ಕ್ಯಾಟ್ ಪರೀಕ್ಷೆ 2019ಕ್ಕೆ ತಯಾರಿ ಹೇಗೆ ? ಇಲ್ಲಿದೆ ಟಿಪ್ಸ್

ಕ್ಯಾಟ್ ಗೆ ಇನ್ನೇನೋ ಬರೀ ಎರಡು ತಿಂಗಳು ಬಾಕಿ, ಹಾಗಿರುವಾಗ ತಯಾರಿ ಹೇಗಿದ್ರೆ ನೀವು ಸುಲಭವಾಗಿ ಪರೀಕ್ಷೆ ಪಾಸುಮಾಡಬಹುದು ಎಂಬ ಟಿಪ್ಸ್ ಇಲ್ಲಿದೆ

By Kavya

2020 ನೇ ಸಾಲಿಗೆ ಐಐಎಂ ಸಂಸ್ಥೆಗಳಲ್ಲಿ ಎಂಬಿಎ ಕೋರ್ಸ್ ಪ್ರವೇಶಕ್ಕೆ ಸೇರಲು ಬಯಸುವವರು ಕ್ಯಾಟ್ ಪರೀಕ್ಷೆ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಈ ಪರೀಕ್ಷೆಯು ನವಂಬರ್ 24ರಂದು ನಡೆಯಲಿದ್ದು, ಈ ಪರೀಕ್ಷೆಗೆ ತಯಾರಿ ಹೇಗಿರಬೇಕು ? ಎನ್ನುವುದಕ್ಕೆ ಇಲ್ಲಿ ಸಲಹೆಯನ್ನು ನೀಡಲಾಗಿದೆ.

2019ರ ಕ್ಯಾಟ್ ಪರೀಕ್ಷೆಗೆ ತಯಾರಿ ಹೇಗೆ ? ಇಲ್ಲಿದೆ ಟಿಪ್ಸ್

ಈ ಪರೀಕ್ಷೆಗೆ ಅಭ್ಯರ್ಥಿಗಳು ಸೆಪ್ಟೆಂಬರ್ 18,2019ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈಗಾಗಲೇ ಪರೀಕ್ಷೆ ತಯಾರಿಗೆ ಕೌಂಟ್ ಡೌನ್ ಪ್ರಾರಂಭವಾಗಿದೆ. ಈ ಪರೀಕ್ಷೆಗೆ ಕಡಿಮೆ ಅಂದ್ರೂ 8 ತಿಂಗಳಿನಿಂದ ತಯಾರಿ ನಡೆಸಬೇಕು. ಅದ್ರೂ ಇನ್ನೇನೋ ಪರೀಕ್ಷೆಗೆ ಕೆಲವು ತಿಂಗಳು ಬಾಕಿ ಇದ್ದು, ಈ ಪರೀಕ್ಷೆಯನ್ನ ಹೇಗೆ ಸುಲಭವಾಗಿ ಪಾಸ್ ಮಾಡಬಹುದು ಎಂದು ಇಲ್ಲಿ ನಿಮಗೆ ಟಿಪ್ಸ್ ನೀಡಲಾಗಿದೆ.

ಪರೀಕ್ಷೆಗೆ ಬಗ್ಗೆ ತಿಳಿದುಕೊಂಡಿರಿ

ಪರೀಕ್ಷೆಗೆ ಬಗ್ಗೆ ತಿಳಿದುಕೊಂಡಿರಿ

ಹೌದು ಕ್ಯಾಟ್ ಪರೀಕ್ಷೆ ಬರೆಯುವ ಮುನ್ನ ಫಸ್ಟ್ ಈ ವಿಷಯ ನೀವು ತಿಳಿದುಕೊಳ್ಳಿ. ಮೊದಲಿಗೆ ಈ ಪರೀಕ್ಷೆ ಏನು ಎಂಬುವುದು ತಿಳಿದುಕೊಳ್ಳಿ. ಈ ಪರೀಕ್ಷೆಯ ಬಗ್ಗೆ ಮಾಹಿತಿ ಕಲೆ ಹಾಕಿಕೊಂಡು ಅರ್ಥ ಮಾಡಿಕೊಳ್ಳಿ. ಪರೀಕ್ಷೆ ಪ್ಯಾಟರ್ನ್ ಹಾಗೂ ಸೆಲಕ್ಷನ್ ವಿಧಾನದ ಬಗ್ಗೆ ಅರ್ಥಮಾಡಿಕೊಳ್ಳುವುದು ತುಂಬಾ ಅಗತ್ಯ.

ಕಾಲೇಜಿನಲ್ಲಿ ಕಲಿತಿರುವಂತದ್ದನ್ನ ನೆನಪು ಮಾಡಿಕೊಳ್ಳಿ

ಕಾಲೇಜಿನಲ್ಲಿ ಕಲಿತಿರುವಂತದ್ದನ್ನ ನೆನಪು ಮಾಡಿಕೊಳ್ಳಿ

ಇಂಗ್ಲೀಷ್ ಭಾಷೆ, ಮ್ಯಾಥಮ್ಯಾಟಿಕ್ಸ್ ಮತ್ತು ಲಾಜಿಕಲ್ ಯೋಚನೆಯ ಸಾಮರ್ಥ್ಯದ ಮೇಲೆ ಈ ಪರೀಕ್ಷೆ ನಡೆಯುತ್ತದೆ. ಹಾಗಾಗಿ ಈ ಪರೀಕ್ಷೆ ಬರೆಯುವ ಮುನ್ನ ನಿಮ್ಮ ನೋಟ್ಸ್ ನ ಜತೆ ಜತೆಗೆ ನೀವು ಕಾಲೇಜಿನಲ್ಲಿ ಕಲಿತಿರುವ ವಿಷಯವನ್ನ ಕೂಡಾ ಮೆಲುಕು ಹಾಕಿಕೊಳ್ಳುವುದು ತುಂಬಾ ಅಗತ್ಯ.

ಕಷ್ಟದ ಟಾಪಿಕ್ ನಿಂದ ಪ್ರಾರಂಭಿಸಿ
 

ಕಷ್ಟದ ಟಾಪಿಕ್ ನಿಂದ ಪ್ರಾರಂಭಿಸಿ

ಹೌದು ಇನ್ನೇನೋ ಕೆಲವೇ ಕೆಲವು ತಿಂಗಳುಗಳು ಮಾತ್ರ ಪರೀಕ್ಷೆಗೆ ಬಾಕಿ ಇವೆ. ಹಾಗಾಗಿ ಅಭ್ಯರ್ಥಿಗಳು ಪರೀಕ್ಷೆಯ ಬಗ್ಗೆ ಒಂದು ಸ್ಟಾಟಜಿ ತಯಾರು ಮಾಡಿಕೊಳ್ಳಿ. ಇನ್ನು ಕಷ್ಟದ ಟಾಪಿಕ್ ನಿಂದ ಸ್ಟಡಿ ಮಾಡಲು ಆರಂಭಿಸಿ. ಆಗ ಕೊನೆಯಲ್ಲಿ ಉಳಿಯುವ ಸಮಯದಲ್ಲಿ ಸುಲಭ ಟಾಪಿಕ್ ಸ್ಟಡಿ ಮಾಡಬಹುದು. ಇದರಿಂದ ವಿದ್ಯಾರ್ಥಿಗಳ ಕಾಂಫಿಡೆಂಟ್ ಮತ್ತಷ್ಟೂ ಹೆಚ್ಚುತ್ತದೆ.

ವಿವಿಧ ರೀತಿಯ ಪ್ರಶ್ನೆಗಳನ್ನ ಬಗೆಹರಿಸಿ

ವಿವಿಧ ರೀತಿಯ ಪ್ರಶ್ನೆಗಳನ್ನ ಬಗೆಹರಿಸಿ

ಹೌದು ಕ್ಯಾಟ್ ಪರೀಕ್ಷೆಯ ಪ್ರಶ್ನಾ ಪತ್ರಿಕೆ ಹೀಗೆಯೇ ಇರುತ್ತದೆ ಎಂದು ಯಾರೂ ಕೂಡಾ ಗೆಸ್ ಮಾಡಲು ಸಾಧ್ಯವಿಲ್ಲ. ಹಾಗಾಗಿ ಕೇವಲ ಪ್ರಮುಖ ಪ್ರಶ್ನೆಯತ್ತನೇ ಫೋಕಸ್ ಮಾಡದೇ ಎಲ್ಲಾ ವಿಧದ ಪ್ರಶ್ನೆಗಳನ್ನ ಕೂಡಾ ನೀವು ಅಭ್ಯಸಿಸುವುದು ಬೆಸ್ಟ್. ಹೀಗೆ ವಿಭಿನ್ನ ಪ್ರಶ್ನೆಗಳ ಉತ್ತರ ಕಂಡು ಹಿಡಿಯಲು ಪ್ರಯತ್ನಿಸುವುದರಿಂದ ಟೈಂ ಕೂಡಾ ಹೇಗೆ ಮ್ಯಾನೇಜ್‌ಮೆಂಟ್ ಮಾಡುವುದು ಎಂದು ತಿಳಿಯುತ್ತದೆ.

ವೀಕ್‌ನೆಸ್ ಫೀಲ್ಡ್‌ನತ್ತ ಕೆಲಸ ಮಾಡಿ

ವೀಕ್‌ನೆಸ್ ಫೀಲ್ಡ್‌ನತ್ತ ಕೆಲಸ ಮಾಡಿ

ಹೌದು ಕ್ಯಾಟ್ ಪರೀಕ್ಷೆ ಪಾಸು ಮಾಡಲು ಹಾರ್ಡ್ ವರ್ಕ್ ಮಾತ್ರವಿದ್ರೆ ಸಾಲದು, ಬದಲಿಗೆ ನಿಮ್ಮ ವೀಕ್‌ನೆಸ್ ಏನೆಂದು ತಿಳಿದು ಮೊದಲು ಅದನ್ನ ಸರಿಪಡಿಸಲು ಯತ್ನಿಸಿ. ನೀವು ಯಾವ ಕ್ಷೇತ್ರದಲ್ಲಿ ಹಿಂದೆ ಬಿದ್ದಿದ್ದೀರಾ ಎಂಬುವುದು ತಿಳಿದುಕೊಂಡು ಆ ಬಗ್ಗೆ ಮೊದಲು ಚಿಂತಿಸಿ. ಹಾಗಾಗಿ ಹಾರ್ಡ್ ವರ್ಕ್ ಜತೆ ಸ್ಮಾರ್ಟ್ ಆಗಿಯೂ ಕೂಡಾ ವರ್ಕ್ ಮಾಡಿದ್ರೆ ಬೆಸ್ಟ್

ಪ್ರಮುಖ ಟಾಪಿಕ್ ಗೆ ಹೆಚ್ಚಿನ ಟೈಂ ನೀಡಿ

ಪ್ರಮುಖ ಟಾಪಿಕ್ ಗೆ ಹೆಚ್ಚಿನ ಟೈಂ ನೀಡಿ

ಕ್ಯಾಟ್ ಮಾತ್ರವಲ್ಲದೇ ಯಾವುದೇ ಪ್ರಮುಖ ಪ್ರವೇಶಾತಿ ಪರೀಕ್ಷೆ ಇದ್ದಾಗ ಮೊದಲಿಗೆ ಏನು ಮಾಡಬೇಕು ಅಂದ್ರೆ ಪ್ರಮುಖ ಟಾಪಿಕ್ ಬಗ್ಗೆ ಗಮನಕೊಡಬೇಕು. ಇನ್ನು ಕ್ಯಾಟ್ ಪರೀಕ್ಷೆಯಲ್ಲಿ ಅತೀ ಹೆಚ್ಚಿನ ಪ್ರಮುಖ ಟಾಪಿಕ್ ಗಳು ಇರುತ್ತದೆ. ಸೆಕ್ಷನ್ ವೈಸ್ ಮಾಡಿ ಪ್ರಮುಖ ಟಾಪಿಕ್ ಮೊದಲು ಗುರುತಿಸಿಕೊಳ್ಳಿ. ಹಳೆಯ ಪ್ರಶ್ನಾಪತ್ರಿಕೆಯನ್ನ ಸ್ಟಡಿ ಮಾಡುವುದು ಕೂಡಾ ಬೆಸ್ಟ್.

ಸೆಕ್ಷನ್ ವೈಸ್ ತಯಾರಿ

ಸೆಕ್ಷನ್ ವೈಸ್ ತಯಾರಿ

ಇದೀಗ ಪರೀಕ್ಷೆ ತಯಾರಿಗೆ ಸಮಯ ತುಂಬಾ ಕಡಿಮೆ ಇದೆ. ಹಾಗಾಗಿ ಅಭ್ಯರ್ಥಿಗಳು ಸೆಕ್ಷನ್ ವೈಸ್ ಆಗಿ ಸ್ಟಡಿ ಮಾಡುವುದು ಬೆಸ್ಟ್. ಈ ವಿಧಾನ ಕೂಡಾ ಬೆಸ್ಟ್ ಸ್ಟಡಿ ಶಾರ್ಟ್ ಕಟ್ ಆಗಿ ವರ್ಕೌಟ್ ಆಗುವುದು.

ಪ್ರ್ಯಾಕ್ಟೀಸ್ ಮಾಡಲು ಯಾವತ್ತೂ ಮರೆಯಬೇಡಿ

ಪ್ರ್ಯಾಕ್ಟೀಸ್ ಮಾಡಲು ಯಾವತ್ತೂ ಮರೆಯಬೇಡಿ

ಕ್ಯಾಟ್ ನಂತಹ ಯಾವುದೇ ಪರೀಕ್ಷೆಗೂ ಪ್ರ್ಯಾಕ್ಟೀಸ್ ಮಾಡುವುದು ತುಂಬಾ ಅಗತ್ಯ ಹಾಗೂ ತುಂಬಾ ಪ್ರಮುಖ ಕೂಡಾ. ಕಾಂಸೆಪ್ಟ್ ಪಟ್ಟಿ ಮಾಡಿ ಕೂತುಕೊಂಡ್ರೆ ಏನು ಪ್ರಯೋಜನವಿಲ್ಲ ಬದಲಿಗೆ ಪ್ರ್ಯಾಕ್ಟೀಸ್ ಮಾಡಿಕೊಳ್ಳಬೇಕು ಅಷ್ಟೇ ಮುಖ್ಯ.

ಮಾಕ್ ಟೆಸ್ಟ್

ಮಾಕ್ ಟೆಸ್ಟ್

ಕ್ಯಾಟ್ ನಂತಹ ಪರೀಕ್ಷೆಗಳ ತಯಾರಿ ವೇಳೆ ಮಾಕ್ ಟೆಸ್ಟ್ ತುಂಬಾ ಅಗತ್ಯ. ಪರೀಕ್ಷೆಗೆ ಕೆಲವೇ ಕೆಲವು ದಿನಗಳು ಬಾಕಿ ಇರುವುದರಿಂದ ಮಾಕ್ ಟೆಸ್ಟ್ ಮಾಡಿಕೊಳ್ಳಿ ಎಂದು ನಾವು ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತೇವೆ.

For Quick Alerts
ALLOW NOTIFICATIONS  
For Daily Alerts

English summary
Here are the tips to prepare for the Common Admission Test (CAT) 2019 exam in few months.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X