ಕಾಮನ್ ಲಾ ಅಡ್ಮಿಷನ್ ಟೆಸ್ಟ್ ಪಾಸಾಗಲು ಇಲ್ಲಿದೆ ಸುಲಭ ಟ್ರಿಕ್ಸ್

Posted By:

ಇದೊಂದು ಫೇಮಸ್ ಕಾನೂನು ಪ್ರವೇಶಾತಿ ಪರೀಕ್ಷೆ. ಕಾಮನ್ ಲಾ ಅಡ್ಮಿಷನ್ ಟೆಸ್ಟ್( ಸಿಎಲ್ಎಟಿ). ದೇಶದಾದ್ಯಂತ 19 ನ್ಯಾಷನಲ್ ಕಾನೂನು ವಿಶ್ವವಿದ್ಯಾನಿಲಯಗಳು ಈ ಪರೀಕ್ಷೆಯನ್ನ ಆಯೋಜಿಸುತ್ತದೆ. ಪ್ರತಿ ವಿಶ್ವವಿದ್ಯಾನಿಲಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗೆ ಈ ಪರೀಕ್ಷೆ ಮೂಲಕ ವಿದ್ಯಾರ್ಥಿಗಳನ್ನ ಸೆಲೆಕ್ಟ್ ಮಾಡಲಾಗುತ್ತದೆ.

ದೇಶದಾದ್ಯಂತ 19 ಎನ್‌ಎಲ್‌ಯು ಕಾಲೇಜುಗಳಲ್ಲಿ 5 ವರ್ಷ ಕಾನೂನು ಪದವಿ ಕೋರ್ಸ್ ಗಾಗಿ ಈ ಪರೀಕ್ಷೆ ನಡೆಸಲಾಗುತ್ತದೆ. ಎನ್‌ಎಲ್‌ಯು ಎಲ್ಎಲ್‌ಎಂ ಥರಹ ಒಂದು ವರ್ಷದ ಸ್ನಾತಕೋತ್ತರ ಕೋರ್ಸ್ ಕೂಡಾ ನೀಡುತ್ತದೆ. ಸಿಎಲ್ಎಟಿ ಪರೀಕ್ಷೆಯು ಮೇ 13 ರಂದು ನಡೆಯಲಿದೆ. ಈ ಪರೀಕ್ಷೆಯಲ್ಲಿ ಹೇಗೆ ಹೆಚ್ಚು ಅಂಕ
ಸ್ಕೋರ್ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.

ಯುಜಿ ಕೋರ್ಸ್ ಗಳಿಗೆ ಸಿಎಲ್ಎಟಿ ಪರೀಕ್ಷೆ ಮಾದರಿ ಹೀಗಿದೆ:

ಸಿಎಲ್ಎಟಿ ಪರೀಕ್ಷೆಯು ಕಂಪ್ಯೂಟರ್ ಮೂಲದ ಪರೀಕ್ಷೆಯಾಗಿದೆ. ಆಬ್ ಜೆಕ್ಟೀವ್ ಟೈಪ್ ನ ಪ್ರಶ್ನೆಗಳನ್ನ ಇಲ್ಲಿ ಕೇಳಲಾಗುತ್ತದೆ. ಈ ಪರೀಕ್ಷೆಯ ಅವಧಿ 2 ಗಂಟೆ. ಹಾಗೂ ಪ್ರತ ತಪ್ಪು ಉತ್ತರಕ್ಕೆ 0.25ಅಂಕ ಕಳೆಯಲಾಗುತ್ತದೆ.

ಸೆಕ್ಷನ್  ಪ್ರಶ್ನೆಗಳ ಸಂಖ್ಯೆ  ಅಂಕ
 ಕಾಂಪ್ರಹೆನ್ಷನ್ ಸೇರಿದಂತೆ ಇಂಗ್ಲೀಷ್ 40 40
 ಜನರಲ್ ನಾಲೆಜ್ಡ್ ಹಾಗೂ ಕರೆಂಟ್ ಅಫೇರ್ಸ್ 50 50
 ಎಲೆಮೆಂಟರಿ ಮ್ಯಾಥಮ್ಯಾಟಿಕ್ಸ್ 20 20
 ಲೀಗಲ್ ಅಪ್ಟಿಟ್ಯುಡ್ 50 50
 ಲಾಜಿಕಲ್ ರೀಸನಿಂಗ್ 40 40
ಒಟ್ಟು 200 200

ಪಿಜಿ ಕೋರ್ಸ್ ಗಳಿಗೆ ಸಿಎಲ್ಎಟಿ ಪರೀಕ್ಷೆ ಮಾದರಿ ಹೀಗಿದೆ:

ಸ್ನಾತಕೋತ್ತರ ಕೋರ್ಸ್ ಗಾಗಿ ಇರುವ ಸಿಎಲ್ಎಟಿ ಪರೀಕ್ಷೆಯೇ ಎಲ್‌ಎಲ್‌ಎಂ. ಸಿಎಲ್ಎಟಿ ಪರೀಕ್ಷೆಯು ಕಂಪ್ಯೂಟರ್ ಮೂಲದ ಪರೀಕ್ಷೆಯಾಗಿದೆ. ಆಬ್ ಜೆಕ್ಟೀವ್ ಟೈಪ್ ನ ಪ್ರಶ್ನೆಗಳನ್ನ ಇಲ್ಲಿ ಕೇಳಲಾಗುತ್ತದೆ. ಈ ಪರೀಕ್ಷೆಯ ಅವಧಿ 2 ಗಂಟೆ. ಹಾಗೂ ಪ್ರತ ತಪ್ಪು ಉತ್ತರಕ್ಕೆ 0.25 ಅಂಕ ಕಳೆಯಲಾಗುತ್ತದೆ.

ಸೆಕ್ಷನ್  ಪ್ರಶ್ನೆಗಳ ಸಂಖ್ಯೆ  ಅಂಕ
 ಸಾಂವಿಧಾನಿಕ ಕಾನೂನು 50 50
 ನ್ಯಾಯಶಾಸ್ತ್ರ 50 50
 ಕಾಂಟ್ರಾಕ್ಟ್, ಟಾರ್ಟ್ಸ್, ಕ್ರಿಮಿನಲ್ ಲಾ, ಇಂಟರ್ನ್ಯಾಷನಲ್ ಲಾ, ಐಪಿಆರ್ ಮುಂತಾದ ಇತರ ಕಾನೂನು ವಿಷಯಗಳು 50 50
 ಒಟ್ಟು 150 150

ಸ್ಟಡಿ ಪ್ಲ್ಯಾನ್ ಹೀಗೆ ಮಾಡಿ:

ಓದಲು ಪ್ರಾರಂಭಿಸುವ ಮುನ್ನ ಮೊದಲಿಗೆ ಪರ್ಫೇಕ್ಟ್ ಆಗಿ ಸ್ಟಡಿ ಪ್ಲ್ಯಾನ್ ಮಾಡಿ. ಸಬ್‌ಜೆಕ್ಟ್ ಗೆ ತಕ್ಕಂತೆ ಸಮಯವನ್ನ ಸಮನಾಗಿ ಹಂಚಿಕೊಂಡು ಪ್ಲ್ಯಾನ್ ಮಾಡಿ. ಫೇಸ್ ವೈಸ್ ಸ್ಟಡಿ ಮಾಡುವುದು ಬೆಸ್ಟ್ ವಿಧಾನ. ಮೊದಲ ಫೇಸ್‌ನಲ್ಲಿ ಎಲ್ಲಾ ಸಬ್‌ಜೆಕ್ಟ್ ನ್ನ ಕಂಪ್ಲೀಟ್ ಆಗಿ ಓದಿಕೊಳ್ಳಿ. ಎರಡನೇ ಫೇಸ್‌ನಲ್ಲಿ ಸಬ್‌ಜೆಕ್ಟ್ ಗೆ ಸಂಬಂಧಿತ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ. ಕೊನೆಯ ಫೇಸ್ ಓದಿರುವುದರ ನಿಖರತೆಯನ್ನ ಹೆಚ್ಚಿಸಿಕೊಳ್ಳಿ

ಸಬ್‌ಜೆಕ್ಟ್ನ ಸುಲಭ ಟಾಪಿಕ್ ಮೊದಲು ಓದಿ:

ಸಬ್‌ಜೆಕ್ಟ್ ಕಂಪ್ಲಿಟ್ ಆಗಿ ಓದಲೇಬೇಕು. ಇದೀಗ ಪರೀಕ್ಷಾ ತಯಾರಿಗೆ ಕೇವಲ ಒಂದೇ ತಿಂಗಳು ಬಾಕಿ ಇದೆ. ಹಾಗಾಗಿ ವಿದ್ಯಾರ್ಥಿಗಳು ಪ್ರಮುಖ ಅಂಶಗಳಿಗೆ ಹೆಚ್ಚು ಪೋಕಸ್ ನೀಡಬೇಕು. ಸುಲಭಕರವಾದ ಟಾಪಿಕ್ ಮೊದಲು ಓದಿ ಮುಗಿಸಿ

ಸೆಲ್ಫ್ ನೋಟ್ಸ್ ತಯಾರು ಮಾಡಿಕೊಳ್ಳಿ:

ಎಲ್ಲಾ ಪ್ರಮುಖ ಟಾಪಿಕ್ ಒಂದೇ ಕಡೆ ಇದ್ರೆ ಅದು ಬೆಸ್ಟ್. ಅದರಿಂದ ನಿಮಗೆ ಓದಲು ಕೂಡಾ ಸುಲಭವಾಗುವುದು. ಓದುವಾಗ ಒಂದು ನೋಟ್ಸ್ ಬದಿಕೊಟ್ಟುಕೊಳ್ಳಿ. ಓದುವಾಗ ಸಿಗುವ ಪ್ರಮುಖ ಅಂಶಗಳನ್ನ ನೋಟ್ ಮಾಡಿಕೊಳ್ಳಿ.

ಮಾಕ್ ಟೆಸ್ಟ್ ಮಾಡಿಕೊಳ್ಳಿ:

ಫುಲ್ ಲೆಂತ್ ಮಾಕ್ ಟೆಸ್ಟ್ ನಿಮ್ಮ ಕಾಂಫಿಡೆನ್ಸ್ ಮಾತ್ರ ಹೆಚ್ಚಿಸುವುದಿಲ್ಲ ಬದಲಿಗೆ ಕಾಂಪಿಟೇಶನ್ ನಲ್ಲಿ ನೀವು ಯಾವ ಸ್ಥಾನದಲ್ಲಿ ಇದ್ದೀರಾ ಎಂದು ಕೂಡಾ ತಿಳಿಸುತ್ತದೆ. ಇಂತಹ ಪರೀಕ್ಷೆಗಳು ನಿಮಗೆ ಎಕ್ಸಾಂ ಟೈಂನಲ್ಲಿ ಸಹಾಯ ಮಾಡುತ್ತದೆ.

ನಿಮ್ಮ ಸ್ಪೀಡ್ ಹೆಚ್ಚಿಸಿ:

ಇಲ್ಲಿ ಪರೀಕ್ಷೆಯಲ್ಲಿ ನಿಮ್ಮ ಸ್ಪೀಡ್ ಹೆಚ್ಚಿಸಿಕೊಳ್ಳಲು ಯಾವುದೇ ಸ್ಪೇಶಲ್ ಟಿಪ್ಸ್ ಇಲ್ಲ. ಪ್ರಾಕ್ಟೀಸ್ ಈ ಪರೀಕ್ಷೆಗೆ ನೀವು ಮುಖ್ಯವಾಗಿ ಮಾಡಿಕೊಳ್ಳಬೇಕಾದುದು. ಹಳೆಯ ಪ್ರಶ್ನಾಪತ್ರಿಕೆಯನ್ನ ಕೂಡಾ ರಿವಿಜನ್ ಮಾಡಿ. ಇದರಿಂದ ಟೈಂ ಹೇಗೆ ಮ್ಯಾನೇಜ್‌ಮೆಂಟ್ ಮಾಡಬಹುದು ಎಂಬುವುದು ಕೂಡಾ ತಿಳಿಯುತ್ತದೆ

English summary
One of the prestigious law entrance examinations, Common Law Admission Test (CLAT) is conducted on a rotational basis by 19 National Law Universities (NLUs) spread across the country. Annually, CLAT is conducted to select candidates to each university for admission to their undergraduate or postgraduate programmes

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia