Independence Day 2022: ಸ್ವಾತಂತ್ರೋತ್ಸವ ದಿನದಂದು ಮಕ್ಕಳು ಯಾವೆಲ್ಲಾ ಚಟುವಟಿಕೆಗಳನ್ನು ಮಾಡಬಹುದು ಗೊತ್ತಾ ?

ಬ್ರಿಟೀಷರ ಆಡಳಿತದಿಂದ ಭಾರತ ದೇಶ 1947 ಆಗಸ್ಟ್ 15 ರಂದು ಸ್ವತಂತ್ರವಾಯಿತು. ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ಶಾಲಾ ಕಾಲೇಜುಳಲ್ಲಿ ವಿಭಿನ್ನವಾದ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಮಕ್ಕಳಿಗೆ ದೇಶಭಕ್ತಿ ಮೂಡಿಸುವ ಮತ್ತು ದೇಶದ ಕುರಿತಾದ ಸಂದೇಶ ನೀಡುವ ಪ್ರಯತ್ನವನ್ನು ಮಾಡಲಾಗುತ್ತದೆ. ಇದರಿಂದ ಶಾಲಾ ಕಾಲೇಜುಗಳಲ್ಲಿ ಸಂಭ್ರಮ ಮನೆಮಾಡಿರುತ್ತದೆ.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಕೆಲವು ಚಟುವಟಿಕೆಗಳು ಇಲ್ಲಿವೆ

ಮಕ್ಕಳು ಮನೆಯಲ್ಲೇ ಯಾವ ರೀತಿ ಆಚರಿಸಬಹುದು ಮತ್ತು ಈ ದಿನದಂದು ಪೋಷಕರು ಮಕ್ಕಳಿಗೆ ಯಾವೆಲ್ಲಾ ಚಟುವಟಿಕೆಗಳನ್ನು ನೀಡಿ ಸಂಭ್ರಮಾಚರಣೆ ಮಾಡಬಹುದು ಎನ್ನುವುದಕ್ಕೆ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.

1. ಧ್ವಜಾರೋಹಣ ವೀಕ್ಷಿಸಲು ಸಹಕರಿಸಿ:

1. ಧ್ವಜಾರೋಹಣ ವೀಕ್ಷಿಸಲು ಸಹಕರಿಸಿ:

ದೇಶದೆಲ್ಲೆಡೆ ಸ್ವಾತಂತ್ರ್ಯ ದಿನದಂದು ವಿಶೇಷವಾಗಿ ಸರ್ಕಾರಿ ಸಂಸ್ಥೆಗಳು, ಐತಿಹಾಸಿಕ ಸ್ಮಾರಕಗಳು, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಧ್ವಜಾರೋಹಣ ನಡೆಯುತ್ತದೆ. ಆದರೆ ಈ ಭಾರಿ ಮಕ್ಕಳು ಹೊರಗಡೆ ಹೋಗಲು ಉತ್ತಮ ವಾತಾವರಣ ಇಲ್ಲದ ಮತ್ತು ಶಾಲೆಗಳು ತೆರೆಯದೇ ಇರುವ ಕಾರಣ ಮಕ್ಕಳಿಗೆ ಮನೆಯಲ್ಲೇ ಆಚರಿಸುವಂತೆ ಸಹಕರಿಸಿ. ಟಿ,ವಿ ಮಾಧ್ಯಮಗಳಲ್ಲಿ ಪ್ರಸಾರವಾಗುವ ಆಚರಣೆಯ ಕುರಿತಾದ ನೇರಪ್ರಸಾರ ವೀಕ್ಷಿಸಲು ಸಹಾಯ ಮಾಡಿ.

2. ನಾಟಕಗಳು ಅಥವಾ ಸ್ಕಿಟ್ ಮಾಡಲು ಸಹಕರಿಸಿ:

2. ನಾಟಕಗಳು ಅಥವಾ ಸ್ಕಿಟ್ ಮಾಡಲು ಸಹಕರಿಸಿ:

ಮಕ್ಕಳಿಗೆ ದೇಶಭಕ್ತಿ ಕುರಿತಾದ ನಾಟಕವನ್ನು ಮಾಡಲು ಹೇಳಿ. ನೀವೆ ಸ್ವತಃ ಕಥೆಯನ್ನು ಸಿದ್ಧಪಡಿಸಬಹುದು ಅಥವಾ ಯಾವುದಾದರೂ ದೇಶಭಕ್ತಿಯುಳ್ಳ ಕಥೆಯನ್ನು ಆಯ್ಕೆ ಮಾಡಿಕೊಂಡು ಮಕ್ಕಳಿಗೆ ನೀಡಿ ಅಭಿನಯಿಸುವಂತೆ ಹೇಳಬಹುದು. ಮಗುವಿನ ಚಟುವಟಿಕೆಯನ್ನು ಮನೆಯವರೆಲ್ಲರೂ ಕುಳಿತು ನೋಡಿ ಪ್ರೋತ್ಸಾಹ ನೀಡಿ. ಇದರಿಂದ ಮಗುವಿಗೆ ನಾಟಕ ಮತ್ತು ಅಭಿನಯ ಚಟುವಟಿಕೆಗಳಲ್ಲಿ ಆಸಕ್ತಿ ಮೂಡುವುದು. ಹಾಗೂ ಸ್ವಾತಂತ್ರ್ಯ ದಿನದ ಮತ್ತು ದೇಶಭಕ್ತಿಯ ಮಹತ್ವ ತಿಳಿಯುವುದು.

3. ನೃತ್ಯ ಮತ್ತು ಹಾಡು ಸ್ಪರ್ಧೆ:

3. ನೃತ್ಯ ಮತ್ತು ಹಾಡು ಸ್ಪರ್ಧೆ:

ನಾಟಕ ಹೊರತುಪಡಿಸಿ ಮಕ್ಕಳು ಮನೆಯಲ್ಲೇ ದೇಶಭಕ್ತಿಗೀತೆ ಗಳಿಗೆ ನೃತ್ಯ ಮಾಡುವುದು ಮತ್ತು ದೇಶಭಕ್ತಿಗೀತೆಗಳನ್ನು ಹಾಡುವಂತೆ ಆಯೋಜನೆ ಮಾಡಬಹುದು. ಹಾಡು ಮತ್ತು ನೃತ್ಯಗಳಿಗೆ ಕೆಸರಿ, ಬಿಳಿ ಮತ್ತು ಹಸಿರು ಬಣ್ಣಗಳುಳ್ಳ ಬಟ್ಟೆಗಳನ್ನು ಧರಿಸಿ ಮಕ್ಕಳು ಪಾಲ್ಗೊಂಡಲ್ಲಿ ಮಗುವಿಗೂ ಸಂತಸ ಹೆಚ್ಚಾಗುತ್ತದೆ ಜೊತೆಗೆ ಈ ದಿನದ ಮಹತ್ವ ಕೂಡ ಅರಿತಂತಾಗುತ್ತದೆ.

4. ಸ್ವಾತಂತ್ರ್ಯ ದಿನದ ಥೀಮ್ ಪಾರ್ಟಿ:

4. ಸ್ವಾತಂತ್ರ್ಯ ದಿನದ ಥೀಮ್ ಪಾರ್ಟಿ:

ಸ್ವಾತಂತ್ರ್ಯ ದಿನದಂದು ಮನೆಯಲ್ಲೆ ಒಂದು ಪುಟ್ಟ ಪಾರ್ಟಿಯನ್ನು ಆಯೋಜಿಸಬಹುದು. ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ಅಥವಾ ರಾಷ್ಟ್ರೀಯ ನಾಯಕರ ಉಡುಗೆಯನ್ನು ಧರಿಸಬಹುದು. ಇನ್ನು ಮನೆಯಲ್ಲೆ ಭಾರತದ ಭಾವುಟ ಬಣ್ಣದ ತಿನಿಸುಗಳನ್ನು ಮಾಡಬಹುದು.ಇದರಿಂದ ದಿನದ ವಿಶೇಷ ಜೊತೆಗೆ ತಿನಿಸುಗಳ ವಿಶೇಷತೆಯೂ ವಿಭಿನ್ನವಾಗಿರುತ್ತದೆ.

 

5. ಫ್ಯಾನ್ಸಿ ಉಡುಗೆ ಸ್ಪರ್ಧೆ:

5. ಫ್ಯಾನ್ಸಿ ಉಡುಗೆ ಸ್ಪರ್ಧೆ:

ಶಿಶುವಿಹಾರ ಮತ್ತು ಶಾಲಾಪೂರ್ವ ವಿದ್ಯಾರ್ಥಿಗಳಿಗೆ ಇದು ಅತ್ಯಂತ ಮೋಜಿನ ಭಾರತೀಯ ಸ್ವಾತಂತ್ರ್ಯ ದಿನಾಚರಣೆಯಾಗಿದೆ. ಈ ದಿನದಂದು ಮಕ್ಕಳು ದೇಶಾದ್ಯಂತದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಆಚರಣೆಯನ್ನು ಮಾಡಬಹುದು. ಮಕ್ಕಳು ಮನೆಯಲ್ಲೇ ಉತ್ತಮ ಥೀಮ್ ಇರುವ ವಸ್ತ್ರವಿನ್ಯಾಸವನ್ನು ಧರಿಸಿ ಆಚರಣೆ ಮಾಡಿ ಫೋಟೊಶೂಟ್ ಕೂಡ ಮಾಡಬಹುದು. ಇದರಿಂದ ಮಕ್ಕಳ ಮನಸ್ಸು ಸಂತೋಷಭರಿತವಾಗಿರುತ್ತದೆ.

7. ಪುಸ್ತಕಗಳನ್ನು ಖರೀದಿಸಿ:

7. ಪುಸ್ತಕಗಳನ್ನು ಖರೀದಿಸಿ:

ಪುಸ್ತಕ ಓದುವ ಅಭ್ಯಾಸದಿಂದ ಜೀವನದಲ್ಲಿ ಒಬ್ಬ ಗೆಳೆಯನ್ನು ಸಂಪಾದಿಸದಂತೆ ಹಾಗಾಗಿ ಮಕ್ಕಳಿಗೆ ಈ ಅಭ್ಯಾಸ ಚಿಕ್ಕವರಿಂದಲೇ ರೂಢಿಯಾಗುವುದು ಒಳಿತು. ಸ್ವಾತಂತ್ರ್ಯ ದಿನದಂದು ಮಕ್ಕಳಿಗೆ ಹೊಸ ಪುಸ್ತಕ ನೀಡಿ ಅದು ದೇಶಭಕ್ತಿ ಕುರಿತಾದ ಪುಸ್ತಕಗಳಾಗಿದ್ದರೆ ಇನ್ನೂ ಉತ್ತಮ, ಇದರಿಂದ ಅವರಿಗೆ ದೇಶದ ಕುರಿತಾದ ಜ್ಞಾನ ಹೆಚ್ಚುವುದು ಜೊತೆಗೆ ಪುಸ್ತಕ ಓದುವ ಅಭ್ಯಾಸ ಕೂಡ ಆಗವುದು. ಹಾಗಾಗಿ ಅವರಿಗೆ ಅಂತರ್ಜಾಲದ ಮೂಲಕ ಪುಸ್ತಕಗಳ ಪರಿಚಯ ಮಾಡಿ ನಂತರ ಅವರಿಷ್ಟದ ಪುಸ್ತಕ ಕೊಂಡು ಓದಲು ನೀಡಿ.

8. ಐತಿಹಾಸಿಕ ವಿಚಾರಗಳನ್ನು ತಿಳಿಸಿ:

8. ಐತಿಹಾಸಿಕ ವಿಚಾರಗಳನ್ನು ತಿಳಿಸಿ:

ಈಗಿನ ಮಕ್ಕಳಿಗೆ ಐತಿಹಾಸಿಕ ಘಟನೆಗಳ ಅರಿವು ಕಡಿಮೆ ಹಾಗಾಗಿ ಮಕ್ಕಳಿಗೆ ಸ್ವತಂತ್ರವಾಗಿ ಅಂತರ್ಜಾಲದ ಮೂಲಕ ಐತಿಹಾಸಿಕ ವಿಷಯಗಳನ್ನು ತಿಳಿಯಲು ಸಹಕರಿಸಿ. ನಿಮ್ಮ ಮನೆಯ ಹತ್ತಿರ ಇರುವ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ . ಆ ಐತಿಹಾಸಿಕ ಸ್ಥಳಗಳಿಗೂ ಸ್ವಾತಂತ್ರ್ಯ ದಿನಕ್ಕೂ ಸಂಬಂಧಿಸಿದ ಘಟನೆಗಳಿದ್ದರೆ ಮಕ್ಕಳಿಗೆ ತಿಳಿಸಿ. ಇದರಿಂದ ಮಕ್ಕಳಿಗೆ ಮಾಹಿತಿ ಸಿಕ್ಕಂತಾಗುವುದು ಮತ್ತು ಐತಿಹಾಸಿಕ ಸ್ಥಳಗಳ ಪರಿಚಯವಾಗುವುದು.

 

9. ರೇಖಾಚಿತ್ರ ಮತ್ತು ಚಿತ್ರಕಲೆ ಸ್ಪರ್ಧೆ ಮಾಡಿ:

9. ರೇಖಾಚಿತ್ರ ಮತ್ತು ಚಿತ್ರಕಲೆ ಸ್ಪರ್ಧೆ ಮಾಡಿ:

ಚಿತ್ರ ಬಿಡಿಸುವುದು ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ ? ಸಾಮಾನ್ಯವಾಗಿ ಎಲ್ಲಾ ಮಕ್ಕಳು ಚಿತ್ರವನ್ನು ಬಿಡಿಸುತ್ತಾರೆ. ಆದರೆ ಈ ವಿಶೇಷ ದಿನದಂದು ಸ್ವಾತಂತ್ರ್ಯ ದಿನದ ಕುರಿತಾದ ವಿಷಯವನ್ನು ಆಯ್ಕೆ ಮಾಡಿಕೊಂಡು ಅವರಿಗೆ ನೀಡಿ ಚಿತ್ರ ಬಿಡಿಸಲು ಹೇಳಿ. ಬಣ್ಣಗಳ ಮೂಲಕ ಮಕ್ಕಳ ಮನಸ್ಸು ವರ್ಣರಂಜಿತವಾಗಿರುತ್ತದೆ. ಚಿತ್ರ ಸುಂದರವಾಗಿದ್ದರೆ ಬಹುಮಾನವಿರುತ್ತದೆ ಎಂದು ಅವರಿಗೆ ತಿಳಿಸಿ ಇದರಿಂದ ಇನ್ನಷ್ಟು ಉತ್ಸಾಹದಿಂದ ಚಿತ್ರ ಬರೆಯುವ ಪ್ರಯತ್ನ ಮಾಡುತ್ತಾರೆ.

10. ಸ್ವಾತಂತ್ರ್ಯ ದಿನ ಪ್ರಯುಕ್ತ ರಸಪ್ರಶ್ನೆ ಆಯೋಜಿಸಿ:

10. ಸ್ವಾತಂತ್ರ್ಯ ದಿನ ಪ್ರಯುಕ್ತ ರಸಪ್ರಶ್ನೆ ಆಯೋಜಿಸಿ:

ಬೆಳೆಯುವ ಮಕ್ಕಳಿಗೆ ಜ್ಞಾನ ಎಂಬುದು ತುಂಬಾನೆ ಮುಖ್ಯ. ಮಗುವಿಗೆ ಯಾವುದಾದರೂ ವಿಷಯದ ಬಗ್ಗೆ ಜ್ಞಾನವನ್ನು ಪಡೆಯುವ ಅತ್ಯುತ್ತಮ ಮಾರ್ಗವೆಂದರೆ ಒಂದು ವಿಷಯದ ಬಗ್ಗೆ ರಸಪ್ರಶ್ನೆಗಾಗಿ ಅವರನ್ನು ತಯಾರಿ ಮಾಡುವುದು. ಈ ವಿಶೇಷ ದಿನದಂದು ನೀವು ಮಕ್ಕಳಿಗಾಗಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಬಹುದು ಮತ್ತು ಥೀಮ್ ಅನ್ನು ಸ್ವಾತಂತ್ರ್ಯ ದಿನದ ಕುರಿತಾಗಿ ಕೇಂದ್ರೀಕರಿಸಲು ಮರೆಯದಿರಿ. ರಸಪ್ರಶ್ನೆಗೆ ಇತ್ತೀಚಿನ ಸುದ್ದಿಗಳನ್ನು ಸೇರಿಸಬಹುದು. ಮಗುವಿಗೆ ತಯಾರಿ ನಡೆಸಲು ಸ್ವಲ್ಪ ಸಮಯ ಕೊಟ್ಟು ತದನಂತರ ಅವರನ್ನು ರಸಪ್ರಶ್ನೆಗೆ ಒಡ್ಡಿ. ಇದರಿಂದ ಅವರಲ್ಲಿರುವ ಜ್ಞಾನದ ಮಟ್ಟವನ್ನು ನೀವು ಅರಿಯಬಹುದು ಹಾಗೂ ಮಗುವಿನೊಡಗಿನ ನಿಮ್ಮ ಸಂಬಂಧವೂ ಬಲವಾಗುವುದು. ರಸಪ್ರಶ್ನೆ ಕೇಳುವುದರಿಂದ ಮಕ್ಕಳಿಗೂ ಕೂಡ ಅನೇಕ ವಿಷಯಗಳನ್ನು ತಿಳಿದಂತಾಗುವುದು. ಇದರಿಂದ ದೇಶದ ಬಗೆಗಿನ ಸಾಮಾನ್ಯ ಜ್ಞಾನವು ಅವರಿಗೆ ಮೂಡುವುದು. ಈ ರೀತಿ ಮಾಡೋದ್ರಿಂದ ಮುಂದಿನ ದಿನಗಳಲ್ಲಿ ಕಲಿಕೆಗೆ ಮಕ್ಕಳು ಕೂಡ ಪ್ರೇರೇಪಿತರಾಗುವರು.

 

For Quick Alerts
ALLOW NOTIFICATIONS  
For Daily Alerts

English summary
Here we are giving information about interesting independence day activities for kids in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X