How To Prepare For HR Interviews : ಹೆಚ್‌ಆರ್ ಜೊತೆ ಸಂದರ್ಶನಕ್ಕೆ ಹಾಜುರಾಗುವ ಮುನ್ನ ಸಿದ್ದತೆ ಹೀಗಿರಲಿ

ಸಂದರ್ಶನ ಎಂದರೆ ಸಾಕು ಅದೆಷ್ಟೋ ಜನರು ಇಂದಿಗೂ ಒಮ್ಮೆಲೆ ದಿಗ್ಭ್ರಮೆಗೊಳ್ಳುತ್ತಾರೆ. ಅಯ್ಯೋ ಸಂದರ್ಶನದಲ್ಲಿ ಏನೆಲ್ಲಾ ಕೇಳುತ್ತಾರೋ ಎಂಬ ಭಯಕ್ಕೆ ಒಳಗಾಗುತ್ತಾರೆ. ಆದರೆ ಸಂದರ್ಶನ ಎನ್ನುವುದು ಅಷ್ಟೊಂದು ಭಯಪಡುವಂತಹದ್ದಲ್ಲ ಬದಲಾಗಿ ಅದೊಂದು ಗಂಭೀರವಾದ ಪ್ರಕ್ರಿಯೆ. ಸಾಮಾನ್ಯವಾಗಿ ನೇಮಕಾತಿ ಪ್ರಕ್ರಿಯೆಗಳಲ್ಲಿ ಸಂದರ್ಶನ ಪ್ರಕ್ರಿಯೆಯು ಅಂತಿಮ ಹಂತವಾಗಿದೆ. ಒಬ್ಬ ವ್ಯಕ್ತಿಯು ತಾಂತ್ರಿಕ ಅಥವಾ ಕೌಶಲ್ಯ ಆಧಾರಿತ ಸುತ್ತುಗಳನ್ನು ತೆರವುಗೊಳಿಸಿದ ನಂತರ ಹೆಚ್‌ಆರ್ ಸುತ್ತಿಗೆ ಆಯ್ಕೆಯಾಗುತ್ತಾನೆ.

ಸಂದರ್ಶಕರೊಡನೆ ನಡೆಯುವ ಸಂದರ್ಶನಕ್ಕೆ ತಯಾರಿ ಹೀಗಿರಲಿ

ನೇಮಕಾತಿ ಪ್ರಕ್ರಿಯೆಗಳು ಅಭ್ಯರ್ಥಿಯ ತಾಂತ್ರಿಕ ಅಥವಾ ಕೌಶಲ್ಯ ಆಧಾರಿತ ಜ್ಞಾನವನ್ನು ಸೂಚಿಸುತ್ತವೆ. ದೂರವಾಣಿ ಚರ್ಚೆಗಳು, ವೈಯಕ್ತಿಕ ಸುತ್ತುಗಳು, ವೀಡಿಯೊ ಕಾನ್ಫರೆನ್ಸಿಂಗ್, ಲಿಖಿತ ಪರೀಕ್ಷೆ ಅಥವಾ ಆನ್‌ಲೈನ್ ಮೌಲ್ಯಮಾಪನಗಳು ಇತ್ಯಾದಿಗಳ ಮೂಲಕ ಈ ಪ್ರಕ್ರಿಯೆಗಳನ್ನು ನಡೆಸುವ ಸಾಧ್ಯತೆಗಳಿರುತ್ತವೆ. ತದನಂತರ ಸಂದರ್ಶಕರೊಂದಿಗೆ ನಡೆಯುವ ಸಂದರ್ಶನ ಸುತ್ತು ಪ್ರಮುಖವಾಗಿರುತ್ತದೆ ಏಕೆಂದರೆ ವ್ಯಕ್ತಿಯ ಸಾಮರ್ಥ್ಯಗಳು ಮತ್ತು ಹಿನ್ನೆಲೆಯನ್ನು ಅಳೆಯಲು ಹಾಗೂ ಉದ್ಯೋಗಕ್ಕೆ ಸೂಕ್ತವಾದ ವ್ಯಕ್ತಿಯನ್ನು ನೇಮಿಸಲು ಈ ಸುತ್ತಿನಲ್ಲಿ ನಿರ್ಣಯಿಸಲಾಗುತ್ತದೆ.

ಅಭ್ಯರ್ಥಿಯು ಮಾನವ ಸಂಪನ್ಮೂಲ ಸಂದರ್ಶನದ ನಿರ್ಣಾಯಕತೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದಕ್ಕೆ ತಕ್ಕಂತೆ ತಯಾರಿ ನಡೆಸುವುದು ಮುಖ್ಯವಾಗಿದೆ. ಅನೇಕ ಸಂಸ್ಥೆಗಳಲ್ಲಿ ಅಭ್ಯರ್ಥಿಯ ಆಯ್ಕೆ ಅಥವಾ ನಿರಾಕರಣೆಗೆ ಸಂಬಂಧಿಸಿದ ಅಂತಿಮ ನಿರ್ಧಾರವನ್ನು ಹೆಚ್‌ಆರ್/ಮಾನವ ಸಂಪನ್ಮೂಲ ವ್ಯಕ್ತಿಗಳು ತೆಗೆದುಕೊಳ್ಳಬಹುದು. ಅವರು ಅಭ್ಯರ್ಥಿಯ ಒಟ್ಟಾರೆ ವ್ಯಕ್ತಿತ್ವ, ಸ್ಥಿರತೆ ಅಂಶ, ಅವರು ಕಂಪನಿಗೆ ತರಬಹುದಾದ ಮೌಲ್ಯ ಇತ್ಯಾದಿಗಳನ್ನು ಅವಲೋಕಿಸಿ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ. ಹೀಗಾಗಿ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ತುಂಬಾನೆ ಜಾಗರೂಕತೆಯಿಂದ ತಯಾರಿ ನಡೆಸಬೇಕು. ಯಾವೆಲ್ಲಾ ರೀತಿಯಲ್ಲಿ ಸಂದರ್ಶನಕ್ಕೆ ತಯಾರಿ ನಡೆಸಬೇಕೆಂದು ಇಲ್ಲಿ ಸಲಹೆಗಳನ್ನು ನೀಡಲಾಗಿದೆ ಓದಿ ತಿಳಿಯಿರಿ.

1. ಧನಾತ್ಮಕ ವರ್ತನೆ :

1. ಧನಾತ್ಮಕ ವರ್ತನೆ :

ಯಾವುದೇ ಸಂದರ್ಶನಗಳಲ್ಲಿ ನೀವು ಉತ್ತೀರ್ಣರಾಗಲು ಸಕಾರಾತ್ಮಕ ಮನಸ್ಥಿತಿ ಅಂದರೆ ಧನಾತ್ಮಕ ವರ್ತನೆಗಳ ಅಗತ್ಯವಿದೆ. ಇದು ಮಾನವ ಸಂಪನ್ಮೂಲ ಸುತ್ತಿನಲ್ಲಿಯೂ ಸಹ ದೃಢವಾಗಿದೆ. ಸಕಾರಾತ್ಮಕ ಮನೋಭಾವವನ್ನು ಪ್ರದರ್ಶಿಸುವುದು ಮತ್ತು ಕಾಪಾಡಿಕೊಳ್ಳುವುದು ಒಂದು ಲಾಭದಾಯಕವಾದ ಸಂಗತಿ ಏಕೆಂದರೆ ಈ ಮೂಲಕ ನಿಮ್ಮಲ್ಲಿರುವ ಧನಾತ್ಮಕ ವ್ಯಕ್ತಿತ್ವ ಹೊರಗೆ ಪರಿಣಾಮ ಬೀರಲಿದೆ.

2. ಆತ್ಮವಿಶ್ವಾಸ :

2. ಆತ್ಮವಿಶ್ವಾಸ :

ಸಂದರ್ಶಕರೆದುರು ನೀವು ನಿಮ್ಮ ಮಾತುಗಾರಿಕೆ ಮತ್ತು ಸಾಮಾರ್ಥ್ಯವನ್ನು ತೋರಲು ಆತ್ಮವಿಶ್ವಾಸ ಹೆಚ್ಚು ಮುಖ್ಯ. ನಿಮ್ಮ ಆತ್ಮವಿಶ್ವಾಸವು ನಿಮ್ಮ ಮಾತು ಮತ್ತು ನಡವಳಿಕೆಯಲ್ಲಿ ಎದ್ದು ತೋರುತ್ತದೆ. ಹಾಗಾಗಿ ಅತಿ ಕಡಿಮೆ ಅಥವಾ ಅತಿ ಹೆಚ್ಚು ಅಲ್ಲದ ಉತ್ತಮ ಆತ್ಮವಿಶ್ವಾಸದಿಂದ ಸಂದರ್ಶನವನ್ನು ಎದುರಿಸಿ.

3. ಪ್ರಾಮಾಣಿಕತೆ :

3. ಪ್ರಾಮಾಣಿಕತೆ :

ಸಂದರ್ಶಕರೆದುರು ನೀವು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಪ್ರಾಮಾಣಿಕವಾಗಿರಬೇಕು. ಒಂದು ವೇಳೆ ನಿಮಗೆ ಉತ್ತರ ತಿಳಿದಿಲ್ಲದಿದ್ದರೆ ನಿಮ್ಮ ಜ್ಞಾನದ ಕೊರತೆಯನ್ನು ನೀವು ವ್ಯಕ್ತಪಡಿಸಬೇಕು. ಇದರಲ್ಲಿ ನಿಮ್ಮ ಪ್ರಾಮಾಣಿಕತೆಯ ಮಟ್ಟವನ್ನು ಸಂದರ್ಶಕರು ಸುಲಭವಾಗಿ ನಿರ್ಧರಿಸಬಲ್ಲರು.

4. ಸಂದರ್ಶನದ ಮೊದಲು ಕಂಪನಿಯ ಸಂಶೋಧನೆ :

4. ಸಂದರ್ಶನದ ಮೊದಲು ಕಂಪನಿಯ ಸಂಶೋಧನೆ :

ಯಾವುದೇ ಸಂದರ್ಶನಕ್ಕೆ ಹೋಗುವ ಮುನ್ನ ಕಂಪನಿಗೆ ಸಂಬಂಧಿಸಿದ ಪೂರ್ವ ಸಂಶೋಧನೆಯನ್ನು ಮಾಡುವುದು ಅಗತ್ಯ. ಕಂಪನಿಯ ಹಿನ್ನೆಲೆ, ಕಾರ್ಯಕ್ಷಮತೆ, ವಹಿವಾಟು, ಭವಿಷ್ಯದ ಯೋಜನೆಗಳು ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳುವುದು ಹೆಚ್ಚು ಉತ್ತಮ. ಆಗ ಮಾತ್ರ ನೀವು ಸಂದರ್ಶಕರೆದುರು ಹೆಚ್ಚು ಆತ್ಮವಿಶ್ವಾಸದಿಂದಿರಲು ಸಹಾಯವಾಗುತ್ತದೆ.

1. ನಿಮ್ಮ ಬಗ್ಗೆ ಹೇಳಿ :

1. ನಿಮ್ಮ ಬಗ್ಗೆ ಹೇಳಿ :

ಪ್ರತಿಯೊಂದು ಸಂದರ್ಶನಗಳಲ್ಲಿ ಸಾಮಾನ್ಯವಾಗಿ ಕೇಳಲಾಗುವ ಮೊದಲ ಪ್ರಶ್ನೆಯೇ ನಿಮ್ಮ ಬಗ್ಗೆ ಹೇಳಿ. ಸಂದರ್ಶಕರಿಗೆ ನಿಮ್ಮ ಆತ್ಮವಿಶ್ವಾಸ, ಆಲೋಚನೆ, ಸಂವಹನ ಮತ್ತು ಅಭಿವ್ಯಕ್ತಿ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ನಿಮ್ಮ ಉತ್ತರವು ತುಂಬಾನೆ ಸರಳವಾಗಿ ಹಾಗೂ ಆಕರ್ಷಕವಾಗಿರಬೇಕು. ಉತ್ತರದಲ್ಲಿ ನಿಮ್ಮ ಅರ್ಹತೆಗಳು, ಉದ್ಯೋಗ ಇತಿಹಾಸ ಮತ್ತು ಕೆಲಸಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ತಿಳಿಸಬೇಕು ಮತ್ತು ಕುಟುಂಬದ ಹಿನ್ನೆಲೆಯಂತಹ ವೈಯಕ್ತಿಕ ವಿವರಗಳು ಸಂಕ್ಷಿಪ್ತವಾಗಿರಬೇಕು.

2. ಸಾಮರ್ಥ್ಯಗಳು ಮತ್ತು ದೌರ್ಬಲ್ಯಗಳು :

2. ಸಾಮರ್ಥ್ಯಗಳು ಮತ್ತು ದೌರ್ಬಲ್ಯಗಳು :

ನಿಮ್ಮ ಮುಖ್ಯ ಸಾಮರ್ಥ್ಯಗಳಾದ ಧನಾತ್ಮಕ ವರ್ತನೆ, ನಿರಂತರತೆ, ಸ್ಥಿರವಾದ ವಿಧಾನ, ಆತ್ಮವಿಶ್ವಾಸ ಇತ್ಯಾದಿಗಳ ಬಗ್ಗೆ ನೀವು ಹೇಳಬಹುದು. ನಿಮ್ಮ ದೌರ್ಬಲ್ಯಗಳನ್ನು ಹೇಳುವಾಗ ಸಿಗುವ ಉದ್ಯೋಗಕ್ಕೆ ಕುತ್ತು ತರುವಂತೆ ಹೇಳಬಾರದು. ಅಲ್ಲದೆ ನೀವು ಪ್ರತಿಯೊಂದಕ್ಕೂ ಉದಾಹರಣೆಗಳನ್ನು ನೀಡಬಹುದು.

3. ನಿಮ್ಮ ಪ್ರಸ್ತುತ ಕೆಲಸವನ್ನು ಏಕೆ ಬಿಡಲು ನೀವು ಬಯಸುತ್ತೀರಿ? :

3. ನಿಮ್ಮ ಪ್ರಸ್ತುತ ಕೆಲಸವನ್ನು ಏಕೆ ಬಿಡಲು ನೀವು ಬಯಸುತ್ತೀರಿ? :

ನೀವು ಉದ್ಯೋಗ ಬದಲಾವಣೆಗಾಗಿ ಏಕೆ ಹುಡುಕುತ್ತಿದ್ದೀರಿ ಎಂಬ ನಿಖರವಾದ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಈ ಪ್ರಶ್ನೆಯನ್ನು ಕೇಳಲಾಗಿದೆ. ಪ್ರಸ್ತುತ ಕಂಪನಿಯೊಂದಿಗೆ ನಿಮ್ಮ ಒಟ್ಟು ಅಧಿಕಾರಾವಧಿಯನ್ನು ಅವಲಂಬಿಸಿ, ಈ ಪ್ರಶ್ನೆಗೆ ನಿಮ್ಮ ಉತ್ತರವನ್ನು ನಿರ್ಣಯಿಸಬಹುದು. ಉದಾಹರಣೆಗೆ ಅಧಿಕಾರಾವಧಿಯು ಹೆಚ್ಚು ಇಲ್ಲದಿದ್ದರೆ ತ್ವರಿತ ಉದ್ಯೋಗ ಬದಲಾವಣೆಗೆ ನೀವು ನಿಜವಾಗಿಯೂ ಮಾನ್ಯವಾದ ಕಾರಣವನ್ನು ಹೊಂದಿರಬೇಕು. ಅಧಿಕಾರಾವಧಿಯು ಹೆಚ್ಚಿದ್ದರೂ ಸಹ ಸಂದರ್ಶಕರು ನಿಮ್ಮ ಉದ್ಯೋಗದಾತರೊಂದಿಗೆ ನೀವು ಉತ್ತಮ ಅಥವಾ ಕೆಟ್ಟ ಉದ್ದೇಶಗಳನ್ನು ಹೊಂದಿದ್ದೀರಾ ಎಂದು ತಿಳಿಯಲು ಬಯಸುತ್ತಾರೆ.

ನೀವು ಕೆಲಸದಿಂದ, ಯಾವುದೇ ವ್ಯಕ್ತಿ/ವ್ಯಕ್ತಿಗಳು ಅಥವಾ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ನೀವು ನಿಮ್ಮ ಬೆಳವಣಿಗೆ ಮತ್ತು ಉತ್ತಮ ಸವಾಲುಗಳನ್ನು ಹುಡುಕುತ್ತಿದ್ದೀರಿ ಎಂದು ಪ್ರತಿಕ್ರಿಯಿಸುವ ಮೂಲಕ ನಿಮ್ಮ ಉತ್ತರವನ್ನು ಧನಾತ್ಮಕವಾಗಿ ರೂಪಿಸುವುದು ಮುಖ್ಯ. ಅಲ್ಲದೆ ನಿಮ್ಮ ಪ್ರಸ್ತುತ ಉದ್ಯೋಗದಾತರ ಬಗ್ಗೆ ನೀವು ಸಕಾರಾತ್ಮಕವಾಗಿ ಮಾತನಾಡಬೇಕು ಮತ್ತು ನಿಮ್ಮ ಪ್ರಸ್ತುತ ಕೆಲಸದ ಯಾವುದೇ ನಕಾರಾತ್ಮಕ ಅಂಶವನ್ನು ಹಂಚಿಕೊಳ್ಳುವುದರಿಂದ ದೂರವಿರಬೇಕು.

4. ಐದು ವರ್ಷಗಳ ಕೆಳಗೆ ನಿಮ್ಮನ್ನು ನೀವು ಎಲ್ಲಿ ನೋಡುತ್ತೀರಿ? :

4. ಐದು ವರ್ಷಗಳ ಕೆಳಗೆ ನಿಮ್ಮನ್ನು ನೀವು ಎಲ್ಲಿ ನೋಡುತ್ತೀರಿ? :

ಈ ಪ್ರಶ್ನೆಯ ಮೂಲಕ ಸಂದರ್ಶಕರು ನಿಮ್ಮ ವೃತ್ತಿ ಯೋಜನೆಯ ಬಗ್ಗೆ ಸರಿಯಾದ ನಿಲುವು ಇದೆಯೇ ಎಂದು ಖಚಿತಪಡಿಸಿಕೊಳ್ಳಲು ಬಯಸುತ್ತಾರೆ. ಒಂದು ವೇಳೆ ನೀವು ವೃತ್ತಿ ಯೋಜನೆಯಲ್ಲಿ ಆಕಾಂಕ್ಷೆ ಉಳ್ಳವರಾಗಿದ್ದರೆ ನಿಮ್ಮ ಉತ್ತರವು ಕಂಪನಿಯಲ್ಲಿ ಮುಂದುವರಿಯುವ ನಿಮ್ಮ ಯೋಜನೆಗಳ ಬಗ್ಗೆ ಉಲ್ಲೇಖಿಸಬೇಕು. ಈ ಪ್ರಶ್ನೆಗೆ ನಿಮ್ಮ ಉತ್ತರವು ನಿಮ್ಮ ಮಹತ್ವಾಕಾಂಕ್ಷೆಗಳು ಅಥವಾ ನೀವು ನಿಮಗಾಗಿ ನಿರ್ಧರಿಸಿದ ವೃತ್ತಿ ಮಾರ್ಗದ ಸ್ಪಷ್ಟ ಉಲ್ಲೇಖದೊಂದಿಗೆ ವಾಸ್ತವಿಕವಾಗಿರಬೇಕು.

5. ನಾವು ನಿಮ್ಮನ್ನು ಏಕೆ ನೇಮಿಸಿಕೊಳ್ಳಬೇಕು? :

5. ನಾವು ನಿಮ್ಮನ್ನು ಏಕೆ ನೇಮಿಸಿಕೊಳ್ಳಬೇಕು? :

ಉದ್ಯೋಗ ಸಿಗಬೇಕೆಂದರೆ ನೀವು ನಿಮ್ಮ ಹೆಚ್ಚು ವಿವರಿಸಬೇಕಾದ ಪ್ರಶ್ನೆ ಇದು. ನೀವು ಈ ಕೆಲಸಕ್ಕೆ ಏಕೆ ಯೋಗ್ಯರಾಗಿದ್ದೀರಿ ಮತ್ತು ನೀವು ಕಂಪನಿಗೆ ಹೇಗೆ ಪ್ರಯೋಜನವನ್ನು ನೀಡುತ್ತೀರಿ ಎಂಬುದರ ಕುರಿತು ಹೇಳಬೇಕು. ಸಂದರ್ಶಕರು ಈ ಮೂಲಕ ನೀವು ಉದ್ಯೋಗಕ್ಕೆ ಸೂಕ್ತವಾದವರು ಮತ್ತು ದೀರ್ಘಾವಧಿಯಲ್ಲಿ ಬದ್ಧರಾಗಿರುವವರು ಎಂದು ಖಚಿತಪಡಿಸಿಕೊಳ್ಳಲು ಬಯಸುತ್ತಾರೆ.

ಮೇಲೆ ತಿಳಿಸಿದ ಪ್ರಶ್ನೆಗಳ ಹೊರತಾಗಿ ನಿಮ್ಮ ಶೈಕ್ಷಣಿಕ ಅಥವಾ ಉದ್ಯೋಗದ ಸಮಯದಲ್ಲಿ ನೀವು ಪಡೆದಿರುವ ಯಾವುದೇ ಕಲಿಕೆ ಅಥವಾ ಸವಾಲಿನ ಅನುಭವಗಳಿಗೆ ಸಂಬಂಧಿಸಿದ ಇತರ ಪ್ರಶ್ನೆಗಳು ಇರಬಹುದು. ಸಂದರ್ಶನ ನಡೆಸುತ್ತಿರುವವರ ಕಂಪನಿಯ ಬಗ್ಗೆ ನಿಮ್ಮ ಜ್ಞಾನ, ಪ್ರಸ್ತುತ ಸಂಬಳ, ನಿರೀಕ್ಷಿತ ಸಂಬಳ, ಆಯ್ಕೆಯ ಸಂದರ್ಭದಲ್ಲಿ ಸೇರಲು ಬೇಕಾಗುವ ಸಮಯ ಇತ್ಯಾದಿಗಳ ಬಗ್ಗೆ ಸ್ಪಷ್ಟತೆ ಇರಬೇಕು. ಸಂದರ್ಶನಕ್ಕೆ ಹೋಗುವಾಗ ಚೆನ್ನಾಗಿ ಮತ್ತು ವೃತ್ತಿಪರವಾಗಿ ಕಾಣಿಸಿಕೊಳ್ಳುವುದು ಬಹಳ ಮುಖ್ಯ. ಇದಲ್ಲದೆ ನೀವು ಸ್ಪಷ್ಟವಾದ ಸಂವಹನವನ್ನು ಹೊಂದಿರಬೇಕು, ಸಂದರ್ಶನ ಸಮಯಕ್ಕೆ ಸರಿಯಾಗಿ ಹಾಜರಾಗಬೇಕು, ಉತ್ತಮ ಆಲಿಸುವ ಕೌಶಲ್ಯವನ್ನು ಕಾಪಾಡಿಕೊಳ್ಳಬೇಕು, ಅತಿಯಾಗಿ ಮಾತನಾಡುವುದರಲ್ಲಿ ಪಾಲ್ಗೊಳ್ಳಬೇಡಿ ಮತ್ತು ಸಾಂದರ್ಭಿಕ ಮನೋಭಾವವನ್ನು ತೋರಿಸಬೇಡಿ.

ಮಾನವ ಸಂಪನ್ಮೂಲ ಸಂದರ್ಶನಕ್ಕೆ ತಯಾರಿ ಮಾಡಲು ಸಹಾಯ ಮಾಡುವ ಪ್ರಮುಖ ಸಂಗತಿಗಳನ್ನು ಇಲ್ಲಿ ತಿಳಿಸಲಾಗಿದ್ದು, ಈ ಕುರಿತು ಹೆಚ್ಚು ಗಮನವಹಿಸಿ ತಯಾರಿ ನಡೆಸಿ ಮತ್ತು ಚೆನ್ನಾಗಿ ಅಭ್ಯಾಸ ಮಾಡುವುದು ಸೂಕ್ತ. ಈ ಸಲಹೆಗಳಿಂದ ನಿಮಗೆ ಮಾನವ ಸಂಪನ್ಮೂಲ ಸಂದರ್ಶಕರ ಮೇಲೆ ಹೆಚ್ಚು ಧನಾತ್ಮಕ ಪ್ರಭಾವ ಬೀರಲು ಸಹಾಯ ಮಾಡುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Here is the tips for candidates who are attending HR round interview.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X