ಮಹಿಳೆಯರು ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಲು ಇಲ್ಲಿವೆ ಹಲವು ದಾರಿ

ಇತ್ತೀಚಿನ ದಿನಗಳಲ್ಲಿನ ಆಗು ಹೋಗುಗಳನ್ನು ಗಮನಿಸಿದಾಗ ಅನೇಕರಿಗೆ ತಾವೂ ದೇಶವನ್ನು ರಕ್ಷಿಸಬೇಕು ಹಾಗೆ ಗಡಿಯನ್ನು ಕಾಯಬೇಕು ಎನ್ನುವ ಛಲ ಹುಟ್ಟುತ್ತದೆ. ಆದರೆ ಮಹಿಳೆ ಹೇಗೆ ದೇಶಕ್ಕಾಗಿ ಹೋರಾಡಬೇಕು? ಗಡಿಯಲ್ಲಿ ನಿಂತು ದೇಶವನ್ನು ಕಾಯಬೇಕೇ? ಎನ್ನುವ ಪ್ರಶ್ನೆಗಳು ಉದ್ಭವವಾಗುವುದು ಸಹಜ. ನೌಕಾಪಡೆಯಲ್ಲಿರುವ ಅಧಿಕಾರಿಗಳು ಆ ಹುದ್ದೆಗಳಿಗೆ ತಕ್ಕಂತೆ ಅಧಿಕಾರ ಮತ್ತು ಗೌರವನ್ನು ಹೊಂದಿರುವುದರ ಜೊತೆಗೆ ಅನೇಕ ರೀತಿಯ ಸವಾಲುಗಳನ್ನು ಎದುರಿಸುತ್ತಾರೆ.ಆದರೆ ಇದರಲ್ಲಿ ನಾವು ಹೇಳಲು ಹೊರಟಿರುವ ವಿಷಯವೆಂದರೆ ಮಹಿಳೆ ಕೂಡ ದೇಶ ರಕ್ಷಣೆಯಲ್ಲಿ ಪಾಲ್ಗೊಂಡು ಹಲವು ರೀತಿಯಲ್ಲಿ ಸೇವೆಯನ್ನು ಸಲ್ಲಿಸಬಹುದು. ಅದ್ಹೇಗೆ ಅಂತೀರಾ ಒಮ್ಮೆ ಈ ಲೇಖನವನ್ನು ಓದಿ ನಂತರ ನೀವೇ ನೌಕಾಪಡೆಯಲ್ಲಿ ಸೇರಲು ಮುಂದಾಗುತ್ತೀರಾ.

 ಭಾರತೀಯ ನೌಕಾಪಡೆಯಲ್ಲಿಮಹಿಳೆಯರಿಗೆ ಉದ್ಯೋಗಾವಕಾಶ

ಪ್ರತಿ ವರ್ಷವೂ ಅನೇಕ ಯುವಕ ಮತ್ತು ಯುವತಿಯರು ಬಾರತೀಯ ಆರ್ಮ್ಡ್ ಫೋರ್ಸ್‌ಗಳಾದ ಇಂಡಿಯನ್ ಆರ್ಮಿ, ಇಂಡಿಯನ್ ಏರ್‌ಫೋರ್ಸ್ , ಭಾರತೀಯ ನೌಕಾಪಡೆ ಮತ್ತು ಇಂಡಿಯನ್ ಕೋಸ್ಟ್ ಗಾರ್ಡ್ ಗಳಲ್ಲಿ ಕೆಲಸಕ್ಕಾಗಿ ಸಾಲುಗಟ್ಟಿ ನಿಂತಿರುತ್ತಾರೆ. ಇಂಡಿಯನ್ ಆರ್ಮ್ಡ್ ಫೋರ್ಸ್ ಹೊರತುಪಡಿಸಿ ಉಳಿದೆಲ್ಲಾ ಪ್ಯಾರಾಮಿಲಿಟರಿ ಸಂಸ್ಥೆಗಳು ಅಗತ್ಯವಿದ್ದಾಗ ಉದ್ಯೋಗಾವಕಾಶವನ್ನು ತೆರೆಯುತ್ತೆವೆ. ನಮ್ಮ ಇಂಡಿಯನ್ ಆರ್ಮ್ಡ್ ಫೋರ್ಸ್‌ ಗಳಲ್ಲಿ ಭಾರತೀಯ ನೌಕಾಪಡೆ ಬಹಳ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು ಮಹಿಳೆಯರಿಗೆ ಉದ್ಯೋಗಾವಕಾಶ ನೀಡುವಲ್ಲಿ ಒಂದು ಹೆಜ್ಜೆ ಮುಂದಿದೆ ಎಂದೇ ಹೇಳಬಹುದು. ಆದರೆ ಅನೇಕ ಮಹಿಳೆಯರು ಭಾರತೀಯ ಸೇನೆಯಲ್ಲಿ ಹೇಗೆ ಕೆಲಸಕ್ಕೆ ಸೇರಬೇಕು ಮತ್ತು ಎಲ್ಲೆಲ್ಲಾ ಉದ್ಯೋಗವಕಾಶಗಳು ಇರುತ್ತವೆ ಎನ್ನುವ ವಿಷಯದಲ್ಲಿ ಸರಿಯಾದ ಮಾರ್ಗದರ್ಶನವಿರುವುದಿಲ್ಲ ಹಾಗಾಗಿ ಇಲ್ಲಿ ನಾವು ಆ ಬಗೆಗಿನ ಮಾಹಿತಿಯನ್ನು ನೀಡಲಿದ್ದೇವೆ.

ಭಾರತೀಯ ನೌಕಾಪಡೆಯಲ್ಲಿ ಮಹಿಳೆಯರಿಗಾಗಿ ಇರುವ ಹುದ್ದೆಗಳು:

ಅಭ್ಯರ್ಥಿಗಳು ಗಮನದಲ್ಲಿಡಬೇಕಾದ ವಿಷಯವೆಂದರೆ ಭಾರತೀಯ ನೌಕಾಪಡೆ ಮಹಿಳೆಯರಿಗಾಗಿ ಯಾವುದೇ ವಿಶೇಷ ಮಾನ್ಯತೆಯನ್ನು ನೀಡುವುದಿಲ್ಲ ಬದಲಾಗಿ ಮಹಿಳೆ ಮತ್ತು ಪುರುಷರಿಗೆ ಸಮಾನವಾದ ಮಾನ್ಯತೆ ನೀಡುತ್ತಿದ್ದು, ಸರ್ವೀಸ್ ಸೆಲೆಕ್ಷನ್ ಬೋರ್ಡ್ ಅಭ್ಯರ್ಥಿಗಳ ಮೆರಿಟ್ ಆಧಾರದ ಮೇಲೆಯೇ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಭಾರತ ಸರ್ಕಾರ ಮಹಿಳಾ ಅಭ್ಯರ್ಥಿಗಳಿಗೆ ಕಾನೂನು, ಶಿಕ್ಷಣ ಮತ್ತು ನಾವಲ್ ಆರ್ಕಿಟೆಕ್ಚರ್ ಕೇಡರ್‌ಗಳಲ್ಲಿ ಖಾಯಂ ಆಯೋಗವನ್ನು ಅನುಮೋದಿಸಿದೆ. ಅಭ್ಯರ್ಥಿಗಳು ಗಮನದಲ್ಲಿಡಬೇಕಾದ ವಿಷಯವೆಂದರೆ ಸೇವೆಯಲ್ಲಿ ಮಹಿಳೆ ಮತ್ತು ಪುರುಷರು ಸಮಾನವಾದ ನಿಯಮಗಳನ್ನು ಹೊಂದಿರುತ್ತಾರೆ.

ಮಹಿಳೆಯರು ಭಾರತೀಯ ನೌಕಾಪಡೆಯಲ್ಲಿ ಸೇರುವುದು ಹೇಗೆ:

ಭಾರತೀಯ ನೇವಿ 1992 ರ ವರೆಗೆ ಮೆಡಿಕಲ್ ಸರ್ವೀಸ್ ಹುದ್ದೆಗಳಿಗೆ ಮಾತ್ರ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಜುಲೈ 1992 ರಿಂದ ಸಣ್ಣ ಸೇವಾ ಆಯೋಗದ ಅಧಿಕಾರಿಗಳಾಗಿ ಮಹಿಳೆಯನ್ನು ನೇಮಕ ಮಾಡಿಕೊಳ್ಳಲಾಯಿತು. ಭಾರತೀಯ ನೌಕಾಪಡೆಯಲ್ಲಿ ಮಹಿಳೆಯರು ಸೇರಲು ಇರುವ ಶಾಖೆಗಳು / ಕೇಡರ್ಸ್ / ಸ್ಪೆಷಲೈಸೇಶನ್ಸ್‌ಗಳ ವಿವರ ಇಲ್ಲಿವೆ.

ನಾವಲ್ ಆರ್ಕಿಟೆಕ್ಚರ್:

ಈ ಹುದ್ದೆಗಳಿಗೆ ಸೇರ ಬಯಸುವ 19 ರಿಂದ 25 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಶೇಕಡ 60% ರಷ್ಟು ಅಂಕಗಳೊಂದಿಗೆ ಬಿಇ /ಬಿ.ಟೆಕ್ ಅನ್ನು ಮೆಕ್ಯಾನಿಕಲ್ / ಸಿವಿಲ್ / ಏರೋನಾಟಿಕಲ್ / ಮೆಟಲರ್ಜಿ / ನಾವಲ್ ಆರ್ಕಿಟೆಕ್ಚರ್ ನಲ್ಲಿ ಉತ್ತೀರ್ಣರಾಗಿರಬೇಕು.

ವೀಕ್ಷಕರು:

ಈ ಹುದ್ದೆಗಳಿಗೆ ಸೇರ ಬಯಸುವ 19 ರಿಂದ 24 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಯಾವುದೇ ವಿಭಾಗದಲ್ಲಿ ಬಿಇ /ಬಿ.ಟೆಕ್ ಜೊತೆಗೆ ದ್ವಿತೀಯ ಪಿಯುಸಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತವನ್ನು ಅಧ್ಯಯನ ಮಾಡಿರಬೇಕು.

ಶಿಕ್ಷಣ:

ಶಿಕ್ಷಣ ವಿಭಾಗದಲ್ಲಿನ ಹುದ್ದೆಗಳಿಗೆ ಸೇರಬಯಸುವ 21 ರಿಂದ 25 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ಅಥವಾ ಗಣಿತವನ್ನು ಅಧ್ಯಯನ ಮಾಡಿರುವವರಿಗೆ ಆದ್ಯತೆ ನೀಡಲಾಗುತ್ತದೆ. ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಭೌತಶಾಸ್ತ್ರವನ್ನು ಅಭ್ಯಸಿಸಿದ್ದು ಗಣಿತವನ್ನು ಪದವಿಯ ಹಂತದಲ್ಲಿ ಅಭ್ಯಸಿಸಿದ್ದಲ್ಲಿ ಆದ್ಯತೆ ನೀಡಲಾಗುವುದು
ಅಥವಾ
ಮೆಕ್ಯಾನಿಕಲ್ ಇಂಜಿನಿಯರಿಂಗ್ / ಇಲೆಕ್ಟ್ರಿಕಲ್ ಇಂಜಿನಿಯರಿಂಗ್ / ಕಂಪ್ಯೂಟರ್ ಸೈನ್ಸ್ / ಟೆಕ್ನಾಲಜಿಯಲ್ಲಿ ಪದವಿಯನ್ನು ಹೊಂದಿರಬೇಕು
ಅಥವಾ
ಸ್ನಾತಕೋತ್ತರ ಪದವಿಯನ್ನು ಹ್ಯೂಮಾನಿಟೀಸ್ (ಎಕನಾಮಿಕ್ಸ್ / ಹಿಸ್ಟರಿ / ಪೊಲಿಟಿಕಲ್ ಸೈನ್ಸ್ ) ವಿದ್ಯಾರ್ಹತೆಯನ್ನು ಹೊಂದಿರಬೇಕು.

ಲಾಜಿಸ್ಟಿಕ್ಸ್ / ವರ್ಕ್ಸ್ :

* ಲಾಜಿಸ್ಟಿಕ್ಸ್ ಕೇಡರ್: ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಬಿಇ / ಬಿ.ಟೆಕ್ / ಎಂಬಿಎ / ಬಿ.ಎಸ್ಸಿ / ಬಿಕಾಂ / ಬಿಎಸ್ಸಿ (ಐಟಿ) ನಲ್ಲಿ ಮೊದಲ ಶ್ರೇಣಿಯಲ್ಲಿ ಉತ್ತೀರ್ಣರಾಗಿರಬೇಕು. ಪಿಜಿ ಡಿಪ್ಲೋಮಾ ವನ್ನು ಫಿನಾನ್ಸ್ / ಲಾಜಿಸ್ಟಿಕ್ಸ್ / ಸಪ್ಲೈ ಚೈನ್ ಮ್ಯಾನೇಜ್ಮೆಂಟ್ / ಮೆಟೀರಿಯಲ್ ಮ್ಯಾನೇಜ್ಮೆಂಟ್ ಅಥವಾ ಎಂಸಿಎ / ಎಂಎಸ್ಸಿ (ಐಟಿ) ಯಲ್ಲಿ ಮೊದಲ ಶ್ರೇಣಿಯಲ್ಲಿ ಉತ್ತೀರ್ಣರಾಗಿರಬೇಕು.

* ವರ್ಕ್ಸ್: ಬಿಇ / ಬಿಟೆಕ್ (ಸಿವಿಲ್ ) / ಬಿ ಆರ್ಕಿಟೆಕ್ಟ್
* ಕ್ಯಾಟರಿಂಗ್ : ಎಂಎಸ್ಸಿ (ಹೆಚ್‌ಎಂ) / ಎಂಬಿಎ (ಹೆಚ್ಎಂ) / ಬಿಎಸ್ಸಿ ಅಥವಾ ಬಿಎ ಯನ್ನು ಮೊದಲ ಶ್ರೇಣಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಪಿಜಿ ಡಿಪ್ಲೋಮಾ ಅನ್ನು ಹೋಟೆಲ್ ಮ್ಯಾನೇಜ್ಮೆಂಟ್ ನಲ್ಲಿ ಮಾಡಿರಬೇಕು.

* ಈ ಎಲ್ಲಾ ವಿಭಾಗಗಳಲ್ಲಿ ಸೇವೆ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಕನಿಷ್ಟ 19 ವರೆ ವ‍ರ್ಷದಿಂದ ಗರಿಷ್ಟ 25 ವರ್ಷ ವಯೋಮಿತಿಯನ್ನು ಹೊಂದಿರಬೇಕು.

ಕಾನೂನು:

ಈ ಹುದ್ದೆಗಳಿಗೆ ಕನಿಷ್ಟ 22 ರಿಂದ ಗರಿಷ್ಟ 27 ವರ್ಷ ವಯೋಮಿತಿಯೊಳಗಿನ ಮತ್ತು ಲಾ ದಲ್ಲಿ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಸೇವೆಯನ್ನು ಸಲ್ಲಿಸಲು ಅರ್ಹರು.

ಎಟಿಸಿ:

ಈ ಹುದ್ದೆಗಳಿಗೆ 19 ವರೆ ವರ್ಷದಿಂದ ಗರಿಷ್ಟ 25 ವರ್ಷದೊಳಗಿನ ಮತ್ತು ಯಾವುದೇ ವಿಭಾಗದಲ್ಲಿ ಬಿಇ / ಬಿ.ಟೆಕ್ ಪದವಿಯ ಜೊತೆಗೆ ದ್ವಿತೀಯ ಪಿಯುಸಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತವನ್ನು ಅಧ್ಯಯನ ಮಾಡಿರಬೇಕು.

ಪೈಲಟ್ ಜನರಲ್:

ಈ ಹುದ್ದೆಗಳಿಗೆ ಕನಿಷ್ಟ 19 ರಿಂದ ಗರಿಷ್ಟ 24 ವರ್ಷ ವಯೋಮಿತಿಯ ಮತ್ತು ಯಾವುದೇ ವಿಭಾಗದಲ್ಲಿ ಬಿಇ / ಬಿ.ಟೆಕ್ ಪದವಿಯನ್ನು ಪಡೆದಿರುವುದರ ಜೊತೆಗೆ ದ್ವಿತೀಯ ಪಿಯುಸಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತವನ್ನು ಅಧ್ಯಯನ ಮಾಡಿರಬೇಕು.

ಸಿಪಿಎಲ್‌ ಹೋಲ್ಡರ್ಸ್:

ಸಿಪಿಎಲ್ ಅನ್ನು ಡಿಜಿಸಿಎ (ಭಾರತ) ಹೊಂದಿರುವ ಮತ್ತು 19 ರಿಂದ 25 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಹುದ್ದೆಗಳಿಗೆ ಸೇರಬಹುದು.

ನಾವಲ್ ಆರ್ನಮೆಂಟ್ ಇನ್‌ಸ್ಪೆಕ್ಟೋರೇಟ್ (ಎನ್‌ಐಎ):

ಕನಿಷ್ಟ 19 ವರೆ ವರ್ಷದಿಂದ ಗರಿಷ್ಟ 25 ವರ್ಷ ವಯೋಮಿತಿಯ ಮತ್ತು ಬಿಇ /ಬಿಟೆಕ್ ಅನ್ನು ಇಲೆಕ್ಟ್ರಿಕಲ್ / ಇಲೆಕ್ಟ್ರಾನಿಕ್ಸ್ / ಮೆಕ್ಯಾನಿಕಲ್ / ಪ್ರೊಡಕ್ಷನ್ / ಇನ್‌ಸ್ಟ್ರುಮೆಂಟೇಶನ್ / ಐಟಿ / ಕೆಮಿಕಲ್ / ಮೆಟಲರ್ಜಿ /ಏರೋಸ್ಟೇಸ್ ಇಂಜಿನಿಯರಿಂಗ್ ನಲ್ಲಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಸೇರಬಹುದು.

For Quick Alerts
ALLOW NOTIFICATIONS  
For Daily Alerts

English summary
Here is the complete guide on how women can join indian navy. Read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X