ಆಫೀಸ್‌ನಲ್ಲಿ EXTRA WORK... ತಪ್ಪಿಸಿಕೊಳ್ಳುವುದು ಹೇಗೆ?

ಆಫೀಸ್‌ನಲ್ಲಿ ಹೆಚ್ಚುವರಿ ಕೆಲಸ ನೀಡುವುದು ಕ್ಯಾಶುವಲ್ ವಿಷಯ. ಅಷ್ಟೇ ಅಲ್ಲ ಈಗಂತೂ ಹೆಚ್ಚಿನ ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ಹೆಚ್ಚಿನ ಕೆಲಸ ನೀಡುವುದು ಸಾಮಾನ್ಯ. ಆದ್ರೆ ಹೆಚ್ಚು ಕೆಲಸ ನೀಡುವ ಭರದಲ್ಲಿ ನಿಮ್ಮ ಮೇಲೆ ಓವರ್ ಲೋಡ್ ಆಗಬಹುದು.

ಆಫೀಸ್‌ನಲ್ಲಿ ಹೆಚ್ಚುವರಿ ಕೆಲಸ ನೀಡುವುದು ಕ್ಯಾಶುವಲ್ ವಿಷಯ. ಅಷ್ಟೇ ಅಲ್ಲ ಈಗಂತೂ ಹೆಚ್ಚಿನ ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ಹೆಚ್ಚಿನ ಕೆಲಸ ನೀಡುವುದು ಸಾಮಾನ್ಯ. ಆದ್ರೆ ಹೆಚ್ಚು ಕೆಲಸ ನೀಡುವ ಭರದಲ್ಲಿ ನಿಮ್ಮ ಮೇಲೆ ಓವರ್ ಲೋಡ್ ಆಗಬಹುದು. ಅಷ್ಟೇ ಅಲ್ಲ ಇದರಿಂದ ಸುಮ್ಮನೆ ನೆಮ್ಮದಿ ಕೂಡಾ ಹಾಳಾಗಬಹುದು. ಆದ್ರೆ ನೀವು ಈ ಸಮಸ್ಯೆಯಿಂದ ಹೇಗೆ ಪಾರಾಗುವುದು ಎಂದು ಯೋಚಿಸುತ್ತಿದ್ದೀರಾ. ಹಾಗಿದ್ರೆ ಇಲ್ಲಿದೆ ಟಿಪ್ಸ್.

ಆಫೀಸ್‌ನ ಹೆಚ್ಚುವರಿ ಕೆಲಸದಿಂದ ತಪ್ಪಿಸಿಕೊಳ್ಳುವುದು ಹೇಗೆ?

ಆಫೀಸ್‌ನಲ್ಲಿ ಹೆಚ್ಚುವರಿ ಕೆಲಸದಿಂದ ತಪ್ಪಿಸಿಕೊಳ್ಳಲು ಇಲ್ಲಿದೆ ಟಿಪ್ಸ್:

ನಿಮ್ಮ ಇನ್ನಿತ್ತರ ಸ್ಕಿಲ್ ಬಗ್ಗೆ ತಿಳಿಸಬೇಡಿ:

ನಿಮ್ಮನ್ನ ಸೋಶಲ್ ಮೀಡಿಯಾ ಹ್ಯಾಂಡಲ್ ಮಾಡಲು ನೇಮಕ ಮಾಡಿರಬಹುದು. ಆದ್ರೆ ನಿಮ್ಮೊಳಗೊಬ್ಬ ಬರಹಗಾರನೂ ಕೂಡಾ ಇರುತ್ತಾನೆ. ಆದ್ರೆ ಈ ಬಗ್ಗೆ ನೀವು ಯಾರ ಬಳಿ ಕೂಡಾ ಹೇಳಬೇಡಿ. ಒಂದು ವೇಳೆ ನೀವು ಹೇಳಿದ್ರೆ ನಿಮಗೆ ನಿಜಕ್ಕೂ ನಿಮಗೆ ಹೆಚ್ಚುವರಿ ಕೆಲಸ ಒಪ್ಪಿಸುತ್ತಾರೆ. ಈಗ ಹೇಳಿ ನೀವು ಚ್ಯಾನ್ಸ್ ತೆಗೊಳಲು ತಯಾರಿರುತ್ತೀರಾ ?

ನಿಮ್ಮ ಕ್ಯಾಪಸಿಟಿ ಬಗ್ಗೆ ನಿಮ್ಮ ಮ್ಯಾನೇಜರ್‌ಗೆ ತಿಳಿಸುತ್ತಾ ಇರಿ:

ಹೌದು ಮ್ಯಾನೇಜರ್ ನಿಮಗೆ ಮೇಲಿಂದ ಮೇಲೆ ಕೆಲಸಗಳನ್ನ ನೀಡುತ್ತಾ ಇರಬಹುದು. ಆದ್ರೆ ಒಂದು ನೆನಪಿಟ್ಟುಕೊಳ್ಳಿ ನೀವು ಏನೂ ಹೇಳದೇ ಮಾಡುತ್ತಾ ಹೋದ್ರೆ ಅವರು ಇನ್ನೂ ಹೆಚ್ಚು ಹೆಚ್ಚು ಕೆಲಸ ನೀಡುವ ಸಂಭವವಿರುತ್ತದೆ. ಹಾಗಾಗಿ ನೀವು ಅವರಿಗೆ ನಿಮ್ಮ ಕ್ಯಾಪಸಿಟಿ ಬಗ್ಗೆ ತಿಳಿಸುತ್ತಾ ಇರಿ. ಇದರಿಂದ ನೀವು ಒಂದು ಗಡಿ ರೇಖೆ ಎಳೆದುಕೊಂಡು ಸೇಫ್ ಆಗಿರಬಹುದು. ಹಾಗೂ ಬಾಸ್ ಕೂಡಾ ನಿಮಗೆ ಮಿತವಾಗಿ ಕೆಲಸ ನೀಡುವರು.

ಸುಮ್ಮನೆ ಸಮಯ ವ್ಯರ್ಥ ಮಾಡಬೇಡಿ:

ಆಫೀಸ್‌ನಲ್ಲಿ ಹೆಚ್ಚು ಕೆಲಸ ಯಾವಾಗ ನೀಡುತ್ತಾರೆ ಎಂದ್ರೆ ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಾ ಇದ್ದರೆ ಮಾತ್ರ. ಹಾಗಾಇ ಸುಮ್ಮನೆ ಅಡ್ಡಾದಿಡ್ಡಿ ಓಡಾಡುತ್ತಾ ಇರುವುದಕ್ಕಿಂತ ಯಾವಾಗಲೂ ನಿಮ್ಮನ್ನ ನೀವು ಬ್ಯುಸಿ ಮಾಡಿಕೊಳ್ಳಿ. ಇದರಿಂದ ಹೆಚ್ಚುವರಿ ಕೆಲಸ ಸಿಗುವುದರಿಂದ ತಪ್ಪಿಸಿಕೊಳ್ಳಬಹುದು.

ಸಹದ್ಯೋಗಿಗಳಿಗೆ ಕೆಲಸದಲ್ಲಿ ಸಹಾಯ ಮಾಡಬೇಡಿ:

ಹೆಚ್ಚುವರಿ ಕೆಲಸ ಯಾವಾಗ ಪ್ರಾರಂಭವಾಗುದೆಂದ್ರೆ, ಯಾವಾಗ ನೀವು ನಿಮ್ಮ ಸಹದ್ಯೋಗಿಗಳಿಗೆ ಕೆಲಸದ ವಿಚಾರದಲ್ಲಿ ಯಾವಾಗ ಸಹಾಯ ಮಾಡುತ್ತೀರೋ ಆವಾಗ. ಒಬ್ಬರಿಗೆ ನೀವು ಸಹಾಯ ಮಾಡಿದ್ರೆ ಇನ್ನೂ ಉಳಿದವರು ಕೂಡಾ ನಿಮ್ಮಿಂದ ಅದೇ ಸಹಾಯ ನಿರೀಕ್ಷಿಸುತ್ತಾರೆ.

ನೀವು ಸ್ಟ್ರೆಸ್ ಅಲ್ಲಿ ಇರುವಂತೆ ಫೀಲ್ ಮಾಡಿಸಿ:

ನಿಮ್ಮ ಕೆಲಸ ಸ್ಟ್ರೆಸ್ ಫುಲ್ ಇರಲಿ ಇಲ್ಲ ಇಲ್ಲದೇ ಇರಲಿ, ಆದ್ರೆ ಈ ಬಗ್ಗೆ ನೀವು ಆಫೀಸ್‌ನಲ್ಲಿ ಸ್ಟ್ರೆಸ್ ಇದೆ ಅಂತಾನೇ ಹೇಳಬೇಕು. ಇದರಿಂದ ನಿಮಗೆ ಯಾರೂ ಹೆಚ್ಚುವರಿ ಕೆಲಸ ನೀಡಲು ಮುಂದೆ ಬರುವುದಿಲ್ಲ. ಆದ್ರೆ ನೀವು ಸ್ಟ್ರೆಸ್ ಫ್ರೀ ಆಗಿ ಕೆಲಸ ಮಾಡಿದ್ರೆ ನಿಮ್ಮ ಮೇಲೆ ಹೆಚ್ಚಿನ ಹೊರೆ ಬೀಳುವ ಸಂಭವವಿರುತ್ತದೆ.

ಆಫೀಸ್‌ನಲ್ಲಿ ನೀಡುವ ಹೆಚ್ಚುವರಿ ಕೆಲಸದಿಂದ ಬಚಾವಾಗಲು ಇದು ನಿಮಗೆ ಬೆಸ್ಟ್ ಟಿಪ್ಸ್. ಈ ಟಿಪ್ಸ್ ಗಳನ್ನ ಫಾಲೋ ಮಾಡಿ ಅನಗತ್ಯ ಕೆಲಸದ ಹೊಣೆಯಿಂದ ದೂರವಿರಿ.

For Quick Alerts
ALLOW NOTIFICATIONS  
For Daily Alerts

English summary
Casual thing to get extra work at office which you are not even required to do. whether you work in startup or a huge anyone can pile on extra work and you leaving with no option. well this happens to you when you are a push - over but if you know how to smartly get away from everything, you will never have the overload on you.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X