ಕರ್ನಾಟಕ ಬ್ಯಾಂಕ್ ಕ್ಲರ್ಕ್ ಪರೀಕ್ಷೆಗೆ ಕೊನೆ ಕ್ಷಣದ ತಯಾರಿ ಹೇಗಿರಬೇಕು? ಇಲ್ಲಿದೆ ಟಿಪ್ಸ್

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ಕಟ್ಟಿಕೊಳ್ಳಬೇಕೆಂಬ ಕನಸುಳ್ಳ ಅಭ್ಯರ್ಥಿಗಳಿಗೆ ನನಸಾಗಿವಂತೆ ಕರ್ನಾಟಕ ಬ್ಯಾಂಕ್‌ ಜುಲೈನಲ್ಲಿ ಕ್ಲರ್ಕ್ ಹುದ್ದೆಗಳ ನೇಮಕಾತಿಯ ಪ್ರಕಟಣೆಯನ್ನು ಹೊರಡಿಸಿತ್ತು. ಅಂತೆಯೇ ಕರ್ನಾಟಕ ಬ್ಯಾಂಕ್ ಕ್ಲರ್ಕ್ ಹುದ್ದೆಗಳಿಗೆ ಆಸಕ್ತರಿಂದ ಜುಲೈ 20,2019ರೊಳಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. ಇದೀಗ ಆಗಸ್ಟ್ 3 ರಂದು ಆನ್‌ಲೈನ್ ಪರೀಕ್ಷೆಯು ನಡೆಯಲಿದ್ದು, ಪರೀಕ್ಷಾ ಪ್ರವೇಶ ಪತ್ರವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಪರೀಕ್ಷೆ ಇರುವ ಕೆಲವೇ ಕ್ಷಣಗಳಲ್ಲಿ ಹೇಗೆ ತಯಾರಿಯನ್ನು ನಡೆಸಬಹುದು ಎಂದು ಕರಿಯರ್ ಇಂಡಿಯಾ ನಿಮಗೆ ತಿಳಿಸಲಿದೆ.

ಕರ್ನಾಟಕ ಬ್ಯಾಂಕ್‌ ಕ್ಲರ್ಕ್ ಹುದ್ದೆಗಳ ಪರೀಕ್ಷಾ ತಯಾರಿಗೆ ಸಿಂಪಲ್ ಟಿಪ್ಸ್

ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಒಮ್ಮೆ ಅಧ್ಯಯನ ಮಾಡಿ:

ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಒಮ್ಮೆ ಅಧ್ಯಯನ ಮಾಡಿ:

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷೆಗೆ ಇರುವ ಕೊನೆಯ ಕ್ಷಣಗಳಲ್ಲಿ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಒಮ್ಮೆ ಅಧ್ಯಯನ ಮಾಡಿ.ಇದರಿಂದ ಪರೀಕ್ಷೆಗೆ ಇರುವ ಪಠ್ಯಕ್ರಮಗಳನ್ನು ಅಧ್ಯಯನ ಮಾಡಿದಂತಾಗುವುದರ ಜೊತೆಗೆ ಪ್ರಮುಖ ವಿಷಯಗಳು ಹೆಚ್ಚು ಸಮಯ ನೆನಪಿನಲ್ಲುಳಿಯಲು ಸಹಾಯವಾಗುವುದು.ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಪುನರಾವರ್ತಿತ ಪ್ರಶ್ನೆಗಳು ಬರುವುದರಿಂದ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಅಧ್ಯಯನ ಮಾಡುವುದರಿಂದ ನಿಮಗೆ ಆತ್ಮವಿಶ್ವಾಸ ಹೆಚ್ಚುವುದು.

 

ಪರೀಕ್ಷೆಗೆ ಸಂಬಂಧಪಟ್ಟ ಕೆಲವು ವೀಡಿಯೋಗಳನ್ನು ನೋಡಿ:

ಪರೀಕ್ಷೆಗೆ ಸಂಬಂಧಪಟ್ಟ ಕೆಲವು ವೀಡಿಯೋಗಳನ್ನು ನೋಡಿ:

ಪರೀಕ್ಷೆ ಹೇಗಿರುತ್ತದೆ? ಪರೀಕ್ಷೆಯನ್ನು ಹೇಗೆ ಎದುರಿಸಬೇಕು? ಪರೀಕ್ಷೆಗೆ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಮತ್ತು ಪರೀಕ್ಷೆಯಲ್ಲಿ ಪಾಸ್ ಆಗಲು ಯಾವೆಲ್ಲಾ ತಂತ್ರಗಳನ್ನು ಬಳಸಬಹುದು ಎನ್ನುವುದನ್ನು ತಿಳಿಯಲು ಕೆಲವು ಉಪಯುಕ್ತ ವೀಡಿಯೋಗಳನ್ನು ಅಂತರ್ಜಾಲದಲ್ಲಿ ವೀಕ್ಷಿಸಿ.

 

ಪರೀಕ್ಷೆಯನ್ನು ಹಂತ ಹಂತವಾಗಿ ಹೇಗೆ ಬರೆಯಬೇಕು ಎಂದು ಪ್ಲಾನ್ ಮಾಡಿ:
 

ಪರೀಕ್ಷೆಯನ್ನು ಹಂತ ಹಂತವಾಗಿ ಹೇಗೆ ಬರೆಯಬೇಕು ಎಂದು ಪ್ಲಾನ್ ಮಾಡಿ:

ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಿದ ನಂತರ ಪ್ರಶ್ನೆಗಳಿಗೆ ಉತ್ತರವನ್ನು ಬರೆಯುವ ಪ್ರಕ್ರಿಯೆಯನ್ನು ಹೇಗೆ ಪ್ರಾರಂಭಿಸಬೇಕು? ಹೇಗೆ ಉತ್ತರಿಸಬೇಕು ಮತ್ತು ನಿಗದಿತ ಸಮಯದೊಳಗೆ ಹೇಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆಯಬೇಕು ಎಂದು ಸರಿಯಾಗಿ ಪ್ಲಾನ್ ಮಾಡಿ.

 

ನೀವು ತಯಾರಿ ನಡೆಸಿದ ಮಾಕ್ ಟೆಸ್ಟ್‌ಗಳನ್ನು ಒಮ್ಮೆ ಅವಲೋಕಿಸಿ:

ನೀವು ತಯಾರಿ ನಡೆಸಿದ ಮಾಕ್ ಟೆಸ್ಟ್‌ಗಳನ್ನು ಒಮ್ಮೆ ಅವಲೋಕಿಸಿ:

ಪರೀಕ್ಷೆಗೆ ಹಾಜರಾಗುವ ಮುನ್ನ ನೀವು ಎದುರಿಸಿದ ಮಾಕ್‌ ಟೆಸ್ಸ್‌ಗಳನ್ನು ಒಮ್ಮೆ ಅವಲೋಕಿಸಿಕೊಳ್ಳಿ. ಮಾಕ್ ಟೆಸ್ಟ್‌ನಲ್ಲಿ ಯಾವ ರೀತಿಯ ಪ್ರಶ್ನೆಗಳನ್ನು ಕೇಳಲಾಗಿತ್ತು. ಒಂದೊಂದು ಪ್ರಶ್ನೆಗೆ ಎಷ್ಟು ಸಮಯವನ್ನು ಮೀಸಲಿಟ್ಟು ಉತ್ತರ ಬರೆದಿರಿ. ಸಮಯ ನಿರ್ವಹಣೆ ಮಾಡುವುದು ಹೇಗೆ? ಎನ್ನುವ ಪ್ರಮುಖ ಅಂಶಗಳನ್ನು ನೀವು ಈಗಾಗಲೆ ತಿಳಿದಿರುತ್ತೀರಿ. ಅವುಗಳನ್ನು ಒಮ್ಮೆ ನೆನಪು ಮಾಡಿಕೊಳ್ಳಿ.

 

ಯಾವುದೇ ಗೊಂದಲಗಳಿಗೆ ದಾರಿಮಾಡಿಕೊಳ್ಳದಿರಿ:

ಯಾವುದೇ ಗೊಂದಲಗಳಿಗೆ ದಾರಿಮಾಡಿಕೊಳ್ಳದಿರಿ:

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಯಾವುದೇ ರೀತಿಯ ಮಾನಸಿಕ ಅಡೆತಡೆಗಳನ್ನು ಹೊಂದಿರಬಾರದು ಮತ್ತು ಗೊಂದಲಗಳಿಗೆ ಒಳಗಾಗಬೇಕು. ಪರೀಕ್ಷೆಯ ಪಠ್ಯಕ್ರಮ ಮತ್ತು ಪರೀಕ್ಷಾ ಮಾದರಿ ನಿಮಗೆ ಈಗಾಗಲೆ ತಿಳಿದಿರುವುದರಿಂದ ಪರೀಕ್ಷೆಯನ್ನು ಶಾಂತ ಮನಸ್ಸಿನಿಂದ ನಿಗದಿತ ಸಮಯದೊಳಗೆ ಬರೆಯಲು ಸಿದ್ಧರಾಗಿ. ಪರೀಕ್ಷೆ ಬರೆಯುವಾಗ ಪರೀಕ್ಷಾ ಕೊಠಡಿ ವೀಕ್ಷಕರು ಹಾದು ಹೋಗುತ್ತಿರುವುದರಿಂದ ಗಾಬರಿಗೆ ಒಳಗಾಗುವುದು ಮತ್ತು ಗಮನವನ್ನು ಬೇರೆಡೆಗೆ ತೆಗೆದುಕೊಂಡು ಹೋಗುವ ಸಮಯ ವ್ಯರ್ಥ ಮಾಡುವ ಕೆಲಸಗಳನ್ನು ಮಾಡದಿರಿ.

 

ಯಾವುದೇ ಪ್ರಶ್ನೆಗೆ ಉತ್ತರಿಸುವಾಗ ಅತಿ ಹೆಚ್ಚು ಸಮಯವನ್ನು ವ್ಯಯ ಮಾಡಬೇಡಿ:

ಯಾವುದೇ ಪ್ರಶ್ನೆಗೆ ಉತ್ತರಿಸುವಾಗ ಅತಿ ಹೆಚ್ಚು ಸಮಯವನ್ನು ವ್ಯಯ ಮಾಡಬೇಡಿ:

ಎಷ್ಟೇ ತಯಾರಿ ನಡೆಸಿದ್ದರೂ ಕೂಡ ಅಭ್ಯರ್ಥಿಗಳು ಪರೀಕ್ಷಾ ಸಂದರ್ಭದಲ್ಲಿ ಕೆಲವು ಎಡವಟ್ಟುಗಳನ್ನು ಮಾಡುತ್ತಾರೆ. ಅದೇನೆಂದರೆ ಯಾವುದೋ ಒಂದು ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಎಂದು ಅದೇ ಪ್ರಶ್ನೆಗೆ ಹೆಚ್ಚು ಸಮಯವನ್ನು ವ್ಯಯ ಮಾಡುತ್ತಾರೆ. ಆದರೆ ಒಂದು ಪ್ರಶ್ನೆಗೆ ಅನಗತ್ಯ ಸಮಯವನ್ನು ವ್ಯಯಿಸುವ ಅಗತ್ಯವಿಲ್ಲ. ಸುಲಭ ಪ್ರಶ್ನೆಗಳಿಗೆ ಮೊದಲು ಉತ್ತರಿಸುತ್ತಾ ಹೋಗಿ ನಂತರ ಹೆಚ್ಚು ಸಮಯವನ್ನು ಪ್ರಶ್ನೆಗಳನ್ನು ಬಹು ಬೇಗ ಉತ್ತರಿಸುವ ಜಾಣತನವನ್ನು ಹೊಂದಿರುವುದು ಒಳಿತು.

 

ಪರೀಕ್ಷಾ ಹಿಂದಿನ ದಿನ ಆರೋಗ್ಯದ ಬಗೆಗೆ ಕಾಳಜಿ ವಹಿಸಿ:

ಪರೀಕ್ಷಾ ಹಿಂದಿನ ದಿನ ಆರೋಗ್ಯದ ಬಗೆಗೆ ಕಾಳಜಿ ವಹಿಸಿ:

ಅನೇಕರ ಆಲೋಚನೆಯೆಂದರೆ ಪರೀಕ್ಷೆಗಳೆಂದರೆ ಎಲ್ಲವನ್ನೂ ತ್ಯಜಿಸುವುದು ಎಂದು. ಆದರೆ ಅದು ತಪ್ಪು ಪರೀಕ್ಷೆಯನ್ನು ಉತ್ತಮವಾಗಿ ಬರೆಯಲು ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಎರಡೂ ಮುಖ್ಯ. ಹಾಗಾಗಿ ಉತ್ತಮ ಆಹಾರ ಸೇವನೆ ಮತ್ತು ನೀರನ್ನು ಚೆನ್ನಾಗಿ ಕುಡಿಯಿರಿ. ಇದರಿಂದ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಜೊತೆಗೆ ಪರೀಕ್ಷೆಯ ಹಿಂದಿನ ಚೆನ್ನಾಗಿ ನಿದ್ದೆ ಮಾಡಿ. ಪರೀಕ್ಷಾ ದಿನ ಶಾಂತ ಮನಸ್ಸಿನಿಂದ ಉತ್ತಮ ರೀತಿಯಲ್ಲಿ ಪರೀಕ್ಷೆಯನ್ನು ಎದುರಿಸಲು ಸಹಾಯವಾಗುವುದು.

 

For Quick Alerts
ALLOW NOTIFICATIONS  
For Daily Alerts

English summary
Here is some tips to aspirants who are attending karnataka bank clerk examination on 3rd august 2019
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X