Interesting Facts Of Sarvepalli Radhakrishnan : ಸರ್ವಪಲ್ಲಿ ರಾಧಾಕೃಷ್ಣನ್ ಅವರ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು

ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ನಾವು ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತೇವೆ. ಶಿಕ್ಷಕರ ದಿನದಂದು ಈ ಮಹಾನ್ ವ್ಯಕ್ತಿಯ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಈ ಲೇಖನದಲ್ಲಿ ತಿಳಿಸಲಿದ್ದೇವೆ.

 
ಶಿಕ್ಷಕರ ದಿನದಂದು ರಾಧಾಕೃಷ್ಣನ್ ಅವರ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳಿವು

ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರು 20ನೇ ಶತಮಾನದ ವಿದ್ವಾಂಸರು, ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿ. ಅವರಿಗೆ 1931 ರಲ್ಲಿ ನೈಟ್ ಹುಡ್ ಮತ್ತು ಭಾರತ ರತ್ನ ನೀಡಲಾಯಿತು. ಅವರ ಜನ್ಮದಿನವನ್ನು 1962 ರಿಂದ ಭಾರತದಲ್ಲಿ ಶಿಕ್ಷಕರ ದಿನವನ್ನಾಗಿ (ಸೆಪ್ಟೆಂಬರ್ 5) ಆಚರಿಸಲಾಗುತ್ತಿದೆ. ಈ ದಿನದಂದು ನಿಮಗೆ ಅವರು ಬಗ್ಗೆ ಗೊತ್ತಿರದ ಅತ್ಯಂತ ಆಸಕ್ತದಾಯಕ ಸಂಗತಿಗಳನ್ನು ನಾವಿಲ್ಲಿ ತಿಳಿಸಲಿದ್ದೇವೆ ಓದಿ ತಿಳಿಯಿರಿ.

1. ರವೀಂದ್ರನಾಥ ಟ್ಯಾಗೋರ್ ಅವರ ತತ್ವಶಾಸ್ತ್ರದ ಬಗ್ಗೆ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಮೊದಲ ಪುಸ್ತಕವನ್ನು ಬರೆದಿದ್ದಾರೆ.

2. ರಾಧಾಕೃಷ್ಣನ್ ಎಂ.ಎ ಅನ್ನು ತತ್ವಶಾಸ್ತ್ರದಲ್ಲಿ ಮಾಡಿದರು ಏಕೆಂದರೆ ಅವರ ಸೋದರಸಂಬಂಧಿಗಳು ತತ್ವಶಾಸ್ತ್ರದಲ್ಲಿ ಪದವಿ ಪಡೆದಿದ್ದರು ಅಲ್ಲದೇ ಅವರ ಪುಸ್ತಕಗಳನ್ನು ರಾಧಾಕೃಷ್ಣನ್ ಅವರಿಗೆ ಉಚಿತವಾಗಿ ನೀಡಿದರು.

3. ರಾಧಾಕೃಷ್ಣನ್ ಸತತ 5 ವರ್ಷಗಳು ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.

4. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು 1952-1962ರವರೆಗೆ ಭಾರತದ ಮೊದಲ ಉಪರಾಷ್ಟ್ರಪತಿಯಾಗಿದ್ದರು ಮತ್ತು 1962-1967ರವರೆಗೆ ಭಾರತದ ಎರಡನೇ ರಾಷ್ಟ್ರಪತಿಯಾಗಿದ್ದರು.

5. ರಾಧಾಕೃಷ್ಣನ್ ಆಂಧ್ರ ವಿಶ್ವವಿದ್ಯಾಲಯದಲ್ಲಿ (1931-1936) ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ (1939-1948) ಉಪಕುಲಪತಿ ಹುದ್ದೆಯನ್ನೂ ನಿರ್ವಹಿಸಿದ್ದರು. ದೆಹಲಿ ವಿಶ್ವವಿದ್ಯಾಲಯದಲ್ಲಿ ಅವರು 1953-1962ರವರೆಗೆ ಕುಲಪತಿಯಾಗಿದ್ದರು.

6. ಡಾ. ರಾಧಾಕೃಷ್ಣನ್ 1938ರಲ್ಲಿ ಬ್ರಿಟಿಷ್ ಅಕಾಡೆಮಿಯ ಮತ್ತು 1954 ರಲ್ಲಿ ಭಾರತ ರತ್ನದ ಫೆಲೋ ಆಗಿ ಆಯ್ಕೆಯಾದರು.

 

7. ರಾಧಾಕೃಷ್ಣನ್ 1975ರಲ್ಲಿ ಟೆಂಪಲ್ಟನ್ ಪ್ರಶಸ್ತಿಯನ್ನು ಪಡೆದರು ಮತ್ತು ಪೂರ್ಣ ಮೊತ್ತವನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ದಾನ ಮಾಡಿದರು.

8. ರಾಧಾಕೃಷ್ಣನ್ ಅವರ ನೆನಪಿಗಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ರಾಧಾಕೃಷ್ಣನ್ ಚೆವೆನಿಂಗ್ ವಿದ್ಯಾರ್ಥಿವೇತನ ಮತ್ತು ರಾಧಾಕೃಷ್ಣನ್ ಸ್ಮಾರಕ ಪ್ರಶಸ್ತಿಯನ್ನು ಆರಂಭಿಸಿತು.

9. 1946ರಲ್ಲಿ ಯುನೆಸ್ಕೋದ ರಾಯಭಾರಿಯಾಗಿ ಮತ್ತು ನಂತರ 1949 ರಲ್ಲಿ ಸೋವಿಯತ್ ಒಕ್ಕೂಟದ ರಾಯಭಾರಿಯಾಗಿ ನೇಮಕಗೊಂಡರು. 1948 ರಲ್ಲಿ ಯೂನಿಯನ್ ಶಿಕ್ಷಣ ಆಯೋಗದ ಅಧ್ಯಕ್ಷರಾಗಿ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತಂದರು.

10. ಅವರು ಹೆಲ್ಪೇಜ್ ಇಂಡಿಯಾವನ್ನು ಸ್ಥಾಪಿಸಿದರು. ಇದು ವಯಸ್ಸಾದ ಹಿಂದುಳಿದ ಜನರಿಗೆ ಲಾಭರಹಿತ ಸಂಸ್ಥೆಯಾಗಿದೆ.

11. ಅವರು 17 ಏಪ್ರಿಲ್ 1975 ರಂದು ನಿಧನರಾದರು.

ಶಿಕ್ಷಣದ ಮೌಲ್ಯವನ್ನು ಉತ್ತೇಜಿಸಲು ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದ ಮತ್ತು ಭಾರತೀಯ ಚಿಂತನೆಯನ್ನು ಪಾಶ್ಚಿಮಾತ್ಯ ಪರಿಭಾಷೆಯಲ್ಲಿ ಸುಂದರವಾಗಿ ಅರ್ಥೈಸುವ ಮೂಲಕ ಭಾರತೀಯರಿಗೆ ಹೊಸ ಗೌರವವನ್ನು ನೀಡಿದ ಇಂತಹ ಮಹಾನ್ ವ್ಯಕ್ತಿಯನ್ನು ನಾವು ಮರೆಯಲು ಸಾಧ್ಯವಿಲ್ಲ.

For Quick Alerts
ALLOW NOTIFICATIONS  
For Daily Alerts

English summary
Teachers day is on september 5. Here is the interesting facts about sarvepalli radhakrishnan.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X