ಬರೀ ಡಾಕ್ಟರ್, ಇಂಜಿನಿಯರ್ ಅಲ್ಲ... ಈ ಕೋರ್ಸ್ ಮಾಡಿದ್ರೂ ಸಿಗುತ್ತೆ ಕೈ ತುಂಬಾ ಸಂಬಳ

Posted By:

ತಮ್ಮ ಮಕ್ಕಳು ಡಾಕ್ಟರ್ಸ್, ಇಂಜಿನಿಯರ್ಸ್ ಇಲ್ಲ ಲಾಯರ್ಸ್ ಆಗಬೇಕು ಎಂದು ಹೆತ್ತವರು ಬಯಸುತ್ತಾರೆ. ಅದಕ್ಕಾಗಿ ಬಾಲ್ಯದಿಂದಲೇ ಮಕ್ಕಳನ್ನ ಟ್ರೈನ್ ಕೂಡಾ ಮಾಡುತ್ತಾರೆ. ಆದ್ರೆ ಮಕ್ಕಳ ಆಸಕ್ತಿ ಬೇರೆಯೇ ಇರುತ್ತದೆ. ತಂದೆ-ತಾಯಿಯ ಒತ್ತಾಯದ ಮೇರೆ ಮಕ್ಕಳು ಹೆತ್ತವರ ಇಚ್ಚೆಯಂತೆ ಡಾಕ್ಟರ್ ಲೈನ್, ಇಂಜಿನಿಯರ್ ಲೈನ್ ಗೆಹೋಗುತ್ತಾರೆ. ತಮದೆ ಆಸಕ್ತಿ ಇಲ್ಲದಿದ್ದರೂ ಆ ಕೋರ್ಸ್ ನಲ್ಲಿ ಕೆರಿಯರ್ ರೂಪಿಸಿಕೊಳ್ಳುತ್ತಾರೆ. ಆದ್ರೆ ಇದರಿಂದ ಕೊನೆಗೆ ರಿಸಲ್ಟ್ ಏನಾಗುತ್ತೆ ಅಂದ್ರೆ ಅವರ ಕೆರಿಯರ್ ಲೈಫ್ ಸಕ್ಸಸ್ ಆಗಿರುವುದಿಲ್ಲ.

ಈ ಬಗ್ಗೆ ಮನೋವೈದ್ಯರು ಏನು ಹೇಳ್ತಾರೆ ಅಂದ್ರೆ ಮಕ್ಕಳ ಆಸಕ್ತಿ ಮೇಲೆ ಅವರ ಕೆರಿಯರ್ ರೂಪಿಸಿ ಎಂದು ಸಲಹೆ ನೀಡುತ್ತಾರೆ. ಇನ್ನೂ ಮಕ್ಕಳ ಆಸಕ್ತಿಗನುಗುಣವಾಗಿ ಅನೇಕ ಕೋರ್ಸ್ ಗಳು ಕೂಡಾ ಭಾರತದಲ್ಲಿ ಲಭ್ಯವಿದೆ. ಬರೀ ಡಾಕ್ಟರ್, ಇಂಜಿನಿಯರ್ ಮಾತ್ರವಲ್ಲದೆ ಇನ್ನೂ ಹಲವಾರು ಕೋರ್ಸ್ ಮಾಡಿದ್ರೂ ಸಿಗುತ್ತೆ ಕೈ ತುಂಬಾ ಸಂಬಳ. ಅಂತಹ ಕೋರ್ಸ್ ಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಸ್ಪಾ ಮ್ಯಾನೇಜ್‌ಮೆಂಟ್:

ಸ್ಪಾ ಕಂಪನಿಗಳಲ್ಲಿ ಸ್ಪಾ ಥೆರಪಿಸ್ಟ್ ಗಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ಇನ್ನೂ ನಮ್ಮ ಲ್ಲಿ ಹೈ -ಎಂಡ್ ಟ್ರೈನಿಂಗ್ ನೀಡುವ ಇನ್ಸ್ ಟಿಟ್ಯೂಟ್ ಗಳು ಕೂಡಾ ಇದೆ. ಕೆಲವು ಕಾಲೇಜುಗಳು ಸ್ಪಾ ಮ್ಯಾನೇಜ್‌ಮೆಂಟ್ ಕೋರ್ಸ್ ಗಳನ್ನ ನೀಡುತ್ತದೆ. ಆನಂದ್ ಸ್ಪಾ ಇನ್‌ಸ್ಟಿಟ್ಯೂಟ್ ಇನ್ ಹೈದರಾಬಾದ್. ಓರಿಯೆಂಟ್ ಸ್ಪಾ ಅಕಾಡೆಮಿ ಇನ್ ಜೈಪುರ್, ಸ್ಪಾ ಅಕಾಡೆಮಿ ಇನ್ ಹೈದ್ರಾಬಾದ್, ಅನಾಬೆಲ್ಲಾ ಸ್ಪಾ ಇನ್‌ಸ್ಟಿಟ್ಯೂಟ್ ಇನ್ ಕೇರಳ. ಇನ್ನು ಸ್ಪಾ ಥೆರಪಿಸ್ಟ್ ಗಳು ಫ್ರೆಶರ್ಸ ಆಗಿದ್ದರೆ ತಿಂಗಳಿಗೆ 10,000 ರೂ ದುಡಿಯಬಹುದು.

ಟೀ ಟೆಸ್ಟಿಂಗ್ :

ನೀವು ಹಲವರು ವಿಧದ ಚಹಾಗಳನ್ನ ಟೇಸ್ಟ್ ಮಾಡುದಲ್ಲದೇ ಹಣ ಕೂಡಾ ಸಂಪಾದಿಸಬಹುದು. ಈ ಕೆರಿಯರ್ ಆಯ್ಕೆ ತುಂಬಾ ಚೆನ್ನಾಗಿರುತ್ತದೆ. ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಫ್ಯೂಚರಿಸ್ಟಿಕ್ ಸ್ಟಡೀಸ್, ಡಿಪ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಪ್ರೊಫೆಶನಲ್ ಸ್ಟಡೀಸ್, ಅಸ್ಸಾಂ ಅಗ್ರಿಕಲ್ಚರ್ ಯೂನಿವರ್ಸಿಟಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಇನ್ ಪ್ಲಾಂಟೇಶನ್ ಮ್ಯಾನೇಜ್‌ಮೆಂಟ್ ಮುಂತಾದ ಶಿಕ್ಷಣ ಸಂಸ್ಥೆಗಳಲ್ಲಿ ವಿಷಯದ ಮೇಲೆ ಕೋರ್ಸ್ ನೀಡಲಾಗುತ್ತದೆ. ಈ ಕೋರ್ಸ್ ಮಾಡಿ ನಿಮಗೆ ೫ ಸ್ಟಾರ್ ಹೋಟೆಲ್ ಗಳಲ್ಲಿ ಕೆಲಸ ಸಿಕ್ಕರೆ ಸುಮಾರು 50,000 ರೂ ದುಡಿಯಬಹುದು.

ಆರ್ಟ್ ಆಂಡ್ ಡಿಸೈನ್:

ಆರ್ಟ್ ಆಂಡ್ ಡಿಸೈನ್ ಈ ಕೋರ್ಸ್ ಮಾಡಬೇಕಂದ್ರೆ ಆಸಕ್ತಿ ಜತೆ ಕಲೆಯೂ ಇರಬೇಕು. ಈ ಟ್ಯಾಲೆಂಟ್ ಗೆ ಸಾಮಾನ್ಯವಾಗಿ ಮನೆಗಳಿಂದ ಪ್ರೋತ್ಸಾಹ ಸಿಗುತ್ತದೆ. ಈ ಕೋರ್ಸ್ ಗಳನ್ನ ಆಫರ್ ಮಾಡುವ ಶಿಕ್ಷಣ ಸಂಸ್ಥೆಗಳ ಲಿಸ್ಟ್ ಹೀಗಿದೆ. ಲೇಡಿ ಶ್ರೀ ರಾಮ್ ಕಾಲೇಜು ಫಾರ್ ವುಮೆನ್, ನ್ಯೂ ಡೆಲ್ಲಿ ಸೈಂಟ್ ಸ್ಟೇಪನ್ಸ್ ಕಾಲೇಜು, ನ್ಯೂ ಡೆಲ್ಲಿ St Xavier's College , ಮುಂಬಯಿ ಲಾಯಲ ಕಾಲೇಜು, ಚೆನ್ನೈಯ St Xavier's College ಹಾಗೂ ಕೊಲ್ಕತ್ತಾದ ಕ್ರೈಸ್ಟ್ ಕಾಲೇಜು. ಹೋಟೆಲ್ಸ್, ಶಾಲೆ ಹಾಗೂ ಕಾಲೇಜು, ಪಾರ್ಕ್ ಮತ್ತು ಇನ್ನಿತ್ತರ ಹೊಸ ಕಟ್ಟಡ ನಿರ್ಮಾಣದ ವೇಳೆ ನೀವು ಜಾಬ್ ನಿಮ್ಮದಾಗಿಸಿಕೊಳ್ಳಬಹುದು.

ಕಾರ್ಟೋಗ್ರಾಫಿ:

ಟೂರಿಸ್ಟ್ ಗಳಿಗೆ ಸಹಾಯಕವಾಗಲೆಂದು ಮ್ಯಾಪ್ ತಯಾರು ಮಾಡುವುದು, ವಿಶೇಷವಾಗಿ ಮೌಂಟೇನ್ ಬೈಕರ್ಸ್ ಗೆ. ನೆಕ್ಸ್ಟ್ ಟ್ರಿಪ್ ಪ್ಲ್ಯಾನ್ ಮಾಡುವವರಿಗೆ ಈ ಮ್ಯಾಪ್ ಸಹಾಯಕವಾಗುತ್ತದೆ. ವೆದರ್ ಕಂಡೀಶನ್, ರೈಲ್ವೇ ಲೈನ್, ಬಸ್ ಲೈನ್ ಎಲ್ಲಾ ಈ ಮ್ಯಾಪ್ ಒಳಗೊಂಡಿರುತ್ತದೆ. ಈ ವಿಷಯದ ಬಗ್ಗೆಯೂ ಅನೇಕ ಕೋರ್ಸ್ ಗಳನ್ನ ನೀಡುವ ಶಿಕ್ಷಣ ಸಂಸ್ಥೆಗಳಿವೆ. ಓಸ್ಮಾನಿಯಾ ಯೂನಿವರ್ಸಿಟಿ ಆಫ್ ಮದ್ರಾಸ್, ಜಮಿಯಾ ಮಿಲಿಯಾ ಇಸ್ಲಾಮಿಯಾ ದೆಹಲಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಮುಂತಾದ ಶಿಕ್ಷಣ ಸಂಸ್ಥೆಗಳಲ್ಲಿ ಈ ಬಗ್ಗೆ ಕೋರ್ಸ್ ನೀಡಲಾಗುತ್ತದೆ.

ಫಿಲ್ಮ್ ಆಂಡ್ ಟಿವಿ:

ಹಿಂದೆಲ್ಲಾ ಮಕ್ಕಳು ಫಿಲ್ಮ್ ಲೈನ್ ಗೆ ಹೋಗುತ್ತೇವೆ ಅಂದ್ರೆ ಹೆತ್ತವರಿಗೆ ಅದೇನೋ ಆತಂಕ. ಆದ್ರೆ ಈಗ ಹಾಗಲ್ಲ. ಸಿನಿ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡವರು ಸಖತ್ ಫೇಮಸ್ ಆಗಿದ್ದಾರೆ. ಹಾಗಾಗಿ ಇದೀಗ ಹೆಚ್ಚಿನವರ ಒಲವು ಬಣ್ಣದ ಜಗತ್ತಿನತ್ತ. ಇದಕ್ಕೆ ಸಂಬಂಧಪಟ್ಟಂತೆಯೂ ಅನೇಕ ಕೋರ್ಸ್ ಗಳನ್ನ ನೀಡುವ ಶಿಕ್ಷಣ ಸಂಸ್ಥೆಗಳು ನಮ್ಮಲ್ಲಿ ಇವೆ. ಅವುಗಳು ಯಾವುವು ಎಂದರೆ, ಫಿಲ್ಮ್ ಆಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಪುಣೆ , ವಿಸ್ಟ್ಲಿಂಗ್ ವುಡ್ಸ್ ಇಂಟರ್ ನ್ಯಾಷನಲ್ ಮುಂಬಯಿ, ಸತ್ಯಜಿತ್ ರೆ ಫಿಲ್ಮ್ಸ, ಮತ್ತು ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಕೊಲ್ಕತ್ತಾ.

English summary
Not only doctor, Engineer or lawyer cousres famous in India. but also someother offbeat cousres also avalaibale in India. here given the list about offbeat cousres

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia