ಒಂದು ಪೇಜ್‌ನ ರೆಸ್ಯೂಮ್ ... ಏನೆಲ್ಲಾ ಇರಬೇಕು ಏನೆಲ್ಲಾ ಇರಬಾರದು..?

ಈಗಷ್ಟೇ ಜಾಬ್ ಹುಡುಕವರಾಗಿದ್ದರೆ ಇಲ್ಲ ಫ್ರೆಶರ್ಸ್ ಆಗಿದ್ದರೆ ಒಂದು ಪೇಜ್‌ನ ರೆಸ್ಯೂಮ್ ಸಾಕು. ಒಂದು ಪೇಜ್‌ನ ರೆಸ್ಯೂಮ್ ಹೇಗೆ ತಯಾರಿಸುವುದು ಎಂದು ಇಲ್ಲಿ ಕೆಲವು ಟಿಪ್ಸ್ ನೀಡಲಾಗಿದೆ

ಒಂದು ಪೇಜ್‌ನ ರೆಸ್ಯೂಮ್ ತಯಾರಿಸುವ ಮುನ್ನ ಜಸ್ಟ್ ಯೋಚಿಸಿ ನಿಜಕ್ಕೂ ಒಂದು ಪೇಜ್‌ನ ರೆಸ್ಯೂಮ್ ಎಫೆಕ್ಟೀವ್ ಆಗಿರುತ್ತದಾ ಎಂದು. ಹೌದು. ಒಂದು ಪೇಜ್‌ನ ರೆಸ್ಯೂಮ್ ತುಂಬಾ ಪ್ರಯೋಜನಕಾರಿ ಅದು ಹೇಗೆ ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ ಮುಂದಕ್ಕೆ ಓದಿ.

ನೀವು ಫ್ರೆಶರ್ಸ್ ಆಗಿದ್ರೆ ನಿಮ್ಮ ರೆಸ್ಯೂಮ್ ಲೆಂತ್ ಹೆಚ್ಚಿಸಲು ಎರಡು ಕಾರಣಗಳು ಇರುತ್ತವೆ. ಅವು ಯಾವುವೆಂದರೆ ನೀವು ಹಲವೆಡೆ ಇಂಟರ್ನ್ ಶಿಪ್ ಮಾಡಿರುತ್ತೀರಿ. ಹಾಗಾಗಿ ಈ ಮಾಹಿತಿ ಹೆಚ್ಚು ಜಾಗ ಆಕ್ರಮಿಸಿಕೊಳ್ಳುತ್ತದೆ. ಎರಡನೇ ಕಾರಣ ಸಂದರ್ಶನಕಾರರಿಗೆ ಅಗತ್ಯವಿಲ್ಲದ ಮಾಹಿತಿಗಳನ್ನ ನೀವು ನೀಡಿರುವುದು.

 ಒಂದು ಪೇಜ್‌ನ ರೆಸ್ಯೂಮ್ ಯಾಕೆ ಬೆಸ್ಟ್!

ಅನುಭವಸ್ಥ ಕೆಲಸಗಾರರು ಮೂರು ನಾಲ್ಕುಪೇಜ್ ನ ರೆಸ್ಯೂಮ್ ತಯಾರಿಸುತ್ತಾರೆ. ಯಾಕೆಂದ್ರೆ ಅವರಿಗೆ ಹಲವೆಡೆ ಕೆಲಸ ಮಾಡಿದ ಅನುಭವವಿರುತ್ತದೆ. ಇದು ನಿಮ್ಮ ಭವಿಷಯದಲ್ಲಿ ಕೆಲಸ ಹುಡುಕುವಾಗ ಅಗತ್ಯವಿರುತ್ತದೆ. ಆದ್ರೆ ನೀವು ಈಗಷ್ಟೇ ಜಾಬ್ ಹುಡುಕವರಾಗಿದ್ದರೆ ಇಲ್ಲ ಫ್ರೆಶರ್ಸ್ ಆಗಿದ್ದರೆ ಒಂದು ಪೇಜ್‌ನ ರೆಸ್ಯೂಮ್ ಸಾಕು. ಒಂದು ಪೇಜ್‌ನ ರೆಸ್ಯೂಮ್ ಹೇಗೆ ತಯಾರಿಸುವುದು ಎಂದು ಇಲ್ಲಿ ಕೆಲವು ಟಿಪ್ಸ್ ನೀಡಲಾಗಿದೆ.

ಸಂಬಂಧಪಟ್ಟ ಅನುಭವ ಮಾತ್ರ ಸೇರಿಸಿ:

ನಿಮ್ಮ ರೆಸ್ಯೂಮ್ ನಲ್ಲಿ ಸಂಬಂಧಪಟ್ಟ ಅನುಭವ ನೀಡುವುದು ತುಂಬಾ ಪ್ರಮುಖ. ಸಂದರ್ಶನ ಮಾಡುವವರಿಗೆ ನಿಮ್ಮ ಇನ್ನಿತ್ತರ ಸಂಬಂಧವಿಲ್ಲದೇ ಇರುವ ಫೀಲ್ಡ್‌ನ ಅನುಭವ ತಿಳಿದುಕೊಳ್ಳುವ ಆಸಕ್ತಿ ಇರುವುದಿಲ್ಲ. ಅಂದ್ರೆ ಉದಾಹರಣೆಗೆ ನೀವು ಗ್ರಾಫಿಕ್ ಡಿಸೈನರ್ ಪೋಸ್ಟ್‌ ಗೆ ಅರ್ಜಿ ಸಲ್ಲಿಸಿದ್ದರೆ, ಕ್ವಾಲಿಟಿ ಟೆಸ್ಟಿಂಗ್ ನ ನಿಮ್ಮ ಇಂಟರ್ನ್ ಶಿಪ್ ಅನುಭವ ನೀಡುವ ಅವಶ್ಯಕತೆ ಇಲ್ಲ.

ಅಂಶಗಳನ್ನ ಮತ್ತೆ ಮತ್ತೆ ರಿಪೀಟ್ ಮಾಡಬೇಡಿ:

ರೆಸ್ಯೂಮ್ ಉದ್ದ ಹೆಚ್ಚಿಸಲು ಕೆಲವರು ಕೆಲವೊಂದು ಪಾಯಿಂಟ್‌ಗಳನ್ನ ಮತ್ತೆ ಮತ್ತೆ ರಿಪೀಟ್ ಮಾಡುತ್ತಾರೆ. ಆದ್ರೆ ಇದು ಅಗತ್ಯವಿಲ್ಲ. ಇಂಗ್ಲೀಷ್‌ನಲ್ಲಿ ನೀವು ಫ್ಲುಯೆಂಟ್ ಆಗಿದ್ದರೆ ನೀವು ಕ್ರಿಯೇಟಿವ್ ಆಗಿ ರೆಸ್ಯೂಮ್ ತಯಾರಿಸಿ. ಅದರಲ್ಲಿ ವಿಶೇಷವಾಗಿ ಇಂಗ್ಲೀಷ್ ಚೆನ್ನಾಗಿದೆ ಎಂದು ಬರೆಯುವ ಅವಶ್ಯಕತೆ ಇಲ್ಲ.

ರೆಫರೆನ್ಸ್ ಇಲ್ಲ ಅಂದ್ರೆ ಬರೆಯಬೇಡಿ:

