ಲೇಡಿ ಬಾಸ್‌ನ್ನು ಹೇಗೆ ಓಲೈಸಿಕೊಳ್ಳುವುದು ಅಂತೀರಾ... ಜಸ್ಟ್ ಹೀಗೆ ಮಾಡಿ ನೋಡಿ

Posted By:

ಆಫೀಸನಲ್ಲಿ ಮಹಿಳಾ ಬಾಸ್ ಜತೆ ಹೇಗೆ ಕೆಲಸ ಮಾಡಬಹುದು ಎಂದು ಕಳೆದ ಬಾರಿ ತಿಳಿಸಿದ್ದೆವು. ಇದೀಗ ಮಹಿಳಾ ಬಾಸ್‌ನ್ನು ಹೇಗೆ ಓಲೈಸಿಕೊಳ್ಳಬಹುದು ಎಂದು ತಿಳಿಸುತ್ತೇವೆ ನೋಡಿ. ನೀಟ್ ಆಗಿ ಡ್ರೆಸ್ಸಿಂಗ್ ಮಾಡಿ, ಟೈಂ ಗೆ ಸರಿಯಾಗಿ ಆಪೀಸ್ ಗೆ ಹೋದ್ರೆ, ಸ್ಟೈಲೀಶ್ ಅಟ್ಯುಟುಡ್ ನಿಂದ ಎಲ್ಲರ ಜತೆ ಕಮ್ಯುನಿಕೇಟ್ ಮಾಡಿದ್ರೆ ಹಾಗೀ ಹೇಳಿದ ಟೈಂ ಒಳಗೆ ಕೆಲಸ ಮುಗಿಸಿದ್ರೆ ನಿಮ್ಮ ಮಹಿಳಾ ಬಾಸ್ ಖಂಡಿತ ನಿಮ್ಮನ್ನ ನೋಟೀಸ್ ಮಾಡಿಕೊಳ್ಳುತ್ತಾರೆ. ಆದ್ರೆ ಅಷ್ಟೇ ಅಲ್ಲದೇ ಈ ಕೆಳಗೆ ನೀಡಿರುವ ಕೆಲವು ಟಿಪ್ಸ್ ಗಳಿಂದ ನೀವು ಆಫೀಸನಲ್ಲಿ ನಿಮ್ಮ ಮಹಿಳಾ ಬಾಸ್‌ನ ಮನ ಓಲೈಸಬಹುದು.

ನಿಮಗೆ ಮಹಿಳಾ ಬಾಸ್ ಎಂದಾದ್ರೆ ನೀವು ದೇವರಿಗೆ ಥ್ಯಾಂಕ್ಸ್ ಹೇಳಬೇಕು. ಯಾಕೆಂದ್ರೆ ಮಹಿಳಾ ಬಾಸ್ ಕೈ ಕೆಳಗೆ ಕೆಲಸ ಮಾಡುವುದು ಪುರುಷ ಬಾಸ್ ಕೈ ಕೆಳಗೆ ಕೆಲಸ ಮಾಡುವದಕ್ಕಿಂತ ಹೆಚ್ಚು ಕಂರ್ಫಟೇಬಲ್ ಆಗಿರುತ್ತದೆ.ಮಹಿಳಾ ಬಾಸ್ ನಿಮಗೆ ಇದ್ದಾರೆ ಎಂದಾದ್ರೆ ಇದು ಯಶಸ್ಸಿನ ಮೊದಲ ಸ್ಟೆಪ್. ಆಫೀಸನಲ್ಲಿ ಮಹಿಳಾ ಬಾಸ್‌ನ ಮನ ಓಲೈಸುವುದು ಅಂದ್ರೆ ನೀವು ಡರ್ಟಿ ಆಗಿ ಯೋಚಿಸಬೇಡಿ ಬದಲಿಗೆ ಪ್ರೊಫೆಶನಲ್ ಆಗಿ ಯೋಚಿಸಿ.

ನಮಗೊತ್ತು ಫಿಮೇಲ್ ಬಾಸ್‌ನ್ನು ಮನ ಓಲೈಸುವುದು ಅಷ್ಟು ಸುಲಭದ ಕೆಲಸವಲ್ಲ. ನಿಜ ಹೇಳಬೇಕಂದ್ರೆ ಇದು ಅಸಾಧ್ಯವಾದ ಮಾತು. ಆದ್ರೂ ಎಸ್ ಇದು ಸಾಧ್ಯ ಎಂದು ನೀವು ಯೋಚಿಸುವುದಾದರೆ ಹೇಗೆ ಇಂಪ್ರೇಸ್ ಮಾಡಬೇಕು ಎಂದು ನಾವು ನಿಮಗೆ ಟಿಪ್ಸ್ ನೀಡುತ್ತೇವೆ ಮುಂದಕ್ಕೆ ಓದಿ.

ಆಕೆಯ ವರ್ಕ್ ಸ್ಟೈಲ್ ಅರ್ಥ ಮಾಡಿಕೊಳ್ಳಿ:

ಮೊದಲಿಗೆ ನೀವು ವರ್ಕ್ ಮಾಡುವ ಪ್ಲೇಸ್ ಬಗ್ಗೆ ಅರ್ಥ ಮಾಡಿಕೊಳ್ಳಿ. ನೆಕ್ಸ್ಟ್ ಸ್ಟೆಪ್ ನಿಮ್ಮ ಮಹಿಳಾ ಬಾಸ್ ವರ್ಕಿಂಗ್ ಸ್ಟೈಲ್ ಅರ್ಥ ಮಾಡಿಕೊಳ್ಳಿ. ಆಕೆಯ ಕೆಲಸವನ್ನ ಪರೀಕ್ಷಿಸಿಕೊಳ್ಳುವುದು ತುಂಬಾ ಇಂಪೋರ್ಟೆಂಟ್. ಇದು ನಿಮ್ಮ ಹಳೆಯ ವರ್ಕಿಂಗ್ ಸ್ಟೈಲ್ ಹಾಗೂ ನಿರೀಕ್ಷಿತ ವರ್ಕಿಂಗ್ ಸ್ಟೈಲ್ ಮಧ್ಯೆ ಒಂದು ಬ್ರಿಡ್ಜ್ ನಿರ್ಮಿಸುತ್ತದೆ. ಈ ಬಗ್ಗೆ ನಿಮಗೆ ಒಮ್ಮೆ ಐಡಿಯಾ ಸಿಕ್ಕರೆ ಸಾಕು ಮತ್ತೆ ನಿಮ್ಮ ಪರ್ಫೋಮೆನ್ಸ್ ತುಂಬಾ ಚೆನ್ನಾಗುತ್ತಾ ಹೋಗುತ್ತದೆ. ಹಾಗಾಗಿ ನಿಮ್ಮ ಮಹಿಳಾ ಬಾಸ್ ವರ್ಕಿಂಗ್ ಸ್ಟೈಲ್ ಅರ್ಥ ಮಾಡಿಕೊಳ್ಳುವುದು ಮೊದಲ ಟಿಪ್ಸ್ ಆಗಿದೆ.

ಮುಂದಿನ ಯೋಜನೆಗಳಿಗೆ ನೀವೇ ಉತ್ಸಾಹ ತೋರಿಸಿ:

ಕೆಲಸವನ್ನ ಚೆನ್ನಾಗಿ ಅರ್ಥ ಮಾಡಿಕೊಂಡರೆ ನೀವು ಚೆನ್ನಾಗಿ ಪರ್ಫೋಮ್ ಕೂಡಾ ಮಾಡಬಹುದು. ಹಾಗಾಗಿ ಹೊಸ ಪ್ರಾಜೆಕ್ಟ್ ಬಗ್ಗೆ ನೀವೇ ಉತ್ಸಾಹ ತೋರಿಸಿ ಜತೆಗೆ ಹೊಸ ಹೊಸ ಜವಬ್ದಾರಿಗಳನ್ನ ಹೊರಲು ಮುಂದಾಗಿ. ನೀವು ಮಹಿಳಾ ಬಾಸ್ ಮುಂದೆ ಹೊಸ ಹೊಸ ಪ್ರಾಜೆಕ್ಟ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕೂಡಾ ವ್ಯಕ್ತಪಡಿಸಬಹುದು. ಇದರಿಂದ ಅವರ ಗಮನ ನಿಮ್ಮತ್ತ ಸೆಳೆದುಕೊಳ್ಳಬಹುದು.

ಆಕೆಯ ಲೀಡರ್‌ಶಿಪ್ ಕ್ವಾಲಿಟಿ ಗೌರವಿಸಿ:

ಪ್ರತಿಯೊಬ್ಬ ಬಾಸ್ ಕೂಡಾ ಡಿಫರೆಂಟ್ ಆಗಿರುತ್ತಾರೆ ಅದರಲ್ಲಿ ಮಹಿಳಾ ಬಾಸ್ ಕೂಡಾ ವಿಶೇಷವಾಗಿ. ಹಾಗಾಗಿ ಆಕೆಯ ಲೀಡರ್ ಶಿಪ್ ಕ್ವಾಲಿಟಿಯನ್ನ ವಿವರಿಸಿಕೊಳ್ಳಿ, ಹಾಗೂ ಆಕೆಗೆ ಗೌರವ ನೀಡಿ. ಆಕೆಗೆ ಗೌರವ ನೀಡಿದ್ರೆ ಆಕೆ ನಿಮ್ಮನ್ನ ಪ್ರತಿ ಸಂಕಷ್ಟದ ಸಂದರ್ಭದಲ್ಲಿ ನಿಮ್ಮ ಸಪೋರ್ಟ್ ಗೆ ಬರುವಳು. ಉದಾಹರಣೆ ನಿಮಗೆ ಒಂದು ಕೆಲಸ ನೀಡಿ ಡೆಡ್ ಲೈನ್ ಕೂಡಾ ನೀಡಿದ್ರು ಅಂದುಕೊಳ್ಳಿ. ಆದ್ರೆ ಆ ಡೆಡ್ ಲೈನ್ ಮುಗಿಯೋ ಒಳಗೆ ನಿಮ್ಮ ಕೆಲಸ ಮುಗಿದಿಲ್ಲ ಎಂದಾದ್ರೆ ಆಕೆ ನಿಮ್ಮ ಸಪೋರ್ಟ್ ಗೆ ಬಂದು ನಿಮ್ಮ ಕೆಲಸ ಮುಗಿಸಲು ಸಹಾಯ ಮಾಡುವಳು. ಹಾಗಾಗಿ ಆಕೆಯನ್ನ ಗೌರವಿಸಿ ಅಷ್ಟೇ ಅಲ್ಲ ಇದು ಸಿಂಪಲ್ ಟ್ರಿಕ್ಸ್ ಕೂಡಾ

ಆಕೆಯನ್ನ ಹೊಗಳಿ:

ಮಹಿಳೆಯರಿಗೆ ಕಾಂಪ್ಲಿಮೆಂಟ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಿರುತ್ತದೆ. ನೀವು ನಿಮ್ಮ ಮಹಿಳಾ ಬಾಸ್ ಗೆ ಕಾಂಪ್ಲಿಮೆಂಟ್ ನೀಡಿ. ಹಾಗೂ ಆಕೆಯ ಮುಂದೆ ಯಾವಾಗಲೂ ಗುಡ್ ಬಾಯ್ ಆಗಿರಿ. ಇದರಿಂದ ಆಕೆಗೆ ನಿಮ್ಮ ಮೇಲೆ ನಂಬಿಕಸ್ಥ ಭಾವನೆ ಮೂಡುವುದು. ಹಾಗೂ ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯ ಕೂಡಾ ಆಕೆಗೆ ಮೂಡುತ್ತದೆ. ಹೀಗೆ ಮಾಡುವುದರಿಂದಲೂ ಮಹಿಳಾ ಬಾಸ್‌ ಗಳನ್ನ ಇಂಪ್ರೇಸ್ ಮಾಡಬಹುದು

ಪುರುಷ ಬಾಸ್ ಜತೆ ಮಾತನಾಡುವ ತರಹ ಆಕೆಯ ಜತೆಯೂ ಮಾತನಾಡಿ:

ಹೌದು ಬಾಸ್ ಅಂದ್ರೆ ಬಾಸ್. ಆಕೆ ಪುರುಷ ಆಗಿದ್ದರೂ ಇಲ್ಲ ಆಕೆ ಮಹಿಳೆಯಾಗಿದ್ದರೂ ಬಾಸ್ ಅಷ್ಟೇ. ನೀವು ಪುರುಷ ಬಾಸ್‌ ಗೆ ಹೆಚ್ಚು ಗೌರವ ನೀಡುತ್ತಿದ್ದಿರ ಬಹುದು, ಅಂತೆಯೇ ಮಹಿಳಾ ಬಾಸ್ ಅಂದ್ರೆ ಏನೋ ಕೇರ್‌ಲೆಸ್ ಭಾವನೆ ನಿಮ್ಮ ಲ್ಲಿ ಮೂಡಬಾರದು. ನೀವು ಆಕೆಯ ಜತೆಯೂ ಅದೇ ಗೌರವದಿಂದ ಇರಬೇಕು. ಹೀಗೆ ಮಾಡುವುದರಿಂದ ನೀವು ಮಹಿಳೆ ಹಾಗೂ ಪುರುಷ ಮಧ್ಯೆ ಯಾವುದೇ ಭೇದಭಾವ ಮಾಡಲ್ಲ ಎಂಬ ಭಾವನೆ ನಿಮ್ಮ ಮಹಿಳಾ ಬಾಸ್‌ ಮನಸ್ಸಲ್ಲಿ ಮೂಡುತ್ತದೆ. ನೀವು ಸಮಾನತೆ ನೀಡುವ ಸ್ವಭಾವ ಎಂದು ಆಕೆಗೆ ಅನಿಸುತ್ತದೆ. ಹೀಗೆ ಮಾಡುವುದರಿಂದ ನೀವು ಆಕೆಯನ್ನ ಶೀಘ್ರವಾಗಿ ಓಲೈಸಿಕೊಳ್ಳಬಹುದು.

ಇವಿಷ್ಟನ್ನ ಮಾಡಿದ್ರೆ ಸಾಕು ನೀವು ಸುಲಭವಾಗಿ ಮಹಿಳಾ ಬಾಸನ್ನ ಇಂಪ್ರೇಸ್ ಮಾಡಬಹುದು

English summary
wearing a decent clothes, having a stylish attitude this is not inough to impress a lady boss.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia