75th Independence Day : ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದ ಸ್ವಾತಂತ್ರ್ಯ ಹೋರಾಟಗಾರರಿವರು

ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವ ಸ್ಪರ್ಧೆ ನಮಗೆ ಹೊಸದೇನಲ್ಲ. ಪ್ರತಿ ವರ್ಷ ಲಕ್ಷಾಂತರ ಭಾರತೀಯರು ತಮ್ಮ ಉನ್ನತ ವ್ಯಾಸಂಗಕ್ಕಾಗಿ ವಿವಿಧ ದೇಶಗಳಿಗೆ ಹಾರುತ್ತಾರೆ. ಸಾವಿರಾರು ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು ಪಡೆದ ನಂತರ ವೃತ್ತಿಜೀವನವನ್ನು ಕಂಡುಕೊಳ್ಳಲು ವಿದೇಶಗಳಲ್ಲಿ ಉಳಿದಿರುವವರನ್ನು ನಾವು ನೋಡಿದ್ದೇವೆ. ಮತ್ತೊಂದೆಡೆ ಕೆಲವು ವಿದ್ಯಾರ್ಥಿಗಳು ತಮ್ಮ ತಾಯ್ನಾಡಿಗೆ ಹಿಂತಿರುಗಿ ನಮ್ಮ ದೇಶಕ್ಕೆ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ.

 
ವಿದೇಶದಲ್ಲಿ ಶಿಕ್ಷಣ ಪಡೆದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಿವರು

ಅದಲ್ಲದೆಯೇ ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ತಮ್ಮ ಶಿಕ್ಷಣವನ್ನು ಪಡೆಯುತ್ತಿದ್ದವರು ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಭಾರತಕ್ಕೆ ಬಂದು ಬ್ರಿಟಿಷರ ಆಳ್ವಿಕೆಯಿಂದ ಬಿಡುಗಡೆ ಹೊಂದಲು ಕೈ ಜೋಡಿಸಿದ ಕೆಲವು ನಾಯಕರಿದ್ದಾರೆ.

ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣವನ್ನು ಪಡೆದ ನಂತರ ದೇಶಕ್ಕಾಗಿ ಸೇವೆ ಸಲ್ಲಿಸಿದ ಅನೇಕ ಜನರೂ ಇದ್ದಾರೆ. ಅವುಗಳಲ್ಲಿ ಈ ಐವರು ಅತ್ಯುತ್ತಮರು ಎಂದು ನಂಬಲಾಗಿದೆ ಏಕೆಂದರೆ ಅವರು ತಮ್ಮ ಶಿಕ್ಷಣದಿಂದಾಗಿ ಬ್ರಿಟಿಷರ ವಿರುದ್ಧ ದಂಗೆ ಎದ್ದರು. ಹಾಗಾಗಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣವನ್ನು ಪಡೆದಂತಹ ಅಗ್ರ ಐದು ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಮಹಾತ್ಮ ಗಾಂಧಿ :

ಮಹಾತ್ಮ ಗಾಂಧಿ :

ಮೋಹನ್ ದಾಸ್ ಕರಮಚಂದ ಗಾಂಧಿ ಅವರನ್ನು ಬಾಪು ಮತ್ತು ರಾಷ್ಟ್ರಪಿತ ಎಂದು ಕರೆಯಲಾಗುತ್ತದೆ. ಗಾಂಧಿ ಅವರ ಸಿದ್ಧಾಂತಗಳಿಂದಾಗಿ ಯಾವಾಗಲೂ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರು ಅಹಿಂಸೆಯ ಆಯುಧದೊಂದಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಇದಕ್ಕಾಗಿ ವಿಶ್ವಸಂಸ್ಥೆಯು ಅವರ ಜನ್ಮದಿನವನ್ನು (ಅಕ್ಟೋಬರ್ 2) ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸುತ್ತದೆ.

ಗುಜರಾತ್‌ನಲ್ಲಿ ಜನಿಸಿದ ಗಾಂಧಿ ಲಂಡನ್ ಯೂನಿವರ್ಸಿಟಿಯ ಕಾಲೇಜಿನಲ್ಲಿ ಕಾನೂನು ಅಧ್ಯಯನವನ್ನು ನಡೆಸಿದರು. ತದನಂತರ ಬ್ಯಾರಿಸ್ಟರ್ ಆಗಿ ಭಾರತಕ್ಕೆ ಬಂದರು. ಅವರನ್ನು ಭಾರತದಲ್ಲಿ ವಕೀಲರು ಎಂದು ಕರೆಯಲಾಯಿತು.

ಜವಾಹರಲಾಲ್ ನೆಹರು :

ಜವಾಹರಲಾಲ್ ನೆಹರು :

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ದೇಶವನ್ನು ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯವನ್ನಾಗಿ ಮಾಡಲು ನೆಹರು ತಮ್ಮ ಅತ್ಯುತ್ತಮ ಹೆಜ್ಜೆಗಳನ್ನು ಇಟ್ಟಿದ್ದಾರೆ. ಯುನೈಟೆಡ್ ಕಿಂಗ್‌ಡಂನ ಪ್ರಮುಖ ಶಾಲೆಗಳಲ್ಲಿ ಒಂದಾದ ಹಾರೋಗೆ ಹೋದರು.

ನಂತರ ಮೋತಿಲಾಲ್ ನೆಹರು ಅವರ ಮಗ ನೈಸರ್ಗಿಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಕೇಂಬ್ರಿಡ್ಜ್‌ನ ಟ್ರಿನಿಟಿ ಕಾಲೇಜಿಗೆ ಹೋದರು. ಅವರು ಲಂಡನ್‌ನ ನಾಲ್ಕು ನ್ಯಾಯಾಲಯಗಳಲ್ಲಿ ಒಂದಾದ ಇನ್ನರ್ ಟೆಂಪಲ್‌ನಲ್ಲಿ ಕಾನೂನು ಅಧ್ಯಯನ ಮಾಡಿದರು.

ಡಾ ಬಿಆರ್ ಅಂಬೇಡ್ಕರ್ :
 

ಡಾ ಬಿಆರ್ ಅಂಬೇಡ್ಕರ್ :

ದಲಿತರ ಜೀವನವನ್ನು ಮೇಲೆತ್ತುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ಭಾರತೀಯ ಸಂವಿಧಾನದ ಶಿಲ್ಪಿ. ಹಿಂದುಳಿದ ಜನರ ನಾಯಕ ಅಂಬೇಡ್ಕರ್ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಅನೇಕ ಕೋರ್ಸ್‌ಗಳನ್ನು ಮಾಡಿದರು. ಅವರು ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಎಂಎಸ್‌ಸಿ ಪೂರ್ಣಗೊಳಿಸಿದ್ದಾರೆ. ಅವರು ಜರ್ಮನಿಯ ಬಾನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡಿದರು.

ಸುಭಾಷ್ ಚಂದ್ರ ಬೋಸ್ :

ಸುಭಾಷ್ ಚಂದ್ರ ಬೋಸ್ :

"ನನಗೆ ರಕ್ತ ಕೊಡಿ ಮತ್ತು ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ" ಎಂದು ಬೋಸ್ ಹೇಳಿದ ಘೋಷವಾಕ್ಯವು ಸಾವಿರಾರು ಜನರನ್ನು ಬ್ರಿಟಿಷರ ವಿರುದ್ಧ ಹೋರಾಡಲು ಪ್ರೇರೇಪಿಸಿತು. ಭಾರತೀಯ ನಾಗರಿಕ ಸೇವೆಗಳಲ್ಲಿ (ಐಸಿಎಸ್) ನಾಲ್ಕನೇ ಸ್ಥಾನ ಪಡೆದ ಬೋಸ್ ಅವರು ಕೋಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿಗೆ ಹೋದರು. ಆಜಾದ್ ಹಿಂದ್ ಫೌಜ್ ನ ಸ್ಥಾಪಕರು ನಂತರ ಕೇಂಬ್ರಿಡ್ಜ್ ನ ಫಿಟ್ಜ್ ವಿಲಿಯಂ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡಿದರು.

ಸರೋಜಿನಿ ನಾಯ್ಡು :

ಸರೋಜಿನಿ ನಾಯ್ಡು :

ಭಾರತದ ನೈಟಿಂಗೇಲ್ ಎಂದೇ ಹೆಸರಾಗಿರುವ ಸರೋಜಿನಿ ನಾಯ್ಡು ಅವರು ಭಾರತ ಮತ್ತು ವಿದೇಶದಲ್ಲಿ ಕೂಡ ಶಿಕ್ಷಣವನ್ನು ಪಡೆದಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯದಿಂದ ಮೆಟ್ರಿಕ್ಯುಲೇಷನ್ ನಂತರ ಇಂಗ್ಲೆಂಡ್‌ನಲ್ಲಿರುವ ಕಿಂಗ್ಸ್ ಕಾಲೇಜ್ ಲಂಡನ್‌ನಲ್ಲಿ ಮತ್ತು ನಂತರ ಕೇಂಬ್ರಿಡ್ಜ್‌ನ ಗಿರ್ಟನ್ ಕಾಲೇಜಿನಲ್ಲಿ ಉನ್ನತ ವ್ಯಾಸಂಗವನ್ನು ಮಾಡಿದರು. ನಿಜಾಮನ ಚಾರಿಟಿ ಟ್ರಸ್ಟ್ ನೀಡುವ ವಿದ್ಯಾರ್ಥಿವೇತನದಿಂದಾಗಿ ಸರೋಜಿನಿಗೆ ವಿದೇಶದಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಯಿತು.

For Quick Alerts
ALLOW NOTIFICATIONS  
For Daily Alerts

English summary
Independence Day: Here is the list of Freedom Fighters Who Pursued Their Education in Foreign Universities. Take a look.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X