Career In Arts After Class 12 : ದ್ವಿತೀಯ ಪಿಯು ಬಳಿಕ ಆರ್ಟ್ಸ್ ನಲ್ಲಿ ಆಯ್ಕೆ ಮಾಡಿಕೊಳ್ಳಬಹುದಾದ ಇಂಟ್ರೆಸ್ಟಿಂಗ್ ಕೆರಿಯರ್

By Kavya

ಪಿಯುಸಿ ಬಳಿಕ ಆರ್ಟ್ಸ್ ವಿದ್ಯಾರ್ಥಿಗಳು ಬಿಎ ಪದವಿಯತ್ತ ಮುಖ ಮಾಡುತ್ತಾರೆ. ಬಿಎ ಅಲ್ಲಿ ಯಾವುದಾದ್ರೂ ಒಂದು ವಿಷಯವನ್ನ ಮೇಜರ್ ಸಬ್‌ಜೆಕ್ಟ್ ಆಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇತಿಹಾಸ, ಭಾಷೆ, ಸಾಹಿತ್ಯ, ಕಾನೂನು, ತತ್ವಶಾಸ್ತ್ರ, ಧರ್ಮ, ಪ್ರದರ್ಶನ ಕಲೆಗಳು, ಮಾನವಶಾಸ್ತ್ರ, ಸಂವಹನ, ಸಮಾಜಶಾಸ್ತ್ರ, ಮನಃಶಾಸ್ತ್ರ ಸೇರಿದಂತೆ ಇನ್ನಿತ್ತರ ವಿಷಯಗಳನ್ನ ಮೇಜರ್ ಸಬ್‌ಜೆಕ್ಟ್ ಆಗಿ ಪ್ರತಿಷ್ಟಿತ ಕಾಲೇಜುಗಳು ವಿದ್ಯಾರ್ಥಿಗಳಿಗೆ ಆಫರ್ ನೀಡುತ್ತವೆ. ಬಿಎ ಬಳಿಕ ತಾವು ಬಿಎ ಅಲ್ಲಿ ಆಯ್ಕೆ ಮಾಡಿಕೊಂಡಿದ್ದ ಸಬ್‌ಜೆಕ್ಟ್ ಮೇಲೆ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಕೂಡಾ ಪಡೆಯಬಹುದು.

ಸ್ನಾತಕೋತ್ತರ ಪದವಿ ಬಳಿಕ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ವಿಷಯದಲ್ಲಿ ಪಿಹೆಚ್ ಡಿ ಮಾಡಬಹುದು. ಅಷ್ಟೇ ಅಲ್ಲ ಆರ್ಟ್ಸ್ ಆಯ್ಕೆ ಮಾಡಿಕೊಂಡವರಿಗೆ ಯಾವೆಲ್ಲಾ ಉದ್ಯೋಗ ಆಯ್ಕೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಸಮಾಜಶಾಸ್ತ್ರಜ್ಞ, ಸಾಮಾಜಿಕ ಕಾರ್ಯಕರ್ತ, ಇತಿಹಾಸಕಾರ, ಮಾನವಶಾಸ್ತ್ರಜ್ಞ, ಮಾನವ ಸಂಪನ್ಮೂಲ, ವೈಯಕ್ತಿಕ ಕಾರ್ಯಕಾರಿ, ಬರಹಗಾರ / ಪತ್ರಕರ್ತ / ಸಂಪಾದಕ, ವಕೀಲ, ಮಾಧ್ಯಮ ಸಿಬ್ಬಂದಿ, ಶಾಲಾ ಶಿಕ್ಷಕ / ಕಾಲೇಜು ಪ್ರಾಧ್ಯಾಪಕ / ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಇತ್ಯಾದಿ ಹುದ್ದೆಗಳನ್ನ ಪಡೆಯಲು ಆರ್ಟ್ಸ್ ವಿದ್ಯಾರ್ಥಿಗಳು ಅರ್ಹತೆ ಪಡೆದಿರುತ್ತಾರೆ.

ಇಷ್ಟೇ ಅಲ್ಲದೇ ಆರ್ಟ್ಸ್ ವಿದ್ಯಾರ್ಥಿಗಳು ಯುಪಿಎಸ್ ಸಿ, ಐಎಎಸ್, ಇನ್ಸ ರುನ್ಸ್ ಬ್ಯಾಂಕಿಂಗ್‌ ಪರೀಕ್ಷೆಗಳನ್ನ ಕೂಡಾ ಎದುರಿಸಬಹುದು. ಆರ್ಟ್ಸ್ ವಿದ್ಯಾರ್ಥಿಗಳಿಗೆ ಇಲ್ಲಿ ಕೆಲವೊಂದು ಕೋರ್ಸ್ ಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಕೋರ್ಸ್ ನೀವು ಮಾಡಿದ್ದಲ್ಲಿ ನಿಮಗೆ ಜಗತ್ತಿನಾದ್ಯಂತ ಉದ್ಯೋಗ ಅವಕಾಶಗಳಿವೆ. ಒಮ್ಮೆ ಟ್ರೈ ಮಾಡಿ.

ಮಾಸ್ ಕಮ್ಯುನಿಕೇಶನ್ ಕೋರ್ಸ್

ಮಾಸ್ ಕಮ್ಯುನಿಕೇಶನ್ ಕೋರ್ಸ್

Image Source

ಮಾಸ್ ಕಮ್ಯುನಿಕೇಶನ್ ಕೋರ್ಸ್ ಇದೊಂದು ಫೇಮಸ್ ಮಾತ್ರವಲ್ಲದೇ ಇಂಟ್ರಸ್ಟಿಂಗ್ ಸಬ್‌ಜೆಕ್ಟ್ ಕೂಡಾ. ಕಮ್ಯುನಿಕೇಶನ್ ಆಂಡ್ ಜರ್ನಲಿಸಂ ನಲ್ಲಿ ಪದವಿ, ಬ್ಯಾಚುಲರ್ ಆಫ್ ಮಾಸ್ ಮೀಡಿಯಾ, ಬ್ಯಾಚುಲರ್ ಆಫ್ ಜರ್ನಿಲಿಸಂ ಆಂಡ್ ಕಮ್ಯುನಿಕೇಶನ್ ಹಾಗೂ ಇನ್ನೂ ಕೆಲವೊಂದು ಕೋರ್ಸ್ ಗಳು ಈ ಕೋರ್ಸ್ ನ ಅಡಿಯಲ್ಲಿ ಬರುತ್ತದೆ.

ಚೆನ್ನಾಗಿ ಮಾತನಾಡುವ ಕೌಶಲ್ಯ ನಿಮಗಿದ್ರೆ ನೀವು ಈ ಜರ್ನಿಲಿಸಂ ಫೀಲ್ಡ್‌ಗೆ ಫಿಟ್ ಆಗ್ತೀರಾ. ಈ ಕೋರ್ಸ್ ನಿಂದ ನಿಮಗೆ ಸಿನಿಮಾ, ಟಿವಿ, ಪಬ್ಲಿಷಿಂಗ್, ಪಬ್ಲಿಕ್ ರಿಲೇಶನ್, ಜರ್ನಲಿಸಂ, ಎಡಿಟಿಂಗ್, ನಿರ್ದೇಶನ, ಫಿಲ್ಮ ಮೇಕಿಂಗ್, ಸ್ಕ್ರಿಪ್ಟ್ ರೈಟಿಂಗ್, ಪ್ರೊಡಕ್ಷನ್ ಹಾಗೂ ಇನ್ನಿತ್ತರ ಫೀಲ್ಡ್‌ಗಳಲ್ಲಿ ವಿಪುಲ ಅವಕಾಶ ಸಿಗುವುದು

ಪತ್ರಕರ್ತ, ನಟ, ನಿರ್ದೇಶಕ, ಸಂಕಲನಕಾರ, ಸ್ಕ್ರೀನ್ ರೈಟರ್, ರೇಡಿಯೋ ಜಾಕಿ, ವಿಡಿಯೋ ಜಾಕಿ ಹುದ್ದೆ ಸೇರಿದಂತೆ ಇದೊಂದು ಆಕರ್ಷಕ ಹಾಗೂ ಅತೀ ಹೆಚ್ಚು ಸಂಬಳ ಪಡೆಯುವ ಕೆಲಸವೂ ಆಗಿದೆ

 

ಲಿಬರಲ್ ಆರ್ಟ್ಸ್

ಲಿಬರಲ್ ಆರ್ಟ್ಸ್

Image Source

ಜಗತ್ತಿನ ಹಳೆಯ ಸಬ್‌ಜೆಕ್ಟ್ ಇದು. ಸಾಹಿತ್ಯ, ಭಾಷೆ, ಕಲಾ ಇತಿಹಾಸ, ಸಂಗೀತ ಇತಿಹಾಸ, ತತ್ವಶಾಸ್ತ್ರ, ಇತಿಹಾಸ, ಗಣಿತಶಾಸ್ತ್ರ, ಮನೋವಿಜ್ಞಾನ ಮತ್ತು ವಿಜ್ಞಾನದ ಕೆಲವು ಕ್ಷೇತ್ರಗಳನ್ನು ಇದು ಉಲ್ಲೇಖಿಸುತ್ತದೆ. ವೈಯಕ್ತಿಕ ಅಧಿಕಾರ, ಹಾಗೂ ಸಂಕೀರ್ಣತೆ ಮತ್ತು ವೈವಿಧ್ಯತೆಯನ್ನ ಹೇಗೆ ಲೀಡ್ ಮಾಡುವುದು ಎಂಬುವುದನ್ನ ಕಾಲೇಜುಗಳು ಕಲಿಸಿಕೊಡುವಂತೆ ಲಿಬರಲ್ ಆರ್ಟ್ಸ್ ತಿಳಿಸುತ್ತದೆ. ಲಿಬರಲ್ ಆರ್ಟ್ಸ್ ಎಂಬುವುದು, ಕಲೆ, ಬಯೋಲಾಜಿಕಲ್, ಫಿಸಿಕಲ್ ಸೈನ್ಸ್, ಸೋಶಲ್ ಸೈನ್ಸ್ ಮುಂತಾದ ಸಬ್‌ಜೆಕ್ಟ್ ಗಳ ಒಂದು ರಚನಾತ್ಮಕ ಸಂಯೋಜನೆಯಾಗಿದೆ

 

ಪಾಕಶಾಲೆಯ ಕಲೆಗಳು

ಪಾಕಶಾಲೆಯ ಕಲೆಗಳು

Image Source

ನಿಮಗೆ ಕುಕ್ಕಿಂಗ್ ನಲ್ಲಿ ಇಂಟ್ರೆಸ್ಟ್ ಇದೆಯಾ, ಅಮ್ಮ ಅಡುಗೆ ಮಾಡುವಾಗ ನಿವು ಕೂಡಾ ಸ್ವ ಇಚ್ಚೆಯಿಂದಲೇ ಆಕೆಗೆ ಅಡುಗೆಯಲ್ಲಿ ಸಹಾಯ ಮಾಡುತ್ತೀರಾ ಹಾಗಾದ್ರೆ ನಿಮಗೆ ಈ ಸಬ್‌ಜೆಕ್ಟ್ ಕೂಡಾ ಇಷ್ಟವಾಗಬಹುದು. ಅಡುಗೆ ಮಾಡುವ ಕಲೆಯೇ ಪಾಕಶಾಲೆ ಕಲೆ. ಇದು ತುಂಬಾ ವಿಶೇಷವಾದ ಉದ್ಯೋಗವಾಗಿದ್ದು, ಈ ಜಾಬ್ ಗೆ ಇದೀಗ ಜಗತ್ತಿನಾದ್ಯಂತ ಅವಕಾಶಗಳಿವೆ

ಇನ್ನು ಮೇಲೆ ಹೇಳಿರುವಂತೆ ಯಾರಿಗೆ ಅಡುಗೆ ಮಾಡಲು ಇಂಟ್ರೆಸ್ಟ್ ಇದೆಯೋ ಅವರು ಈ ಕೋರ್ಸ್ ಮಾಡಬಹುದು. ಈ ಕೋರ್ಸ್ ನಲ್ಲಿ ಅಡುಗೆ ಮಾಡಲು ಬೇಕಾದ ಮೂಲ ಕೌಶಲ್ಯ, ಅಂದ್ರೆ ಬ್ರೈಸಿಂಗ್, ರೋಸ್ಟಿಂಗ್, ಸೀಸೋನಿಂಗ್, ನೈಫ್ ಕೌಶಲ್ಯ, ಹಾಗೂ ಬೇಸಿಕ್ ರಿಸಿಪಿಗಳನ್ನು ಒಳಗೊಂಡಿದೆ. ಈ ಕೋರ್ಸ್ ಮಾಡಿದ ಮೇಲೆ ಪ್ರೊಫೆಶನಲ್ ಶೆಫ್ ಡಿಗ್ರಿ ನೀಡಲಾಗುತ್ತದೆ. ಈ ಡಿಗ್ರಿ ಪಡೆದವರಿಗೆ ಫುಡ್ ಸರ್ವೀಸ್ ಇಂಡಸ್ಟ್ರಿಯಲ್ಲಿ ತುಂಬಾ ಅವಕಾಶವಿದೆ. ಈ ಕೋರ್ಸ್ ಮುಖ್ಯವಾಗಿ ಸೇಫ್ಟಿ ಹಾಗೂ ಸ್ವಚ್ಚತೆ, ಉತ್ಪನ್ನ, ಅಡುಗೆ ತಯಾರು ಮಾಡುವ ವಿಧಾನ, ಮೆನು ಪ್ಲ್ಯಾನಿಂಗ್, ಕೌಶಲ್ಯ ಡೆವಲಪ್ ಮೆಂಟ್, ಅಡುಗೆ ವಿಭಾಗದಲ್ಲಿ ಏನಾದ್ರೂ ಸಮಸ್ಯೆ ತಲೆದೋರಿದಾಗ ಅದನ್ನ ಬಗೆಹರಿಸು ಟ್ಯಾಲೆಂಟ್ ಮುಂತಾದ ವಿಚಾರದ ಮೇಲೆ ಈ ಸಬ್‌ಜೆಕ್ಟ್ ಫೋಕಸ್ ಮಾಡುತ್ತದೆ

 

ಫೈನ್ ಆರ್ಟ್ಸ್ ಪದವಿ

ಫೈನ್ ಆರ್ಟ್ಸ್ ಪದವಿ

Image Source

ಚಿತ್ರಕಲೆ, ಶಿಲ್ಪಕಲೆ, ಸಾಹಿತ್ಯ, ಸಂಗೀತ, ನೃತ್ಯ, ವಾಸ್ತುಶಿಲ್ಪ ಮತ್ತು ನಾಟಕ ಮುಂತಾದ ವಿಷಯಕ್ಕೆ ಸಂಬಂಧಪಟ್ಟ ಕೋರ್ಸ್ ಇದಾಗಿದೆ.
ಈ ಕೋರ್ಸ್ ಮಾಡಿದ್ರೆ ನಿಮಗೆ ನಟನೆ, ಸಂಗೀತ ರಂಗಭೂಮಿ, ಪಿಂಗಾಣಿ ಕಲೆ, ಕಂಪ್ಯೂಟರ್ ಅನಿಮೇಷನ್, ಸೃಜನಾತ್ಮಕ ಬರವಣಿಗೆ, ನೃತ್ಯ, ನಾಟಕೀಯ ಬರವಣಿಗೆ, ಚಿತ್ರಕಲೆ, ಫೈಬರ್, ಚಲನಚಿತ್ರ ನಿರ್ಮಾಣ, ದೃಶ್ಯ ಪರಿಣಾಮಗಳು, ಅನಿಮೇಷನ್, ಗ್ರಾಫಿಕ್ ವಿನ್ಯಾಸ, ವಿವರಣೆ, ಕೈಗಾರಿಕಾ ವಿನ್ಯಾಸ, ದೃಶ್ಯ ಕಲೆಗಳು, ತಾಂತ್ರಿಕ ಕಲೆಗಳು, ಒಳಾಂಗಣ ವಿನ್ಯಾಸ, ಲೋಹದ ಕೆಲಸ, ಸಂಗೀತ , ಹೊಸ ಮಾಧ್ಯಮ, ಚಿತ್ರಕಲೆ, ಛಾಯಾಗ್ರಹಣ, ಮುದ್ರಣ ಮಾಡುವಿಕೆ ಹಾಗೂ ದೂರದರ್ಶನ ನಿರ್ಮಾಣ ಮುಂತಾದ ಕ್ಷೇತ್ರಗಳಲ್ಲಿ ಅವಕಾಶವಿದೆ

 

ಫ್ಯಾಷನ್ ಡಿಸೈನಿಂಗ್ ಕೋರ್ಸ್

ಫ್ಯಾಷನ್ ಡಿಸೈನಿಂಗ್ ಕೋರ್ಸ್

Image Source

ಯಾವ ಟೈಂ ಆದ್ರೂ ಓಕೆ ಈ ಕೋರ್ಸ್ ಗೆ ಡಿಮಾಂಡ್ ಇರುತ್ತೆ. ಅಷ್ಟೇ ಅಲ್ಲ ಇದು ಯಾವತ್ತೂ ಬೋರಿಂಗ್ ಆಗದ ಸಬ್‌ಜೆಕ್ಟ್ ಕೂಡಾ. ಕೇವಲ ಬಟ್ಟೆ ಡಿಸೈನ್‌ ಬಗ್ಗೆ ಮಾತ್ರ ಈ ಕೋರ್ಸ್ ಫೋಕಸ್ ಮಾಡುತ್ತದೆ ಎಂದು ನೀವು ಅಂದುಕೊಂಡಿದ್ದರೆ ನಿಮ್ಮ ಕಲ್ಪನೆ ತಪ್ಪು. ಫ್ಯಾಶನ್ ಡಿಸೈನಿಂಗ್ ಇದು ಕೇವಲ ವಸ್ತ್ರ ವಿನ್ಯಾಸ ಮಾತ್ರವಲ್ಲದೇ ಆಭರಣಗಳ ಡಿಸೈನ್, ಕಮ್ಯುನಿಕೇಶನ್ ಡಿಸೈನ್, ಟೆಕ್ಸ್ಟ್‌ಟೈಲ್ ಡಿಸೈನ್, ಒಳಾಂಗಣ ಉತ್ಪನ್ನ ವಿನ್ಯಾಸ, ಇಂಟೀರಿಯರ್ ವಾಸ್ತುಶಿಲ್ಪ & ವಿನ್ಯಾಸ, ಜಾಹೀರಾತು ನಿರ್ವಹಣೆ ಹಾಗೂ ಇನ್ನಿತ್ತರ ವಿಷಯಗಳತ್ತನೂ ಫೋಕಸ್ ಮಾಡಲಾಗುತ್ತದೆ. ಫ್ಯಾಶನ್ ಡಿಸೈನಿಂಗ್ ಲಾಭಕರವಾದ, ಇಷ್ಟವಾಗುವ, ಮನಮೋಹಕ ಮತ್ತು ಅತ್ಯಾಕರ್ಷಕ ವೃತ್ತಿಯಾಗಿದೆ. ನಿಮಗೆ ಕ್ರಿಯೇಟಿವಿಟಿ ಕೌಶಲ್ಯವಿದ್ರೆ ನೀವು ಈ ಫೀಲ್ಡನಲ್ಲಿ ಟ್ರೈ ಮಾಡಬಹುದು

 

ಭಾಷೆಗಳ ಕೋರ್ಸ್

ಭಾಷೆಗಳ ಕೋರ್ಸ್

Image Source

ವಿದೇಶಿ ಭಾಷೆಗಳ ಬಗ್ಗೆ ಅಧ್ಯಯನ ಮಾಡಿದ್ರೆ ಇದೀಗ ತುಂಬಾ ಅವಕಾಶವಿದೆ. ಜರ್ಮನ್, ಫ್ರೆಂಚ್, ಸ್ಪ್ಯಾನೀಶ್ ಭಾಷೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ವಿದೇಶಿ ಭಾಷೆಗಳ ಕೋರ್ಸ್ ನೀವು ಮಾಡಿದ್ದಲ್ಲಿ ನಿಮಗೆ ಟೂರಿಸಂ, ರಾಯಭಾರಿ, ರಾಜತಾಂತ್ರಿಕ ಸೇವೆ, ಮನೋರಂಜನೆ, ಪಬ್ಲಿಕ್ ರಿಲೇಶನ್, ಸಮೂಹ ಸಂವಹನ, ಭಾಷಾಂತರ, ಅಂತರರಾಷ್ಟ್ರೀಯ ಸಂಸ್ಥೆಗಳು, ಪ್ರಕಾಶನ ಮುಂತಾದ ಕ್ಷೇತ್ರಗಳಲ್ಲಿ ಬಾರೀ ಬೇಡಿಕೆ ಇರುತ್ತದೆ
ವಿವಿಧ ಬಹುರಾಷ್ಟ್ರೀಯ ಕಂಪನಿಗಳು, ತಮ್ಮಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಫ್ರೆಂಚ್, ಜರ್ಮನ್, ರಷ್ಯಾ, ಚೈನೀಸ್, ಜಪಾನೀಸ್, ಸ್ಪಾನೀಶ್, ಕೊರಿಯನ್ ಪೋರ್ಚುಗೀಸ್ ಸೇರಿದಂತೆ ಇನ್ನಿತ್ತರ ಭಾಷೆಯ ಜ್ಞಾನ ಇರಬೇಕೆಂದು ಬಯಸುತ್ತದೆ

 

ಈವೆಂಟ್ ಮ್ಯಾನೇಜ್‌ಮೆಂಟ್ ಕೋರ್ಸ್

ಈವೆಂಟ್ ಮ್ಯಾನೇಜ್‌ಮೆಂಟ್ ಕೋರ್ಸ್

Image Source

ಈವೆಂಟ್ ಮ್ಯಾನೇಜ್‌ಮೆಂಟ್ ಅತ್ಯಂತ ಬೇಡಿಕೆಯ ಕೋರ್ಸ್ ಆಗಿದೆ. ಒಂದು ಕಾರ್ಯಕ್ರಮವನ್ನ ಸಕ್ಸಸ್ ಫುಲ್ ಆಗಿ ನೆರವೇರಿಸುವ ಕಲೆಯನ್ನ ಈ ಕೋರ್ಸ್ ಕಲಿಸಿಕೊಡುತ್ತದೆ. ಮಾತಿನ ಕೌಶಲ್ಯ ಈ ಕೋರ್ಸ್ ಗೆ ಅತೀ ಮುಖ್ಯವಾಗಿ ಬೇಕಾಗಿರುವುದು. ಈ ಕೌಶಲ್ಯ ನಿಮಗಿದ್ರೆ ಎಲ್ಲಾ ರೀತಿಯ ಈವೆಂಟನ್ನು ಕೂಡಾ ನೀವು ಯಶಸ್ವಿಯಾಗಿ ಪೂರೈಸುವಿರಿ. ಸೃಜನಶೀಲತೆ ಹಾಗೂ ವಿಷಯಗಳನ್ನು ನಿರ್ವಹಿಸುವ ಕೌಶಲ್ಯ ನಿಮಲ್ಲಿ ಇದ್ರೆ ನೀವು ಈ ಪೀಲ್ಡಗೆ ಸುಲಭವಾಗಿ ಎಂಟ್ರಿ ನೀಡಬಹುದು ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಗಳು ತಮ್ಮಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗಳು, ಡಿಪ್ಲೋಮ ಇನ್ ಪಬ್ಲಿಕ್ ರಿಲೇಶನ್, ಟೂರಿಸಂ, ಹಾಸ್ಪಿಟಾಲಿಟಿ ಮ್ಯಾನೇಜ್ ಮೆಂಟ್ , ಸೇಲ್ಸ್ ಹಾಗೂ ಮಾರ್ಕೆಂಟಿಂಗ್ ಡಿಗ್ರಿ ಪಡೆದಿರುಬೇಕೆಂದು ಬಯಸುತ್ತದೆ

 

For Quick Alerts
ALLOW NOTIFICATIONS  
For Daily Alerts

English summary
After passing the higher secondary level examination a student can pursue Bachelor of Arts degree (BA) taking a special subject as the major subject. Some important major subjects which are offered by various colleges. Here is the list of courses, which offer you wide career opportunities
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X