ವಿದೇಶಿ ಕಂಪೆನಿಯ ಸಿಇಓ ಆದ ನಾಲ್ವರು ಭಾರತೀಯ ದಿಗ್ಗಜರು

By Kavya

ಎಡಾಬ್, ಗೂಗಲ್, ಮೈಕ್ರೋಸಾಫ್ಟ್ ಮತ್ತು ಪೆಪ್ಸಿಕೋ..ಈ ನಾಲ್ಕು ಜನಪ್ರಿಯ ಕಂಪೆನಿಯ ಅತ್ಯುನ್ನತ ಹುದ್ದೆಯಲ್ಲಿರುವವರು ಭಾರತದಲ್ಲಿ ಹುಟ್ಟಿದವರು. ಇವರ ಜೀವನದ ಕಥೆಗಳು ನಿಮ್ಮ ಜೀವನದಲ್ಲಿ ಯಶಸ್ಸನ್ನ ಕಾಣಲು ಪೂರಕವಾಗಿರುವಂತಹದ್ದು. ವಿದೇಶಕ್ಕೆ ಹೋಗಬಯಸುವವರು ನೀವಾಗಿದ್ದರೆ ಖಂಡಿತವಾಗಿಯೂ ನೀವು ಇವರ ಬಗ್ಗೆ ತಿಳಿದುಕೊಳ್ಳಲೇಬೇಕು.

ಸುಂದರ್ ಪಿಚಾಯ್, ಸಿಇಒ, ಗೂಗಲ್

ಸುಂದರ್ ಪಿಚಾಯ್, ಸಿಇಒ, ಗೂಗಲ್

ಶಾಲೆಯಲ್ಲಿರುವಾಗ ಸುಂದರ್ ಕೇವಲ ಒಬ್ಬ ಸಾಮಾನ್ಯ ವಿದ್ಯಾರ್ಥಿ ಅಷ್ಟೇ. ಆದ್ರೆ ಹೈಸ್ಕೂಲ್ ಜೀವನದಲ್ಲಿ ಕ್ರಿಕೆಟ್ ತಂಡ ನಾಯಕನಾಗಿ ಗುರುತಿಸಿಕೊಂಡಿದ್ರು. ಖರಗ್ ಪುರದ ಐಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಲೋಹವಿಜ್ಞಾನದಲ್ಲಿ ಪದವಿ ಪಡೆದ ನಂತರ ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಸ್ಕಾಲರ್ಶಿಪ್ ಪಡೆದು ವಿಧ್ಯಾಬ್ಯಾಸ ಮುಂದುವರಿಸಿದರು. ಪೋಷಕರು ದುಡಿದು ಕೂಡಿಟ್ಟ ಹಣವನ್ನೆಲ್ಲ ಮಗನ ವಿಮಾನಯಾನದ ಖರ್ಚಿಗೆ ವ್ಯಯಿಸುವಂತಾಗಿತ್ತು. ಸಿಲಿಕಾನ್ ವ್ಯಾಲಿಯಲ್ಲಿ ಮೊದಲು ಪ್ರೊಡಕ್ಟ್ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿದ್ರು.2002 ರಲ್ಲಿ ವಾರ್ಟನ್ ಶಾಲೆಯಲ್ಲಿ ಎಂಬಿಎ ಪದವಿ ಪಡೆದ್ರು. ಮೆಕೆನ್ಸೆಯಲ್ಲಿ ಮ್ಯಾನೇಜ್ ಮೆಂಟ್ ಕನ್ಸಲ್ ಟೆಂಟ್ ಆಗಿ ಕೆಲಸಕ್ಕೆ ಸೇರಿದ್ರು. ಅಲ್ಲಿಂದ ಗೂಗಲ್ ಗೆ ಹೋಗುವಾಗ ಅವರ ಸಹದ್ಯೋಗಿಗಳೆಲ್ಲರೂ ಬೇಡವೆಂದೇ ಹೇಳಿದ್ರೂ ತಮ್ಮ ಉತ್ತಮ ಭವಿಷ್ಯವನ್ನು ಗೂಗಲ್ ನಲ್ಲಿ ರೂಪಿಸಿಕೊಳ್ಳಬಹುದೆಂದು ನಿರ್ಧರಿಸಿ ಗೂಗಲ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿ ಈಗ ಅತ್ಯತ್ತುಮ ಹುದ್ದೆಯಲ್ಲಿದ್ದು ಭಾರತಕ್ಕೆ ಹೆಮ್ಮೆ ಎನಿಸಿಕೊಂಡಿದ್ದಾರೆ.

ಶಂತನು ನಾರಾಯಣ್. ಸಿಇಒ ಮತ್ತು ಅಧ್ಯಕ್ಷರು, ಎಡಾಬ್ ಸಿಸ್ಟಮ್ ಇಂಕ್

ಶಂತನು ನಾರಾಯಣ್. ಸಿಇಒ ಮತ್ತು ಅಧ್ಯಕ್ಷರು, ಎಡಾಬ್ ಸಿಸ್ಟಮ್ ಇಂಕ್

ನಾರಾಯಣ್ ಅವರು ಓದಿದ್ದು ಹೈದ್ರಾಬಾದ್ ಪಬ್ಲಿಕ್ ಶಾಲೆಯಲ್ಲಿ.ಓಸ್ಮಾನಿಯಾ ಯುನಿವರ್ಸಿಟಿಯಲ್ಲಿ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಪದವಿ ಪಡೆದ್ರು. ತಮ್ಮ ಎಂಬಿಎ ಪದವಿಯನ್ನು ಕ್ಯಾಲಿಫೋರ್ನಿಯಾದ ಯುನಿವರ್ಸಿಟಿಯಲ್ಲಿ ಮುಗಿಸಿದ್ರು,ಓಹಿಯೋದ ಗ್ರೀನ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಎಂಎಸ್ ಪದವಿ ಪೂರೈಸಿದ್ರು. ಅವರು ತಮ್ಮ ಕರಿಯರ್ ಆರಂಭಿಸಿದ್ದು ಆಪಲ್ ಇಂಕ್ ಕಂಪೆನಿಯಲ್ಲಿ. ಅಂತರ್ಜಾಲದಲ್ಲಿ ಫೋಟೋ ಶೇರ್ ಮಾಡಜುವ ಪಿಕ್ಟ್ರಾ ಇಂಕ್ ಕಂಪೆನಿಗೆ ಅವರು ಸೇರಿದ್ದು ನಂತರದ ದಿನಗಳಲ್ಲಿ.1998 ರಲ್ಲಿ ಪಿಕ್ಟ್ರಾ ಕಂಪೆನಿಯನ್ನು ಎಡಾಬ್ ಕಂಪೆನಿಯ ಜೊತೆ ವಿಲೀನಗೊಳಿಸುವ ಪ್ರಕ್ರಿಯೆಯಲ್ಲಿ ಅವರು ಎಡಾಬ್ ಜೊತೆಗೆ ಕೈಜೋಡಿಸಿ 2005 ರಲ್ಲಿ ಎಡಾಬ್ ಕಂಪೆನಿಯ ಸಿಇಒ ಆಗಿ ನೇಮಕಗೊಂಡರು.

ಇಂದ್ರಾ ನೂಯಿ, ಸಿಇಒ ಮತ್ತು ಅಧ್ಯಕ್ಷೆ ಪೆಪ್ಸಿಕೋ ಇಂಕ್

ಇಂದ್ರಾ ನೂಯಿ, ಸಿಇಒ ಮತ್ತು ಅಧ್ಯಕ್ಷೆ ಪೆಪ್ಸಿಕೋ ಇಂಕ್

ಶಾಲೆ ಮತ್ತು ಕಾಲೇಜು ದಿನಗಳನ್ನು ನೂಯಿ ಕಳೆದದ್ದು ಚೈನೈನಲ್ಲಿ. ಕೊಲ್ಕತ್ತಾದಲ್ಲೇ ಮಾಸ್ಟರ್ ಡಿಗ್ರಿಯನ್ನೂ ಪಡೆದುಕೊಂಡ್ರು. ವಿದೇಶದಲ್ಲಿ ಪದವಿ ಪಡೆಯಲು ಹೋಗುವುದಕ್ಕಿಂತ ಮುಂಚೆ ಇಂದ್ರಾ ಜಾನ್ಸನ್ ಎಂಡ್ ಜಾನ್ಸನ್ ಕಂಪೆನಿಯಲ್ಲಿ ಮೊದಲು ಪ್ರೊಡಕ್ಟ್ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿದ್ರು. ನಂತರ ಮೆಟರ್ ಬ್ರೆಡ್ಸೆಲ್ ಅನ್ನೋ ಟೆಕ್ಸ್ ಟೈಲ್ ಕಂಪೆನಿಯಲ್ಲೂ ಕಾರ್ಯ ನಿರ್ವಹಿಸಿದ್ರು. ಫಾರಿನ್ ನಲ್ಲಿ ಮಗಳಿಗೆ ಸೀಟ್ ಸಿಗುತ್ತೆ ಅನ್ನೋ ಕಲ್ಪನೆ ಕೂಡ ಅವರ ಪೋಷಕರಿಗೆ ಇರಲಿಲ್ಲ.ಯಾಲೇ ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಆಕೆಗೆ ಸ್ಕಾಲರ್ ಶಿಪ್ ನಲ್ಲಿ ಸೀಟ್ ಆಯ್ತು. ಮಧ್ಯರಾತ್ರಿ ರಿಸೆಪ್ಶನಿಸ್ಟ್ ಕೆಲಸ ನಿರ್ವಹಿಸಿ ತಮ್ಮ ಮೊದಲ ಸಂದರ್ಶನಕ್ಕೆ ಸ್ಯೂಟ್ ಖರೀದಿಸಿದ್ದರಂತೆ ಇಂದ್ರಾ ಆದ್ರೆ ಆ ಇಂಟರ್ ವ್ಯೂನಲ್ಲಿ ಆಕೆ ಪಾಸಾಗಿರಲಿಲ್ಲ. ಹಾಗಾಗಿ ತಮ್ಮ ಮುಂದಿನ ಇಂಟರ್ ವ್ಯೂ ನಲ್ಲಿ ಆಕೆ ಸೀರೆ ಧರಿಸಿ ಹೋಗಿದ್ರಂತೆ. 1994 ರಲ್ಲಿ ನೂಯಿ ಪೆಪ್ಸಿಕೋ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು. 2001 ರಲ್ಲಿ ಅದೇ ಕಂಪೆನಿಯ ಸಿಇಒ ಆದ್ರು ಮತ್ತು 2006 ರಲ್ಲಿ ಅದೇ ಕಂಪೆನಿಯ ಸಿಇಒ ಮತ್ತು ಅಧ್ಯಕ್ಷೆಯಾಗಿ ಆಕೆ ತಮ್ಮನ್ನ ತಾವು ಗುರುತಿಸಿಕೊಂಡು ಭಾರತಕ್ಕೆ ಕೀರ್ತೀ ತಂದಿದ್ದಾರೆ.

ಸತ್ಯ ನಡೆಲ್ಲಾ, ಸಿಇಒ, ಮೈಕ್ರೋಸಾಫ್ಟ್ ಕಾರ್ಪೋರೇಷನ್

ಸತ್ಯ ನಡೆಲ್ಲಾ, ಸಿಇಒ, ಮೈಕ್ರೋಸಾಫ್ಟ್ ಕಾರ್ಪೋರೇಷನ್

ಹೈದ್ರಾಬಾದ್ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಪೂರೈಸಿ, ಮಣಿಪಾಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸತ್ಯ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದುಕೊಂಡ್ರು. ಚಿಕ್ಕಂದಿನಲ್ಲಿ ಸತ್ಯ ಉತ್ತಮ ಕ್ರಿಕೆಟರ್ ಆಗಬೇಕು ಅಂತ ಬಯಸಿದ್ದರಂತೆ. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅವರಿಗಿದ್ದ ಆಸಕ್ತಿ ಅವರನ್ನು ಬೇರೆಲ್ಲೋ ಕೊಂಡೊಯ್ದಿದೆ. ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಎಂಎಸ್ ಪದವಿ ಪಡೆದುಕೊಂಡ್ರು.1990 ರಲ್ಲಿ ಸನ್ ಮೈಕ್ರೋಸಿಸ್ಟಮ್ ನಲ್ಲಿ ನಡೆಲ್ಲಾ ಮೊದಲು ತಮ್ಮ ಪ್ರೊಫೆಷನಲ್ ಕರಿಯರ್ ಆರಂಭಿಸಿದ್ರು.1992ರಲ್ಲಿ ಅವರು ಮೈಕ್ರೋಸಾಫ್ಟ್ ಕಂಪನಿಗೆ ಹಾರಿದ್ರು. ವಾರದ ರಜೆಯ ದಿನಗಳಲ್ಲಿ ಚಿಕಾಗೋಗೆ ತೆರಳಿ ಅಲ್ಲಿನ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದು ಮೈಕ್ರೋಸಾಫ್ಟ್ ನಲ್ಲಿ ಉನ್ನತ ಹುದ್ದೆ ಏರುತ್ತಲೇ 2014 ರಲ್ಲಿ ನಡೆಲ್ಲಾ ಅದೇ ಕಂಪೆನಿಯ ಮೂರನೇ ಸಿಇಓ ಎಂದು ಪರಿಗಣಿಸಲ್ಪಟ್ಟರು.

For Quick Alerts
ALLOW NOTIFICATIONS  
For Daily Alerts

English summary
Adobe, Google, Microsoft, and PepsiCo. All four of these multinational brands have CEOs who were born in India. People who left a comfort zone as big as their motherland to make a mark. Their career stories help us realize the importance of creating the conditions to succeed, even if it’s about going abroad.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X