ಕ್ರಿಕೆಟ್ ಮಾತ್ರ ವೃತ್ತಿಯಲ್ಲ... ಯಾವ್ಯಾವ ಕ್ರಿಕೆಟಿಗರು ಎಷ್ಟೆಷ್ಟು ರೆಸ್ಟೋರೆಂಟ್ ಮಾಲೀಕರು ಗೊತ್ತಾ?

ಭಾರತದ ಕ್ರಿಕೆಟರ್ಸ್ ಹಾಗೂ ಅವರು ನಡೆಸುತ್ತಿರುವ ಹೋಟೆಲ್ ಉದ್ಯಮದ ಬಗ್ಗೆ ಒಂದಿಷ್ಟು ಮಾಹಿತಿ ಕೆರಿಯರ್ ಇಂಡಿಯಾ ನಿಮಗೆ ನೀಡುತ್ತಿದೆ.

ಭಾರತದಲ್ಲಿ ನಮ್ಮ ಜನರಿಗೆ ಬಾಲಿವುಡ್ ತಾರೆಯರು, ಕ್ರಿಕೆಟರ್ಸ್ ಅಂದ್ರೆ ಅದೇನೋ ಕ್ರೇಜ್ ಅಂತಾನೇ ಹೇಳಬಹುದು. ಇನ್ನೂ ಕ್ರಿಕೆಟ್ ತಾರೆಯರು ಬರೀ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಫ್ಯಾನ್ಸ್ ಹೊಂದಿದ್ದಾರೆ. ಇನ್ನೂ ಕ್ರಿಕೆಟ್ ತಾರೆಯರು ಬರೀ ಬ್ಯಾಟ್ ಆಂಡ್ ಬಾಲ್ ಹಿಡಿಯುವುದರಲ್ಲಿ ಮಾತ್ರ ಫೇಮಸ್ ಅಲ್ಲ, ಬದಲಿಗೆ ಅವರು ಕೆಲವೊಂದು ಉದ್ಯಮದಲ್ಲೂ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಅದೆಷ್ಟೋ ಕ್ರಿಕೆಟರ್ಸ್ ಹೋಟೆಲ್ ಬ್ಯುಸಿನೆಸ್ ಕೂಡಾ ನೋಡಿಕೊಂಡಿದ್ದಾರೆ.

ಇದೀಗ ನಿಮ್ಮ ಮುಂದೆ ಭಾರತದ ಕ್ರಿಕೆಟರ್ಸ್ ಹಾಗೂ ಅವರು ನಡೆಸುತ್ತಿರುವ ಹೋಟೆಲ್ ಉದ್ಯಮದ ಬಗ್ಗೆ ಒಂದಿಷ್ಟು ಮಾಹಿತಿ ಕೆರಿಯರ್ ಇಂಡಿಯಾ ನಿಮಗೆ ನೀಡುತ್ತಿದೆ.

ಕ್ರಿಕೆಟಿಗರ ರೆಸ್ಟೋರೆಂಟ್ ಉದ್ಯಮ

ವಿರಾಟ್ ಕೊಹ್ಲಿ:

ಅಟ್ಯುಟುಡ್, ಟ್ಯಾಲೆಂಟ್, ಟೆಕ್ನಿಕ್ ಎಲ್ಲಕ್ಕೂ ಫೇಮಸ ಆಗಿರುವ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ. ಯಂಗೆಸ್ಟ್ ಬ್ಯಾಟ್ಸ್ ಮ್ಯಾನ್ ಆಗಿರುವ ವಿರಾಟ್ ಇತ್ತೀಚೆಗಷ್ಟೇ ಹೊಸತೊಂದು ರೆಸ್ಟೋರೆಂಟ್ ತೆರೆದಿದ್ದಾರೆ. ನವದೆಹಲಿಯಲ್ಲಿ ತೆರೆದಿರುವ ಈ ರೆಸ್ಟೋರೆಂಟ್ ಹೆಸರು Nueva. ಫ್ಯಾಶನ್ ಬ್ರಾಂಡ್, ಆಪ್ ಪ್ರಮೋಶನ್ ಸೇರಿದಂತೆ ಈಗಾಗಲೇ ಹಲವಾರು ಸೈಡ್ ಬ್ಯುಸಿನೆಸ್ ನಲ್ಲಿ ತೊಡಗಿಸಿಕೊಂಡಿರುವ ವಿರಾಟ್ ಸೂಪರ್ ಲಕ್ಸುರಿಯಸ್ ರೆಸ್ಟೋರೆಂಟ್ ನ ಮಾಲೀಕ ಕೂಡಾ.

ಸಚಿನ್ ತೆಂಡೂಲ್ಕರ್:

ಕ್ರಿಕೆಟ್ ದೇವರು ಎಂದು ಫೇಮಸ್ ಆಗಿದ್ದಾರೆ ಸಚಿನ್ ತೆಂಡೂಲ್ಕರ್. ಫೀಲ್ಡ್ ನಲ್ಲಿ ಬರೀ 4, 6 ಹೊಡೆದೇ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ. ಇನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ಕೂಡಾ ರೆಸ್ಟೋರೆಂಟ್ ಮಾಲೀಕ. ಮುಂಬಯಿಯಲ್ಲಿ ತೆಂಡೂಲ್ಕರ್ಸ್ ಹೆಸರಿನ ರೆಸ್ಟೋರೆಂಟ್ ನೀವು ನೋಡಬಹುದು. ಈ ರೆಸ್ಟೋರೆಂಟ್ ನಲ್ಲಿ ಸಚಿನ್‌ಗೆ ಪ್ರಿಯವಾದ ತಿನಿಸು ನೀಡುವುದು ವಿಶೇಷ. ನೀವು ಸಚಿನ್ ಫ್ಯಾನ್ ಆಗಿದ್ರೆ ಈ ರೆಸ್ಟೋರೆಂಟ್ ಗೆ ವಿಸಿಟ್ ಮಾಡಲೇ ಬೇಕು.

ಜಹೀರ್ ಖಾನ್:

ಕ್ರಿಕೆಟ್ ಜತೆ ಜತೆ ಜಹೀರ್ ಕೂಡಾ ಹೋಟೆಲ್ ಇಂಡಸ್ಟ್ರಿಯಲ್ಲಿ ಸಕ್ಸಸ್ ಉದ್ಯಮಿ. ೨೦೦೪ ರಲ್ಲಿ ಜಹೀರ್ ಮೊದಲ ರೆಸ್ಟೋರೆಂಟ್ ಉದ್ಯಮ ಪ್ರಾರಂಭಿಸಿದ್ದರು. 2013ರಲ್ಲಿ ಲಾಂಜ್ ವೊಂದನ್ನ ಲಾಂಚ್ ಮಾಡಿದ್ದರು. ಇದೆರೆಡು ಅಷ್ಟೇ ಅಲ್ಲದೇ ಜಹೀರ್, ಕಾರ್ಪೋರೇಟ್ ಈವೆಂಟ್ಸ್ ಮ್ಯಾನೇಜ್‌ಮೆಂಟ್ ಕೂಡಾ ನೋಡಿಕೊಳ್ಳುತ್ತಿದ್ದಾರೆ.

ರವೀಂದ್ರ ಜಡೇಜ:

ಟೀಂ ಗೆ ಎಂಟ್ರಿ ಆಗುವ ಮುನ್ನನೇ ರವೀಂದ್ರ ಜಡೇಜ ಹೋಟೆಲ್ ಉದ್ಯಮದಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದರು. ರಾಜ್‌ಕೋಟ್ ನಲ್ಲಿ ಜಡ್ಡೂಸ್ ಫೀಲ್ಡ್ ಹೆಸರಿನ ರೆಸ್ಟೋರೆಂಟ್ ನಡೆಸುತ್ತಿದ್ದಾರೆ ಜಡೇಜಾ. ಈ ಹೋಟೆಲ್ 12ನೇ ಡಿಸಂಬರ್ 2012 ರಂದು ಲಾಂಚ್ ಆಯಿತು. ಇನ್ನು 12 ಜಡೇಜಾ ಅವರ ಲಕ್ಕಿ ನಂಬರ್ ಕೂಡಾ.

ಸೌರವ್ ಗಂಗೂಲಿ:

ಕೊಲ್ಕತ್ತಾದ ಪ್ರಿನ್ಸ್ ಎಂದೇ ಫೇಮಸ್ ಆಗಿರುವ ಕ್ರಿಕೆಟಿಗ ಸೌರವ್ ಗಂಗೂಲಿ. ಇವರು ದಾದಾ ಎಂದೂ ಕೂಡಾ ಫೇಮಸ್.2004 ರಲ್ಲಿ ಯಾವಾಗ ಸೌರವ್ ಗಂಗೂಲಿ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿದ್ದರೋ ಆ ಟೈಂನಲ್ಲಿ ಹೋಟೆಲ್ ಉದ್ಯಮಕ್ಕೆ ಕಾಲಿಟ್ಟರು. ಆದ್ರೆ 2011ರಲ್ಲಿ ಹೋಟೆಲ್ ನಡೆಸಲು ಟೈಂ ಇಲ್ಲದ್ದರಿಂದ ಈ ಹೋಟೆಲ್ ಮುಚ್ಚಲಾಯಿತು.

ವೀರೆಂದ್ರ ಸೇಹ್ವಾಗ್:

ಇನ್ನು ತನ್ನ ರೋಲ್ ಮಾಡೆಲ್ ಸಚಿನ್ ತೆಂಡೂಲ್ಕರ್ ತರಹ ವೀರೆಂದ್ರ ಸೇಹ್ವಾಗ್ ಕೂಡಾ ಹೋಟೆಲ್ ಉದ್ಯಮಕ್ಕೆ ಕೈ ಹಾಕಿದ್ದರು. ದೆಹಲಿಯಲ್ಲಿ ಸೇಹ್ವಾಗ್ಸ ಫೇವರೆಟ್ ಹೆಸರಿನ ಸಸ್ಯಹಾರಿ ಹೋಟೆಲ್ ತೆರೆದಿದ್ದರು. ಆದ್ರೆ ಆ ಉದ್ಯಮ ಯಾಕೋ ಅವರ ಕೈ ಹಿಡಿಲಿಲ್ಲ ಸದ್ಯ ಆ ಹೋಟೆಲ್ ಮುಚ್ಚಲಾಗಿದೆ.

ಕಪಿಲ್ ದೇವ್:

ಕಪಿಲ್ ದೇವ್ ಭಾರತದ ಕ್ರಿಕೆಟ್ ಜಗತ್ತಿನ ಐಕಾನಿಕ್ ಸ್ಟಾರ್ ಎಂದೇ ಫೇಮಸ್ ಆಗಿದ್ದಾರೆ. ಕಪಿಲ್ ದೇವ್ ಕೂಡಾ ಒಂದು ರೆಸ್ಟೋರೆಂಟ್ ಉದ್ಯಮ ನಡೆಸುತ್ತಿದ್ದಾರೆ. ಅದರ ಹೆಸರು ಕಪಿಲ್ ಅಥವಾ ಕ್ಯಾಪ್ಟನ್ಸ್ ರಿಟ್ರೀಟ್ ಇನ್ ಚಂಡೀಘರ್. 1980 ರಲ್ಲಿ ಈ ರೆಸ್ಟೋರೆಂಟ್ ಲಾಂಚ್ ಮಾಡಲಾಗಿದ್ದು, ಇಂದಿಗೂ ಯಶಸ್ವಿಯಾಗಿ ಈ ಹೋಟೆಲ್ ನಡೆಯುತ್ತಿದೆ

For Quick Alerts
ALLOW NOTIFICATIONS  
For Daily Alerts

English summary
Indian Cricketers have never failed to win hearts with their field performances. but many knew of the field, the way to a man's heart is through his stomach and therefore they come up with restaurants so as to serve their fans. So here we brought a list of indian cricketers and their hotels. Indian cricketers who have ventured their ride in the hotel business
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X