Interesting Facts About Channaveera Kanavi : ಚನ್ನವೀರ ಕಣವಿಯವರ ಆಸಕ್ತಿದಾಯಕ ಸಂಗತಿಗಳು

ನಾಡೋಜ, ಡಾ.ಚನ್ನವೀರ ಕಣವಿ ಇಂದು ಧಾರವಾಡದ ಎಸ್​​ಡಿಎಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಚೇತರಿಕೆ ಕಂಡಿದ್ದ ಕಣವಿ ಅವರು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದ್ದಾರೆ.

 

"ಸಮನ್ವಯದ ಕವಿ" ಮತ್ತು "ಸೌಜನ್ಯದ ಕವಿ" ಎಂದು ಕರೆಯಲಾಗುವ ಕಣವಿಯವರು ಕನ್ನಡ ಭಾಷೆಯ ಪ್ರಮುಖ ಕವಿ ಮತ್ತು ಬರಹಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಇಂದು ಅವರ ಕುರಿತ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ ಓದಿ ತಿಳಿಯಿರಿ.

 ಚನ್ನವೀರ ಕಣವಿ ನಿಧನ : ಕಣವಿಯವರ ಆಸಕ್ತಿದಾಯಕ ಸಂಗತಿಗಳು

ಚನ್ನವೀರ ಕಣವಿಯವರ ಆಸಕ್ತಿದಾಯಕ ಸಂಗತಿಗಳು :

* ಚೆನ್ನವೀರ ಕಣವಿ ಅವರು ಧಾರವಾಡ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರ ಜೂನ್ 28ರಂದು ಜನಿಸಿದರು. ಕಣವಿಯವರ ತಂದೆ ಸಕ್ರಪ್ಪ- ತಾಯಿ ಪಾರ್ವತವ್ವ.

 

* ಡಾ. ಚನ್ನವೀರ ಕಣವಿಯವರು ಶಿರುಂಡ, ಗರಗಗಳಲ್ಲಿ ಪ್ರಾಥಮಿಕ ಅಭ್ಯಾಸ ಮುಗಿಸಿದ ಮೇಲೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ 1950ರಲ್ಲಿ ಬಿ.ಎ. ಪದವಿ (1950), ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ.ಪದವಿ (1952) ಪಡೆದರು.

* ಕಣವಿಯವರು ಕರ್ನಾಟಕದ ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿ (1952) ಯಾಗಿ ಸೇವೆ ಪ್ರಾರಂಭಿಸಿದರು. ತದನಂತರ 1958ರಲ್ಲಿ ಅದರ ನಿರ್ದೇಶಕರಾದರು.

* ಕಣವಿಯವರು ಹಾಸನದಲ್ಲಿ ಜರುಗಿದ 65ನೇ ಕನ್ನಡ ಸಾಹಿತ್ಯ ಸಮ್ಮೇಳನದ (1996) ಅಧ್ಯಕ್ಷರಾಗಿದ್ದರು.

* ಕಣವಿ ಅವರ ಜೀವ ಧ್ವನಿ (ಕಾವ್ಯ) ಕೃತಿಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು.

* ಕಣವಿಯವರು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1981), ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1985), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1989), ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಸಂಸ್ಕೃತಿ ವಿಭಾಗದ ಎಮರಿಟಿಸ್ ಫೆಲೋಷಿಪ್ (1996-98), ಪಂಪ ಪ್ರಶಸ್ತಿ (1999), 2011 ರಲ್ಲಿ ಅವರಿಗೆ ಸಾಹಿತ್ಯ ಕಲಾ ಕೌಸ್ತುಭ ಪ್ರಶಸ್ತಿ ಇತ್ಯಾದಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

* ಕಣವಿ ಅವರ ಕಾವ್ಯಾಕ್ಷಿ, ಭಾವಜೀವಿ, ಆಕಾಶಬುಟ್ಟಿ, ದೀಪಧಾರಿ, ಮೆರವಣಿಗೆ, ಜೀವಧ್ವನಿ, ನಗರದಲ್ಲಿ ನೆರಳು, ಚಿರಂತನದಾಸ ಪ್ರಸಿದ್ಧ ಕಾವ್ಯಗಳಾಗಿವೆ. ಅವರ ಸಾಹಿತ್ಯ ಚಿಂತನ, ಕಾವ್ಯಾನುಸಂಧಾನ, ಸಮಾಹಿತ, ಸಮತೋಲನ ಇತ್ಯಾದಿ ವಿಮರ್ಶಾ ಗ್ರಂಥಗಳು ಜನಪ್ರಿಯವಾಗಿವೆ.

For Quick Alerts
ALLOW NOTIFICATIONS  
For Daily Alerts

English summary
ಕನ್ನಡದ ಕವಿ ಚನ್ನವೀರ ಕಣವಿಯವರು ಇಂದು ನಿಧನ ಹೊಂದಿದ್ದಾರೆ. ಇಂದು ಅವರ ಕುರಿತ ಆಸಕ್ತಿದಾಯಕ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X