ಇನ್ನು ಕೆಲವರಿಗೆ ರೆಸ್ಯೂಮ್ ನಲ್ಲಿ ರೆಫರೆನ್ಸ್ ಬರೆಯುವ ಅಭ್ಯಾಸ. ಇದು ಕಂಪ್ಲೀಟ್ ಜಾಗವನ್ನ ವೇಸ್ಟ್ ಮಾಡುತ್ತದೆ. ಈ ಲೈನ್ ನೀವು ಸೇರಿಸಿದ್ದರೆ ಕಂಪ್ಲೀಟ್ ಅನ್‌ ಪ್ರೊಫೆಶನಲ್ ಎನಿಸಿಕೊಳ್ಳುತ್ತೀರಿ. ಒಂದು ವೇಳೆ ರೆಫರೆನ್ಸ್ ಇದ್ದರೆ ನೀವು ಅದನ್ನ ಬರೆಯಿರಿ. ಒಂದು ವೇಳೆ ನಿಮಗೆ ಯಾರೂ ರೆಫರೆನ್ಸ್ ಇಲ್ಲವೆಂದಾದ್ರೆ ಆ ಕಾಲಂನ ಡಿಲೀಟ್ ಮಾಡಿ ಬಿಡಿ.

ಚಿಕ್ಕ ಚಿಕ್ಕ ವಾಕ್ಯಗಳನ್ನ ಬಳಸಿ:

ಇಂಟರ್ನ್ ಶಿಪ್ ಹಾಗೂ ಹಿಂದಿನ ಜಾಬ್ ಗಳಲ್ಲಿ ನೀವು ಏನು ಮಾಡಿದ್ದೀರಿ ಎಂದು ದೊಡ್ಡ ದೊಡ್ಡ ವಾಕ್ಯಗಳ ರೂಪದಲ್ಲಿ ವಿವರಿಸುವ ಅವಶ್ಯಕತೆ ಇಲ್ಲ. ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಬರೆದು ಸ್ಮಾರ್ಟ್ ಆಗಿ ವಿವರಣೆ ನೀಡಿ. ದೊಡ್ಡ ದೊಡ್ಡ ಪ್ಯಾರಾಗ್ರಾಫ್ ಬರೆಯುದನ್ನ ಕೂಡಾ ತಪ್ಪಿಸಿ. ಯಾಕೆಂದ್ರೆ ಸಂದರ್ಶನ ಮಾಡುವವರು ನಿಮ್ಮ ದೊಡ್ಡ ದೊಡ್ಡ ಪ್ಯಾರಗ್ರಾಫ್ ಓದಲು ಇಚ್ಛಿಸುವುದಿಲ್ಲ.

ಹೈ ಸ್ಕೂಲ್ ಸ್ಕಿಲ್ ಬೇಡ:

ನೀವು ಆನ್‌ಲೈನ್‌ನಲ್ಲಿ ನೋಡಿರಬಹುದು ಕೆಲವರ ರೆಸ್ಯೂಮ್ ನಲ್ಲಿ ಹೈಸ್ಕೂಲ್ ನಲ್ಲಿ ಕಲಿತಂತಹ ವಿಷಯದ ಬಗ್ಗೆ ಬರೆದಿರುತ್ತಾರೆ. ಅಂದ್ರೆ ಎಂಎಸ್ ವರ್ಡ್ ಕ್ಲಾಸ್ ಬಗ್ಗೆ. ನೀವು ಕಂಟೆಂಟ್ ರೈಟರ್ ಹುದ್ದೆಗೆ ಅರ್ಜಿ ಹಾಕುತ್ತಿದ್ದೀರಿ ಎಂದಾದ್ರೆ ನಿಮಗೆ ಈ ಬೇಸಿಕ್ ಜ್ಞಾನ ಇರಲೇ ಬೇಕು. ಹಾಗಾಗಿ ನಿಮ್ಮ ರೆಸ್ಯೂಮ್ ನಲ್ಲಿ ಹೈಸ್ಕೂಲ್ ಸ್ಕಿಲ್ ಬೇಡ.

