International Artist Day 2021 : ಈ ದಿನದ ಇತಿಹಾಸ, ಥೀಮ್ ಮತ್ತು ಮಹತ್ವ ತಿಳಿಯಿರಿ

ಪ್ರತಿ ವರ್ಷ ಅಕ್ಟೋಬರ್ 25 ರಂದು ಅಂತಾರಾಷ್ಟ್ರೀಯ ಕಲಾವಿದರ ದಿನವನ್ನು ಆಚರಿಸಲಾಗುತ್ತದೆ. ಕಲೆ ಸೃಜನಶೀಲ ಅಭಿವ್ಯಕ್ತಿಯಾಗಿ ಅಸಂಖ್ಯಾತ ಅಂಶಗಳನ್ನು ಒಳಗೊಂಡಿದೆ. ಇದು ಜೀವನದ ಸೌಂದರ್ಯ ಅಥವಾ ಭಯಾನಕ ಸತ್ಯವನ್ನು ಚಿತ್ರಿಸುತ್ತದೆ.

ಅಂತರಾಷ್ಟ್ರೀಯ ಕಲಾವಿದರ ದಿನದ ಇತಿಹಾಸ, ಥೀಮ್ ಮತ್ತು ಮಹತ್ವವನ್ನು ತಿಳಿಯಿರಿ

ಕಲೆ ಇಲ್ಲದ ಇತಿಹಾಸ ಅಥವಾ ನಾಗರೀಕತೆ ಇಲ್ಲ. ಇತಿಹಾಸ, ಕ್ರಾಂತಿಗಳು, ದಂಗೆಗಳನ್ನು ಕಲೆಯ ಮೂಲಕ ವ್ಯಕ್ತಪಡಿಸಲಾಗುತ್ತದೆ. ಈ ದಿನವು ಚಿತ್ರಕಲೆ, ಛಾಯಾಗ್ರಹಣ, ಶಿಲ್ಪಕಲೆ, ವಾಸ್ತುಶಿಲ್ಪ, ಸಂಗೀತ ಮತ್ತು ಇನ್ನಷ್ಟು ಕಲೆಯನ್ನು ಗೌರವಿಸಲು ಸೂಕ್ತವಾಗಿದೆ. ಈ ದಿನ ಎಲ್ಲಾ ಕಲಾವಿದರ ಉತ್ಸಾಹ ಮತ್ತು ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಲು ಅವಕಾಶವನ್ನು ನೀಡಿದೆ. ಈ ದಿನದ ಇತಿಹಾಸ, ಥೀಮ್, ಮಹತ್ವ ಮತ್ತು ಆಚರಣೆಯ ಕುರಿತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಅಂತಾರಾಷ್ಟ್ರೀಯ ಕಲಾವಿದರ ದಿನ 2021 ಇತಿಹಾಸ:

ಕ್ರಿಸ್ ಮ್ಯಾಕ್‌ಕ್ಲೂರ್ 'ರೊಮ್ಯಾಂಟಿಕ್ ರಿಯಲಿಸಂ' ನಲ್ಲಿ ಪರಿಣತಿ ಹೊಂದಿರುವ ಕೆನಡಾದ ಕಲಾವಿದ. ಅವರ ಕೆಲಸಗಳು ಅವರನ್ನು ಕೆನಡಾದ ಪ್ರಮುಖ ಚಿತ್ರಕಲಾವಿದರಲ್ಲಿ ಒಬ್ಬರನ್ನಾಗಿಸಲು ಮತ್ತು ಜೀವನದ "ರೋಮ್ಯಾಂಟಿಕ್ ರಿಯಲಿಸ್ಟಿಕ್" ದೃಷ್ಟಿಕೋನವನ್ನು ನೀಡುವ ಸಾಧನವಾಗಿತ್ತು. ಹೀಗಾಗಿ ಅವರು ಈ ದಿನವನ್ನು ಜಗತ್ತು ಕಲೆಯನ್ನು ಒಪ್ಪಿಕೊಳ್ಳುವಂತೆ ಮಾಡಿದರು ಮತ್ತು ಕಲಾವಿದರು ಜೀವನದ ಒಂದು ನಿರ್ದಿಷ್ಟ ದೃಷ್ಟಿಕೋನವನ್ನು ಹೊಂದಿರುವವರು ಎಂದು ತೋರಿಸಿದರು. ಹೀಗಾಗಿ ಅಂತಾರಾಷ್ಟ್ರೀಯ ಕಲಾವಿದರ ದಿನ ರೂಪುಗೊಂಡಿತು.

ಅಂತಾರಾಷ್ಟ್ರೀಯ ಕಲಾವಿದರ ದಿನ 2021 ಥೀಮ್:

IAA/USA (International Artist Association/USA) ಅಂತರಾಷ್ಟ್ರೀಯ ಕಲಾವಿದರ ದಿನ 2021ರ ಥೀಮ್ "ನೀವು ಒಬ್ಬಂಟಿಯಾಗಿಲ್ಲ" ಎಂಬುದಾಗಿದೆ. 'ನೀವು ಒಬ್ಬಂಟಿಯಾಗಿಲ್ಲ' ಎಂಬ ವಿಶಿಷ್ಟ ವರ್ಚುವಲ್ ಪ್ರದರ್ಶನವನ್ನು ಆಚರಣೆಯಲ್ಲಿ ನಡೆಸಲಾಗುತ್ತದೆ. ಲಾಸ್ ಏಂಜಲೀಸ್ ನಗರವು ಅಮೆರಿಕದಲ್ಲಿ ಸತತ ಆರನೆಯ ವರ್ಷ ಅಂತರಾಷ್ಟ್ರೀಯ ಕಲಾವಿದರ ದಿನಾಚರಣೆಯನ್ನು ವರ್ಚುವಲ್ ಆಧಾರದ ಮೇಲೆ ಆಯೋಜಿಸುತ್ತಿದೆ. ಐಎಎ/ಯುಎಸ್ ಅಧಿಕೃತ ವೆಬ್‌ಸೈಟ್‌ನಲ್ಲಿ ಸೂಚಿಸಿರುವಂತೆ ಇತರ ಕಲಾವಿದರನ್ನು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಲಿಂಕ್ ಮಾಡುವ ಮೂಲಕ ಕಲೆಗಳನ್ನು ಪ್ರದರ್ಶಿಸುವ ಮತ್ತು ಉತ್ತೇಜಿಸುವ ಅಸಾಧಾರಣ ವಿಧಾನಗಳನ್ನು ಒದಗಿಸುವ ಮೂಲಕ ಕಲೆಗೆ ಈ ವರ್ಷ ಗೌರವಿಸಲಾಗುವುದು.

ಅಂತಾರಾಷ್ಟ್ರೀಯ ಕಲಾವಿದರ ದಿನ 2021 ಆಚರಣೆ:

ಅಂತಾರಾಷ್ಟ್ರೀಯ ಕಲಾವಿದರ ದಿನವನ್ನು ಆಚರಿಸುವ ಅತ್ಯುತ್ತಮ ವಿಧಾನವೆಂದರೆ ಮೊದಲಿಗೆ ನಿಮ್ಮ ಸ್ಥಳೀಯ ಕಲಾವಿದರಿಗೆ ಸಹಾಯ ಮಾಡುವುದು.

ಈ ದಿನವನ್ನು ವಸ್ತುಸಂಗ್ರಹಾಲಯಗಳು ಮತ್ತು ಕಲಾ ಗ್ಯಾಲರಿಗಳಿಂದ ಆಚರಿಸಬಹುದು. ಅನೇಕರು ಸೃಜನಶೀಲ ಕಲೆಗಳಲ್ಲಿ ಕೋರ್ಸ್‌ಗಳನ್ನು ಒದಗಿಸುತ್ತಾರೆ ಆಸಕ್ತರು ಕೋರ್ಸ್ ಗಳಿಗೆ ಸೇರಬಹುದು.

ಕೊನೆಯದಾಗಿ ಅಂತಾರಾಷ್ಟ್ರೀಯ ಕಲಾವಿದರ ದಿನದಂದು ಅತ್ಯಂತ ಪ್ರಮುಖ ಕಲಾವಿದರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಬಹುದು. ಹೆಸರುವಾಸಿ ಕಲಾವಿದರಲ್ಲಿ ಅನೇಕರು ಆಸಕ್ತಿದಾಯಕ ಹಿನ್ನೆಲೆ ಕಥೆಗಳನ್ನು ಹೊಂದಿದ್ದಾರೆ ಮತ್ತು ಅವರ ಅದ್ಭುತ ಕೃತಿಗಳನ್ನು ಆನ್‌ಲೈನ್‌ ನಲ್ಲಿ ವೀಕ್ಷಿಸಬಹುದು.

For Quick Alerts
ALLOW NOTIFICATIONS  
For Daily Alerts

English summary
International artist day 2021 is on october 25. Here is the theme, history, celebrations and significance in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X