ಆಫೀಸ್‌ನಲ್ಲಿ ಉಂಟಾಗುವ ಮುಜುಗರ ಸನ್ನಿವೇಶವನ್ನ ಹೇಗೆ ಹ್ಯಾಂಡಲ್ ಮಾಡಿದ್ರೆ ಚೆನ್ನ!

ಸಹದ್ಯೋಗಿ ಜತೆ ಬ್ರೇಕಪ್, ಬಾಸ್ ಜತೆ ಲಿಫ್ಟ್‌ನಲ್ಲಿ ಸಿಕ್ಕಾಕಿಕೊಂಡಾಗ ಸೇರಿದಂತೆ ಇಂತಹ ಮುಜುಗರ ಸನ್ನಿವೇಶವನ್ನ ಆಫೀಸ್‌ನಲ್ಲಿ ಹೀಗೆ ಹ್ಯಾಂಡಲ್ ಮಾಡಿ

By Kavya

ಪ್ರತಿಯೊಬ್ಬರಿಗೂ ಕೆಲಸ ಮಾಡುವ ಕಚೇರಿಯಲ್ಲಿ ಮುಜುಗರ ತರುವಂತಹ ಸನ್ನಿವೇಶ ಸೃಷ್ಟಿಯಾಗಿಯೇ ಇರುತ್ತದೆ. ಇಂತಹ ಸನ್ನಿವೇಶವನ್ನ ಕೂಲ್ ಆಗಿ ಹ್ಯಾಂಡಲ್ ಮಾಡಬೇಕು ಇಲ್ಲಂದ್ರೆ ನೀವು ಇದರಿಂದ ಅಹಿತಕರ ಕ್ಷಣ ಅನುಭವಿಸಬೇಕಾಗುತ್ತದೆ.

ಆಫೀಸ್‌ನಲ್ಲಿ ಉಂಟಾಗುವ ಮುಜುಗರ ಸನ್ನಿವೇಶವನ್ನ ಹೇಗೆ ಹ್ಯಾಂಡಲ್ ಮಾಡಿದ್ರೆ ಚೆನ್ನ!

ಆಫೀಸ್‌ಗಳಲ್ಲಿ ಮುಜುಗರ ಯಾವ ರೀತಿಯ ಮುಜುಗರಕ್ಕೆ ಒಳಗಾಗುವ ಸನ್ನಿವೇಶ ಮೂಡುತ್ತದೆ ಹಾಗೂ ಇಂತಹ ಸನ್ನಿವೇಶ ಸೃಷ್ಟಿಯಾದಾಗ ಅದನ್ನ ಹಾನೆಸ್ಟ್ ಆಗಿ ಹಾಗೂ ನೈಜತೆಯಿಂದ ಹೇಗೆ ಹ್ಯಾಂಡಲ್ ಮಾಡಬೇಕು ಎಂದು ನಿಮಗೆ ಇಲ್ಲಿ ಸಲಹೆ ನೀಡಲಾಗಿದೆ ಮುಂದಕ್ಕೆ ಓದಿ.

<strong>Most Read: ಐಬಿಪಿಎಸ್ ಪಿಓ ಪರೀಕ್ಷೆ ತಯಾರಿಗೆ ಇಲ್ಲಿವೆ ಬೆಸ್ಟ್ ಪುಸ್ತಕಗಳು</strong>Most Read: ಐಬಿಪಿಎಸ್ ಪಿಓ ಪರೀಕ್ಷೆ ತಯಾರಿಗೆ ಇಲ್ಲಿವೆ ಬೆಸ್ಟ್ ಪುಸ್ತಕಗಳು

ನೀವು ಮಾಡದೇ ಇರುವ ಕೆಲಸಕ್ಕೆ ಶಹಬ್ಬಾಸ್ ಗಿರಿ ಸಿಕ್ಕಾಗ

ನೀವು ಮಾಡದೇ ಇರುವ ಕೆಲಸಕ್ಕೆ ಶಹಬ್ಬಾಸ್ ಗಿರಿ ಸಿಕ್ಕಾಗ

ಯಾವುದೋ ಬಿಗ್ ಪ್ರಾಜೆಕ್ಟ್ ನಿಮಗೆ ಸಿಕ್ಕಾಗ ನೀವು ಅದು ನಿಮ್ಮಿಂದ ಸಾಧ್ಯವಿಲ್ಲ ಎಂದು ಕೈ ಚೆಲ್ಲಿ ಕುಳಿತಿರಬಹುದು. ಆದ್ರೆ ಇದೇ ಸಮಯದಲ್ಲಿ ನಿಮ್ಮ ಸಹದ್ಯೋಗಿ ಆ ಕೆಲಸವನ್ನ ಕಂಪ್ಲೀಟ್ ಮಾಡಿ ಮುಗಿಸಬಹುದು. ಇಷ್ಟೇ ಆದ್ರೆ ಓಕೆ ಆದ್ರೆ ನಿಮ್ಮ ಬಾಸ್ ಬಂದು ಆ ಕೆಲಸ ಕಂಪ್ಲೀಟ್ ಆದದಕ್ಕೆ ನಿಮಗೆ ಬಂದು ಶಹಬ್ಬಾಸ್ ಎಂದು ಹೇಳಬಹುದು ಈ ಟೈಂ ನೀವು ಹೇಗೆ ಸಂಭಾಳಿಸಬಹುದು ಎಂದು ನಾವು ನಿಮಗೆ ಹೇಳುತ್ತೇವೆ.

ನಮಗೆಲ್ಲಾ ಗೊತ್ತಿರೋ ಹಾಗಿ ಬೇರೆಯವರ ಮಾಡಿರುವ ಕೆಲಸಕ್ಕೆ ನಾವು ಕ್ರೆಡಿಟ್ ತೆಗೆದುಕೊಳ್ಳುವುದು ತಪ್ಪು. ಈ ಟೈಂನಲ್ಲಿ ಆ ಶಹಬ್ಬಾಸ್ ಗಿರಿಗೆ ಯಾರು ಡಿಸರ್ವ್ ಅವರ ಬಗ್ಗೆ ತಿಳಿಸುವುದು ಅಗತ್ಯ. ಅದು ಹೇಗೆ ಹೇಳಬೇಕೆಂದ್ರೆ ಮೊದಲಿಗೆ ಬಾಸ್ ಗೆ ಅವರು ನೀಡಿದ ಕಾಂಪ್ಲಿಮೆಂಟ್ ಗೆ ಧನ್ಯವಾದ ತಿಳಿಸಿ. ಬಳಿಕ ಆ ಕೆಲಸ ಯಾರಿಂದ ಆಯಿತು ಎಂಬುವುದು ತಿಳಿಸಿ. ಹಾಗೂ ಬಾಸ್ ಗೆ ನಿಮ್ಮ ಕಾಂಪ್ಲಿಮೆಂಟ್ ಗೆ ನಾನು ಒಪ್ಪುತ್ತೇನೆ. ಅವರು ನಿಜಕ್ಕೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ಅವರ ಮುಖಾಂತರ ಈ ಕ್ರೆಡಿಟ್ ನಮಗೆ ಸಿಕ್ಕಿರುವುದು ತುಂಬಾ ಸಂತಸ ಎಂದು ತಿಳಿಸಿ. ಇದರಿಂದ ನಿಮ್ಮ ಲೀಡರ್ ಶಿಪ್ ಹಾಗೂ ಕಾಂಫಿಡೆಂಟ್ ಕೂಡಾ ಹೆಚ್ಚುವುದು.

 

ನಿಮ್ಮ ಕೆಲಸದ ಕ್ರೆಡಿಟ್ ಇನ್ಯಾರೋ ತೆಗೊಂಡಾಗ

ನಿಮ್ಮ ಕೆಲಸದ ಕ್ರೆಡಿಟ್ ಇನ್ಯಾರೋ ತೆಗೊಂಡಾಗ

ನಿಮ್ಮ ಸಹದ್ಯೋಗಿಗೆ ಪ್ರೆಸೆಂಟೇಶನ್ ವರ್ಕ್ ಇದ್ದಾಗ ನೀವು ಅವರಿಗೆ ದಿನಪೂರ್ತಿ ಸ್ಲೈಡ್ ಮಾಡಲು ಸಹಾಯ ಮಾಡಿರುತ್ತೀರಾ ಹಾಗೂ ಹೇಗೆ ಪ್ರೆಸಂಟೇಶನ್ ಹೇಗಿರಬೇಕು ಎಂದು ಸಲಹೆ ನೀಡಿರುತ್ತೀರಾ. ಆದ್ರೆ ಪ್ರೆಸಂಟೇಶನ್ ಸಕ್ಸಸ್ ಫುಲ್ ಆದಾಗ ಬಾಸ್ ನಿಮ್ಮ ಸಹದ್ಯೋಗಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದಾಗ ನಿಮ್ಮ ಸಹದ್ಯೋಗಿ ಎಲ್ಲಾ ಕ್ರೆಡಿಟ್ ತಾನೇ ತೆಗೆದುಕೊಂಡಾಗ ನಿಮಗೆ ಸ್ವಲ್ಪ ಅಸಮಾಧಾನ ಆಗಬಹುದು. ಆದ್ರೆ ಈ ಸಂದರ್ಭವನ್ನ ಹೇಗೆ ನಿಭಾಯಿಸಿದ್ರೆ ಚೆಂದ ಎಂದು ನಾವು ಹೇಳ್ತೇವೆ ಮುಂದಕ್ಕೆ ಓದಿ.

ಮೀಟಿಂಗ್ ವೇಳೆ ನಿಮ್ಮ ಮಾತಿನ ಸರದಿ ಬಂದಾಗ ಆ ಪ್ರಾಜೆಕ್ಟ್ ಬಗ್ಗೆ ಮಾತನಾಡಿ. ಆ ಪ್ರಾಜೆಕ್ಟ್ ಗಾಗಿ ವರ್ಕ್ ಮಾಡುವಾಗ ನಿಜಕ್ಕೂ ಟೀಂ ಎಫರ್ಟ್ ಅಗತ್ಯ ಎಂದನಿಸುತ್ತದೆ ಎಂದು ತಿಳಿಸಿ ಇದರಿಂದ ಎಲ್ಲರಿಗೂ ತಾನಾಗಿಯೇ ತಿಳಿಯುತ್ತದೆ ನೀವು ಕೂಡಾ ಸಹಾಯ ಮಾಡಿದ್ದೀರಿ ಎಂದು. ಹಾಗೂ ನಿಮಗೆ ಈ ರೀತಿ ಪಬ್ಲಿಕ್ ಆಗಿ ಹೇಳಲು ಇಷ್ಟವಿಲ್ಲ ಎಂದಾದ್ರೆ, ನಿಮ್ಮ ಮ್ಯಾನೇಜರ್ ಫ್ರೀ ಇದ್ದಾಗ ಅವರ ಜತೆ ಮಾತನಾಡಿ ಹಾಗೂ ಆ ಪ್ರಾಜೆಕ್ಟ್ ಮಾಡಲು ನೀವು ಕೂಡಾ ಸಹಾಯ ಮಾಡಿದ್ದೀರಿ ಎಂದು ಕ್ಲಿಯರ್ ಮಾಡಿಸಿ.

 

ನಿಮಗೆ ಇಷ್ಟವಿಲ್ಲದ ಬಾಸ್ ಜತೆ ಲಿಫ್ಟ್‌ನಲ್ಲಿ ಸಿಕ್ಕಿ ಹಾಕಿಕೊಂಡಾಗ

ನಿಮಗೆ ಇಷ್ಟವಿಲ್ಲದ ಬಾಸ್ ಜತೆ ಲಿಫ್ಟ್‌ನಲ್ಲಿ ಸಿಕ್ಕಿ ಹಾಕಿಕೊಂಡಾಗ

ನೀವು ಓಡಿಕೊಂಡು ಲಿಫ್ಟ್ ಪಕ್ಕ ಬರುತ್ತೀರಾ. ಹಾಗೂ ಲಿಫ್ಟ್ ಬಾಗಿಲು ತೆರೆದಾದ ಅದರಲ್ಲಿ ಈಗಾಗಲೇ ನಿಮಗೆ ಇಷ್ಟವಿಲ್ಲದ ನಿಮ್ಮ ಬಾಸ್ ಇರುತ್ತಾರೆ. ಆದ್ರೆ ಲಿಫ್ಟ್ ಒಳಗೆ ನೀವು ಹೋಗಲೇ ಬೇಕು. ನೀವು ಹಾಗೂ ಬಾಸ್ ಇಬ್ಬರೇ ಇರುತ್ತೀರಾ ಈ ಟೈಂ ನಿಜಕ್ಕೂ ಸ್ವಲ್ಪ ಮುಜುಗರ ತರುವಂತದ್ದು. ಹಾಗಿದ್ರೆ ಈ ಟೈಂನಲ್ಲಿ ನೀವು ಹೇಗೆ ಬಚಾವ್ ಆಗಬೇಕೆಂದು ನಾವು ನಿಮಗೆ ತಿಳಿಸಿಕೊಡುತ್ತೇವೆ ಮುಂದಕ್ಕೆ ಓದಿ.

ಈ ಟೈಂನಲ್ಲಿ ನೀವು ಬಚಾವ್ ಆಗಲು ಮೊಬೈಲ್ ನೋಡಬಹುದು. ಆದ್ರೆ ಅದು ತಪ್ಪು. ಬಾಸ್ ಜತೆ ಲಿಫ್ಟ್ ನಲ್ಲಿ ಇದ್ದಾಗ ಯಾವುದೇ ಕಾರಣಕ್ಕೂ ಮೊಬೈಲ್ ನಲ್ಲಿ ಬ್ಯುಸಿಯಾಗಬೇಡಿ. ಹಾಗೆಯೇ ನಿಮ್ಮ ಬಾಸ್ ಇದ್ದಾರೆ ಎನ್ನುವುದನ್ನ ನಿರ್ಲಕ್ಷಿಸಬೇಡಿ ಕೂಡಾ. ಈ ವೇಳೆ ನಿಮ್ಮ ಬಾಸ್ ಜತೆ ಹವಾಮಾನ, ವೀಕೆಂಡ್ ಪ್ಲ್ಯಾನ್ ಹಾಗೂ ನಿಮ್ಮ ಹೊಸ ಕ್ಲೈಂಟ್ ಬಗ್ಗೆ ಮಾತು ಪ್ರಾರಂಭಿಸಿ.ಹಾಗೂ ಅಷ್ಟೇ ಅಲ್ಲ ಲಿಫ್ಟ್ ಎಂಟ್ರಿ ಆಗುವಾಗ ಬಾಸ್ ನೋಡಿದೊಡನೆ ಗುಡ್ ಮಾರ್ನಿಂಗ್ ಎಂದು ವಿಶ್ ಮಾಡಿ ಹಾಗೂ ಲಿಫ್ಟ್ ನಿಂದ ಹೊರಗೆ ಬರುವಾಗ ಗುಡ್ ಡೇ ಎಂದು ವಿಶ್ ಮಾಡಲು ಮರೆಯದಿರಿ

 

ಯಾವುದೇ ಮಾಹಿತಿ ನೀಡದೇ ಮೀಟಿಂಗ್ ಗೆ ಪ್ರೆಸಂಟ್ ಮಾಡಲು ಹೇಳಿದಾಗ

ಯಾವುದೇ ಮಾಹಿತಿ ನೀಡದೇ ಮೀಟಿಂಗ್ ಗೆ ಪ್ರೆಸಂಟ್ ಮಾಡಲು ಹೇಳಿದಾಗ

ನಿಮ್ಮ ನೆಕ್ಸ್ಟ್ ಪ್ರಾಜೆಕ್ಟ್ ಬಗ್ಗೆ ಮೀಟಿಂಗ್ ಕರೆದಿದ್ದು, ಈ ಬಗ್ಗೆ ನಿಮಗೆ ಮೊದಲೇ ತಿಳಿಸಲು ಬಾಸ್ ಮರೆತಿರಬಹುದು ಅಥವಾ ಎಲ್ಲರಿಗೂ ಈ-ಮೇಲ್ ಕಳಿಸಿದ್ದು, ನಿಮಗೆ ಮಿಸ್ ಆಗಿರಬಹುದು. ಆದ್ರೆ ಮೀಟಿಂಗ್ ವೇಳೆ ಪ್ರಾಜೆಕ್ಟ್ ಬಗ್ಗೆ ನಿಮಗೆ ಮಾತನಾಡಲು ತಿಳಿಸಿದಾಗ ನೀವು ಮುಜುಗರಕ್ಕೆ ಒಳಗಾಗಬಹುದು ಹಾಗೂ ಇಂತಹ ಸನ್ನಿವೇಶವನ್ನ ಹೇಗೆ ಹ್ಯಾಂಡಲ್ ಮಾಡಬೇಕೆಂದು ನಾವು ನಿಮಗೆ ತಿಳಿಸಿಕೊಡುತ್ತೇವೆ ಮುಂದಕ್ಕೆ ಓದಿ.

ಮೀಟಿಂಗ್‌ಗೆ ನೀವು ಕೂಡಾ ಹಾಜರಾಗಿ ಹಾಗೂ ನಿಮ್ಮ ಬಾಸ್ ಗೆ ಈ ಬಗ್ಗೆ ಮೊದಲೇ ತಿಳಿಸಿ. ಈ ಬಗ್ಗೆ ಯಾವುದೇ ಮಾಹಿತಿ ನನಗೆ ಸಿಕ್ಕಿರಲಲ್ಲಿ ಹಾಗೂ ಸಿಕ್ಕಿದ್ದರೆ ನಾನು ಚೆನ್ನಾಗಿ ತಯಾರು ಮಾಡಿಕೊಂಡು ಬರುತ್ತಿದ್ದೆ. ಮುಂದಿನ ದಿನಗಳಲ್ಲಿ ನಾನು ಪ್ರೆಸಂಟೇಶನ್ ಮಾಡುತ್ತೇನೆ ಎಂದು ತಿಳಿಸಿ.

 

ನಿಮ್ಮ ಬಾಯ್‌ಫ್ರೆಂಡ್ ನಿಮ್ಮ ಸಹದ್ಯೋಗಿಯಾಗಿದ್ದು ಅವರ ಜತೆ ಬ್ರೇಕಪ್ ಆದಾಗ

ನಿಮ್ಮ ಬಾಯ್‌ಫ್ರೆಂಡ್ ನಿಮ್ಮ ಸಹದ್ಯೋಗಿಯಾಗಿದ್ದು ಅವರ ಜತೆ ಬ್ರೇಕಪ್ ಆದಾಗ

ನಿಮ್ಮ ಬಾಯ್‌ಫ್ರೆಂಡ್ ಕೂಡಾ ನಿಮ್ಮದೇ ಆಫೀಸ್‌ನವರಾಗಿದ್ದು, ನಿಮ್ಮ ಪ್ರೀತಿ ವಿಚಾರ ಇಡೀ ಆಫೀಸ್‌ಗೆ ತಿಳಿದಿದ್ದು, ಯಾವತ್ತಾದ್ರೂ ನಿಮ್ಮ ಸಂಬಂಧ ಬ್ರೇಕಪ್ ಆದಾಗ ನಿಮಗೆ ಆಫೀಸ್‌ನಲ್ಲಿ ಓಡಾಡುವಾಗ ಮುಜುಗರ ಎನಿಸಬಹುದು. ಇಂತಹ ಟೈಂನ್ನ ಹೇಗೆ ಹ್ಯಾಂಡಲ್ ಮಾಡಬೇಕೆಂದು ನಾವು ನಿಮಗೆ ತಿಳಿಸಿಕೊಡುತ್ತೇವೆ.

ನಿಮ್ಮ ಲವ್‌ಸ್ಟೋರಿ ಬ್ರೇಕಪ್ ಆದಾಗ ಆ ಬಗ್ಗೆ ನೀವಾಗಿಯೇ ಆಫೀಸ್‌ನಲ್ಲಿ ಮಾತನಾಡಿ ಗಾಸಿಪ್ ಸೃಷ್ಟಿಸಬೇಡಿ. ಇಂತಹ ಸಂದರ್ಭ ಎದುರಾದ ನಿಮ್ಮ ಎಕ್ಸ್ ಬಗ್ಗೆ ಪಾಸಿಟೀವ್ ಆಗಿ ಮಾತನಾಡಿ ಹಾಗೂ ಯಾರಾದ್ರೂ ಆ ಬಗ್ಗೆ ಪ್ರಶ್ನಿಸಿದ್ರೆ ಟಾಪಿಕ್ ಚೇಂಜ್ ಮಾಡಲು ಪ್ರಯತ್ನಿಸಿ.

<strong>Most Read: ಬೆಸ್ಟ್ ಎಂಪ್ಲಾಯ್ ಅವಾರ್ಡ್ ಬಾಚಿಕೊಳ್ಳಲು ಇಲ್ಲಿದೆ ಟಿಪ್ಸ್</strong>Most Read: ಬೆಸ್ಟ್ ಎಂಪ್ಲಾಯ್ ಅವಾರ್ಡ್ ಬಾಚಿಕೊಳ್ಳಲು ಇಲ್ಲಿದೆ ಟಿಪ್ಸ್

For Quick Alerts
ALLOW NOTIFICATIONS  
For Daily Alerts

English summary
Awkward Situations happen to everyone at work place. But most People Do not know how to handle it. Thats why They will face the uncomfortable moment. So Here is some tips for how to handale the awkward situations at work place.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X