ಯುಜಿಸಿ ಎನ್‌ಇಟಿ ಪರೀಕ್ಷೆಯಲ್ಲಿ ಪಾಸ್ ಆಗಲು ಇಲ್ಲಿದೆ ಸುಲಭ ಮಾರ್ಗ

ಎನ್‌ಟಿಎ ಯುಜಿಸಿ ಎನ್‌ಇಟಿ ಲೆಕ್ಚರರ್ ಮತ್ತು ಜ್ಯೂನಿಯರ್ ರಿಸರ್ಚ್ ಫೆಲೋಷಿಪ್‌ ಹುದ್ದೆಗಳ ಪರೀಕ್ಷೆಗೆ ಇಂದಿನ ದಿನದಿಂದಲೇ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಈ ಪರೀಕ್ಷೆಗೆ ಅಭ್ಯರ್ಥಿಗಳು ಹೇಗೆ ತಯಾರಿ ನಡೆಸಬಹುದು ಎನ್ನುವುದಕ್ಕೆ ಇಲ್ಲಿದೆ ಸಲಹೆ.ಈ ಪರೀಕ್ಷೆಯನ್ನು ತೆಗೆದುಕೊಳ್ಳಲಿರುವ ಅಭ್ಯರ್ಥಿಗಳು ಸಾಮಾನ್ಯವಾಗಿ ಸಿಲಬಸ್ ನೋಡಿದ ತಕ್ಷಣ ತುಂಬಾನೆ ಕಠಿಣವೆಂದು ಭಾವಿಸುತ್ತಾರೆ ಆದರೆ ಅಭ್ಯರ್ಥಿಗಳು 3ರಿಂದ 6 ತಿಂಗಳ ಕಾಲ ಅಧ್ಯಯನ ಕೈಗೊಂಡಿದ್ದಲ್ಲಿ ಪರೀಕ್ಷೆಯನ್ನು ಎದುರಿಸುವುದು ಸುಲಭವಾಗಬಹುದು.

1 ಸಮಯವನ್ನು ನಿಗದಿಪಡಿಸಿಕೊಳ್ಳಿ

1 ಸಮಯವನ್ನು ನಿಗದಿಪಡಿಸಿಕೊಳ್ಳಿ

ಈ ಪರೀಕ್ಷೆಯನ್ನು ತೆಗೆದುಕೊಳ್ಳಲು ಸಿದ್ದರಾಗಿರುವ ಅಭ್ಯರ್ಥಿಗಳು ಪ್ರತಿನಿತ್ಯ ಓದಿಗಾಗಿ ಮೀಸಲಿಡಿ. ಕನಿಷ್ಟ 3 ರಿಂದ 6 ತಿಂಗಳ ಕಾಲ ಅಧ್ಯಯನ ಕೈಗೊಂಡಲ್ಲಿ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಠಿಣವಲ್ಲ.ಹಾಗಾಗಿ ಸಮಯ ನಿಗದಿ ಪಡಿಸಿ ಅಧ್ಯಯನ ಕೈಗೊಂಡು ಪರೀಕ್ಷೆಯನ್ನು ಎದುರಿಸಿ.

2 ನಿಮ್ಮನ್ನು ನೀವು ಟ್ರೈನ್ ಮಾಡಿಕೊಳ್ಳಿ:

2 ನಿಮ್ಮನ್ನು ನೀವು ಟ್ರೈನ್ ಮಾಡಿಕೊಳ್ಳಿ:

ಪರೀಕ್ಷೆಗೆ ಏನೆಲ್ಲಾ ಸಿಲಬಸ್ ಇದೆ ಎಂದು ಮೊದಲು ತಿಳಿದುಕೊಳ್ಳಿ ನಂತರ ಓದಲು ಪ್ರಾರಂಭಿಸಿ. ಯಾವುದೇ ವಿಷಯವನ್ನು ಸ್ಕಿಪ್ ಮಾಡದೇ ಓದತಕ್ಕದ್ದು.ಯಾಕೆಂದರೆ ಸಿಲಬಸ್ ಅನುಸಾರ ಪ್ರಶ್ನೆ ಪತ್ರಿಕೆಯನ್ನು ತಯಾರಿಸಲಾಗಿರುತ್ತದೆ ಹಾಗಾಗಿ ಯಾವುದೇ ಟಾಪಿಕ್ ಅನ್ನು ಸ್ಕಿಪ್ ಮಾಡದೇ ಅಧ್ಯಯನ ಮಾಡಿ.

 

 

3 ಪ್ರಾಮುಖ್ಯತೆಯನ್ನು ನೀಡಿ:
 

3 ಪ್ರಾಮುಖ್ಯತೆಯನ್ನು ನೀಡಿ:

ಈ ಪರೀಕ್ಷೆಯು 3 ಸೆಕ್ಷನ್ ನ ಪೇಪರ್ ಗಳಿಂದ ಕೂಡಿದ್ದು ಅದರಲ್ಲಿ ಎರಡು ಪೇಪರ್ ಗಳು ನಮ್ಮ ಆಯ್ಕೆಯ ಪೇಪರ್ ಆಗಿರುತ್ತದೆ. ಇನ್ನೊಂದು ಪೇಪರ್ ಎಲ್ಲಾ ವಿಭಾಗದಲ್ಲಿ ಅಧ್ಯಯನ ಮಾಡಿದ ಅಭ್ಯರ್ಥಿಗಳಿಗೂ ನೀಡಲಾಗುವ ಸಾಮಾನ್ಯ ಜ್ಞಾನ ಮತ್ತು ಆಪ್ಟಿಟ್ಯೂಡ್ ವಿಷಯವನ್ನು ಒಳಗೊಂಡಿರುತ್ತದೆ. ಹಾಗಾಗಿ ಅಭ್ಯರ್ಥಿಗಳು ಈ ಮೊದಲ ಪೇಪರ್ ಅನ್ನು ಸರಿಯಾಗಿ ಅಟೆಂಡ್ ಮಾಡಿದ್ದಲ್ಲಿ ಮಾತ್ರ ಎನ್‌ಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯತೆ ಇರುತ್ತದೆ. ಹಾಗಾಗಿ ಅಭ್ಯರ್ಥಿಗಳು 3 ಪೇಪರ್ ಗಳಿಗೂ ಸಮನಾದ ಪ್ರಾಮುಖ್ಯತೆಯನ್ನು ನೀಡಿ ಉತ್ತರಿಸತಕ್ಕದ್ದು.

4 ಪ್ರಮುಖ ಅಂಶಗಳನ್ನು ನೋಟ್ ಮಾಡಿಕೊಳ್ಳಿ:

4 ಪ್ರಮುಖ ಅಂಶಗಳನ್ನು ನೋಟ್ ಮಾಡಿಕೊಳ್ಳಿ:

ಈ ಪರೀಕ್ಷೆಯನ್ನು ಎದುರಿಸುವ ಅಭ್ಯರ್ಥಿಗಳು ಅಧ್ಯಯನ ಮಾಡುವಾಗ ಪ್ರಮುಖ ಅಂಶಗಳನ್ನು ನೋಟ್ ಮಾಡಿಕೊಳ್ಳುವುದರಿಂದ ಇದು ದೀರ್ಘ ಕಾಲ ಸಹಾಯಕವಾಗುತ್ತದಲ್ಲದೇ ಪರೀಕ್ಷೆಯಲ್ಲಿ ಪಾಸ್ ಆಗಲು ಹೆಚ್ಚು ಪ್ರಯೋಜನವಾಗುತ್ತದೆ.

5 ಪರೀಕ್ಷೆಗಾಗಿ ಸಮಯಕ್ಕೆ ಪ್ರಾಮುಖ್ಯತೆ ನೀಡಿ:

5 ಪರೀಕ್ಷೆಗಾಗಿ ಸಮಯಕ್ಕೆ ಪ್ರಾಮುಖ್ಯತೆ ನೀಡಿ:

ಅಭ್ಯರ್ಥಿಗಳು ಕೇವಲ ಓದಿದ ಸಂದರ್ಭದಲ್ಲಿ ಸಮಯಕ್ಕೆ ಪ್ರಾಮುಖ್ಯತೆಯನ್ನು ನೀಡುವುದಲ್ಲದೇ ಪರೀಕ್ಷಾ ವೇಳೆಯೂ ಕೊಟ್ಟಿರುವ ಕಾಲಾವಕಾಶದಲ್ಲಿ ಹೇಗೆ ಉತ್ತರಿಸಬಹುದು ಎನ್ನುವುದನ್ನೂ ಕೂಡ ಪ್ಲಾನ್ ಮಾಡಿಕೊಳ್ಳಿ.

 

 

6 ಸೂಕ್ಷ್ಮವಾಗಿ ಅಧ್ಯಯನ ನಡೆಸಿ:

6 ಸೂಕ್ಷ್ಮವಾಗಿ ಅಧ್ಯಯನ ನಡೆಸಿ:

ಈ ಪರೀಕ್ಷೆಯನ್ನು ಎದುರಿಸುವುದು ಅಷ್ಟು ಸುಲಭದ ಮಾತಲ್ಲ ಹಾಗಾಗಿ ತುಂಬಾ ಕೇರ್‌ಲೆಸ್ ಮಾಡದೇ ಇರುವ ಕಾಲವಕಾಶವನ್ನು ಸದುಪಯೋಗ ಮಾಡಿಕೊಳ್ಳಿ. ಪ್ರತಿನಿತ್ಯ ಟಾರ್ಗೆಟ್ ಇಟ್ಟುಕೊಂಡು ಅಧ್ಯಯನ ನಡೆಸಿ ಮತ್ತು ಅಧ್ಯಯನ ನಂತರ ಪುನರ್‌ಮನನ ಮಾಡಿ. ಪರೀಕ್ಷೆಯಲ್ಲಿಯೂ ಕೂಡ ಉತ್ತರ ಬರೆದ ನಂತರ ಸ್ಮೂಕ್ಷ್ಮವಾಗಿ ಪರಿಶೀಲಿಸಿ, ಎಲ್ಲಾ ಪ್ರಶ್ನೆಗಳಿಗೂ ಸೂಕ್ತವಾದ ಉತ್ತರ ನೀಡಲಾಗಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಿಕೊಳ್ಳಿ.

ಈ ಎಲ್ಲಾ ಅಂಶಗಳನ್ನು ನೀವು ಗಮನದಲ್ಲಿಟ್ಟುಕೊಂಡಿದ್ದಲ್ಲಿ ಎನ್‌ಟಿಎ ಯುಜಿಸಿ ಎನ್‌ಇಟಿ ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ ಹಾಗೂ ಖಂಡಿತವಾಗಿ ಯಶಸ್ಸು ನಿಮ್ಮದಾಗುತ್ತದೆ.

 

 

For Quick Alerts
ALLOW NOTIFICATIONS  
For Daily Alerts

English summary
Here we are giving tips to prepare for NTA UGC NET exams,
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X