How To Write A Resignation Letter? : ನೀವು ನಿಮ್ಮ ಉದ್ಯೋಗಕ್ಕೆ ರಾಜಿನಾಮೆ ಪತ್ರ ಬರೆಯುವುದು ಹೇಗೆ ಅಂತ ಯೋಚಿಸ್ತಿದ್ದೀರಾ ?

ನೀವು ಉದ್ಯೋಗ ಮಾಡುತ್ತಿರುವ ಪ್ರಸಕ್ತ ಸಂಸ್ಥೆಯಲ್ಲಿ ನಿಮ್ಮ ಉದ್ಯೋಗಕ್ಕೆ ರಾಜಿನಾಮೆ ನೀಡಲು ಬಯಸಿದ್ದೀರಾ ? ಹಾಗಾದರೆ ನೀವು ನಿಮ್ಮ ರಾಜಿನಾಮೆ ಪತ್ರವನ್ನು ಹೇಗೆ ಬರೆಯಬೇಕೆಂದು ಯೋಚಿಸುತ್ತಿದ್ದೀರಾ? ಚಿಂತಿಸಬೇಡಿ ನಿಮಗೆ ಸಹಾಯ ಮಾಡಲು ನಾವಿದ್ದೇವೆ. ರಾಜೀನಾಮೆ ಪತ್ರ ಬರೆಯುವುದು ಸುಲಭದ ಮಾತಲ್ಲ. ನೀವು ಹಲವಾರು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಉದಾಹರಣೆಗೆ ಪತ್ರದ ವಿಷಯ, ನೀವು ಅದನ್ನು ಯಾರಿಗೆ ತಿಳಿಸುತ್ತಿದ್ದೀರಿ ಮತ್ತು ಇತ್ಯಾದಿ ವಿಚಾರಗಳು.

ರಾಜಿನಾಮೆ ಪತ್ರ ಬರೆಯುವುದು ಹೇಗೆ ? ಈ ಸಲಹೆಗಳನ್ನು ಪಾಲಿಸಿ

ಯಾರನ್ನು ಸಂಬೋಧಿಸಬೇಕು ? :

ಮೊದಲಿಗೆ ನೀವು ನಿಮ್ಮ ಪತ್ರವನ್ನು ಯಾರಿಗೆ ಬರೆಯುತ್ತಿದ್ದೀರಿ ಎಂದು ತಿಳಿಯುವುದು ಮುಖ್ಯವಾದುದು. ನಿಮ್ಮ ಬಾಸ್, ಹೆಚ್‌ಆರ್ ಅಥವಾ ಮುಖ್ಯ ಅಧಿಕಾರಿಗೆ ನೀವು ಇಮೇಲ್ ಕಳುಹಿಸುತ್ತಿರುವಿರಾ?

ನೀವು ಮೊದಲು ನಿಮ್ಮ ಮೇಲಿನ ಅಧಿಕಾರಿ ಅಥವಾ ಬಾಸ್‌ಗೆ ನಿಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತೀರಿ. ಅವರು ಸ್ವೀಕರಿಸಿದ ನಂತರ ನೀವು ಅದನ್ನು ನಿಮ್ಮ ಹೆಚ್‌ಆರ್ ಗೆ ಮೇಲ್ ಮಾಡುತ್ತೀರಿ. ಅಥವಾ ಅನೇಕ ಸಂದರ್ಭಗಳಲ್ಲಿ ನಿಮ್ಮ ತಕ್ಷಣದ ಬಾಸ್‌ಗೆ ನಿಮ್ಮ ರಾಜೀನಾಮೆ ಪತ್ರವನ್ನು ನೀವು ನೀಡಬಹುದು ಮತ್ತು ಅದೇ ಮೇಲ್‌ನಲ್ಲಿ ಹೆಚ್‌ಆರ್ ಅನ್ನು CC ಮಾಡಬಹುದು.

ರಾಜೀನಾಮೆ ಪತ್ರದಲ್ಲಿ ಇರಬೇಕಾದ 5 ಅಂಶಗಳು :

ನಿಮ್ಮ ರಾಜೀನಾಮೆ ಪತ್ರದಲ್ಲಿ ಪ್ರಸ್ತುತಪಡಿಸಬೇಕಾದ ಐದು ವಿಷಯಗಳು ಇವು:

* ಪತ್ರದ ದಿನಾಂಕ
* ಕಂಪನಿಯೊಂದಿಗೆ ನಿಮ್ಮ ಕೆಲಸದ ಕೊನೆಯ ದಿನ
* ಸೂಕ್ತ ವ್ಯಕ್ತಿಗೆ ವಿಳಾಸ
* ನೀವೇಕೆ ರಾಜೀನಾಮೆ ನೀಡುತ್ತಿದ್ದೀರಿ?
* ನಿಮ್ಮ ಸಹಿ

ನೆನಪಿಡಿ : ರಾಜೀನಾಮೆ ಪತ್ರದಲ್ಲಿ ನೀವು ನಿಮ್ಮ ಸೃಜನಶೀಲತೆಯನ್ನು ತೋರುವ ಅಗತ್ಯವಿಲ್ಲ. ಅದೊಂದು ಔಪಚಾರಿಕ ಪತ್ರವಾಗಿರುತ್ತದೆ. ಆದ್ದರಿಂದ ಅದನ್ನು ಸರಳವಾಗಿ ಇರಿಸಿ. ನೀವು ರಾಜೀನಾಮೆ ನೀಡುತ್ತಿರುವ ಸ್ಥಾನ ಮತ್ತು ನಿಮ್ಮ ಕೆಲಸದ ಕೊನೆಯ ದಿನಾಂಕವನ್ನು ನಮೂದಿಸಿ.

ಪತ್ರದಲ್ಲಿ ಮುಂದೆ ಆಶಾವಾದಿ ಮತ್ತು ರಾಜತಾಂತ್ರಿಕ ಪದಗಳನ್ನು ಬಳಸಿ. ನಿಮ್ಮ ಬದಲಿಗೆ ನಿಮ್ಮ ಸ್ಥಾನಕ್ಕೆ ಬರುವವರಿಗೆ ತರಬೇತಿ ನೀಡಲು ನೀವು ಸಿದ್ಧರಿದ್ದೀರಿ ಮತ್ತು ನಿಮ್ಮ ನಿರ್ಗಮನಕ್ಕಾಗಿ ತಂಡವನ್ನು ಸಿದ್ಧಪಡಿಸುತ್ತೀರಿ ಎಂದು ನಿಮ್ಮ ಪತ್ರದಲ್ಲಿ ತಿಳಿಸಿ. ನಿಮಗೆ ಪ್ರಸ್ತುತ ಸಂಸ್ಥೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ ನಿಮ್ಮ ಮೇಲ್ದರ್ಜೆ ಅಧಿಕಾರಿಗಳಿಗೆ ನಿಮ್ಮ ಧನ್ಯವಾದಗಳನ್ನು ಹೇಳಿ. ನಂತರ ನೀವು ನಿಮ್ಮ ಬಾಸ್ ನೊಂದಿಗೆ ನಿಮ್ಮ ಕೆಲವು ಉತ್ತಮ ಅನುಭವವಗಳನ್ನು ಹಂಚಿಕೊಳ್ಳಿ ಮತ್ತು ತಂಡದೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿ. ನಿಮ್ಮ ಪ್ರಸಕ್ತ ಉದ್ಯೋಗದ ಆಶಾವಾದದ ಜೊತೆಗೆ ನಿಮ್ಮ ಮುಂದಿನ ಉದ್ಯೋಗದ ಬಗ್ಗೆ ಉತ್ಸುಕರಾಗಿರುವುದನ್ನು ತೋರಿ.

ಸೂಚನೆ : ನಿಮ್ಮ ರಾಜೀನಾಮೆ ಪತ್ರದಲ್ಲಿ ಯಾರೊಬ್ಬರ ವಿರುದ್ಧ ಟೀಕೆಗಳು ಅಥವಾ ದೂರುಗಳನ್ನು ಬರೆಯುವುದು ವೃತ್ತಿಪರವಲ್ಲ.
ಸರಳವಾಗಿರಿ ಸತ್ಯಗಳನ್ನು ಬರೆಯಿರಿ ಮತ್ತು ಯಾವುದೇ ದೂರು ನೀಡಬೇಡಿ. ಸಕಾರಾತ್ಮಕ ಟಿಪ್ಪಣಿಯಲ್ಲಿ ಮುಗಿಸುವುದು ಒಳಿತು.
ಅಂತಿಮವಾಗಿ ನೀವು ಪ್ರಸಕ್ತ ಸಂಸ್ಥೆಯಲ್ಲಿ ಯಾವುದಕ್ಕಾಗಿ ಕಾಯುತ್ತಿದ್ದೀರಿ ಎಂಬುದನ್ನು ನಮೂದಿಸುವ ಜೊತೆಗೆ ಈ ಸಲಹೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನಿಮ್ಮ ರಾಜೀನಾಮೆ ಪತ್ರವನ್ನು ಸುಲಭವಾಗಿ ಬರೆಯಿರಿ.

For Quick Alerts
ALLOW NOTIFICATIONS  
For Daily Alerts

English summary
Do you want to know about how to write a resignation letter. Here is the tips.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X