ಆಫೀಸ್‌ನಲ್ಲಿ ಇಂದು ದಿನ ಚೆನ್ನಾಗಿರ್ಲಿಲ್ವಾ? ಬಾಸ್ ಬೈದ್ರೂ ಅಂತಾ ಬೇಜಾರಾಗಿದ್ದೀರಾ?

Written By: Rajatha

ಆಫೀಸ್‌ಗೆ ಹೋಗುವವರಿಗೆ ಪ್ರತಿದಿನ ದಿನ ಚೆನ್ನಾಗಿರುತ್ತೆ ಎಂದು ಹೇಳಲಾಗುವುದಿಲ್ಲ. ಕೆಲವೊಮ್ಮೆ ಕೆಟ್ಟ ದಿನಗಳೂ ಇರುತ್ತವೆ. ಅದು ನಿಮ್ಮ ಬಾಸ್ ನಿಮ್ಮ ಮೇಲೆ ರೇಗಾಡಿರಬಹುದು, ಇಲ್ಲವೇ ನಿಮ್ಮ ಸಹೋದ್ಯೋಗಿ ಜೊತೆ ಅನಗತ್ಯ ವಾದವಾಗಿರಬಹುದು. ಈ ರೀತಿ ಏನಾದರೊಂದು ನಿಮಗಿಷ್ಟವಿಲ್ಲದ ಸ್ಥಿತಿ ನಿರ್ಮಾಣವಾದರೆ ಅಂದು ನಿಮ್ಮ ದಿನವಿಡೀ ಮೂಡ್ ಆಫ್ ಆಗಿರುತ್ತದೆ. ಅಂತಹ ಸಂದರ್ಭವನ್ನು ಹೇಗೆ ನಿಭಾಯಿಸಬಹುದು ಎನ್ನುವುದಕ್ಕೆ ಇಲ್ಲಿದೆ ಟಿಪ್ಸ್...

1. ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಿ

ನೀವು ತಪ್ಪು ಮಾಡಿದ್ದೀರೆಂದು ನಿಮಗನಿಸಿದ್ದಲ್ಲಿ ಅದರಿಂದ ನಿಮ್ಮನ್ನು ನೀವು ಸೇವ್ ಮಾಡಲು ಪ್ರಯತ್ನಿಸಬೇಡಿ. ಬದಲಿಗೆ ಹೋಗಿ ನಿಮ್ಮ ತಪ್ಪನ್ನು ಒಪ್ಪಿಕೊಳ್ಳಿ. ಅಂತಹ ತಪ್ಪು ಮತ್ತೊಮ್ಮೆ ಮರುಕಳಿಸುವುದಿಲ್ಲವೆಂದು ಮತು ಕೊಡಿ. ಒಂದು ವೇಳೆ ನೀವು ನಿಜ ಹೇಳುವುದನ್ನು ಮುಚ್ಚಿಟ್ಟರೆ, ಮುಂದೆಂದಾದರೂ ನಿಜಾಂಶ ಎಲ್ಲರಿಗೂ ತಿಳಿದು ತಾನು ಸಿಕ್ಕಿಹಾಕಿಕೊಳ್ಳುತ್ತೇನೋ ಎನ್ನುವ ಭಯ ಇರುತ್ತದೆ.

2. ನಿಮಗೆ ಯಾರ ಮೇಲೆ ನಂಬಿಕೆ ಇದೆಯೋ ಅವರನ್ನು ಸಂಪರ್ಕಿಸಿ

ನಿಮ್ಮ ಮನಸಿನಲ್ಲಿರುವುದನ್ನು ಹಂಚಿಕೊಳ್ಳಲು ಯಾರನ್ನಾದರೂ ನೋಡಿಕೊಳ್ಳಿ. ಯಾರ ಮೇಲೆ ನಿಮಗೆ ಹೆಚ್ಚು ನಂಬಿಕೆ ಇದೆಯೋ, ನಿಮ್ಮ ಸಿಕ್ರೇಟ್‌ನ್ನು ಮುಚ್ಚಿಡುವಂತಹ ವ್ಯಕ್ತಿಯಲ್ಲಿ ವಿಷಯವನ್ನು ಹಂಚಿಕೊಳ್ಳಿ. ಅವರು ನಿಮ್ಮ ಸ್ನೇಹಿತರೇ ಆಗಿರಬಹುದು ಅಥವಾ ಸಹೋದ್ಯೋಗಿ, ಮ್ಯಾನೇಜರ್ ಕೂಡಾ ಆಗಿರಬಹುದು. ಇನ್ನೊಬ್ಬರ ಜೊತೆ ವಿಷಯವನ್ನು ಹಂಚಿಕೊಳ್ಳುವುದರಿಂದ ಸಮಸ್ಯೆಯನ್ನು ಬಗೆಹರಿಸಲು ಸುಲಭವಾಗುತ್ತದೆ.

3. ನಿಮ್ಮ ಗಮನವನ್ನು ಕೇಂದ್ರೀಕರಿಸಲು ವಿರಾಮದ ಸಮಯವನ್ನು ಬಳಸಿ

ಒಂದು ಕಪ್ ಕಾಫಿಯಲ್ಲಿ ಸಾಕಷ್ಟು ನಡೆಯಬಲ್ಲದು. ನೀವು ನಿಮ್ಮ ಬ್ರೇಕ್ ಟೈಮ್‌ನ ಅವಕಾಶವನ್ನು ನಿಮ್ಮ ಗಮನ ಕೇಂದ್ರೀಕರಿಸಲು ಬಳಸಿ. ಕ್ಯಾಂಟಿನ್‌ನಲ್ಲಿರುವ ಜನರ ಜೊತೆ ಬೆರೆಯಿರಿ. ನಿಮ್ಮ ಹವ್ಯಾಸ, ಆಸಕ್ತಿಯನ್ನು ಸಹೋದ್ಯೋಗಿಗಳ ಜೊತೆ ಹಂಚಿಕೊಳ್ಳಿ. ಇದು ನಿಮ್ಮ ಮನಸ್ಸನ್ನು ರಿಲಾಕ್ಸ್ ಆಗಿಸುತ್ತದೆ.

4. ನಿಮ್ಮ ಮೂಡ್ ಸರಿಯಾಗಿಸಲು ಮ್ಯೂಸಿಕ್ ಕೇಳಿ

ನಿಮ್ಮ ಡಲ್ ಆಗಿರುವ ಮೂಡ್‌ನ್ನು ಸರಿಯಾಗಿಸಲು ಮ್ಯೂಸಿಕ್ ಒಂದು ಉತ್ತಮ ಉಪಾಯವಾಗಿದೆ. ಹೆಡ್‌ಫೋನ್ ಹಾಕಿಕೊಂಡು ನಿಮ್ಮಷ್ಟಕ್ಕೆ ಮ್ಯೂಸಿಕ್ ಕೇಳಿ. ಇದು ನಿಮ್ಮ ಭಾವನೆಯನ್ನು ಬದಲಾಯಿಸುತ್ತದೆ. ಮೂಡ್‌ನ್ನು ಫ್ರೆಶ್ ಆಗಿಸುತ್ತದೆ.

5. ಆಫೀಸ್ ವಿಚಾರ ಮನೆವರೆಗೂ ತೆಗೆದುಕೊಂಡು ಹೋಗಬೇಡಿ

ಆಫೀಸ್‌ನಲ್ಲಿ ನಡೆದಿರುವುದನ್ನು ಆಫೀಸ್‌ನಲ್ಲೇ ಬಿಟ್ಟುಬಿಡಿ. ಅದನ್ನು ಮನೆತನಕ ತೆಗೆದುಕೊಂಡು ಹೋಗಿ ನಿಮ್ಮ ಫ್ಯಾಮಿಲಿಯವರ ಮೂಡ್‌ನ್ನು ಹಾಳುಮಾಡಬೇಡಿ. ಮನೆಗೆ ಹೋಗಿ ಫ್ರೆಶ್ ಆಗಿ ಚೆನ್ನಾಗಿ ತಿಂದು ವಾಕ್‌ ಮಾಡಿ ಮಲಗಿ. ಬೆಳಗ್ಗೆ ಎದ್ದಾಗ ನಿಮ್ಮ ಮೂಡ್ ಫ್ರೆಶ್‌ ಆಗಿರುತ್ತದೆ. ಜೊತೆಗೆ ಇನ್ನೊಂದು ಚಾಲೆಂಜ್‌ನ್ನು ಎದುರಿಸಲು ನಿಮ್ಮ ಮನಸ್ಸು ತಯಾರಾಗಿರುತ್ತದೆ.

English summary
Whether it’s your boss criticizingyour work, or anything issue can become a spoiler for your otherwise happening day. Dealing with people coming from diverse backgrounds and carrying distinct mind set can be quite challenging.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia