ಮಕ್ಕಳು ಓದಲ್ಲ ಅಂತ ಹೇಳುವ ಪೋಷಕರು ಹೀಗೆ ಮಾಡಿದರೆ ನೀವು ಖಂಡಿತಾ ಸಕ್ಸಸ್

ಇದೀಗ ತಾನೆ ಬೇಸಿಗೆ ರಜೆ ಮುಗಿದು ತರಗತಿಗಳು ಮತ್ತೆ ಪ್ರಾರಂಭವಾಗಿವೆ.ರಜೆಯಲ್ಲಿ ಮಜಾ ಮಾಡಿದ ಮಕ್ಕಳು ತಕ್ಷಣವೇ ಓದಲು ಪ್ರಾರಂಭಿಸು ಎಂದರೆ ಅದ್ಹೇಗೆ ಮಾತು ಕೇಳುತ್ತಾರೆ. ಅದಕ್ಕಾಗಿಯೇ ಪೋಷಕರು ನನ್ನ ಮಗ ಓದಲ್ಲ , ನನ್ನ ಮಗಳು ಟಿವಿ ನೋಡುತ್ತಾಳೆ ಅಂತ ಎಲ್ಲರೆದುರು ದೂರಲು ಪ್ರಾರಂಭಿಸುತ್ತಾರೆ. ಆದರೆ ಪೋಷಕರು ರಜೆ ಮುಗಿದ ಬಳಿಕ ಮಕ್ಕಳು ಯಥಾಸ್ಥಿತಿಗೆ ಬರಲು ಸ್ವಲ್ಪ ಸಮಯ ಹಿಡಿಯುತ್ತದೆ ಎನ್ನುವುದರ ಬಗೆಯೂ ಆಲೋಚಿಸಬೇಕು. ನಿಮ್ಮ ಮಕ್ಕಳು ಮತ್ತೆ ಓದಲು ಪ್ರಾರಂಭಿಸಲು ಹೇಗೆ ನೀವು ತಯಾರಿ ನಡೆಸಬೇಕು ಎನ್ನುವುದನ್ನು ನಾವಿಲ್ಲಿ ತಿಳಿಸಲಿದ್ದೇವೆ.

ಮಕ್ಕಳು ಓದುವುದಿಲ್ಲ ಎಂದು ದೂಷಿಸುವ ಬದಲು ಹೀಗೆ ಮಾಡಿ

ದಿನನಿತ್ಯ ಕೆಲಸದ ಚಾರ್ಟ್ ಹಾಕಿ:

ಮಕ್ಕಳಿಗೆ ಓದು ಬರೆ ಅಂತ ಗದರಿಸುವ ಬದಲು ಮಕ್ಕಳಿಗೆ ರಜೆ ಮುಗಿದಿರುವುದರಿಂದ ದಿನನಿತ್ಯದ ಟೈಂ ಟೇಬರ್ ಹಾಕಿ ಅದರಂತೆಯೇ ಮಗುವಿಗೆ ಸಮಯ ಪಾಲನೆ ಮಾಡುವುದನ್ನು ತಿಳಿಸಿಕೊಡಿ. ಇದರಿಂದ ತಕ್ಷಣವೇ ಮಕ್ಕಳಲ್ಲಿ ಬದಲಾವಣೆ ಕಾಣದಿದ್ದರೂ ನಿಧಾನಗತಿಯಲ್ಲಿ ಅವರಲ್ಲಿ ಬದಲಾವಣೆಯನ್ನು ಕಾಣಬಹುದು. ಪ್ರತಿಯೊಂದು ಕೆಲಸಕ್ಕೂ ಸಯಮ ನಿರ್ವಹಣೆಯ ಚಾರ್ಟ್ ಹಾಕಿದಾಗ ಅದರಂತೆ ಪಾಲಿಸುವ ಮೂಲಕ ಮಕ್ಕಳು ಓದಿನಲ್ಲಿ ತೊಡಗಿಕೊಳ್ಳುತ್ತಾರೆ.

ಓದಲು ಉತ್ತಮ ಸ್ಥಳವನ್ನು ಕ್ರಿಯೇಟ್ ಮಾಡಿ:

ಮಕ್ಕಳಿಗೆ ಯಾವುದೋ ಒಂದು ಮೂಲೆಯಲ್ಲಿ ಕುಳಿತು ಓದಿ ಎಂದರೆ ಮಾತು ಕೇಳುವುದಿಲ್ಲ ಹಾಗಾಗಿ ಅವರಿಗಾಗಿ ಒಂದು ವಿಭಿನ್ನ ಮತ್ತು ಕಣ್ಣಿಗೆ ಸುಂದರವಾಗಿರುವ ಹಾಗೂ ಖುಷಿಯಾಗಿ ಕುಳಿತು ಓದುವಂತಹ ಸ್ಥಳವನ್ನು ಮಕ್ಕಳಿಗಾಗಿ ನಿರ್ಮಿಸಿ ಆಗ ಮಗುವಿಗೂ ಓದಿನ ಬಗೆಗೆ ಗಮನ ತೋರಲು ಸಹಾಯವಾಗಬಹುದು.

ಯಾವುದೇ ಇಲೆಕ್ಟ್ರಾನಿಕ್ ವಸ್ತುಗಳ ಬಳಕೆ ಸ್ಟಾಪ್ ಮಾಡಿ:

ಮಗುವಿನ ವಿದ್ಯಾಭ್ಯಾಸ ಸಮಯದಲ್ಲಿ ಯಾವುದೇ ರೀತಿಯ ಇಲೆಕ್ಟ್ರಾನಿಕ್ ವಸ್ತುಗಳ ಬಳಕೆಯನ್ನು ಸ್ಟಾಪ್ ಮಾಡಿ. ಏಕೆಂದರೆ ನೀವು ಅದನ್ನು ಬಳಸುವುದರಿಂದ ಮಗುವಿಗೆ ಮನಸ್ಸು ಡೈವರ್ಟ್ ಆಗುತ್ತದೆ. ಇದರಿಂದ ಮಗು ನಿಮ್ಮ ಮಾತನ್ನು ಕೇಳುವುದಿಲ್ಲ ಬದಲಿಗೆ ಓದಿನ ಕಡೆಗೆ ಆಲಸ್ಯ ತೋರುತ್ತಾರೆ. ಹಾಗಾಗಿ ಮಕ್ಕಳು ಓದುವ ಸಂದರ್ಭದಲ್ಲಿ ನೀವು ಕೂಡ ಅವರೊಂದಿಗೆ ಕುಳಿತು ಅವರ ಓದಿಗೆ ಸಹಾಯ ಮಾಡಿ ಅಗ ಮಕ್ಕಳು ನೀವು ಹೇಳಿದಂತೆಯೇ ಅಭ್ಯಾಸ ನಡೆಸುತ್ತಾರೆ.

ಮಕ್ಕಳ ಹೋಂ ವರ್ಕ್ ಮತ್ತು ಅಸೈನ್‌ಮೆಂಟ್‌ಗಳಲ್ಲಿ ನೀವೂ ಸಹಾಯ ಮಾಡಿ:

ಅನೇಕ ಮಕ್ಕಳು ಶಾಲೆಯಲ್ಲಿ ನೀಡಿರುವ ಹೋಂವರ್ಕ್ ಮತ್ತು ಅಸೈನ್‌ಮೆಂಟ್‌ಗಳನ್ನು ಮಾಡದೆಯೇ ಇರಲು ಕಾರಣ ಅವರಲ್ಲಿರುವ ಆಲಸ್ಯ ಹಾಗಾಗಿ ಪೋಷಕರು ಮಕ್ಕಳ ಬಗೆಗೆ ಗಮನವಹಿಸಿ ಅವರ ಹೋಂ ವರ್ಕ್‌ ಮತ್ತು ಅಸೈನ್‌ಮೆಂಟ್‌ಗಳ ಬಗೆಗೆ ನೀವೂ ಹೆಚ್ಚಿನ ಜವಾಬ್ದಾರಿ ತೋರಿದ್ದಲ್ಲಿ ಮಕ್ಕಳೂ ಕೂಡ ಖುಷಿಯಾಗಿ ಶಾಲೆಯ ವರ್ಕ್‌ಗಳನ್ನು ಮುಗಿಸಿ ಬಿಡುತ್ತಾರೆ.

ಆಹಾರ ಮತ್ತು ಆರೋಗ್ಯದ ಬಗೆಗೆ ಕಾಳಜಿ ವಹಿಸಿ:

ಮಕ್ಕಳು ಚೆನ್ನಾಗಿ ಓದಬೇಕೆಂದರೆ ಅವರ ಆರೋಗ್ಯ ಮತ್ತು ಆಹಾರ ಕೂಡ ಮುಖ್ಯವಾದದ್ದು ಹಾಗಾಗಿ ಈ ಬಗೆಗೆ ಪೋಷಕರು ಹೆಚ್ಚು ಕಾಳಜಿ ವಹಿಸಿ. ಆಗ ಮಕ್ಕಳಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ ಹಾಗೆಯೇ ಓದಿಗೆ ಯಾವುದೇ ರೀತಿಯ ಅಡ್ಡಿಗಳು ಆಗುವುದಿಲ್ಲ.

ಮಕ್ಕಳಿಗೆ ಮನೋರಂಜನೆಗೆ ಒತ್ತು ನೀಡಿ:

ಸದಾ ಓದು ಓದು ಎಂದು ಮಕ್ಕಳನ್ನು ಬ್ಯುಸಿ ಮಾಡಬೇಡಿ ದಿನದಲ್ಲಿ ಒಂದೆರಡು ತಾಸು ಅವರಿಗೆ ಇಷ್ಟವಾಗುವ ಆಟಗಳನ್ನು ಆಡಲು ಮತ್ತು ಅವರಿಗಿರುವ ಹವ್ಯಾಸಗಳಲ್ಲಿ ಎಂಗೇಜ್ ಆಗಲು ಸಮಯ ಕೊಡಿ. ಇದರಿಂದ ಅವರ ವ್ಯಕ್ತಿತ್ವ ವಿಕಸನದ ಜೊತೆಗೆ ಮಾನಸಿಕವಾಗಿ ಸದೃಢರಾಗುತ್ತಾರೆ. ನಂತರ ಓದಿನ ಸಮಯದಲ್ಲಿ ಮಕ್ಕಳು ಚುರುಕಿನಿಂದ ಓದಿ ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸವನ್ನು ನಡೆಸುತ್ತಾರೆ.

For Quick Alerts
ALLOW NOTIFICATIONS  
For Daily Alerts

English summary
Here we are sharing the important tips for parents to help their kids to improve in studies. Take a look
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X