ಬೆಸ್ಟ್ ರಿಪೋರ್ಟರ್ ಆಗಬೇಕಾದ್ರೆ ಏನು ಮಾಡಬೇಕು ಗೊತ್ತಾ?

Posted By:

ರಿಪೋರ್ಟರ್ ಆಗಬೇಕೆಂದು ತುಂಬಾ ಮಂದಿ ಬಯಸುತ್ತಾರೆ. ರಿಪೋರ್ಟಿಂಗ್ ಕೆರಿಯರ್ ಸ್ಟಾರ್ಟ್ ಆಗುವಾಗ ನಿಮ್ಮ ಟೈಂ ಹನಿಮೂನ್ ಟೈಂ ತರಹ ಇರುತ್ತದೆ. ಟ್ರೈನೀ ರಿಪೋರ್ಟರ್ ನಿಂದ ಫುಲ್ ಟೈಂ ರಿಪೋರ್ಟರ್ ಆಗಿ ಮಿಂಚುವುದು ಹೇಗೆ ಎಂದು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಮೊದಲಿಗೆ ನೀವೇ ಒಂದು ಟ್ರಿಕ್ಸ್ ರೆಡಿಮಾಡಿಕೊಳ್ಳಿ. ನೀವು ಅದೃಷ್ಟವಂತರಾಗಿದ್ದರೆ ನಿಮಗೆ ಈ ಫೀಲ್ಡ್ ನಲ್ಲಿ ಬೆಸ್ಟ್ ಗೈಡ್ ಸಿಗುವರು. ಸಿಕ್ಕಿಲ್ವಾ ಹಾಗಿದ್ರೆ ನೋ ವರಿ ನಿಮಗೆ ಗೈಡ್ ಮಾಡಲು ಕೆರಿಯರ್ ಇಂಡಿಯಾ ಇದೆ. ನಾವು ನೀಡುವ ಸ್ಟೆಪ್ಸ್ ಫಾಲೋ ಮಾಡಿ ಸಾಕು.

ಪ್ರೊಫೆಶನಲ್ ನೆಟ್‌ವರ್ಕ್ ಕ್ರಿಯೆಟ್ ಮಾಡಿ:

ನಿಮ್ಮ ಶತ್ರುಗಳನ್ನ ಕೂಡಾ ಸ್ನೇಹಿತರನ್ನಾಗಿ ಮಾಡಿಕೊಳ್ಳಿ. ಅಂದ್ರೆ ಮಿಡಿಯಾ ಫೀಲ್ಡ್ ನಲ್ಲಿ ಚ್ಯಾನೆಲ್ ಇಲ್ಲ ನ್ಯೂಸ್ ಪೇಪರ್‌ಗಳು ಪರಸ್ಪರ ಕಾಂಪಿಟೇಶನ್ ಮೇಲೆ ಕೆಲಸ ಮಾಡುತ್ತದೆ. ಹಾಗಾಗಿ ಹೇಗೆ ಫ್ರೆಂಡ್ ಶಿಪ್ ಸಾಧ್ಯ ಎಂದು ಅಂದುಕೊಳ್ತಿರಾ.. ಇತರ ರಿಪೋರ್ಟರಸ್ ಜತೆ ಸ್ನೇಹ ಮಾಡಿಕೊಂಡ್ರೆ ಅದು ನಿಮ್ಮ ಸಂಸ್ಥೆ ವೀಕ್‌ನೆಸ್ ಆಗುತ್ತೆ ಎಂದು ಅಂದುಕೊಳ್ಳಬೇಡಿ ಬದಲಿಗೆ ನಿಮ್ಮ ಸ್ಟ್ರೆಂತ್ ಹೆಚ್ಚಿಸುತ್ತದೆ.

ಇನ್ನು ಈ ಫೀಲ್ಡ್‌ನಲ್ಲಿ ಎರಡು ರೀತಿಯ ವಿಧವಿದೆ. ಒಂದು ನ್ಯೂಸ್ ರಿಪೋರ್ಟಿಂಗ್, ಹಾಗೂ ಮತ್ತೊಂದು ಸ್ಪೇಶಲ್ ಸ್ಟೋರಿ. ನ್ಯೂಸ್ ರಿಪೋರ್ಟೀಂಗ್ ಯಾರು ಬೇಕಾದ್ರು ಮಾಡಬಹುದು. ಹಾಗೂ ಇತರರಿಂದ ಬೇಕಾದ್ರೂ ಪಡೆದುಕೊಳ್ಳಬಹುದು. ಆದ್ರೆ ಸ್ಪೇಶಲ್ ಸ್ಟೋರಿ ಹಾಗಲ್ಲ. ನಿಮ್ಮ ಕ್ರಿಯೇಟಿವ್ ಮೈಂಡ್ ಬಳಸಿ ನೀವು ಸ್ಪೇಶಲ್ ಸ್ಟೋರಿ ಮಾಡಿಕೊಳ್ಳಬೇಕು.

ಫೀಲ್ಡ್‌ನಲ್ಲಿ ಅತೀ ಹೆಚ್ಚು ಮಾಹಿತಿ ಕಲೆ ಹಾಕಲು ಪ್ರಯತ್ನಿಸಿ:

ಹುತಾತ್ಮರೊಬ್ಬರ ಸುದ್ದಿ ಇದ್ದಾಗ ನಿವು ಖಂಡಿತ ಆ ಸುದ್ದಿ ಮಾಡಲೇ ಬೇಕು. ಆ ಟೈಂನಲ್ಲಿ ನೀವು ಅಲರ್ಟ್ ಕೂಡಾ ಆಗಿರಬೇಕು. ಸ್ಟೋರಿ ಐಡಿಯಾಕ್ಕಾಗಿ ಇತರ ಸುದ್ದಿಯನ್ನ ಒಮ್ಮೆ ಮೆಲುಕು ಹಾಕಿಕೊಳ್ಳಿ. ಇನ್ನೂ ಯಾರು ಮಾಡದೇ ಇರುವಂತಹ ವಿಷಯವನ್ನ ನೀವು ಹುಡುಕಲು ಯತ್ನಿಸಬೇಕು. ಏನಾದ್ರೂ ವಿಶೇಷತೆ, ನಿಗೂಢತೆ ಹಾಗೂ ರಹಸ್ಯ ವಿಚಾರವನ್ನ ಕಲೆಹಾಕಲು ಯತ್ನಿಸಿ

ಪ್ರತಿಯೊಂದು ವಿಷಯದ ಹಿಂದೆ ಒಂದಕ್ಕಿಂತ ಹೆಚ್ಚು ಕಥೆ ಅಡುಗಿರುತ್ತದೆ. ಹಾಗಾಗಿ ನೀವು ಬ್ರೈನ್ ಆಕ್ಟೀವ್ ಆಗಿ ಇಟ್ಟುಕೊಳ್ಳಬೇಕು. ಕ್ರಿಯಾಶೀಲತೆಯಿಂದ ವರ್ಕ್ ಮಾಡಬೇಕು

 

ಗೇಟ್‌ ಕೀಪರ್ ಸೇರಿದಂತೆ ಎಲ್ಲರ ಜತೆ ಸಂಪರ್ಕ:

ನೀವು ಯಾವಾಗ ಹೆಚ್ಚು ಹೆಚ್ಚು ಜನರ ಜತೆ ಸೇರುತ್ತೀರೋ ಆವಾಗ ಮಾತ್ರ ನಿಮಗೆ ಸ್ಟೋರಿ ಮಾಡಲು ಟಾಪಿಕ್ ಸಿಗುತ್ತದೆ. ಅಷ್ಟೇ ಅಲ್ಲ ನೀವು ಗೇಟ್ ಕೀಪರ್, ಅಂಗಡಿಯರು, ಸರ್ಕಾರಿ ಕಛೇರಿಗಳು, ಆಸ್ಪತ್ರೆಗಳು ಹಾಗೂ ಪೊಲೀಸ್ ಠಾಣೆ ಜತೆ ನಿಕಟ ಸಂಪರ್ಕದಲ್ಲಿದ್ದರೆ ನಿಮಗೆ ಬ್ರೇಕಿಂಗ್ ಸುದ್ದಿಗಳು ಮೊದಲು ಸಿಗುವ ಸಾಧ್ಯತೆ ಇರುತ್ತದೆ.

ತಂತ್ರಜ್ಞಾನ ಬಳಸಿ:

ಇನ್ನು ಸಾರ್ವಜನಿಕರ ಜತೆ ಹೇಗೆ ನಿಕಟ ಸಂಪರ್ಕದಲ್ಲಿ ಇರುತ್ತೀರೋ ಅದೇ ರೀತಿ ತಂತ್ರಜ್ಞಾನ ಬಳಕೆಯಲ್ಲೂ ಮುಂದಿರಿ. ರಿಪೋರ್ಟಿಂಗ್ ಫೀಲ್ಡ್ ನಲ್ಲಿ ತಂತ್ರಜ್ಞಾನಗಳ ಪವರ್ ಕೂಡಾ ಅಗತ್ಯ. ನೀವು ಆಗಾಗ ಸೋಶಲ್ ಮೀಡಿಯಾ, ಇತರ ವೆಬ್‌ಸೈಟ್ ಚೆಕ್ ಮಾಡುತ್ತಾ ಇರಬೇಕು. ಇದರಿಂದ ಕೂಡಾ ನಿಮಗೆ ಶೀಘ್ರವಾಗಿ ಸುದ್ದಿ ಸಿಗುವುದು.

ಅಷ್ಟೇ ಅಲ್ಲ ನೀವು ಮಾಡುವ ಆರ್ಟಿಕಲ್ ಪ್ರಮೋಶನ್ ಗೂ ಕೂಡಾ ನೀವು ಸೋಶಲ್ ಮೀಡಿಯಾ ಬಳಸಬಹುದು. ಹಾಗಾಗಿ ತಂತ್ರಜ್ಞಾನ ಮಾಹಿತಿ ಬಗ್ಗೆ ಮೊದಲು ತಿಳಿದುಕೊಳ್ಳಬೇಕು

 

ಪ್ರತಿದಿನ ಸುದ್ದಿ ಪತ್ರಿಕೆ ಓದಬೇಕು:

ಇಂಟರ್ ನೆಟ್ ನ್ಯೂಸ್ ಬಿಟ್ಟು, ಪ್ರತಿದಿನ ಸುದ್ದಿ ಪತ್ರಿಕೆ ಓದಲು ಕೂಡಾ ನೀವು ಟೈಂ ನೀಡಬೇಕು. ಯಾಕೆಂದ್ರೆ ಸುದ್ದಿ ಪತ್ರಿಕೆಯಲ್ಲಿ ಯಾವುದೇ ಸುದ್ದಿಯಾದ್ರೂ ಅದರ ಬಗ್ಗೆ ಆಳವಾದ ಮಾಹಿತಿ ನೀಡಲಾಗುತ್ತದೆ. ಪ್ರತಿದಿನ ನ್ಯೂಸ್ ಪೇಪರ್ ಓದುದರಿಂದ ನಿಮ್ಮ ಜ್ಞಾನ ಕೂಡಾ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ ನಿಮಗೂ ಸ್ಟೋರಿ ಮಾಡಲು ಕೆಲವು ಐಡಿಯಾ ಕೂಡಾ ಸಿಗುತ್ತದೆ

ಹಿರಿಯ ವರದಿಗಾರರ ಸಹಾಯ ಪಡೆದುಕೊಳ್ಳಿ:

ಇನ್ನು ಮೀಡಿಯಾ ಫೀಲ್ಡ್ ಗೆ ನೀವು ಹೊಸಬರಾಗಿದ್ದರೆ ನಿವು ಹಿರಿಯ ವರದಿಗಾರರ ಸಲಹೆ ಪಡೆದುಕೊಳ್ಳಿ.ಅವರಿಂದ ಯಾವ ರೀತಿ ಸ್ಟೋರೀಸ್ ಮಾಡಬಹುದು ಎಂದು ಐಡಿಯಾ ಪಡೆದುಕೊಳ್ಳಿ. ಕೆಲವೊಮ್ಮೆ ಸೀನಿಯರ್ಸ ಸಹಾಯ ಮಾಡಲು ಮುಂದೆ ಬಾರದೇ ಇರಬಹುದು. ಕಾರಣ ಅವರು ಅವರ ಕೆಲಸದ ಒತ್ತಡದಲ್ಲಿ ಇರಬಹುದು ಇಲ್ಲ ಕೆಲವರ ಸ್ವಭಾವ ಹಾಗೆಯೇ ಇರಬಹುದು. ಅಂತಹ ಟೈಂನಲ್ಲಿ ಮತ್ತೊಬ್ಬ
ಸೀನಿಯರ ಸಲಹೆ ಪಡೆಯಿರಿ.

ಒಬ್ಬರು ಸಹಾಯ ಮಾಡಿಲ್ಲ ಎಂದು ಸುಮ್ಮನೆ ಕೂರಬೇಡಿ ಇಲ್ಲ ನಾಚಿಕೆ ಪಟ್ಟು ಕೊಳ್ಳಬೇಡಿ. ಯಾವುದೇ ಅನುಮಾನಗಳಿದ್ರೂ ಇತರರ ಜತೆ ಕೇಳಿ ಪರಿಹರಿಸಿಕೊಳ್ಳಿ.

 

English summary
Most often, becoming a reporter itself is a dream come true for many. As the honeymoon period starts in your reporting career, make the best out of it as a cub reporter to make your transition from a trainee to a full-time employee smooth.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia