ಫಸ್ಟ್ ಡೇ ಜಾಬ್ ತಯಾರಿ ಹೇಗಿರಬೇಕು ಗೊತ್ತಾ ?

ನಿಮ್ಮ ಮೊದಲ ಜಾಬ್ ಗೆ ಹೇಗೆ ತಯಾರು ಮಾಡಿಕೊಳ್ಳಬೇಕೆಂದು ಇಲ್ಲಿ ನಿಮಗೆ ಕೆಲವು ಟಿಪ್ಸ್ ನೀಡಲಾಗಿದೆ ಮುಂದಕ್ಕೆ ಓದಿ

By Kavya

ಮೊದಲ ಕೆಲಸ ಯಾವಾಗಲೂ ತುಂಬಾ ಕುತೂಹಲಕಾರಿಯಾಗಿರುತ್ತದೆ. ನಾವು ಮೊದಲ ಕೆಲಸದಲ್ಲಿ ಬೆಸ್ಟ್ ಆಗಿ ಪರ್ಫೋಮ್ ನೀಡಬೇಕೆಂದು ಅಂದು ಕೊಳ್ಳುತ್ತೇವೆ. ಇನ್ನು ಕೆಲವರು ಮೊದಲ ಕೆಲಸದ ಬಗ್ಗೆ ಹೆಚ್ಚು ಯೋಚಿಸುತ್ತಾರೆ ಹಾಗೂ ಹೆಚ್ಚಾಗಿಯೇ ತಯಾರು ಕೂಡಾ ಮಾಡಿಕೊಂಡಿರುತ್ತಾರೆ. ಆದ್ರೆ ಈ ಎಲ್ಲಾ ತಯಾರಿ ಜತೆ ಕೆಲವೊಂದು ನಡವಳಿಕೆಯನ್ನ ಕೂಡಾ ಬ್ಯಾಲೆನ್ಸ್ ಮಾಡುವುದು ತಿಳಿದುಕೊಳ್ಳಬೇಕು.

ಫಸ್ಟ್ ಡೇ ಜಾಬ್ ತಯಾರಿ ಹೇಗಿರಬೇಕು ಗೊತ್ತಾ ?

ನಿಮ್ಮ ಮೊದಲ ಜಾಬ್ ಗೆ ಹೇಗೆ ತಯಾರು ಮಾಡಿಕೊಳ್ಳಬೇಕೆಂದು ಇಲ್ಲಿ ನಿಮಗೆ ಕೆಲವು ಟಿಪ್ಸ್ ನೀಡಲಾಗಿದೆ ಮುಂದಕ್ಕೆ ಓದಿ:

ನಿಮ್ಮ ಜಾಬ್ ಪ್ರೊಫೈಲ್ ಗೆ ತಕ್ಕಂತೆ ಸ್ಟಡಿ ಮಾಡಿಕೊಳ್ಳಿ:

ನಿಮ್ಮ ಜಾಬ್ ಪ್ರೊಫೈಲ್ ಗೆ ತಕ್ಕಂತೆ ಸ್ಟಡಿ ಮಾಡಿಕೊಳ್ಳಿ:

ಹೌದು ಜಾಬ್ ಪ್ರೊಫೈಲ್ ಗೆ ತಕ್ಕಂತೆ ಸ್ಟಡಿ ಮಾಡಿಕೊಳ್ಳಿ ಎಂದ ತಕ್ಷಣ ಮತ್ತೆ ಕಾಲೇಜಿನಲ್ಲಿ ಓದಿದ ಪುಸ್ತಕಗಳನ್ನ ಹುಡುಕಾಡಲು ಹೆಣಗಾಡಬೇಡಿ. ಬದಲಿಗೆ ಗೂಗಲ್ ಮೊರೆ ಹೋಗಿ. ನಿಮ್ಮ ಫಸ್ಟ್ ಜಾಬ್ ಬಗ್ಗೆ ಸರ್ಚ್ ಮಾಡಿ. ಅಷ್ಟೇ ಅಲ್ಲ ನೋಟ್ ಕೂಡಾ ಮಾಡಿಕೊಳ್ಳಿ. ಇದರಿಂದ ಜಾಬ್ ಗೆ ಸೇರಿದ ಮೊದಲ ದಿನವೇ ಯಾರಾದ್ರೂ ಇಂದು ಏನು ಮಾಡುತ್ತೀಯಾ ಎಂದು ಪ್ರಶ್ನಿಸಿದ್ರೆ ಆರಾಮವಾಗಿ ನೀವು ಉತ್ತರಿಸಬಹುದು.

ಅದೇ ಫೀಲ್ಡ್ ನ ಜನರನ್ನ ಮೀಟ್ ಮಾಡಿ ಮಾತನಾಡಿ:

ಅದೇ ಫೀಲ್ಡ್ ನ ಜನರನ್ನ ಮೀಟ್ ಮಾಡಿ ಮಾತನಾಡಿ:

ಇದು ಬೆಸ್ಟ್ ವಿಚಾರ. ಯಾಕೆಂದ್ರೆ ಅದೇ ಫೀಲ್ಡ್‌ನಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವವರು, ಆ ಜಾಬ್ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಜಾಬ್ ಚ್ಯಾಲೇಂಜಸ್, ಟಾಸ್ಕ್, ಕಷ್ಟಗಳು ಹೀಗೆ ಜಾಬ್ ಗೆ ಸಂಬಂಧಪಟ್ಟ ಯಾವುದೇ ಸಂದೇಹ ವಿದ್ದರೂ ಇವರ ಬಳಿ ಅದಕ್ಕೆ ಸರಿಯಾದ ಉತ್ತರವಿರುತ್ತದೆ. ಇವರು ಯಾವುದೇ ಟಾಸ್ಕ್ ಆದ್ರೂ ಸರಿ ಅದನ್ನ ಪ್ರ್ಯಾಕ್ಟಿಕಲ್ ಆಗಿ ಹೇಗೆ ಹ್ಯಾಂಡಲ್ ಮಾಡಬಹುದು ಎಂದು ತಿಳಿಸಿಕೊಡುತ್ತಾರೆ.

More Read: ಈ 8 ವಿಧಾನ ಮೂಲಕ ಸುಲಭವಾಗಿ ಹಣ ಸಂಪಾದನೆ ಮಾಡಬಹುದು!

 

ಇತರ ಉದ್ಯೋಗಿಗಳ ಕೆಲಸದ ಮೊದಲ ಅನುಭವ ಕೇಳಿಕೊಳ್ಳಿ

ಇತರ ಉದ್ಯೋಗಿಗಳ ಕೆಲಸದ ಮೊದಲ ಅನುಭವ ಕೇಳಿಕೊಳ್ಳಿ

ಈಗಾಗಲೇ ಅದೇ ಫೀಲ್ಡ್‌ನಲ್ಲಿ ಕೆಲಸ ಮಾಡುತ್ತಿರುವವರ ಪರಿಚಯ ನಿಮಗೆ ಇದ್ದಲ್ಲಿ, ಅವರ ಬಳಿ ಅವರ ಮೊದಲ ದಿನದ ಕೆಲಸದ ಅನುಭವ ಕೇಳಿ ತಿಳಿದುಕೊಳ್ಳಿ. ಮೊದಲ ದಿನ ಅವರು ಏನೆಲ್ಲಾ ಕೆಲಸ ಮಾಡಿದ್ದರೂ, ಅವರಿಗೆ ಆ ದಿನ ಹೇಗನಿಸಿತ್ತು ಎಂದು ಕೇಳಿ ಮಾಹಿತಿ ಪಡೆಯಿರಿ. ಇದರಿಂದ ನೀವು ಮೊದಲ ದಿನ ಯಾವ ರೀತಿ ತಯಾರು ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳಬಹುದು.

ಪ್ರ್ಯಾಕ್ಟಿಕಲ್ ಆಗಿ ಯೋಚಿಸಿ

ಪ್ರ್ಯಾಕ್ಟಿಕಲ್ ಆಗಿ ಯೋಚಿಸಿ

ಕಾಲೇಜಿನಲ್ಲಿ ಕಲಿತಿರುವುದೆಲ್ಲಾ ಬರೀ ಥಿಯರಿ ಆಗಿರುತ್ತದೆ. ಹಾಗಾಗಿ ಮೊದಲ ದಿನ ಜಾಬ್ ಗೆ ತೆರಳುವ ಮುನ್ನ ಸ್ವಲ್ಪ ಪ್ರ್ಯಾಕ್ಟಿಕಲ್ ಆಗಿ ಯೋಚಿಸಿ. ಜಾಬ್ ಬಗ್ಗೆ ಥಿಯರಿ ಓದುದರ ಬದಲು, ಪ್ರ್ಯಾಕ್ಟಕಿಲ್ ಆಗಿ ಯೋಚಿಸಿ, ಅರ್ಥ ಮಾಡಿಕೊಳ್ಳುವುದು ತುಂಬಾ ಅಗತ್ಯವಿದೆ.

More Read: ಆಫೀಸ್‌ನಲ್ಲಿ ಬಾಸ್ ಗಮನ ನಿಮ್ಮತ್ತ ಸೆಳೆಯುವುದು ಹೇಗೆ?

 

ಓವರ್ ಸ್ಟ್ರೆಸ್ ಆಗಿರದೇ ಕೆಲಸ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ

ಓವರ್ ಸ್ಟ್ರೆಸ್ ಆಗಿರದೇ ಕೆಲಸ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ

ಯಾವುದೇ ತಯಾರಿ ಮಾಡಿಕೊಳ್ಳದೇ ಮೊದಲ ಜಾಬ್ ಗೆ ತೆರಳುವಾಗ ಸಾಮಾನ್ಯವಾಗಿ ಜನರು ಹೆಚ್ಚು ಸ್ಟ್ರೆಸ್ ಗೆ ಒಳಗಾಗುತ್ತಾರೆ. ಹಾಗಾಗಿ ಯಾವುದೇ ಕಾರಣಕ್ಕೂ ಆ ತಪ್ಪು ಮಾಡಲು ಹೋಗಬೇಡಿ. ಬದಲಿಗೆ ಹೋಗುವ ಮೊದಲು ಸ್ವಲ್ಪ ಹಾರ್ಡ್ ವರ್ಕ್ ಮಾಡಿ ಆ ಜಾಬ್ ಬಗ್ಗೆ ಸ್ಟಡಿ ಮಾಡಿಕೊಳ್ಳಿ. ಮೊದಲ ದಿನ ಯಾವುದೇ ವಾತಾವರಣ ನಿಮ್ಮ ಮುಂದೆ ಸೃಷ್ಟಿಯಾಗ ಬಹುದು ಅದರ ಬಗ್ಗೆ ಟೆನ್ಶನ್ ಮಾಡಿಕೊಳ್ಳಬೇಡಿ ಬದಲಿಗೆ ಕೂಲ್ ಆಗಿ ಹ್ಯಾಂಡಲ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
Our First job always comes with a excitement. So lots of people Still Confuse how to prepare for first jobs. some people over prepare for first job. But first you have to prepare yourself. Actually There are a lot of ways to get prepared for your first job. Here is the 5 best tips for prepare a first job
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+