ಇಂಟರ್ವ್ಯೂ ವೇಳೆ ಈ ರೀತಿ ಡ್ರೆಸ್ ಮಾಡ್ಕೊಂಡ್ರೆ ಕೆಲಸ ಗ್ಯಾರಂಟಿ

Posted By:

ಸಂದರ್ಶನಕ್ಕೆ ತಯಾರಾಗುವ ವೇಳೆ ನೀವು ಹೇಗೆ ಡ್ರೆಸ್ ಮಾಡಿ ತಯಾರಾಗುತ್ತೀರಿ ಅನ್ನೋದು ಕೂಡಾ ಇಂಪೋರ್ಟೆಂಟ್. ಯಾಕೆಂದ್ರೆ ನಿಮ್ಮ ಮೇಲೆ ಫಸ್ಟ್ ಮೂಡುವ ಇಂಪ್ರೇಶನ್ ನೀವು ಧರಿಸಿರುವ ಉಡುಗೆ ಮೇಲೆ ಇರುತ್ತದೆ. ನಿಮ್ಮ ಲುಕ್ ನಿಮ್ಮ ಪರ್ಸನಾಲಿಟಿ ಬಗ್ಗೆ ಮಾತನಾಡಬಹುದು.

ಇಂಟರ್ವ್ಯೂ ಗೆ ಹೋಗುವಾಗ ಬರೀ ಓದಿದ್ರೆ ಸಾಲದು ನಿಮ್ಮ ಉಡುಗೆ ಕೂಡಾ ಪರ್ಫೆಕ್ಟ್ ಆಗಿರಬೇಕು. ಉತ್ತಮ ಕೆರಿಯರ್ ನಿಮ್ಮದಾಗಬೇಕೆಂದಿದ್ರೆ ನೀವು ಮೊದಲಿಗೆ ಇಂಟರ್ ವ್ಯೂಗೆ ಹೇಗೆ ತಯಾರಾಗಬೇಕು ಎಂಬುವುದು ತಿಳಿದುಕೊಳ್ಳಿ

ಸ್ಥಳ:

ನೀವು ಧರಿಸುವ ಉಡುಗೆ ನಿಮ್ಮ ಸುತ್ತಮುತ್ತಲಿನ ವಾತಾವರಣಕ್ಕೆ ಸಂಬಂಧಿಸಿದಂತಿದ್ದರೆ ಚೆನ್ನಾಗಿರುತ್ತದೆ. ಈಗ ಭಾರತದಲ್ಲಿ ಸಂದರ್ಶನಕ್ಕೆ ಹೋಗುವ ವೇಳೆ ಸಾರೀ ಧರಿಸಿದ್ರೆ ಉತ್ತಮ. ಯೂರೋಪ್ ರಾಷ್ಟ್ರಗಳಲ್ಲಿಯಾದ್ರೆ ಕೋಟ್ ಧರಿಸುವುದು ಬೆಸ್ಟ್. ಹಾಗಾಗಿ ನೀವು ಯಾವ ಲೋಕೇಶನ್ ಅಲ್ಲಿ ಇಂಟರ್ ವ್ಯೂಗೆ ಹೋಗುತ್ತೀರಾ ಎಂಬುವುದು ಮೊದಲಿಗೆ ತಿಳಿದುಕೊಂಡು ಬಳಿಕ ರೆಡಿಯಾಗಿ

ಇಂಡಸ್ಟ್ರಿಗೆ ತಕ್ಕಂತೆ ಉಡುಗೆ:

ಪ್ರತಿಯೊಂದು ಇಂಡಸ್ಟ್ರಿಗೆ ತಕ್ಕಂತೆ ಉಡುಗೆ ಇರುತ್ತದೆ. ಈಗ ಲಾಯರ್ ಆದ್ರೆ ಕರಿ ಕೋಟ್, ಡಾಕ್ಟರ್ ಆದ್ರೆ ಬಿಳಿ ಬಣ್ಣದ ಕೋಟ್ ಹಾಗೂ ಉದ್ಯಮಿ ಆದ್ರೆ ಫಾರ್ಮಲ್ ಕೋಟ್. ನೀವು ಯಾವ ಇಂಡಸ್ಟ್ರಿ ಇಂಟರ್ ವ್ಯೂಗೆ ಹೋಗುತ್ತಿದ್ದೀರಾ ಎಂದು ಮೊದಲಿಗೆ ತಿಳಿದುಕೊಂಡು ಬಳಿಕ ಅಲ್ಲಿಯ ನಿಯಮದಂತಹ ಉಡುಗೆ ಧರಿಸಿ ಸಂದರ್ಶನದಲ್ಲಿ ಪಾಲ್ಗೊಳ್ಳಿ

ಕಂಪನಿ ಡ್ರೆಸ್ ಕೋಡ್

ಇನ್ನು ಕೆಲವೊಂದು ಕಂಪನಿಗಳಿಗೆ ಅದರದ್ದೇ ಆದ ಡ್ರೆಸಿಂಗ್ ಕೋಡ್ ಇರುತ್ತದೆ. ಹಾಗಾಗಿ ಸಂದರ್ಶನಕ್ಕೆ ನಿಮಗೆ ಕರೆ ಬಂದಾಗ ಆ ಸಂಸ್ಥೆಯ ಹೆಚ್ ಆರ್ ಬಳಿಕ ಡ್ರೆಸ್ ಕೋಡ್ ಬಗ್ಗೆ ವಿಚಾರಿಸಿಕೊಳ್ಳಿ. ಒಂದು ವೇಳೆ ಡ್ರೆಸ್ ಕೋಡ್ ಇದ್ರೆ ಅವರು ತಿಳಿಸುತ್ತಾರೆ. ಹೆಚ್ ಆರ್ ಬಳಿ ಕೇಳಲು ಯಾವುದೇ ಕಾರಣಕ್ಕೂ ಅಂಜಿಕೆ ಬೇಡ

ಮಿತವಾದ ಆಭರಣ ಧರಿಸಿ

ಸದ್ದು ಮಾಡುವಂತಹ, ಕಣ್ಣಿಗೆ ಕುಕ್ಕುವಂತಹ ಆಭರಣ ಧರಿಸಬೇಡಿ. ಇದರಿಂದ ಸಂದರ್ಶನದ ವೇಳೆ ಗಮನ ಇನ್ನೆಲ್ಲೋ ಹೋಗಬಹುದು.ಅಷ್ಟೇ ಅಲ್ಲ ಇದರಿಂದ ಸಂದರ್ಶನಕಾರರು ಕಿರಿಕಿರಿ ಅನುಭವಿಸಬಹುದು. ಹಾಗಾಗಿ ಮಿತವಾದ ಆಭರಣ ಧರಿಸಿ

ಅತೀ ಹೆಚ್ಚು ಮೇಕಪ್ ಬೇಡ

ಎಲ್ರಿಗೂ ತಾನು ಚೆನ್ನಾಗಿ ಕಾಣಬೇಕು ಎಂಬ ಹಂಬಲವಿರುತ್ತದೆ. ಆದ್ರೆ ಸಂದರ್ಶನಕ್ಕೆ ಹೋಗುವ ವೇಳೆ ಮೇಕಪ್ ಮಿತವಾಗಿರಲಿ. ಎಕ್ಸ್ಟ್ರಾ ಲಿಪ್ ಸ್ಟಿಕ್, ಐ ಲ್ಯಾಶ್ ಬೇಡ. ಹದವಾಗಿ ಪರ್ಫೂಮ್ ಸಿಂಪಡಿಸಿಕೊಳ್ಳಿ. ಇನ್ನು ಎದುರಿದ್ದವರಿಗೆ ತಲೆ ನೋವು ಬರುವಷ್ಟು ಪರ್ಫೂಮ್ ಬೇಡ. ಯಾಕೆಂದ್ರೆ ಕೆಲವರಿಗೆ ಪರ್ಫೂಮ್ ಅಲರ್ಜಿ ಇರುತ್ತದೆ.

ಪ್ರೊಫೆಶನಲ್ ಲುಕ್ ಬರುವಂತಹ ಉಡುಗೆ ಧರಿಸಿ

ಇಂಟರ್ವ್ಯೂ ವೇಳೆ ಕ್ಯಾಶುವಲ್ ಉಡುಗೆಗಿಂತ ಪ್ರೊಫೆಶನಲ್ ಲುಕ್ ಬರುವಂತಹ ಉಡುಗೆ ಧರಿಸುವುದು ಉತ್ತಮ. ಟೂರ್, ಪಿಕ್ ನಿಕ್ ಗೆಲ್ಲಾ ಕ್ಯಾಶುವಲ್ ಟೀ ಶರ್ಟ್ ಗಳು ಓಕೆ. ಆದ್ರೆ ಇಂಟರ್ ವ್ಯೂ ವೇಳೆ ಪ್ರೊಫೆಶನಲ್ ಲುಕ್ ಬರುವಂತಹ ಉಡುಗೆ ಧರಿಸಿ. ಗಂಭೀರದಿಂದಿರಿ.

ಸ್ವಚ್ಛ ಹಾಗೂ ಇಸ್ತ್ರಿ ಮಾಡಿದ ಉಡುಗೆ ಧರಿಸಿ

ಯಾವಾಗ ನೀವು ಇಂಟರ್ವ್ಯೂಗೆ ಕಾಟನ್ ಡ್ರೆಸ್ ಸೆಲೆಕ್ಟ್ ಮಾಡ್ತೀರೋ ಆಗ ಈ ಮಾತು ನೆನಪಿಟ್ಟುಕೊಳ್ಳಿ. ನಿಮ್ಮ ಕಾಟನ್ ಉಡುಗೆ ನೀಟ್ ಹಾಗೂ ಶುಭ್ರವಾಗಿರಬೇಕು. ಅಷ್ಟೇ ಅಲ್ಲ ಕಾಟನ್ ಉಡುಗೆಗೆ ಇಸ್ತ್ರಿ ಅಗತ್ಯವಾಗಿದ್ದು, ಇಸ್ತ್ರಿ ಹಾಕದೇ ಇರಲು ಮರೆಯದಿರಿ

English summary
Dressing up for a job interview is one of the most important aspects of getting ready because the employer will create their first impression of you going by your looks. Your looks can speak volumes about your personality and you will be judged on that basis as much as you will be tested on your skills for the job

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia