IBPS PO Prelims Exam Tips : ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಉಪಯುಕ್ತ ಸಲಹೆ

ಐಬಿಪಿಎಸ್ ಪಿಒ ಪರೀಕ್ಷೆಯನ್ನು ದಿ ಇನ್‌ಸ್ಟಿಟ್ಯೂಟ್ ಆಫ್ ಪರ್ಸೆನಲ್ ಬ್ಯಾಂಕಿಂಗ್ ಸೆಲೆಕ್ಷನ್ ಸಂಸ್ಥೆಯು ವರ್ಷಕ್ಕೊಮ್ಮೆ ನಡೆಸುತ್ತದೆ. ಭಾರತದಲ್ಲಿನ ವಿವಿಧ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಪ್ರೊಬೇಷನರಿ ಅಧಿಕಾರಿಗಳ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪರೀಕ್ಷೆಯನ್ನು ನಡೆಸಲಾಗುತ್ತದೆ. ಪರೀಕ್ಷೆಯ 11 ನೇ ಆವೃತ್ತಿಯನ್ನು ಡಿಸೆಂಬರ್ 4, 2021 ರಂದು ನಾಲ್ಕು ಪಾಳಿಗಳಲ್ಲಿ ನಡೆಸಲಾಯಿತು. ಮುಂದಿನ ಪ್ರಿಲಿಮಿನರಿ ಪರೀಕ್ಷೆಯು ಡಿಸೆಂಬರ್ 11, 2021 ರಂದು ನಡೆಯಲಿದೆ.

ಐಬಿಪಿಎಸ್ ಪಿಒ ಪ್ರಿಲಿಮಿನರಿ ಪರೀಕ್ಷೆಗೆ ಉಪಯುಕ್ತ ಸಲಹೆಗಳು ಇಲ್ಲಿವೆ

ಐಬಿಪಿಎಸ್ ಪಿಒ ಪ್ರಿಲಿಮಿನರಿ 2021 ಪರೀಕ್ಷೆಯನ್ನು ಆನ್‌ಲೈನ್ ಮೋಡ್ ಮೂಲಕ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪರೀಕ್ಷೆಯು ತಾರ್ಕಿಕ ಸಾಮರ್ಥ್ಯ, ಇಂಗ್ಲಿಷ್ ಭಾಷೆ ಮತ್ತು ಪರಿಮಾಣಾತ್ಮಕ ಯೋಗ್ಯತೆ ಸೇರಿದಂತೆ ಮೂರು ವಿಭಾಗಗಳನ್ನು ಒಳಗೊಂಡಿದ್ದು, ಒಟ್ಟು 100 ಪ್ರಶ್ನೆಗಳಿರುತ್ತವೆ. ಪ್ರತಿ ಸರಿಯಾದ ಉತ್ತರವು ಒಂದು ಅಂಕವನ್ನು ಪಡೆದರೆ ಪ್ರತಿ ತಪ್ಪು ಉತ್ತರಕ್ಕೆ 0.25 ನೆಗೆಟಿವ್ ಅಂಕಗಳು ಇರುತ್ತದೆ. ಪರೀಕ್ಷೆಯ ಒಟ್ಟಾರೆ ಅವಧಿ ಒಂದು ಗಂಟೆ. ಪರೀಕ್ಷೆಗೆ ಒಂದೇ ದಿನ ಬಾಕಿ ಇದ್ದು ಈ ಸಂದರ್ಭದಲ್ಲಿ ಅಧ್ಯಯನಕ್ಕೆ ಕೆಲವು ಸಲಹೆಗಳು ಇಲ್ಲಿವೆ.

ಪ್ರಶ್ನೆ ಮಾದರಿಯನ್ನು ತಿಳಿಯಿರಿ:

ಪ್ರಶ್ನೆ ಮಾದರಿಯನ್ನು ತಿಳಿಯಿರಿ:

ಐಬಿಪಿಎಸ್ ಪಿಒ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪ್ರಶ್ನೆಗಳ ಮಾದರಿ ಮತ್ತು ನಿಗದಿಪಡಿಸಿದ ಅಂಕಗಳ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯನ್ನು ಪಡೆಯಲು ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಅಧ್ಯಯನ ಮಾಡಬಹುದು. ಪರೀಕ್ಷಾ ಮಾದರಿಯನ್ನು ಸಂಪೂರ್ಣವಾಗಿ ತಿಳಿಯಲು ಪ್ರತಿ ವರ್ಗಕ್ಕೆ ನಿಗದಿಪಡಿಸಿದ ಅಂಕಗಳನ್ನು ವಿಶ್ಲೇಷಿಸಬೇಕು ಮತ್ತು ಮೌಲ್ಯಮಾಪನ ಮಾಡುವುದು ಒಳಿತು.

ಪರೀಕ್ಷೆಗೆ ಉತ್ತರಿಸಲು ತಂತ್ರ ಬಳಸಿ:

ಪರೀಕ್ಷೆಗೆ ಉತ್ತರಿಸಲು ತಂತ್ರ ಬಳಸಿ:

ಐಬಿಪಿಎಸ್ ಪಿಒ ಪರೀಕ್ಷೆಗೆ ಒಟ್ಟು ನಿಗದಿಪಡಿಸಿರುವ ಸಮಯ 60 ನಿಮಿಷಗಳು. ಆದ್ದರಿಂದ ಅಭ್ಯರ್ಥಿಗಳು ಬುದ್ಧಿವಂತಿಕೆಯಿಂದ ಸಾಧ್ಯವಾದಷ್ಟು ಪ್ರಶ್ನೆಗಳನ್ನು ಉತ್ತರಿಸಲು ಪ್ರಯತ್ನಿಸಬೇಕು. ಪ್ರತಿ ತಪ್ಪು ಉತ್ತರಕ್ಕೂ ನೆಗೆಟಿವ್ ಅಂಕಗಳು ಇರುತ್ತದೆ ಎಂಬುದನ್ನು ಗಮನದಲ್ಲಿಡಬೇಕು. ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವ ಉತ್ಸಾಹವನ್ನು ಅಭ್ಯರ್ಥಿಗಳು ಹೊಂದಿರಬೇಕು.

ಸಮಯ ನಿರ್ವಹಣೆಯ ಮೇಲೆ ಕೇಂದ್ರೀಕರಿಸಿ:
 

ಸಮಯ ನಿರ್ವಹಣೆಯ ಮೇಲೆ ಕೇಂದ್ರೀಕರಿಸಿ:

ಐಬಿಪಿಎಸ್ ಪಿಒ ಪ್ರಿಲಿಮಿನರಿ ಪರೀಕ್ಷೆಯು ಕೇವಲ ಒಂದು ಗಂಟೆಯಿರುವ ಕಾರಣ ಅಭ್ಯರ್ಥಿಗಳು ಒಂದು ಪ್ರಶ್ನೆಗೆ ಹೆಚ್ಚು ಸಮಯವನ್ನು ವ್ಯಯಿಸಬಾರದು. ಅಣಕು ಪರೀಕ್ಷೆ ಪತ್ರಿಕೆಗಳನ್ನು ನಿಯಮಿತವಾಗಿ ಅಭ್ಯಾಸ ಮಾಡುವ ಮೂಲಕ ಅಭ್ಯರ್ಥಿಗಳು ತಮ್ಮ ಸಮಯವನ್ನು ಉತ್ತಮವಾಗಿ ನಿರ್ವಹಿಸಲು ಕಲಿಯಬೇಕು.

ಸ್ವಾಟ್/SWOT ವಿಶ್ಲೇಷಣೆ ಮುಖ್ಯ:

ಸ್ವಾಟ್/SWOT ವಿಶ್ಲೇಷಣೆ ಮುಖ್ಯ:

ಪ್ರತಿ ಅಣಕು ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರ ಅಭ್ಯರ್ಥಿಗಳು ಸಂಪೂರ್ಣ SWOT (ಸಾಮರ್ಥ್ಯಗಳು, ದೌರ್ಬಲ್ಯ, ಅವಕಾಶಗಳು ಮತ್ತು ಬೆದರಿಕೆಗಳು) ವಿಶ್ಲೇಷಣೆಯನ್ನು ಮಾಡಬೇಕು ಮತ್ತು ಅದಕ್ಕೆ ಅನುಗುಣವಾಗಿ ತಯಾರಿ ಮಾಡಬೇಕು. ಅಭ್ಯರ್ಥಿಗಳು ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾದಷ್ಟು ಅಣಕು ಪರೀಕ್ಷೆಗಳನ್ನು ಅಭ್ಯಾಸ ಮಾಡಿ.

ನಿಮ್ಮದೇ ವೇಳಾಪಟ್ಟಿಯನ್ನು ಯೋಜಿಸಿ:

ನಿಮ್ಮದೇ ವೇಳಾಪಟ್ಟಿಯನ್ನು ಯೋಜಿಸಿ:

ಐಬಿಪಿಎಸ್ ಪರೀಕ್ಷೆ ಅಧ್ಯಯನಕ್ಕೆ ನಿಮ್ಮದೇ ಆದ ವೇಳಾಪಟ್ಟಿಯನ್ನು ರಚಿಸಿಕೊಂಡಿದ್ದರೆ ಉತ್ತಮ. ಏಕೆಂದರೆ ಇದು ಪ್ರಾರಂಭದಿಂದಲೂ ಎಲ್ಲಾ ವಿಷಯಗಳನ್ನು ಕಲಿಯಲು ಅಭ್ಯರ್ಥಿಗಳಿಗೆ ಸಹಾಯ ಮಾಡುತ್ತದೆ. ಈ ರೀತಿಯ ವೇಳಾಪಟ್ಟಿಯು ಕೊನೆಯ ಕ್ಷಣದ ತಯಾರಿಕೆಯ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ಕಡಿಮೆ ಸಮಯದಲ್ಲಿ ತಯಾರಿ ನಡೆಸಲು ಸಹಾಯ ಮಾಡುತ್ತದೆ.

ಅಂತಿಮ ಕ್ಷಣದ ಸಲಹೆಗಳು:

ಅಂತಿಮ ಕ್ಷಣದ ಸಲಹೆಗಳು:

ಐಬಿಪಿಎಸ್ ಪಿಒ ಪ್ರಿಲಿಮಿನರಿ ಪರೀಕ್ಷೆಗೆ ಹಾಜರಾಗುವವರಿಗೆ ಅಂತಿಮ ಸಲಹೆ ಏನೆಂದರೆ ಪ್ರಿಲಿಮಿನರಿ ಮತ್ತು ಮುಖ್ಯ ಪರೀಕ್ಷೆಗೆ ಪ್ರತ್ಯೇಕ ತಯಾರಿ ತಂತ್ರವಿಲ್ಲ ಎಂದು ಮೊದಲು ಅರ್ಥಮಾಡಿಕೊಳ್ಳಬೇಕು. ಅಭ್ಯರ್ಥಿಗಳು ಸಾಮಾನ್ಯವಾಗಿ ಪ್ರಿಲಿಮ್ಸ್ ಮತ್ತು ಮೈನ್ಸ್ ಪರೀಕ್ಷೆಗಳ ತಯಾರಿಗೆ ಸಮಯದ ಕೊರತೆಯನ್ನು ಹೊಂದಿರುತ್ತಾರೆ. ಹೀಗಾಗಿ ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆ ಎರಡಕ್ಕೂ ಒಟ್ಟಿಗೆ ತಯಾರಿ ನಡೆಸುವುದು ಉತ್ತಮ. ಅನೇಕ ಆಕಾಂಕ್ಷಿಗಳು ಈ ತಪ್ಪನ್ನು ಮಾಡುತ್ತಾರೆ ಹಾಗಾಗಿ ಉತ್ತಮ ಅಂಕಗಳನ್ನು ಪಡೆಯಲು ವಿಫಲರಾಗುತ್ತಾರೆ.

ಮಹತ್ವಾಕಾಂಕ್ಷಿ ಅಭ್ಯರ್ಥಿಗಳು ಮೊದಲು ತಮ್ಮನ್ನು ತಾವು ನಂಬಬೇಕು ಏಕೆಂದರೆ ನಿಮ್ಮ ಆತ್ಮ ವಿಶ್ವಾಸದಿಂದ ಪರೀಕ್ಷೆಯನ್ನು ಉತ್ತಮವಾಗಿ ಎದುರಿಸಲು ಸಹಾಯವಾಗುತ್ತದೆ. ಇದರಿಂದ ನಿಮ್ಮ ಗುರಿಯನ್ನು ತಲುಪುವಲ್ಲಿ ನೀವು ಯಶಸ್ವಿಯಾಗುತ್ತೀರಿ.

For Quick Alerts
ALLOW NOTIFICATIONS  
For Daily Alerts

English summary
IBPS probationary officer preliminary exam 2021 is on december 11. Here is the useful tips for aspirants in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X