಾಕ್‌ಡೌನ್ ಇರುವ ಕಾರಣದಿಂದ ಮನೆಯಲ್ಲೇ ಮನೆಯಲ್ಲೇ ಮಕ್ಕಳು ಪರಿಸರ ಗೀತೆಗಳನ್ನು ಕೇಳುವ ಮೂಲಕ ಆಚರಣೆಯನ್ನು ಮಾಡಬಹುದು. ಅಂತರ್ಜಾಲದಲ್ಲಿ ಲಭ್ಯವಿರುವ ಪರಿಸರ ಗೀತೆಗಳನ್ನು ಮಕ್ಕಳಿಗೆ ಕೇಳಿಸಿ. ಇದರಿಂದ ಮಕ್ಕಳಿಗೂ ಪರಿಸರದೆಡೆಗೆ ಒಲವೂ ಮೂಡುತ್ತದೆ.

ಫ್ಯಾಮಿಲಿಗಾಗಿ ಸ್ಪೇಶಲ್ ಕುಕ್:

ಎಲ್ಲೆಡೆ ಕೊರೋನಾ ಕೊರೋನಾ ಎಂದು ಕೇಳಿ ಬೇಸತ್ತ ಮನಸ್ಸಿಗೆ ಸ್ವಲ್ಪ ರಿಲ್ಯಾಕ್ಸ್ ನೀಡಿ. ಈ ದಿನ ಫ್ಯಾಮಿಲಿ ಜೊತೆ ಸ್ವಲ್ಪ ಕಾಲ ಕಳೆಯಿರಿ ಜೊತೆಗೆ ಅವರಿಗಾಗಿ ಮನೆಯಲ್ಲೇ ಏನಾದ್ರು ಸ್ಪೇಶಲ್ ಅಡುಗೆ ಮಾಡಿ ಬಡಿಸಿ. ಅಡುಗೆಯನ್ನು ನೀವು ವಿಶೇಷವಾಗಿಯೂ ಮಾಡಬಹುದು, ಅದು ಹೇಗೆ ಎಂದರೆ ವಿಭಿನ್ನ ತರಕಾರಿ ಸೊಪ್ಪುಗಳನ್ನು ಬಳಸಿ ಪರಿಸರ ದಿನದ ಥೀಮ್ ನಲ್ಲಿ ಅಡುಗೆಯನ್ನು ಮಾಡಿ ಅಲಂಕರಿಸಿ ಮನೆಯವರೆಲ್ಲರಿಗೂ ಉಣಬಡಿಸಿ. ಇದರಿಂದ ಎಲ್ಲರಲ್ಲೂ ಪರಿಸರದೆಡೆಗಿನ ಕಾಳಜಿ ಹೆಚ್ಚುವುದು ಹಾಗೆಯೇ ಮನುಷ್ಯ ಮತ್ತು ಪರಿಸರದ ನಡುವೆ ಒಂದು ಬಾಂಧವ್ಯ ಮೂಡುವುದು.

ಪರಿಸರದ ಉಳಿವಿನ ಸಂದೇಶವುಳ್ಳ ಸಿನೆಮಾಗಳನ್ನು ನೋಡಿ:

ಲಾಕ್‌ಡೌನ್ ಇರುವುದರಿಂದ ನಿಮಗೂ ಬೋರ್ ಆಗಿರುತ್ತದೆ ಹಾಗಾಗಿ ಸಿನೆಮಾ ನೋಡುವುದು ಒಂದು ಉತ್ತಮ ಚಟುವಟಿಕೆ. ನೀವಿವತ್ತು ಒಂದೊಳ್ಳೆ ಕೆಲಸ ಮಾಡಿ ಅದೇನೆಂದರೆ ಮನೆಯಲ್ಲೇ ಕುಳಿತು ಪರಿಸರ ಕುರಿತಾದ ಸಂದೇಶವುಳ್ಳ ಉತ್ತಮ ಸಿನಿಮಾವನ್ನ ಮಕ್ಕಳಿಗೆ ಹಾಗೂ ಮನೆಮಂದಿಗೆಲ್ಲಾ ತೋರಿಸಿ. ಮನೆಯಲ್ಲೇ ಥಿಯೇಟರ್ ವಾತಾವರಣ ನಿರ್ಮಿಸಿ, ಫಾಪ್ ಕಾರ್ನ್ ತಿನ್ನುತ್ತಾ ಸಿನಿಮಾ ನೋಡಿ ಎಂಜಾಯ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
World environment day is on june 5. Here we will give ideas, how to celebrate environment day at home during lockdown.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X