ಹೈಸ್ಕೂಲ್ ಸಾಧನೆಗಳು:

ಹೈಸ್ಕೂಲ್ ವೇಳೆ ನೀವು ಭಾಗವಹಿಸಿದ್ದ ಸ್ಪರ್ಧೆಗಳು, ನೀವು ಪಡೆದಂತಹ ಪ್ರಶಸ್ತಿಗಳ ಬಗ್ಗೆ ರೆಸ್ಯೂಮ್ ನಲ್ಲಿ ಬರೆಯಬೇಡಿ. ಒಂದು ವೇಳೆ ನೀವು ಇಂಟರ್ನ್ ಶಿಪ್ ಗೆ ಟ್ರೈ ಮಾಡುವುದಾದ್ರೆ ಬರೆಯಬಹುದು ಆದ್ರೆ ಕೆಲಸಕ್ಕೆ ಟ್ರೈ ಮಾಡುವಾಗ ಇದನ್ನೆಲ್ಲಾ ಬರೆಯಬೇಡಿ ಯಾಕೆಂದ್ರೆ ಸಂದರ್ಶನಕಾರರಿಗೆ ಇದೆಲ್ಲಾ ಅಗತ್ಯವಿರುವುದಿಲ್ಲ.

ಹವ್ಯಾಸಗಳ ಬಗ್ಗೆ ಬೇಡ:

ಹೌದು ನಿಮ್ಮ ರೆಸ್ಯೂಮ್ ಎರಡು ಪೇಜ್‌ದಾಗಿದ್ದರೆ ಹವ್ಯಾಸಗಳ ಬಗ್ಗೆ ಬರೆಯಬಹುದು. ಆದ್ರೆ ಒಂದೇ ಪೇಜ್‌ನ ರೆಸ್ಯೂಮ್ ಆಗಿದ್ರೆ ಈ ಕಾಲಂನ್ನ ಸ್ಕಿಪ್ ಮಾಡಿ. ನಿಮ್ಮ ಹವ್ಯಾಸ ತಿಳಿದುಕೊಳ್ಳುವ ಆಸಕ್ತಿ ಸಂದರ್ಶನಕಾರರಿಗೆ ಇರುವುದಿಲ್ಲ.

ಒಂದು ಪೇಜ್‌ ರೆಸ್ಯೂಮ್ ನ ಲಾಭಗಳು:

ನಿಮ್ಮ ರೆಸ್ಯೂಮ್ ಸುಲಭವಾಗಿ ಸಂದರ್ಶನಕಾರರು ಓದಿ ನಿಮ್ಮ ಬಗ್ಗೆ ತಿಳಿಯಬಹುದಾಗಿದೆ
ತುಂಬಾ ಪೇಜ್‌ನ ರೆಸ್ಯೂಮ್ ನಿಮ್ಮ ಮೇಲೆ ಬ್ಯಾಡ್ ಇಂಪ್ರೇಶನ್ ಮೂಡುವಂತೆ ಮಾಡುತ್ತದೆ. ಸಂಬಂಧಪಟ್ಟ ಮಾಹಿತಿಯನ್ನು ಒಳಗೊಂಡ ಒಂದು ಪೇಜ್‌ನ ರೆಸ್ಯೂಮ್ ಒಳ್ಳೆಯ ಒಂಪ್ರೇಶನ್ ಮೂಡುವಂತೆ ಮಾಡುತ್ತದೆ
ಒಂದು ಪೇಜ್‌ನ ರೆಸ್ಯೂಮ್ ಸುಲಭವಾಗಿ ಹಿಡಿದುಕೊಮಡು ಓಡಾಡಬಹುದಾಗಿದೆ
ಸಂದರ್ಶನಕಾರರಿಗೆ ಬೇಕಾದ ಮಾಹಿತಿಯೆಲ್ಲಾ ಒಂದೇ ಕ್ಷಣದಲ್ಲಿ ಸಿಗುವುದರಿಂದ ಅವರ ಟೈಂ ಕೂಡಾ ಉಳಿಯುತ್ತದೆ.

For Quick Alerts
ALLOW NOTIFICATIONS  
For Daily Alerts

English summary
The important question before knowing how to create a one-page resume is to analyse if you really need a one-page resume? The length of your resume depends on many factors and the first in list is experience. If you are a fresher or just starting out, then a one-page resume seems like a legit option. This is because there are only two reasons for increasing your resume length when you are a fresher
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X