ಕೆಲಸ ಇಲ್ಲ ಆದ್ರೆ ಟ್ಯಾಲೆಂಟ್ ಇದ್ಯಾ... ಯೂಟ್ಯೂಬ್ ಚಾನೆಲ್‌ ಅಕೌಂಟ್ ಹೇಗೆ ಕ್ರಿಯೇಟ್ ಮಾಡುವುದು ತಿಳಿಯಿರಿ

Posted By:

ಕೆಲಸಕ್ಕೆ ಅಲೆದು ಅಲೆದು ಸಾಕಾಗಿದಾ. ಕೈಯಲ್ಲಿ ಡಿಗ್ರಿ ಸರ್ಟಿಫಿಕೇಟ್ ಇದ್ರೂ ಯಾರೂ ಕೆಲಸ ಕೊಡುತ್ತಿಲ್ಲವಾ. ಹಾಗಿದ್ರೆ ಟೆನ್ಶನ್ ಬಿಡಿ. ಸರ್ಕಾರಿ ಕೆಲಸಕ್ಕೆ ಕಾಯದೇ ನೀವೇ ನಿಮ್ಮ ಕಾಲಮೇಲೆ ನಿಂತುಕೊಳ್ಳಿ.

ಹೌದು ಇದೀಗ ಟೆಕ್ನಾಲಾಜಿ ಯುಗ. ಎಲ್ಲವೂ ಟೆಕ್ನಾಲಾಜಿಯಿಂದಲೇ ನಡೆಯುತ್ತದೆ. ನೀವು ಯಾಕೆ ಯೂಟ್ಯೂಬ್ ನಲ್ಲಿ ಕೆರಿಯರ್ ಪ್ರಾರಂಭಿಸಬಾರದು. ಹೌದು ನೀವು ಚೆನ್ನಾಗಿ ಮಾತನಾಡ ಬಲ್ಲವರಾಗಿದ್ದೀರಾ. ಅಷ್ಟೇ ಅಲ್ಲ ನೀವು ಯಾವುದೇ ವಿಷಯವನ್ನ ಚೆನ್ನಾಗಿ ವಿವರಿಸಬಲ್ಲವರಾಗಿದ್ದೀರಾ, ಹಾಗಿದ್ರೆ ಈ ಫೀಲ್ಡ್‌ನಲ್ಲಿ ನೀವು ಪಕ್ಕಾ ಹಿಟ್ ಆಗ್ತೀರಾ. ಹೇಗೆ ಅಂತೀರಾ ಮೊದಲು ಯೂಟ್ಯೂಬ್ ಚ್ಯಾನೆಲ್ ತೆರೆಯಿರಿ. ಯೂಟ್ಯೂಬ್ ಚ್ಯಾನೆಲ್ ಹೇಗೆ ಪ್ರಾರಂಭಿಸುವುದು ಇಂದು ನಾವು ನಿಮಗೆ ಹೇಳಿ ಕೊಡುತ್ತೇವೆ ಮುಂದಕ್ಕೆ ಓದಿ

ಸ್ಟೆಪ್ 1:

ಯೂಟ್ಯೂಬ್ ಡಾಟ್.ಕಾಂ ಲಿಂಕ್ ಕ್ಲಿಕ್ ಮಾಡಿ

ಸ್ಟೆಪ್ 2:

ಬಳಿಕ ಯೂಟ್ಯೂಬ್ ಪೇಜ್‌ನ ಬಲಬದಿಯಲ್ಲಿ ಇರುವ ಸೈನ್ ಇನ್ ಕ್ಲಿಕ್ ಮಾಡಿ

ಸ್ಟೆಪ್ 3:

ನಿಮ್ಮ ಗೂಗಲ್ ಅಕೌಂಟ್ ಸಹಾಯದಿಂದ ಓಪನ್ ಮಾಡಬಹುದು

ಸ್ಟೆಪ್ 4:

ಸ್ಕ್ರೀನ್ ನ ಬಲಬದಿಯಲ್ಲಿ ಪ್ರೊಫೈಲ್ ಐಕಾನ್ ಇದೆ. ಅದರ ಮೇಲೆ ಕ್ಲಿಕ್ ಮಾಡಿ. ಬಳಿಕ ಸೆಟ್ಟಿಂಗ್ ತೆರೆದುಕೊಳ್ಳುತ್ತದೆ

ಸ್ಟೆಪ್ 5:

ಸೆಟ್ಟಿಂಗ್ ಕೆಳಭಾಗ ಕ್ರಿಯೆಟ್ ಚ್ಯಾನೆಲ್ ಲಿಂಕ್ ಇದ್ದು, ಅದನ್ನ ಕ್ಲಿಕ್ ಮಾಡಿ

ಸ್ಟೆಪ್ 6: ಬಳಿಕ ಪರ್ಸನಲ್ ಚ್ಯಾನೆಲ್ ಅಥವಾ ಬ್ಯುಸಿನೆಸ್ ಗಾಗಿ ಕ್ರಿಯೆಟ್ ಮಾಡುವ ಚ್ಯಾನೆಲ್ ಎಂದು ಆಯ್ಕೆ ಇರುತ್ತದೆ. ನೀವು ಬ್ಯುಸಿನೆಸ್ ಆಯ್ಕೆ ಸೆಲೆಕ್ಟ್ ಮಾಡಿಕೊಳ್ಳಿ

ಸ್ಟೆಪ್ 7: ಇದೀಗ ನೀವು ಚ್ಯಾನೆಲ್ ಹೆಸರು ಹಾಗೂ ಕೆಟಗರಿ ಸೆಲೆಕ್ಟ್ ಮಾಡುವ ಟೈಂ. ಈ ಸ್ಟೆಪ್‌ನಲ್ಲಿ ನಿಮಗೆ ಈ ಕೆಳಗೆ ನೀಡಿರುವ ಎಲ್ಲಾ ಆಯ್ಕೆಗಳು ಸಿಗುತ್ತದೆ ಎಲ್ಲಾವನ್ನ ಭರ್ತಿ ಮಾಡುತ್ತಾ ಹೋಗಿ

ಪ್ರೊಡಕ್ಟ್ ಅಥವಾ ಬ್ರ್ಯಾಂಡ್
ಕಂಪನಿ ಇನ್ಸಿಸ್ಟಿಟ್ಯೂಶನ್ ಅಥವಾ ಆರ್ಗನೈಸೇಶನ್
ಆಟ್ರ್ಸ್, ಎಂಟರ್‌ಟೈನ್ ಮೆಂಟ್, ಅಥವಾ ಸ್ಪೋರ್ಟ್ಸ
ಇನ್ನಿತ್ತರ

ಸ್ಟೆಪ್ 8: ಇದೀಗ ನೀವು ಸಕ್ಸಸ್ ಫುಲ್ ಆಗಿ ಯೂಟ್ಯೂಬ್ ಚ್ಯಾನೆಲ್ ಕ್ರಿಯೆಟ್ ಮಾಡಿದ್ದೀರಾ. ಕ್ರಿಯೆಟ್ ಮಾಡಿದ ಬಳಿಕವೂ ಇನ್ನೂ ಕೆಲವೊಂದು ಮಾಹಿತಿಗಳನ್ನ ಭರ್ತಿ ಮಾಡಬೇಕಾಗುತ್ತದೆ.

ಕೈಯಲ್ಲಿ ಕೆಲಸ ಇಲ್ಲವಾ... ಡಿಗ್ರಿ, ಇಂಫ್ಲ್ಯೂಯೆನ್ಸ್ ಇಲ್ಲದೇ ಯೂಟ್ಯೂಬ್ ಚ್ಯಾನೆಲ್ ಸ್ಟಾರ್ಟ್ ಮಾಡಿ ಹಣ ಸಂಪಾದಿಸಿ!

English summary
YouTube boasts over a billion users. everyday lots of people spend more time in youtube,

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia