ಹಾರ್ಡ್ ವರ್ಕ್‌ಗಿಂತ ಸ್ಮಾರ್ಟ್ ಆಗಿ ವರ್ಕ್ ಮಾಡುವುದು ಹೇಗೆ?

ಪ್ರತಿಯೊಂದು ಆಫೀಸ್‌ನಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಕೆಲಸ ಮಾಡುವ ಉದ್ಯೋಗಿಗಳನ್ನ ನೀವು ನೋಡಿರುತ್ತೀರಿ. ಅವರಿಗೆ ಬೇರೆ ಏನಾದ್ರೂ ಕೆಲಸ ಹೇಳಿದ್ರೆ, ಅರೇ ಯಾರ್ ತುಂಬಾ ಕೆಲಸವಿದೆ. ನಾನು ಸಖತ್ ಬ್ಯುಸಿ ಇದ್ದೇನೆ ಎಂದು ನೀವು ಅವರಿಂದ ಉತ್ತರ ಕೇಳಿರುತ್ತೀರಿ. ಯಾವಾಗಲೂ ಇಂತಹ ಜನರು ತುಂಬಾ ಪರಿಶ್ರಮ ಪಡುತ್ತಾರೆ. ಅಷ್ಟೇ ಅಲ್ಲ ಹಾರ್ಡ್ ವರ್ಕ್ ಯಶಸ್ಸಿಗೆ ಯಾವಾಗಲೂ ಕಾರಣವಾಗಿರುತ್ತದೆ. ಆದ್ರೂ ಎಷ್ಟೇ ಹಾರ್ಡ್ ವರ್ಕ್ ಮಾಡಿದ್ರೂ ನೀವು ಕೆಲವೊಮ್ಮೆ ಬಾಸ್‌ನಿಂದ ಬೈಗುಳ ತಿನ್ನಬೇಕಾಗುತ್ತದೆ.

ಹಾರ್ಡ್ ವರ್ಕ್‌ಗಿಂತ ಸ್ಮಾರ್ಟ್ ಆಗಿ ವರ್ಕ್ ಮಾಡುವುದು ಹೇಗೆ?

 

ಕತ್ತೆಯೂ ಕೂಡಾ ತುಂಬಾ ಶ್ರಮವಹಿಸಿ ಕೆಲಸ ಮಾಡುತ್ತದೆ. ಆದ್ರೆ ಯಾವತ್ತೂ ಅದನ್ನ ಸಿಂಹಾಸನದಲ್ಲಿ ಕೂರಿಸಲ್ಲ. ಆದ್ರೆ ನೀವು ಮನುಷ್ಯರು ಶ್ರಮ ಕೆಲಸದ ಜತೆ ಸ್ಮಾರ್ಟ್ ಆಗಿಯೂ ಕೂಡಾ ಕೆಲಸ ಮಾಡಬೇಕು. ನಿಮ್ಮ ಹಾರ್ಡ್ ವರ್ಕನ್ನ ಸ್ಮಾರ್ಟ್ ವರ್ಕ್ ಆಗಿ ಬದಲು ಮಾಡಿ. ಇದರಿಂದ ನಿಮಗೆ ಲಾಭವಾಗುವುದು ಮಾತ್ರವಲ್ಲದೇ ಸಮಯ ಕೂಡಾ ಉಳಿಯುತ್ತದೆ.

ಸ್ಮಾರ್ಟ್ ವರ್ಕ್ ಮಾಡಲು ನಿಮಗೆ ಇಲ್ಲಿ ಕೆಲವೊಂದು ಟಿಪ್ಸ್ ನೀಡುತ್ತಿದ್ದೇವೆ. ಇದನ್ನ ಫಾಲೋ ಮಾಡಿ ನೀವು ಹಾಗೂ ಬಾಸ್ ಇಬ್ಬರೂ ಖುಷಿಯಾಗಿರಬಹುದು. ಅವುವು ಯಾವುವು ಎಂದು ಇಲ್ಲಿದೆ ಮಾಹಿತಿ

ಕೆಲಸದ ಆದ್ಯತೆ:

ನೀವು ಆಫೀಸ್‌ಗೆ ಬಂದ ಕೂಡಲೇ ಆ ದಿನ ಏನೆಲ್ಲಾ ಕೆಲಸ ಮಾಡಬೇಕೆಂದು ಮೊದಲಿಗೆ ಲಿಸ್ಟ್ ಮಾಡಿಕೊಳ್ಳಿ. ಪ್ರಮುಖ ಕೆಲಸವಿದ್ರೆ ಅದನ್ನ ಮೊದಲಿಗೆ ಮಾಡಿ ಮುಗಿಸಿ. ಅಷ್ಟೇ ಅಲ್ಲ ನಿಮ್ಮ ಸಹದ್ಯೋಗಿಗಳಿಗೂ ಕೂಡಾ ನೀವು ಯಾವ ಪ್ರಾಜೆಕ್ಟ್ ಬಗ್ಗೆ ಕೆಲಸ ಮಾಡುತ್ತಿದ್ದೀರಿ ಎಂದು ಮೊದಲಿಗೆ ತಿಳಿಸಿ ಇದರಿಂದ ಅವರು ಮಧ್ಯೆ ಮಧ್ಯೆ ಬಂದು ನಿಮಗೆ ಡಿಸ್ಟರ್ಬ್ ಮಾಡಲ್ಲ.

ಕೇವಲ 25 ಪ್ರತಿಶತದಷ್ಟು ಕೆಲಸವನ್ನು ನೀಡಿ:

ಒಂದು ವೇಳೆ ನೀವು 100 ಪ್ರತಿಶತದಷ್ಟು ಕೆಲಸ ಮಾಡಿದ್ರೆ ನಿಮ್ಮ ಬಾಸ್ ಯಾವಾಗಲೂ ನಿಮ್ಮನ್ನ ಒತ್ತಡದಲ್ಲಿ ಇರಿಸಿಕೊಳ್ಳುತ್ತಾರೆ. ಹಾಗಾಗಿ ನೀವು ಆಪೀಸ್‌ನಲ್ಲಿ ಸರ್ವಜ್ಞರಾಗುವುದು ಬೇಡ. ನಿಮ್ಮ ಸಹದ್ಯೋಗಿಗಳು ನಿಮ್ಮ ಜತೆ ಕೆಲಸ ಮಾಡಲು ಇಚ್ಛಿಸಿದ್ರೆ, ಬಾಸ್ ಕೂಡಾ ನಿಮ್ಮ ಮೇಲೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇನ್ನು ನೀವು ಅವರು ಕೊಟ್ಟ ಕೆಲಸ ಎಲ್ಲವೂ ಬರುತ್ತೆ ಎಂದು ಹೇಳಿ ಕುಳಿತುಕೊಳ್ಳಬೇಡಿ. ಯಾಕೆಂದ್ರೆ ಚಿಕ್ಕಪುಟ್ಟ ತಪ್ಪಾದರೂ ನೀವು ಸಮಸ್ಯೆಗೆ ಸಿಲುಕಿಹಾಕಿಕೊಳ್ಳುವಿರಿ.

ಈ-ಮೇಲ್ ಮ್ಯಾನೇಜ್ ಮಾಡಿ:

ನೀವು ಆಫೀಸ್‌ಗೆ ಬೆಳಗ್ಗೆ ಬಂದೊಡನೆ, ಮೊದಲಿಗೆ ಈ-ಮೇಲ್ ಚೆಕ್ ಮಾಡಿಕೊಳ್ಳಬೇಕಾಗುತ್ತದೆ. ಜತೆಗೆ ಪ್ರತಿ ಈ-ಮೇಲ್‌ಗೆ ಉತ್ತರಿಸಬೇಕಾಗುತ್ತದೆ. ಈ ಕೆಲಸಕ್ಕಾಗಿ ಕೆಲವರು ತುಂಬಾ ಸಮಯ ವ್ಯಯಿಸುತ್ತಾರೆ. ಇಂತಹ ವೇಳೆ ಸ್ಮಾರ್ಟ್ ವರ್ಕ್ ಮಾಡಿ. ಕೆಲಸದ ಜತೆ ಜತೆ ಮೇಲ್ ಚೆಕ್ ಮಾಡುತ್ತಾ ರಿಪ್ಲೈ ಕೂಡಾ ನೀಡುತ್ತಾ ಇರಿ.

ಶಾರ್ಟ್‌ಕಟ್ ಕೆಲಸ ಮಾಡಿ:

ಕಛೇರಿ ಕೆಲಸದ ನಡುವೆ ಸ್ವಯಂಚಾಲಿತ ಮೊಬೈಲ್ ಪ್ರತಿಕ್ರಿಯೆ ಸಂದೇಶವನ್ನ ಆನ್ ಮಾಡಿ. ಇದರಿಂದ ನಿಮ್ಮ ಸಮಯ ಕೂಡಾ ಉಳಿಯುತ್ತದೆ ಹಾಗೂ ನಿಮಗೆ ಕಾಲ್ ಮಾಡಿದವರಿಗೆ ನಿಮ್ಮ ಉತ್ತರ ಕೂಡಾ ಸಿಗುತ್ತದೆ.

ಆಗಲ್ಲ ಹೇಳಲು ಕೂಡಾ ಕಲಿಯಿರಿ:

ಕೆಲವೊಮ್ಮೆ ನೀವು ಮಲ್ಟಿಟಾಸ್ಕ್ ಕೆಲಸ ಮಾಡಬೇಕಾಗಬಹುದು ಅದಕ್ಕೆ ನೀವು ಹಾ ಎಂದು ಕೂಡಾ ಹೇಳಬಹುದು. ಆದ್ರೆ ಇನ್ನು ಮುಂದೆ ಆಗಲ್ಲ ಎಂದು ಹೇಳಲು ಕೂಡಾ ಕಲಿಯಿರಿ. ನಿಮ್ಮ ಕ್ಯಾಪಾಸಿಟಿಗೆ ತಕ್ಕಂತೆ ಕೆಲಸ ಮಾಡಿ

ಮೀಟಿಂಗ್‌ನಲ್ಲಿ ಆಕ್ಟೀವ್:

ಒಂದು ವೇಳೆ ನಿಮ್ಮ ಆಫೀಸ್‌ನಲ್ಲಿ ಬ್ಯುಸಿನೆಸ್ ಮೀಟಿಂಗ್ ಆಯೋಜಿಸಿದ್ದರೆ, ಮೀಟಿಂಗ್ ಮೊದಲೇ ಮೀಟಿಂಗ್ ವಿಷಯದ ಬಗ್ಗೆ ತಿಳಿದುಕೊಂಡು ತಯಾರಾಗಿರಿ. ಹಾಗೂ ಮೀಟಿಂಗ್ ವೇಳೆ ಆಕ್ಟೀವ್ ಆಗಿದ್ದು, ಯಾವುದೇ ಸಂದೇಹವಿದ್ದರೂ ಮತ್ತೊಮ್ಮೆ ಕೇಳಿಕೊಂಡು ಕ್ಲಿಯರ್ ಮಾಡಿಕೊಳ್ಳಿ.

 

ಹೆಚ್ಚಿನ ಜ್ಞಾನ ಹೊಂದಿ:

ನೀವು ಕೆಲಸ ಮಾಡುವ ಪೀಲ್ಡ್ ಗೆ ಸಂಬಂಧಪಟ್ಟಂತೆ ನೀವು ಹೆಚ್ಚಿನ ಜ್ಞಾನ ಹೊಂದಿಕೊಳ್ಳಿ. ಪ್ರತಿದಿನ ಹೊಸ ತಂತ್ರಜ್ಞಾನ ಹಾಗೂ ಪ್ರಚಲಿತ ವಿದ್ಯಾಮಾನದ ಬಗ್ಗೆ ತಿಳಿದುಕೊಂಡಿರಿ.

For Quick Alerts
ALLOW NOTIFICATIONS  
For Daily Alerts

  English summary
  Working smarter, not harder, is an age - old adage. If you master the concepet, your entire working life will be easier. Work smart is defferent for every person depending on their unique personal mission statement and definition of success
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more