Human Resource Management Careers: ಹೆಚ್ಆರ್ ಆಗಲು ಕೋರ್ಸ್, ಅರ್ಹತೆ ಮತ್ತು ಕಾಲೇಜುಗಳ ವಿವರ

ಹೆಚ್‌ಆರ್ ಆಗಿ ಕೆಲಸಕ್ಕೆ ಸೇರಿಕೊಂಡ್ರೆ, ಕೈ ತುಂಬಾ ಸಂಬಳ ಗೊತ್ತಾ ?

ಮಾನವ ಸಂಪನ್ಮೂಲ ನಿರ್ವಹಣೆ ಅಥವಾ ಎಚ್‌ಆರ್‌ಎಂ ಎನ್ನುವುದು ವ್ಯವಹಾರ ಮತ್ತು ನಿರ್ವಹಣಾ ಅಧ್ಯಯನಗಳ ಒಂದು ಉಪ ಶಾಖೆಯಾಗಿದೆ. ಒಂದು ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ವಿಭಾಗವನ್ನು ನಿರ್ವಹಿಸಲು ಅಗತ್ಯವಾದ ಜ್ಞಾನವನ್ನು ಪಡೆಯಲು ವಿದ್ಯಾರ್ಥಿಗಳಿಗೆ ಈ ಕೋರ್ಸ್ ಸಹಾಯ ಮಾಡುತ್ತದೆ. ಈ ಕೋರ್ಸ್ ನಲ್ಲಿ ವ್ಯವಹಾರ ಪರಿಸರ, ಸಂವಹನ ಕೌಶಲ್ಯ ಮತ್ತು ನಿರ್ವಹಣಾ ಖಾತೆ ಸೇರಿದಂತೆ ವಿವಿಧ ವಿಷಯಗಳನ್ನು ಅಧ್ಯಯನ ಮಾಡಲಾಗುತ್ತದೆ.

ಹೆಚ್‌ಆರ್ ಆಗಿ ಕೆಲಸಕ್ಕೆ ಸೇರಿಕೊಂಡ್ರೆ, ಕೈ ತುಂಬಾ ಸಂಬಳ ಗೊತ್ತಾ ?

ಹೆಚ್‌ಆರ್ ಆಗಿ ಕೆಲಸಕ್ಕೆ ಸೇರಿಕೊಂಡ್ರೆ, ಕೈ ತುಂಬಾ ಸಂಬಳ ಗೊತ್ತಾ ?

ಎಚ್‌ಆರ್‌ಎಂ ಇಲಾಖೆಯು ಆಡಳಿತಾತ್ಮಕ ಸೇವೆಗಳು, ಸಿಬ್ಬಂದಿ ಆಡಳಿತ, ಕಾರ್ಯಕ್ಷಮತೆ ನಿರ್ವಹಣೆ ಮತ್ತು ಸಂಸ್ಥೆಯ ನೇಮಕ ಪ್ರಕ್ರಿಯೆ ಮತ್ತು ಇತರೆ ಕೆಲಸಗಳನ್ನು ಕೇಂದ್ರೀಕರಿಸುತ್ತದೆ. ಹಾಗಾಗಿ ನೀವು ಈ ಕೋರ್ಸ್ ಅಧ್ಯಯನ ಮಾಡಿ ಹೆಚ್‌ಆರ್ ಆಗಿ ಕೆಲಸಕ್ಕೆ ಸೇರಿಕೊಂಡರೆ ಹೆಚ್ಚು ಜವಾಬ್ದಾರಿಯೂ ಇರುತ್ತದೆ ಜೊತೆಗೆ ಕೈ ತುಂಬಾ ಸಂಪಾದನೆಯೂ ಸಿಗುತ್ತದೆ.

ಹೆಚ್‌ಆರ್ ಆಗಿ ಕೆಲಸಕ್ಕೆ ಸೇರಿಕೊಂಡ್ರೆ, ಕೈ ತುಂಬಾ ಸಂಬಳ ಗೊತ್ತಾ ?

ಹೆಚ್‌ಆರ್ ಆಗಿ ಕೆಲಸಕ್ಕೆ ಸೇರಿಕೊಂಡ್ರೆ, ಕೈ ತುಂಬಾ ಸಂಬಳ ಗೊತ್ತಾ ?

ಎಚ್‌ಆರ್‌ಎಂ ಕೋರ್ಸ್ ಮುಗಿಸಿದ ನಂತರ ನೀವು ಎಚ್‌ಆರ್ ಮ್ಯಾನೇಜರ್ ಅಥವಾ ಎಚ್‌ಆರ್ ಸಂಯೋಜಕರಾಗಿ ಅಥವಾ ಟ್ಯಾಲೆಂಟ್ ಅಕ್ವಿಸಿಷನ್ ಮ್ಯಾನೇಜರ್‌ ಆಗಿ ಕೂಡ ಕೆಲಸಕ್ಕೆ ಸೇರಬಹುದು. ಹಾಗಾದ್ರೆ ಈ ಕೋರ್ಸ್ ಅನ್ನು ಮಾಡಲು ಏನೆಲ್ಲಾ ಅರ್ಹತೆಗಳಿರಬೇಕು ಮತ್ತು ಭಾರತದಲ್ಲಿ ಯಾವೆಲ್ಲಾ ಪ್ರಸಿದ್ಧಿ ಕಾಲೇಜುಗಳಲ್ಲಿ ಈ ಕೋರ್ಸ್ ಅನ್ನು ಅಧ್ಯಯನ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.

ಭಾರತದ ಜನಪ್ರಿಯ ಮಾನವ ಸಂಪನ್ಮೂಲ ನಿರ್ವಹಣಾ ಕಾಲೇಜುಗಳ ಪಟ್ಟಿ:

ಭಾರತದ ಜನಪ್ರಿಯ ಮಾನವ ಸಂಪನ್ಮೂಲ ನಿರ್ವಹಣಾ ಕಾಲೇಜುಗಳ ಪಟ್ಟಿ:

1. ಜಮ್ನಾಲಾಲ್ ಬಜಾಜ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್, ಮುಂಬೈ
2. ಸ್ಕೂಲ್ ಆಫ್ ಬ್ಯುಸಿನೆಸ್, ಪೆಟ್ರೋಲಿಯಂ ಮತ್ತು ಶಕ್ತಿ ಅಧ್ಯಯನ ವಿಶ್ವವಿದ್ಯಾಲಯ, ಡೆಹ್ರಾಡೂನ್
3. ಎಕ್ಸ್‌ಎಲ್‌ಆರ್‌ಐ-ಜೇವಿಯರ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್, ಜಮ್‌ಶೆಡ್‌ಪುರ
4. ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ ಎಸ್‌ವಿಕೆಎಂನ ನಾರ್ಸಿ ಮೊಂಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್, ಮುಂಬೈ

ಅರ್ಹತೆಗಳೇನಿರಬೇಕು:

ಅರ್ಹತೆಗಳೇನಿರಬೇಕು:

ಮಾನವ ಸಂಪನ್ಮೂಲ ನಿರ್ವಹಣೆ ಅಧ್ಯಯನವನ್ನು ಪದವಿಪೂರ್ವ ಮತ್ತು ಸ್ನಾತಕೋತ್ತರ ಹಂತಗಳಲ್ಲಿ ಮಾಡಬಹುದು. ಈ ಕೋರ್ಸ್ ಗಳಿಗೆ ಕೇಳಲಾಗುವ ಅರ್ಹತಾ ಮಾನದಂಡಗಳು ಸಂಸ್ಥೆಯಿಂದ ಸಂಸ್ಥೆಗೆ ಭಿನ್ನವಾಗಿರುತ್ತದೆ. ಕೆಲವು ಕಾಲೇಜುಗಳು ಮಾನವ ಸಂಪನ್ಮೂಲ ನಿರ್ವಹಣೆ ಕೋರ್ಸ್ ಗಳಿಗೆ ನೇರ ಪ್ರವೇಶ ನೀಡಿದರೆ ಮತ್ತೆ ಕೆಲವು ಕಾಲೇಜುಗಳಲ್ಲಿ ಅಭ್ಯರ್ಥಿಗಳನ್ನು ಪ್ರವೇಶಾತಿ ಪರೀಕ್ಷೆಯ ಮೂಲಕ ದಾಖಲಾತಿ ಮಾಡಿಕೊಳ್ಳುತ್ತವೆ.

ಯುಜಿ ಮಟ್ಟದಲ್ಲಿ ಎಚ್‌ಆರ್‌ಎಂ ಕೋರ್ಸ್ ಗೆ ಸೇರಲು ಸಾಮಾನ್ಯ ಅರ್ಹತಾ ಮಾನದಂಡವೆಂದರೆ ವಿದ್ಯಾರ್ಥಿಗಳು 12 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕಿರುತ್ತದೆ. ಸ್ನಾತಕೋತ್ತರ ಮಟ್ಟದಲ್ಲಿ ನೀವು ಅಧ್ಯಯನ ಮಾಡಬೇಕೆಂದಿದ್ದಲ್ಲಿ ಕನಿಷ್ಟ ಪದವಿಯನ್ನು ಹೊಂದಿರಬೇಕು.

ಈ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆಯಲು ಇರುವ ಜನಪ್ರಿಯ ಪ್ರವೇಶ ಪರೀಕ್ಷೆಗಳಿವು :

ಈ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆಯಲು ಇರುವ ಜನಪ್ರಿಯ ಪ್ರವೇಶ ಪರೀಕ್ಷೆಗಳಿವು :

1. ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಎಟಿ)
2. ಕ್ಯಾವಿಯರ್ ಆಪ್ಟಿಟ್ಯೂಡ್ ಟೆಸ್ಟ್
3. ಕಾಮನ್ ಮ್ಯಾನೇಜ್ಮೆಂಟ್ ಅಡ್ಮಿಷನ್ ಟೆಸ್ಟ್ (ಸಿಎಮ್ಎಟಿ)
4. ಸಿಂಬಿಯಾಸಿಸ್ ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ (ಎಸ್‌ಎನ್‌ಎಪಿ)

For Quick Alerts
ALLOW NOTIFICATIONS  
For Daily Alerts

English summary
Do you want to pursue career in human resource management ? Here is the course, eligibility and college details.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X