First Job After College Tips : ಉದ್ಯೋಗಕ್ಕೆ ಸೇರುವ ಮುನ್ನ ಸಂದರ್ಶನದಲ್ಲಿ ಕೇಳಲಾಗುವ ಸಂಬಳದ ಬಗ್ಗೆ ನಿಮ್ಮ ನಿರ್ಧಾರ ಹೀಗಿರಲಿ

ಕಾಲೇಜು ದಿನಗಳಲ್ಲಿ ಕಳೆಯುವ ಮೋಜು ಮಸ್ತಿ, ಕಲಿಕೆ, ತುಂಟಾಟದ ದಿನಗಳ ನಂತರ ಎದುರಾಗುವುದೇ ನಿಜವಾದ ಬದುಕು. ಸಾಮಾನ್ಯವಾಗಿ ಕಾಲೇಜು ಶಿಕ್ಷಣ ಮುಗಿದ ಬಳಿಕ ಅನೇಕರು ಉದ್ಯೋಗವನ್ನು ಹುಡುಕಲು ಪ್ರಾರಂಭಿಸುತ್ತಾರೆ. ಈ ಉದ್ಯೋಗ ಹುಡುಕುವ ಪ್ರಕ್ರಿಯೆ ಅಷ್ಟೊಂದು ಸುಲಭವಲ್ಲ ಅದರಲ್ಲೂ ಎಲ್ಲಾದರು ಕೆಲಸ ಖಾಲಿ ಇದೆ ಎಂದಾದರೆ ಅದಕ್ಕೆ ಒಂದಷ್ಟು ತಯಾರಿಗಳು ಅಗತ್ಯ.

 
ಹೊಸದಾಗಿ ಕೆಲಸಕ್ಕೆ ಸೇರುವಾಗ ಹೆಚ್ಚು ವೇತನ ಬಯಸುತ್ತೀರಾ ? ಹಾಗಾದ್ರೆ ಈ ಅಂಶಗಳನ್ನು ಗಮನದಲ್ಲಿಡಿ

ಇನ್ನು ಸಂದರ್ಶನಕ್ಕೆ ಕರೆದಿದ್ದಾರೆ ಎಂದಾದರೆ ಏನೆಲ್ಲಾ ಮಾತನಾಡಬೇಕು ಮತ್ತು ಹೇಗೆ ಮಾತನಾಡಬೇಕು ಎನ್ನುವ ತಯಾರಿ ತುಂಬಾನೆ ಬೇಕಾಗತ್ತೆ. ಅದರಲ್ಲಿ ಪ್ರಮುಖವಾಗಿ ಸಂಬಳದ ಬಗ್ಗೆ ಮಾತುಕತೆ ನಡೆಸುವಾಗ ತುಂಬಾನೆ ಎಚ್ಚರದಿಂದಿರೋದು ಅವಶ್ಯಕ. ಯಾಕಂತೀರಾ ಅದರ ಬಗ್ಗೆ ಸಂಪೂರ್ಣವಾಗಿ ನಾವ್ ತಿಳಿಸ್ತೀವಿ ನೋಡಿ.

ನೀವು ಮೊದಲ ಬಾರಿ ಉದ್ಯೋಗಕ್ಕೆ ಸೇರುವಾಗ ಕಂಪೆನಿಗಳು ನೀಡುವ ಸಂಬಳದ ಲೆಕ್ಕಾಚಾರದ ಬಗ್ಗೆ ನಿಮಗೆ ತಿಳಿದಿರುವುದಿಲ್ಲ. ಉದಾಹರಣೆಗೆ 'ಎ' ಕಂಪೆನಿಯೊಂದು ನಿಮಗೆ ವರ್ಷಕ್ಕೆ 2.5 ಲಕ್ಷ ವೇತನ ನೀಡುವುದಾಗಿ ಆಫರ್ ಮಾಡುತ್ತದೆ ಇದೇ ವೇಳೆ ಮತ್ತೊಂದು ಕಂಪೆನಿಯಲ್ಲಿ ವರ್ಷಕ್ಕೆ 4 ಲಕ್ಷ ಸಂಬಳ ಜೊತೆಗೆ ಬೋನಸ್ ಹಾಗೂ ಕಾರ್ಯಕ್ಷಮತೆ-ಸಂಬಂಧಿತ ಪ್ರೋತ್ಸಾಹ ಹಣವೆಂದು 1 ಲಕ್ಷ ನೀಡುವುದಾಗಿ ಹೇಳುತ್ತದೆ. ಈಗ ಹೇಳಿ ನೀವು ಯಾವ ರೀತಿಯ ವೇತನವನ್ನು ನೀಡುವ ಕಂಪೆನಿಯನ್ನು ಆಯ್ಕೆ ಮಾಡಲು ಬಯಸುತ್ತೀರಾ ? ನೋಡಿ ಇಂತಹ ಸಂದರ್ಭದಲ್ಲಿ ಯಾವ ಅಂಶಗಳನ್ನು ನೆನಪಿನಲ್ಲಿಡಬೇಕು ಮತ್ತು ಈ ರೀತಿಯ ಗೊಂದಲ ಪರಿಹರಿಸಿಕೊಳ್ಳುವುದು ಹೇಗೆ ಎನ್ನುವುದಕ್ಕೆ ನಾವು ನೀಡುವ ಸಲಹೆಯನ್ನು ಸಂಪೂರ್ಣವಾಗಿ ಓದಿ.

ಫ್ರೆಶರ್ಸ್ ಆಯ್ಕೆ :

ಫ್ರೆಶರ್ಸ್ ಆಯ್ಕೆ :

ಬಹುತೇಕ ಐಟಿ ಕಂಪನಿಗಳು ಮತ್ತು ಟೆಕ್ ಸ್ಟಾರ್ಟ್ ಅಪ್ ಗಳು ಬಹಳಷ್ಟು ಹೊಸ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುತ್ತವೆ. ಈ ಕುರಿತು ಒಂದು ತಂಡ ಬಿಡುಗಡೆ ಮಾಡಿರುವ ವರದಿಯು ಇತ್ತೀಚೆಗೆ ಬಹಿರಂಗವಾಗಿದ್ದು, ವರದಿಯ ಪ್ರಕಾರ ಕಾಲೇಜು ಮುಗಿಸಿದ ಹೊಸ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವ ಉದ್ದೇಶ ಹೊಂದಿರುವ ಕಂಪನಿಗಳು ಜುಲೈ-ಸೆಪ್ಟೆಂಬರ್ 2021 ರಲ್ಲಿ 7%ರಷ್ಟು ಹೆಚ್ಚಳವಾಗಿದೆ.

ಉದ್ಯೋಗಕ್ಕೆ ಸೇರುವ ಆತುರದಲ್ಲಿ ನೀವು ತಪ್ಪು ಹೆಜ್ಜೆಯನ್ನು ಇಡುತ್ತೀರಿ ತದನಂತರ ವಿಷಾದಿಸುತ್ತೀರಿ. ಇದು ನಿಮ್ಮ ತಪ್ಪು ಮಾತ್ರವಲ್ಲ ಕಂಪನಿಯ ತಪ್ಪು ಕೂಡ ಏಕೆಂದರೆ ಕಂಪೆನಿಗಳು ಕೆಲವು ನಿಖರವಾದ ವಿವರಗಳನ್ನು ಬಹಿರಂಗಪಡಿಸುವುದಿಲ್ಲ. ಕೇವಲ ವರ್ಷದ ವೇತನ (ಸಿಟಿಸಿ) ಸಂಖ್ಯೆಗಳನ್ನು ಮಾತ್ರ ಹೇಳುತ್ತವೆ ಹಾಗಾಗಿ ಹೊಸದಾಗಿ ಉದ್ಯೋಗಕ್ಕೆ ಸೇರುವ ಅಭ್ಯರ್ಥಿಯು ಸಿಟಿಸಿ (ವರ್ಷದ ವೇತನ) ಸಂಖ್ಯೆಗಳನ್ನು ಕೇಳಿ ಪ್ರಭಾವಿತನಾಗುತ್ತಾನೆ. ಏಕೆಂದರೆ ಅದು ತುಂಬಾ ಆಕರ್ಷಕವಾಗಿ ಕಾಣುತ್ತದೆ. ಆದರೆ ಅಭ್ಯರ್ಥಿಯು ತನ್ನ ಕೈಗೆ ಎಷ್ಟು ವೇತನ ಸಿಗಲಿದೆ ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಒಮ್ಮೊಮ್ಮೆ ಅನುಭವಿ ವೃತ್ತಿಪರರು ಕೂಡ ಈ ಬಲೆಗೆ ಬೀಳುತ್ತಾರೆ. ಆದ್ದರಿಂದ ಕಂಪೆನಿಯು ನೀಡಲಾಗುವ ವೇತನದ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಪ್ರಯತ್ನಿಸಿ ಆಗ ಮಾತ್ರ ಕೈಗೆ ಉತ್ತಮ ವೇತನ ಸಿಗಲು ಸಾಧ್ಯವಾಗುತ್ತದೆ.

ಟೇಕ್‌-ಹೋಂ ಸಂಬಳ :
 

ಟೇಕ್‌-ಹೋಂ ಸಂಬಳ :

ಹೊಸದಾಗಿ ಉದ್ಯೋಗಕ್ಕೆ ಸೇರುವ ಅಭ್ಯರ್ಥಿಗಳು ಗಮನಹರಿಸಬೇಕಾದ ಪ್ರಮುಖ ವಿಷಯವೆಂದರೆ ಟೇಕ್-ಹೋಮ್ ಸಂಬಳವೆಷ್ಟು ಎನ್ನುವ ಬಗ್ಗೆ. ಟೇಕ್ ಹೋಂ ಸಂಬಳ ಅಂದರೆ ಒಟ್ಟಾರೆ ನೀಡಲಾಗುವ ವೇತನದಲ್ಲಿ ನಿಮ್ಮ ಕೈಸೇರಲಿರುವ ಹಣ ಮತ್ತು ಅದು ನಿಮ್ಮ ಖಾತೆಗೆ ಜಮಾ ಆಗುವ ನಿಜವಾದ ಮೊತ್ತವಾಗಿದೆ. ಇದರಿಂದಲೇ ನೀವು ನಿಮ್ಮ ತಿಂಗಳ ಖರ್ಚುವೆಚ್ಚಗಳನ್ನು ನಿಭಾಯಿಸಲು ಸಾಧ್ಯವಾಗುವಂತದ್ದು.

ಹೆಚ್ಚಿನ ಮೂಲ ವೇತನ :

ಹೆಚ್ಚಿನ ಮೂಲ ವೇತನ :

ಗಮನಹರಿಸಬೇಕಾದ ಮತ್ತೊಂದು ಪ್ರಮುಖ ವಿಷಯವೆಂದರೆ ಮೂಲ ವೇತನ. ಇದು ಯಾವಾಗಲೂ ಹೆಚ್ಚಿನದಾಗಿರಬೇಕು ಏಕೆಂದರೆ ಅದು ಅಂತಿಮವಾಗಿ ನಿಮ್ಮ ಭವಿಷ್ಯ ಅಥವಾ ನಿವೃತ್ತಿಯನ್ನು ವ್ಯಾಖ್ಯಾನಿಸುತ್ತದೆ. ಇದು ಒಟ್ಟಾರೆ ಸಂಭಾವನೆಯ 50 ಪ್ರತಿಶತಕ್ಕಿಂತ ಕಡಿಮೆ ಇರಬೇಕು, ಇದು ನಿಮ್ಮ ಉದ್ಯೋಗಿಗಳ ಭವಿಷ್ಯನಿಧಿ ಖಾತೆಯಲ್ಲಿ ಪ್ರತಿ ತಿಂಗಳು ಹೆಚ್ಚಿನ ಮೊತ್ತವನ್ನು ಜಮಾ ಮಾಡಲಾಗಿದೆಯೆ ಎಂದು ಖಚಿತಪಡಿಸುತ್ತದೆ.

ಸಾಮಾನ್ಯವಾಗಿ ಪ್ರತಿ ತಿಂಗಳು ಇಪಿಎಫ್‌ಗೆ ನಿಮ್ಮ ಕೊಡುಗೆಯಂತೆ ಉದ್ಯೋಗದಾತರು ನಿಮ್ಮ ಮೂಲಭೂತ (ಮತ್ತು ಅನ್ವಯವಾಗುವ ವೇಳೆ) ನಿಮ್ಮ ಶೇಕಡಾ 12 ರಷ್ಟು ಕಡಿತಗೊಳಿಸುತ್ತಾರೆ ಮತ್ತು ಇದು ಉದ್ಯೋಗದಾತರ ಕಡೆಯಿಂದಲೂ ಸಮಾನವಾಗಿ ಕಡಿತ ಮಾಡಲಾಗುತ್ತದೆ.

ಅಭ್ಯರ್ಥಿಗಳು ನೀವು ಆಕರ್ಷಕ CTC ಪ್ಯಾಕೇಜ್‌ಗಳಿಂದ ಪ್ರಭಾವಿತರಾಗಬಾರದು ಮತ್ತು ಪ್ಯಾಕೇಜ್‌ನ ನೈಟಿ ಗ್ರಿಟಿಯ ಮೇಲೆ ಗಮನ ಹರಿಸಬೇಕು. ಇದರಿಂದ ನೀವು ಕೈಯಲ್ಲಿ ಎಷ್ಟು ಹಣವನ್ನು ಸಂಪಾದಿಸುತ್ತೀರಿ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.
ವೇತನ ಸಂಹಿತೆ ಪ್ರಕಾರ ನಿಮ್ಮ ಮೂಲ ವೇತನವು ನಿಮ್ಮ ಒಟ್ಟು CTC ಯಲ್ಲಿ ಕನಿಷ್ಠ 50 ಪ್ರತಿಶತದಷ್ಟು ಇರಬೇಕು ಎಂದು ಹೇಳಲಾಗಿದೆ.

ವಿಮಾ ಪ್ರಯೋಜನಗಳು :

ವಿಮಾ ಪ್ರಯೋಜನಗಳು :

ಅನೇಕ ಕಂಪನಿಗಳು ಜೀವ ಮತ್ತು ಆರೋಗ್ಯ ವಿಮಾ ರಕ್ಷಣೆಗಳೊಂದಿಗೆ ಬರುತ್ತವೆ ಅವುಗಳನ್ನು ನೀವು ತಿರಸ್ಕರಿಸಲು ಆಗುವುದಿಲ್ಲ. ಏಕೆಂದರೆ ಅದು ಕಂಪೆನಿಯ ನಿಯಮವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಗೊಂದಲಕ್ಕೊಳಗಾಗದೇ ಅವುಗಳ ನಿಖರ ಮಾಹಿತಿಯನ್ನು ಪಡೆಯಿರಿ. ಒಟ್ಟಾರೆ ನಿಮ್ಮ ಪ್ಯಾಕೇಜ್‌ನಲ್ಲಿ ತೋರಿಸಿರುವ ಮೊತ್ತದಿಂದ ಆಮಿಷಕ್ಕೆ ಒಳಗಾಗಬೇಡಿ ಪ್ರತಿಯೊಂದನ್ನು ವಿವರವಾಗಿ ತಿಳಿಯಿರಿ.

For Quick Alerts
ALLOW NOTIFICATIONS  
For Daily Alerts

English summary
Here we are giving tips about if you are looking for new job after college life then how to negotiate your salary for more cash in hand.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X