ಹೆಚ್ಚಿನ ವರ್ಕ್ ಲೋಡ್... ತಪ್ಪಿಸಿಕೊಳ್ಳುವುದು ಹೇಗೆ?

By Kavya

ಕೆಲವೊಮ್ಮೆ ನಮ್ಮ ವರ್ಕ್ ಲೋಡ್ ಬಗ್ಗೆ ಇತರರಿಗೆ ಅರ್ಥಮಾಡಿಸಲು ತುಂಬಾ ಕಷ್ಟವಾಗುತ್ತದೆ. ವಿಶೇಷವಾಗಿ ಬಾಸ್ ಗೆ. ಹೆಚ್ಚು ಹೆಚ್ಚು ಕೆಲಸ ನೀಡಿದಾಗ ಬಾಸ್ ಗೆ ನೇರವಾಗಿ ನೋ ಎಂದು ಹೇಳಲು ಸಮಸ್ಯೆಯಾಗುತ್ತದೆ. ಆದ್ರೆ ಈ ಸಮಸ್ಯೆಗೆ ಏನಾದ್ರೂ ಪರಿಹಾರ ಹುಡುಕಲೇ ಬೇಕಲ್ಲವಾ. ನಿಮಗೆ ವರ್ಕ್ ಲೋಡ್ ಜಾಸ್ತಿಯಾಗಿದ್ದರೆ, ನಿಮ್ಮಿಂದ ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗದೇ ಇದ್ದರೆ, ನೀವು ಹೇಗೆ ಈ ಸಮಸ್ಯೆಯಿಂದ ಹೊರ ಬರಬಹುದು ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ.

 
ಹೆಚ್ಚಿನ ವರ್ಕ್ ಲೋಡ್... ತಪ್ಪಿಸಿಕೊಳ್ಳುವುದು ಹೇಗೆ?

ಈ ಕೆಳಗಿನ ಸಲಹೆ ಅನುಸರಿಸಿ, ಹೆಚ್ಚಿನ ವರ್ಕ್ ಲೋಡ್ ತಪ್ಪಿಸಿಕೊಳ್ಳಿ:

ಫ್ರೀಯಾಗಿ ಕುಳಿತುಕೊಂಡಿರಬೇಡಿ:

ಯಾವಾಗೆಲ್ಲ ನಿಮ್ಮ ಬಾಸ್ ನಿಮ್ಮ ಸುತ್ತ ಮುತ್ತ ಇರುತ್ತಾರೋ, ಆ ಟೈಂನಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಬ್ಯುಸಿ ಇರೋ ತರಹ ಕೆಲಸ ಮಾಡಿ. ನೀವು ಅವರ ಮುಂದೆ ಫ್ರೀಯಾಗಿರೋ ತರಹ ಕುಳಿತು ಹರಟೆ ಹೊಡೆಯುತ್ತಿದ್ದರೆ, ಅವರು ನಿಮಗೆ ಹೆಚ್ಚಿನ ಕೆಲಸದ ಜವಬ್ದಾರಿ ಹೊರಿಸುವ ಸಂಭವ ಇರುತ್ತದೆ. ಅಷ್ಟೇ ಅಲ್ಲ ಬಾಸ್ ನಿಮ್ಮನ್ನ ಕರೆದು ಕೆಲಸ ಹೇಗೆ ನಡೆಯುತ್ತಿದೆ ಇದೀಗ ಫ್ರೀ ಇದ್ದಿಯಾ ಎಂದು ಪ್ರಶ್ನಿಸಿದ್ರೆ, ಹೌದು ಫ್ರೀ ಇದ್ದೇನೆ ಎಂದು ಹೇಳಬೇಡಿ. ಇದರಿಂದ ನಿಮಗೆ ಮತ್ತೆ ಹೆಚ್ಚಿನ ಜವಬ್ದಾರಿ ಹೊರಿಸುವ ಸಂಭವಿರುತ್ತದೆ.

ಕೆಲಸದ ಲಿಸ್ಟ್ ಬಗ್ಗೆ ಬಾಸ್ ಗೆ ತಿಳಿಸಿ:

ಆಫೀಸ್ ಹೋದ ತಕ್ಷಣ ಅಂದಿನ ಕೆಲಸದ ಬಗ್ಗೆ ಲಿಸ್ಟ್ ಮಾಡಿಟ್ಟುಕೊಳ್ಳಿ. ಬಾಸ್ ನಿಮ್ಮನ್ನ ಕ್ಯಾಬಿನ್ ಗೆ ಕರೆಸಿ, ಇವತ್ತೇನು ಕೆಲಸ ಮಾಡುತ್ತೀರಾ ಎಂದು ಕೇಳಿದಾಗ ಅವರ ಮುಂದೆ ಈ ಲಿಸ್ಟ್ ತೋರಿಸಿ. ಆದ್ರೆ ನೆನಪಿರಲಿ ಈ ಲಿಸ್ಟ್ ತುಂಬಾ ಇಂಪೋರ್ಟೆಂಟ್ ಕೆಲಸಗಳೇ ಇರಲಿ ವಿನ್ಹಾ ಸಿಲ್ಲಿ ಸಿಲ್ಲಿ ವಿಷಯಗಳಲ್ಲ.

ಕೆಲಸ ಒಪ್ಪಿ ಕೊಳ್ಳಿ ಹಾಗೆಯೇ ಕಡಿಮೆ ಮಾಡಲು ರಿಕ್ವೆಸ್ಟ್ ಮಾಡಿಕೊಳ್ಳಿ:

ಕೆಲವೊಮ್ಮೆ ಬಾಸ್ ನಿಮ್ಮ ನ್ನ ಕ್ಯಾಬಿನ್ ಗೆ ಕರೆದು ಹೊಸ ಕೆಲಸದ ಜವಬ್ದಾರಿ ನಿಮಗೆ ವಹಿಸಬಹುದು. ಆಗ ನೀವು ಖುಷಿ ಖುಷಿಯಾಗಿ ಆ ಕೆಲಸವನ್ನ ಒಪ್ಪಿಕೊಳ್ಳಿ. ಜತೆಗೆ ಅಂದು ನೀವು ಮಾಮೂಲಿಯಾಗಿ ಮಾಡಬೇಕಾದ ಕೆಲಸದಲ್ಲಿ ಯಾವುದಾದ್ರೂ ಒಂದು ಕೆಲಸವನ್ನ ಕಡಿಮೆ ಮಾಡುವಂತೆ ಬಾಸ್ ಗೆ ಸ್ವೀಟ್ ಆಗಿ ಕೇಳಿಕೊಳ್ಳಿ. ಇದರಿಂದ ನಿಮಗೆ ಹೆಚ್ಚಿನ ವರ್ಕ್ ಲೋಡ್ ಇದೆ ಎಂದು ಬಾಸ್ ತಿಳಿಯುವರು.

 

ನೋ ಹೇಳಲು ಕಲಿಯಿರಿ:

ನಿಮ್ಮಿಂದ ಕೆಲಸ ಮಾಡಲು ಸಾಧ್ಯವಾಗದೇ ಇದ್ದರೆ ಸೀದಾ ಬಾಸ್ ಬಳಿ ಹೋಗಿ ಸಾರಿ ನನ್ನಿಂದ ಆಗಲ್ಲ ಎಂದು ನೇರವಾಗಿ ಹೇಳಿ. ಆಗ ನಿಮ್ಮ ಕೆಲಸ ಸ್ವಲ್ಪ ಕಡಿಮೆ ಮಾಡುತ್ತಾರೆ. ಅಥವಾ ಇತರ ಸಹದ್ಯೋಗಿಯನ್ನ ಕೂಡಾ ನಿಮ್ಮ ಜತೆ ಸೇರಿಸಿಕೊಳ್ಳಲು ಆದೇಶಿಸಬಹುದು. ನೀವು ಭಯಪಟ್ಟು ನೋ ಎಂದು ಹೇಳದೇ ಇದ್ದರೆ, ಅವರು ಮುಂದಿನ ಬಾರಿ ಇನ್ನೂ ಹೆಚ್ಚಿನ ಕೆಲಸ ವಹಿಸುವ ಸಂಭವವಿರುತ್ತದೆ

For Quick Alerts
ALLOW NOTIFICATIONS  
For Daily Alerts

English summary
Sometimes it gets too hard to tell that someone about your workload, Especially when it is your boss, it gets really hard to say no even though you want too. But something needs to be done right? personally, if you feel you re being used or you can't handle the work pressure.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X