ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಹೇಗಿರಬೇಕು? ಇಲ್ಲಿದೆ ಟಿಪ್ಸ್

ಸ್ಪಧಾತ್ಮಕ ಪರೀಕ್ಷೆಗಳು ಅಂದರೆ ಅದು ಸಾಮಾನ್ಯವಾದ ಅಧ್ಯಯನವಲ್ಲ. ಇಲ್ಲಿ ಅಭ್ಯರ್ಥಿಗಳು ಹಲವಾರು ವಿಷಯಗಳ ಮೇಲೆ ಗಮನವಹಿಸಬೇಕಿರುತ್ತದೆ. ಇನ್ನೂ ಪರೀಕ್ಷೆಗೆ ಸಿದ್ಧತೆ ನಡೆಸಿದ ಅಭ್ಯರ್ಥಿಗಳು ಪರೀಕ್ಷೆಗಳು ಕೆಲವು ದಿನಗಳು ಬಾಕಿ ಇರುವಾಗ ಹೇಗೆ ಪುನರಾವರ್ತನೆ ಮಾಡಿದರೆ ಲಾಭ ಎಂದು ಕರಿಯರ್ ಇಂಡಿಯಾ ನಿಮಗೆ ಇಂದು ತಿಳಿಸಲಿದೆ ಮುಂದೆ ಓದಿ.

 

ಈ ಅಭ್ಯಾಸಗಳು ನಿಮ್ಮಲ್ಲಿದರೆ ನೀವು ಐಎಎಸ್‌ ಅಧಿಕಾರಿ ಆಗೋದು ಖಚಿತ

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಹೇಗಿರಬೇಕು? ಇಲ್ಲಿದೆ ಟಿಪ್ಸ್

ಪುನರಾವರ್ತನೆ ಅಧ್ಯಯನಕ್ಕೆ ಪ್ಲ್ಯಾನ್ ಮಾಡಿ:

ಪುನರಾವರ್ತನೆ ಅಧ್ಯಯನಕ್ಕೆ ಪ್ಲ್ಯಾನ್ ಮಾಡಿ:

ಪರೀಕ್ಷಾ ದಿನಗಳು ಹತ್ತಿರವಿದ್ದಾಗ ಸಂಪೂರ್ಣ ಪಠ್ಯಕ್ರಮವನ್ನು ಅಧ್ಯಯನ ಮಾಡುವುದು ತಪ್ಪು. ಏಕೆಂದರೆ ಗಡಿಬಿಡಿಯಲ್ಲಿ ಅಧ್ಯಯನ ಮಾಡಿದ ವಿಚಾರಗಳು ನೆನಪಿನಲ್ಲಿ ಜಾಸ್ತಿ ಸಮಯ ಉಳಿಯುವುದಿಲ್ಲ. ಹಾಗಾಗಿ ಅಭ್ಯರ್ಥಿಗಳು ಪರೀಕ್ಷಾ ದಿನಗಳು ಹತ್ತಿರ ವಿರುವಾಗ ಹೇಗೆ ಅಧ್ಯಯನ ಮಾಡಬೇಕು ಎಂದು ಪ್ಲ್ಯಾನ್ ಮಾಡಿ. ಅಧ್ಯಯನ ನಡೆಸಿದ ವಿಷಯಗಳನ್ನು ಪುನರಾವರ್ತನೆ ಮಾಡುವುದರ ಜೊತೆಗೆ ಯಾವುದೇ ಗೊಂದಲಗಳಿದ್ದಲ್ಲಿ ಬಗೆಹರಿಸಿಕೊಳ್ಳಿ. ಪುನರಾವರ್ತನೆ ಮಾಡುವುದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಕೂಡ ಹೆಚ್ಚುವುದು.

ಅಧ್ಯಯನ ಬೇಗ ಪ್ರಾರಂಭಿಸಿ:

ಅಧ್ಯಯನ ಬೇಗ ಪ್ರಾರಂಭಿಸಿ:

ಪರೀಕ್ಷೆಗೆ ಅಗತ್ಯವಿರುವ ಪಠ್ಯಕ್ರಮವನ್ನು ಸಂಪೂರ್ಣವಾಗಿ ಅಭ್ಯಸಿಸಿ ಪುನರಾವರ್ತನೆಯನ್ನು ಬೇಗ ಪ್ರಾರಂಭಿಸಿ. ಓದಿದನ್ನು ಮತ್ತೆ ಅಭ್ಯಸಿಸಿದಾಗ ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ. ಇದರಿಂದ ವಿಷಯ ಇನ್ನಷ್ಟು ತೀಕ್ಷ್ಣವಾಗಿ ಅರಿಯಲು ಸಹಾಯವಾಗುವುದು ಜೊತೆಗೆ ಎಲ್ಲಾ ವಿಷಯವನ್ನು ಮತ್ತೆ ಅಭ್ಯಸಿಸಿ ಪಕ್ವತೆಯನ್ನು ಕಾಣಬಹುದು.

ಮೊದಲು ನಿಮ್ಮನ್ನು ನೀವು ಅರಿಯಿರಿ:
 

ಮೊದಲು ನಿಮ್ಮನ್ನು ನೀವು ಅರಿಯಿರಿ:

ಒಬ್ಬರಂತೆ ಇನ್ನೊಬ್ಬರು ಇರಲು ಸಾಧ್ಯವಿಲ್ಲ ಅದೇ ರೀತಿಯಾಗಿ ಕಲಿಕೆಯ ವಿಷಯದಲ್ಲೂ ಕೂಡ. ಕೆಲವರು ಬಹು ಬೇಗ ಅರ್ಥ ಮಾಡಿಕೊಳ್ಳುತ್ತಾರೆ ಮತ್ತೆ ಇನ್ನೂ ಕೆಲವರು ನಿಧಾನವಾಗಿ ಕಲಿಯುತ್ತಾರೆ. ಒಬ್ಬೊಬ್ಬರ ಕಲಿಕೆಯ ರೀತಿ ವಿಭಿನ್ನವಾಗಿರುತ್ತದೆ. ಹಾಗಾಗಿ ನೀವು ನಿಮ್ಮ ಸಾಮರ್ಥ್ಯ ಮತ್ತು ದುರ್ಬಲಗಳನ್ನು ಅರಿಯುವ ಪ್ರಯತ್ನ ಮಾಡಿ. ಅದಕ್ಕೆ ತಕ್ಕಂತೆ ಓದುವ ಶೈಲಿಯನ್ನು ರೂಪಿಸಿಕೊಳ್ಳಿ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಪುನರಾವರ್ತನೆಗೆ ಹೆಚ್ಚು ಸಹಾಯವಾಗುವುದು.

ನಿಮ್ಮ ಇಷ್ಟದ ಸ್ಥಳದಲ್ಲಿ ಅಧ್ಯಯನ ಮಾಡಿ:

ನಿಮ್ಮ ಇಷ್ಟದ ಸ್ಥಳದಲ್ಲಿ ಅಧ್ಯಯನ ಮಾಡಿ:

ಪ್ರತಿಯೊಬ್ಬ ವ್ಯಕ್ತಿಯ ಕಲಿಯೂ ವಿಭಿನ್ನ ಹಾಗೆ ಹಲವರು ಹೇಳುವ ಹಾಗೆ ಅಧ್ಯಯನ ನಡೆಸಲು ಉತ್ತಮ ಜಾಗ ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎನ್ನುವ ಮಾತಿದೆ. ಹಾಗಾಗಿ ಅಭ್ಯರ್ಥಿಗಳು ಇನ್ನೊಬ್ಬರ ಸಲಹೆಯ ಸ್ವೀಕರಿಸುವುದರ ಜೊತೆಗೆ ಇನ್ನೊಬ್ಬರ ಸಲಹೆಯನ್ನು ಪಾಲಿಸುವ ಪ್ರಯತ್ನ ಮಾಡಿ. ಅಧ್ಯಯನ ನಡೆಸುವಾಗ ಉತ್ತಮ ಸ್ಥಳದಲ್ಲಿ ಕುಳಿತು ಸುತ್ತ ಮುತ್ತಲ ವಾತಾವರಣವನ್ನು ಸವಿಯುತ್ತಾ ಪುನರಾವರ್ತನೆ ಮಾಡಿ ಇದರಿಂದ ನಿಮ್ಮ ಅಧ್ಯಯನ ತುಂಬಾನೆ ಪರಿಣಾಮಕಾರಿಯಾಗಿರುತ್ತದೆ.

ಬದ್ಧತೆ ಮುಖ್ಯ:

ಬದ್ಧತೆ ಮುಖ್ಯ:

ಸ್ಪರ್ಧಾತ್ಮಕ ಪರೀಕ್ಷೆಗಳು ಎಂದ ಮೇಲೆ ಸಾಮಾನ್ಯ ಮಾತಲ್ಲ ಅಲ್ಲಿ ಹಲವಾರು ಅಭ್ಯರ್ಥಿಗಳೂ ಸ್ಪರ್ಧೆಯಲ್ಲಿರುತ್ತಾರೆ. ಹಾಗಾಗಿ ಈ ಪರೀಕ್ಷೆಗೆ ಸಿದ್ಧತೆ ನಡೆಸಲು ನಿಮ್ಮಲ್ಲಿ ಬದ್ಧತೆ ಮುಖ್ಯವಾಗಿರುತ್ತದೆ. ನಿಮ್ಮ ಗುರಿ ಸ್ಪಷ್ಟವಾಗಿರಲಿ ಅದಕ್ಕೆ ಬೇಕಾದ ಅಧ್ಯಯನ ಮಾಡಿ. ಪ್ರತಿನಿತ್ಯ ಹೇಗೆ ? ಎಷ್ಟು ಸಮಯ ಓದಬೇಕು ಎಂದು ಚಾರ್ಟ್ ಹಾಕಿಕೊಳ್ಳಿ. ಟೈಂ ಮ್ಯಾನೇಜ್ಮೆಂಟ್ ಮಾಡುವುದನ್ನು ಕಲಿಯಿರಿ. ವಿಷಯಗಳನ್ನು ಸ್ಪಷ್ಟವಾಗಿ ಅಧ್ಯಯನ ಮಾಡಿ ಇದರಿಂದ ನಿಮ್ಮ ಪರೀಕ್ಷಾ ಸಿದ್ಧತೆಗೆ ಸಂಪೂರ್ಣ ಅರ್ಥ ಸಿಗುವುದು.

ನಿರಂತರ ಅಭ್ಯಾಸ ಯಶಸ್ಸಿಗೆ ದಾರಿ:

ನಿರಂತರ ಅಭ್ಯಾಸ ಯಶಸ್ಸಿಗೆ ದಾರಿ:

ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪುನರಾವರ್ತನೆ ಮಾಡಿದರೆ ಸಾಲದು ಅದರ ಜೊತೆಗೆ ಸತತ ಅಭ್ಯಾಸ ಕೂಡ ಮುಖ್ಯ. ಒಂದು ವಿಷಯವನ್ನು ಒಂದು ಬಾರಿ ಅಥವಾ ಎರಡು ಬಾರಿ ಅಧ್ಯಯನ ಮಾಡುವ ಬದಲು ಸಮಯ ಸಿಕ್ಕರೆ ಹೆಚ್ಚು ಅಧ್ಯಯನ ನಡೆಸಿದಲ್ಲಿ ಅಧ್ಯಯನದಲ್ಲಿ ಇನ್ನಷ್ಟು ಪಕ್ವತೆಯನ್ನು ಕಾಣಬಹುದು. ಇದರಿಂದ ನಿಮ್ಮ ಆತ್ಮವಿಶ್ವಾಸ ಇಮ್ಮಡಿಗೊಳ್ಳುವುದರ ಜೊತೆಗೆ ಪರೀಕ್ಷೆಗೆ ಬೇಕಿರುವ ಅಭ್ಯಾಸ ಕೂಡ ಮಾಡಿದಂತಾಗುವುದು.

ಮಾಕ್ ಟೆಸ್ಟ್ ತೆಗೆದುಕೊಳ್ಳಿ:

ಮಾಕ್ ಟೆಸ್ಟ್ ತೆಗೆದುಕೊಳ್ಳಿ:

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚು ಕಾಂಪಿಟೇಶನ್ ಇರುವುದು ಸಾಮಾನ್ಯ ಸಂಗತಿ. ಆದರೆ ಪರೀಕ್ಷೆಗಳಿಗೆ ಹೆಚ್ಚು ಪುನರಾವರ್ತನೆಯನ್ನು ಮಾಡುವುದರ ಜೊತೆ ಜೊತೆಗೆ ಮಾಕ್ ಟೆಸ್ಟ್ ತೆಗೆದುಕೊಳ್ಳುವುದರಿಂದ ನಿಮಗೆ ಇನ್ನಷ್ಟು ಸಹಾಯವಾಗುವುದು. ನೀವು ಪರೀಕ್ಷೆಯಲ್ಲಿ ಎಲ್ಲಿ ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದೀರಿ ಮತ್ತು ಯಾವ ವಿಷಯಗಳಿಂದ ಹಿಂದೆ ಉಳಿಯುತ್ತಿದ್ದೀರಿ ಎಂದು ಕಂಡುಕೊಳ್ಳಬಹುದು. ಹೀಗೆ ಮಾಡುವುದರಿಂದ ನಿಮ್ಮ ಸರಿ ತಪ್ಪುಗಳನ್ನು ಅರ್ಥ ಮಾಡಿಕೊಂಡು ಅಧ್ಯಯನವನ್ನು ನಡೆಸಿ ನಿಮ್ಮ ಗುರಿಯನ್ನು ತಲುಪಬಹುದು.

ಇದಿಷ್ಟೂ ಸಲಹೆಗಳು ನಿಮ್ಮ ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನಕ್ಕೆ ಸಹಾಯವಾಗುವುದರ ಜೊತೆಗೆ ಈ ಲೇಖನ ನಿಮ್ಮ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚು ಮಾಡಿರುತ್ತದೆ ಎಂದು ಕರಿಯರ್ ಇಂಡಿಯಾ ಭಾವಿಸುತ್ತದೆ.

ಎಸ್‌ಎಸ್‌ಸಿ ಸಿಹೆಚ್‌ಎಸ್‌ಎಲ್‌ ಪರೀಕ್ಷೆಗೆ ಒಂದೇ ತಿಂಗಳಲ್ಲಿ ತಯಾರಿ ನಡೆಸುವುದು ಹೇಗೆ? ಇಲ್ಲಿದೆ ನೋಡಿ

For Quick Alerts
ALLOW NOTIFICATIONS  
For Daily Alerts

English summary
Here we are giving some tips and tricks to prepare for any competitive exams. Take a look.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X