IBPS PO Exam 2022 Preparation Tips : ಐಬಿಪಿಎಸ್ ಪಿಒ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದೀರಾ? ಈ ಸಲಹೆಗಳನ್ನು ಪಾಲಿಸಿ

ಇನ್ಸ್‌ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ವಾರ್ಷಿಕವಾಗಿ ಪ್ರೊಬೇಷನರಿ ಆಫೀಸರ್‌ ಹುದ್ದೆಗಳಿಗೆ (PO) ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಈ ಪರೀಕ್ಷೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.

ಐಬಿಪಿಎಸ್ ಪಿಒ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಉಪಯುಕ್ತ ಸಲಹೆಗಳು

ಐಬಿಪಿಎಸ್ 6,932 ಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಈ ಹುದ್ದೆಗಳ ನೇಮಕಾತಿ ಪರೀಕ್ಷೆಯು ಎರಡು ಸುತ್ತುಗಳಲ್ಲಿ ನಡೆಯಲಿದ್ದು, ಪೂರ್ವಭಾವಿ ಪರೀಕ್ಷೆಯು ಅಕ್ಟೋಬರ್ 15, 16 ಮತ್ತು 22 ರಂದು ಮತ್ತು ನವೆಂಬರ್ 26, 2022 ರಂದು ಮುಖ್ಯ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇರುವಾಗ ಅಭ್ಯರ್ಥಿಗಳು ಯಾವ ರೀತಿಯ ತಯಾರಿ ನಡೆಸಬೇಕು ಎನ್ನುವುದಕ್ಕೆ ಸಲಹೆಗಳನ್ನು ನೀಡಲಾಗಿದೆ.

ಐಬಿಪಿಎಸ್ ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಕೆಲವು ಸಲಹೆಗಳು ಇಲ್ಲಿವೆ :

1. ವೇಳಾಪಟ್ಟಿ ಅನುಸರಿಸಿ :

1. ವೇಳಾಪಟ್ಟಿ ಅನುಸರಿಸಿ :

ಅಭ್ಯರ್ಥಿಗಳು ಪರೀಕ್ಷಾ ವೇಳಾಪಟ್ಟಿಯನ್ನು ಹೊಂದಿರುವುದು ಅತ್ಯಗತ್ಯ. ಪರೀಕ್ಷಾ ವೇಳಾಪಟ್ಟಿಯ ಅನುಸಾರ ಕಷ್ಟಕರವಾದ ವಿಷಯಗಳನ್ನು ಮೊದಲು ಅಧ್ಯಯನ ಮಾಡುವ ಮೂಲಕ ಅವುಗಳಿಗೆ ನಿಗದಿತ ಸಮಯವನ್ನು ವ್ಯಯಿಸಿ. ಆಗ ಉಳಿದ ವಿಷಯಗಳಿಗೆ ಆದ್ಯತೆ ನೀಡಲು ನಿಮಗೆ ಸಮಯ ದೊರೆಯುತ್ತದೆ.

2. ಪುಸ್ತಕಗಳ ಅಧ್ಯಯನ ಮಾಡಿ :

2. ಪುಸ್ತಕಗಳ ಅಧ್ಯಯನ ಮಾಡಿ :

ಪರೀಕ್ಷೆಯ ತಯಾರಿಯಲ್ಲಿ ಅಭ್ಯರ್ಥಿಗಳು ಉತ್ತಮ ಪುಸ್ತಕಗಳನ್ನು ಅಧ್ಯಯನ ಮಾಡುವುದು ಕೂಡ ಪ್ರಮುಖವಾಗಿರುತ್ತದೆ. ಹಾಗಾಗಿ ನೀವು ವಿಷಯದ ಕುರಿತು ಹೆಚ್ಚು ಜ್ಞಾನವನ್ನು ಪಡೆಯಲು ಉತ್ತಮ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಿ. ಕೆಲವೊಮ್ಮೆ ಹೆಚ್ಚಿನ ಅಧ್ಯಯನ ಸಾಮಗ್ರಿಗಳನ್ನು ಹೊಂದಿರುವುದು ಕೂಡ ಗೊಂದಲವನ್ನು ಉಂಟುಮಾಡಬಹುದು, ಅದಾಗ್ಯೂ ಸಮಯದ ಅಭಾವ ಉಂಟಾಗಬಹುದು. ಹಾಗಾಗಿ ಲಭ್ಯವಿರುವ ಸಮಯಕ್ಕೆ ಸೂಕ್ತವಾದ ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಕೈಗೊಳ್ಳಿ.

3. ಓದುವಿಕೆಯನ್ನು ಕೈಗೊಳ್ಳಿ:

3. ಓದುವಿಕೆಯನ್ನು ಕೈಗೊಳ್ಳಿ:

ಓದುವ ಗ್ರಹಿಕೆ, ಶಬ್ದಕೋಶ ಮತ್ತು ಸಾಮಾನ್ಯ ಅರಿವನ್ನು ಒಂದೇ ಸಮಯದಲ್ಲಿ ಹೆಚ್ಚಿಸಲು ಓದುವಿಕೆ ಪರಿಪೂರ್ಣ ಮಾರ್ಗವಾಗಿದೆ. ಪರೀಕ್ಷೆಗೆ ಹಾಜರಾಗುವ ಆಕಾಂಕ್ಷಿಗಳು ನಿಯತಕಾಲಿಕೆಗಳನ್ನು ಓದುವುದು ಒಳಿತು. ಪ್ರಚಲಿತ ಸುದ್ದಿಗಳನ್ನು ಓದುವುದು ಮತ್ತು ನಿಮ್ಮನ್ನು ನೀವು ಅಪ್‌ಡೇಟ್ ಮಾಡಿಕೊಳ್ಳುವುದು ಕೂಡ ಅಗತ್ಯ ಹಾಗಾಗಿ ನೀವು ಆನ್‌ಲೈನ್ ಪೋರ್ಟಲ್ ಗಳ ಮೂಲಕವೂ ಅಧ್ಯಯನ ಕೈಗೊಳ್ಳಬಹುದು.

4. ಬರವಣಿಗೆ :

4. ಬರವಣಿಗೆ :

ಬರವಣಿಗೆಯ ಮೂಲಕ ಕಲಿಯುವುದರಿಂದ ಮೆದುಳು ಹೆಚ್ಚು ಶಾಶ್ವತವಾದ ರೀತಿಯಲ್ಲಿ ಮಾಹಿತಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ವಿಶೇಷವಾಗಿ ಅಭ್ಯಾಸದ ಅಗತ್ಯವಿರುವ ವಿಷಯಗಳಾದ ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಮತ್ತು ರೀಸನಿಂಗ್ ವಿಷಯಗಳಲ್ಲಿನ ವಿಧಾನಗಳು ಮತ್ತು ಸೂತ್ರಗಳನ್ನು ನೆನಪಿಟ್ಟುಕೊಳ್ಳಲು ಬರವಣಿಗೆಯ ಮೂಲಕ ಪ್ರಶ್ನೆಗಳನ್ನು ಅಭ್ಯಾಸ ಮಾಡಿ.

5. ವೇಗ ಮತ್ತು ನಿಖರತೆ :

5. ವೇಗ ಮತ್ತು ನಿಖರತೆ :

ಎಲ್ಲಾ ಪರೀಕ್ಷೆಯ ತಯಾರಿಯಲ್ಲಿ ವೇಗ ಅತ್ಯಗತ್ಯ, ನೀವು ಗರಿಷ್ಠ ಸಂಖ್ಯೆಯ ಪ್ರಶ್ನೆಗಳನ್ನು ಪ್ರಯತ್ನಿಸುವುದನ್ನು ಇದು ಖಚಿತಪಡಿಸುತ್ತದೆ. ಅಂತಹ ವೇಗದ ಅಭ್ಯಾಸವು ಅಣಕು ಪರೀಕ್ಷೆಗಳ ಮೂಲಕ ಮಾತ್ರ ಬರುತ್ತದೆ. ನೀವು ಹೆಚ್ಚು ಅಭ್ಯಾಸ ಮಾಡಿದರೆ ಪ್ರಶ್ನೆಗಳ ಮಾದರಿಯು ಹೆಚ್ಚು ಪರಿಚಿತವಾಗುತ್ತದೆ, ಇದು ನಿಜವಾಗಿಯೂ ಪರೀಕ್ಷೆಯ ಸಮಯದಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ. ಆದರೆ ವೇಗದ ಮೇಲೆ ಮಾತ್ರ ಕೇಂದ್ರೀಕರಿಸಿದರೆ ಸಾಕಾಗುವುದಿಲ್ಲ, ಅಭ್ಯರ್ಥಿಗಳು ಗರಿಷ್ಠ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸುವ ಗುರಿಯನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು. ವೇಗ ಮತ್ತು ನಿಖರತೆಯ ಸಮತೋಲನವು ಹೆಚ್ಚಿನ ಅಂಕಗಳನ್ನು ಪಡೆಯಲು ಪೂರಕವಾಗಿರುತ್ತದೆ.

6. ಸ್ಮರಣೆ :

6. ಸ್ಮರಣೆ :

ಐಬಿಪಿಎಸ್ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಸೂತ್ರಗಳು, ಶಬ್ದಕೋಶ, ಸಾಮಾನ್ಯ ಅರಿವು, ಸತ್ಯಗಳು ಮತ್ತು ಅಂಕಿಗಳನ್ನು ನೆನಪಿಟ್ಟುಕೊಳ್ಳುವುದು ಮುಖ್ಯವಾಗಿದೆ. ಸೂತ್ರಗಳು, ಗುರುತುಗಳು, ದಿನಾಂಕಗಳು, ಸ್ಥಳಗಳು, ಪದಗಳು ಮತ್ತು ಅವುಗಳ ಅರ್ಥಗಳು, ಭಾಷಾವೈಶಿಷ್ಟ್ಯಗಳು, ನುಡಿಗಟ್ಟುಗಳು ಇತ್ಯಾದಿಗಳನ್ನು ನೆನಪಿಟ್ಟುಕೊಳ್ಳಲು ಅಗತ್ಯವಿರುವ ಎಲ್ಲಾ ವಿಷಯಗಳಿಗೆ ಪ್ರತ್ಯೇಕ ಟಿಪ್ಪಣಿಯನ್ನು ಹೊಂದುವುದು ಉತ್ತಮವಾಗಿದೆ. ಇದು ನೆನಪಿಟ್ಟುಕೊಳ್ಳಲು ಮತ್ತು ಪರಿಷ್ಕರಿಸಲು ಸುಲಭಗೊಳಿಸುತ್ತದೆ.

7. ರಿವಿಷನ್ ಮತ್ತು ಡೌಟ್ ಕ್ಲಿಯರೆನ್ಸ್:

7. ರಿವಿಷನ್ ಮತ್ತು ಡೌಟ್ ಕ್ಲಿಯರೆನ್ಸ್:

ಪರಿಷ್ಕರಣೆಗಾಗಿ ಪ್ರತ್ಯೇಕ ವೇಳಾಪಟ್ಟಿಯನ್ನು ಮಾಡಿ ಮತ್ತು ಅವುಗಳಲ್ಲಿ ಅಣಕು ಪರೀಕ್ಷೆಗಳನ್ನು ಸೇರಿಸಲು ಮರೆಯಬೇಡಿ. ಪರೀಕ್ಷೆಯ ಇಂಟರ್ಫೇಸ್ ಮತ್ತು ಷರತ್ತುಗಳೊಂದಿಗೆ ನಿಮಗೆ ಪರಿಚಿತರಾಗಲು ಇದು ಸಹಾಯ ಮಾಡುತ್ತದೆ. ನಿಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳಲು ತಜ್ಞರೊಂದಿಗೆ ಚರ್ಚೆ ನಡೆಸಿ.

ಪರೀಕ್ಷಾ ತಯಾರಿಗೆ ಕೊನೆಯ ನಿಮಿಷದ ಸಲಹೆಗಳು:

ಪರೀಕ್ಷಾ ತಯಾರಿಗೆ ಕೊನೆಯ ನಿಮಿಷದ ಸಲಹೆಗಳು:

1. ನಿಗದಿತ ಸಮಯಕ್ಕಿಂತ ಕನಿಷ್ಠ ಅರ್ಧ ಗಂಟೆ ಮೊದಲು ನೀವು ಪರೀಕ್ಷಾ ಕೇಂದ್ರಕ್ಕೆ ತಲುಪುವುದನ್ನು ಖಚಿತಪಡಿಸಿಕೊಳ್ಳಿ.

2. ಪರೀಕ್ಷಾ ಪ್ರವೇಶ ಪತ್ರ, ಫೋಟೋ ID ಪುರಾವೆ ಮತ್ತು ಪ್ರಮುಖ ಲೇಖನ ಸಾಮಗ್ರಿಗಳನ್ನು ಪರೀಕ್ಷೆಗೆ ಕೊಂಡೊಯ್ಯಲು ಮರೆಯದಿರಿ.

3. IBPS PO ಪರೀಕ್ಷೆಯ ಸಮಯದಲ್ಲಿ ನೀವು ಆನ್‌ಲೈನ್ ಪರೀಕ್ಷೆಯ ಮಾದರಿ ಅಥವಾ ವಿನ್ಯಾಸವನ್ನು ಎದುರಿಸಿದಾಗ ಗೊಂದಲಗೊಳ್ಳಬೇಡಿ. ನೀವು ಅದರೊಂದಿಗೆ ಸ್ವಲ್ಪ ಮಟ್ಟಿಗೆ ಪರಿಚಿತರಾಗಿರುವಿರಿ ಎಂದು ಖಚಿತಪಡಿಸಿಕೊಳ್ಳಿ. ಆನ್‌ಲೈನ್ ಮಾಕ್ ಟೆಸ್ಟ್ ಸರಣಿಯ ಮೂಲಕ ಇದನ್ನು ಉತ್ತಮವಾಗಿ ಸಾಧಿಸಲಾಗುತ್ತದೆ.

4. ಪರೀಕ್ಷಾ ಕೇಂದ್ರದಲ್ಲಿ ಗಾಬರಿಗೊಂಡ ಗೆಳೆಯರ ಮಾತನ್ನು ಕೇಳಬೇಡಿ. ಇದರಿಂದ ನೀವು ಗೊಂದಲ ಮತ್ತು ಆತಂಕಕ್ಕೊಳಗಾಗುವ ಸಾಧ್ಯತೆಗಳಿವೆ.

ಈ ಸಲಹೆಗಳೊಂದಿಗೆ ಪರೀಕ್ಷೆಯನ್ನು ಉತ್ತಮ ರೀತಿಯಲ್ಲಿ ಎದುರಿಸಲಿರುವ ಅಭ್ಯರ್ಥಿಗಳು ತಮ್ಮ ಸಾಮರ್ಥ್ಯಗಳ ಬಗ್ಗೆ ವಿಶ್ವಾಸ ಹೊಂದಿರಿ ಎಂದು ಹೇಳುತ್ತಾ ಎಲ್ಲಾ ಆಕಾಂಕ್ಷಿಗಳಿಗೆ ನಾವು ಶುಭ ಹಾರೈಸುತ್ತೇವೆ.

For Quick Alerts
ALLOW NOTIFICATIONS  
For Daily Alerts

English summary
Here is the last minute preparation tips for aspirants who are preparing for ibps po exam 2022.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X