ಒಂದು ವೇಳೆ ನಿಮ್ಮ ಹೆಸರು ಬಿ ಯಿಂದ ಪ್ರಾರಂಭವಾಗಿದ್ರೆ ನಿಮ್ಮ ಸ್ನೇಹಿತರು, ಸಹುದ್ಯೋಗಿಗಳು ಮತ್ತು ನಿಮ್ಮ ಕುಟುಂಬದವರು ಅದೃಷ್ಟವಂತರು. ಯಾಕಂದ್ರೆ ನೀವು ಒಂದು ರೀತಿಯ ಪ್ರೀತಿಗೆ ಪಾತ್ರರಾಗುವ ವ್ಯಕ್ತಿತ್ವ.
ನೀವು ಪ್ರತಿ ಕೆಲಸವನ್ನು ಇಷ್ಟದಿಂದ ಮತ್ತು ಪ್ರೀತಿಯಿಂದಲೇ ಮಾಡುತ್ತೀರಿ ಹಾಗಾಗಿ ಯಾವುದೇ ಕೆಲಸಗಳಲ್ಲಿ ನೀವು ತೊಡಗಿಕೊಂಡರೂ ಅದು ಸಕರಾತ್ಮಕವಾಗಿಯೇ ಕೊನೆಗೊಳ್ಳುತ್ತದೆ.
ಬಿ ಯಿಂದ ಹೆಸರು ಪ್ರಾರಂಭವಾಗುವವರು ಗುಣ ಲಕ್ಷಣ ಹೀಗಿರುತ್ತದೆ:
* ನೀವು ಸದಾ ಖುಷಿಯಿಂದಿರುತ್ತೀರಿ. ಪ್ರತಿ ಕೆಲಸದಲ್ಲೂ ಉತ್ಸಾಹದಿಂದಿರುತ್ತೀರಿ,
* ನೀವು ಸಕಾರಾತ್ಮಕ ಭಾವ ತುಂಬಿದ ವ್ಯಕ್ತಿಯಾಗಿರುತ್ತೀರಿ ಹಾಗಾಗಿ ಯಾವುದೇ ನಕಾರಾತ್ಮ ಚಿಂತನೆಗಳಿಗೆ ಹೆಚ್ಚು ಸಮಯ ವ್ಯವ ಮಾಡುವುದಿಲ್ಲ.
* ನೀವು ಧೈರ್ಯಶಾಲಿ ಕೂಡ. ಎಂತಹದ್ದೇ ಹುದ್ದೆಯನ್ನು ನೀವು ಅಲಂಕರಿಸಿದರೂ ಅದನ್ನು ನಿಭಾಯಿಸುವ ಸಾಮರ್ಧ್ಯ ನಿಮಗಿದೆ,
* ನೀವು ಭಾವನಾತ್ಮಕ ಜೀವಿ ಹಾಗೆ ಛಲವಾದಿ ಕೂಡ.
* ನೀವು ವಿಶೇಷ ವ್ಯಕ್ತಿತ್ವ ಉಳ್ಳವರು ಏಕೆಂದರೆ ಹಿಡಿದ ಯಾವುದೇ ಕೆಲಸವನ್ನು ಅರ್ಧಕ್ಕೆ ಬಿಡುವವರಲ್ಲ ಹಾಗಾಗಿ ನಿಮ್ಮ ಕರಿಯರ್ ಲೈಫ್ ನಲ್ಲಿ ಇದು ಅತ್ಯಂತ ಪ್ರಯೋಜನಕಾರಿಯಾಗಬಲ್ಲದು.
* ನೀವು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತೀರಿ. ಸಹುದ್ಯೋಗಿಗಳೊಂದಿಗೆ ವಿನಯದಿಂದ ವರ್ತಿಸುತ್ತೀರಿ. ಯಾರೊಂದಿಗೂ ತಕರಾರು ಮಾಡಿಕೊಳ್ಳಲು ಇಷ್ಟ ಪಡುವವರಲ್ಲ.