International Day Of Peace 2021 : ಈ ದಿನದ ಇತಿಹಾಸ, ಥೀಮ್ ಮತ್ತು ಮಹತ್ವವೇನು ತಿಳಿಯಿರಿ

ಪ್ರತಿ ವರ್ಷ ಸೆಪ್ಟೆಂಬರ್ 21 ರಂದು ವಿಶ್ವವು ಅಂತರರಾಷ್ಟ್ರೀಯ ಶಾಂತಿ ದಿನವನ್ನು ಆಚರಿಸುತ್ತದೆ. ಇದನ್ನು ಸಾಮಾನ್ಯವಾಗಿ ಶಾಂತಿ ದಿನ ಎಂದು ಕರೆಯಲಾಗುತ್ತದೆ. ಬನ್ನಿ ಈ ದಿನದ ಇತಿಹಾಸ, ಥೀಮ್ ಮತ್ತು ಮಹತ್ವವನ್ನು ತಿಳಿಯೋಣ.

ಅಂತರರಾಷ್ಟ್ರೀಯ ಶಾಂತಿ ದಿನದ ಇತಿಹಾಸ ಮತ್ತು ಮಹತ್ವದ ಕುರಿತು ಮಾಹಿತಿ

ಅಂತರರಾಷ್ಟ್ರೀಯ ಶಾಂತಿ ದಿನ ಇತಿಹಾಸ:

ವಿಶ್ವಸಂಸ್ಥೆಯ ಮಾನವ ಹಕ್ಕು ಸ್ಥಾಪನೆಯಾಗಿ 70 ವರ್ಷಕ್ಕೆ ಸಂದ ಸಂದರ್ಭ ಇದಾಗಿದೆ. 1981ರಲ್ಲಿ ಅಮೆರಿಕದಲ್ಲಿ ವಿಶ್ವ ಶಾಂತಿ ದಿನ ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಲಾಯಿತು. 1982ರಿಂದ ಪ್ರತಿ ವರ್ಷ ಸೆಪ್ಟಂಬರ್‌ 21ನ್ನು ವಿಶ್ವ ಶಾಂತಿ ದಿನವೆಂದು ಆಚರಿಸಲಾಗುತ್ತಿದೆ. ಸುಮಾರು 2001 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಇದನ್ನು ಅಹಿಂಸೆಯ ಕಾಲವೆಂದು ಘೋಷಿಸಲು ನಿರ್ಧರಿಸಿತು. ಅಂದಿನಿಂದ ಗಡಿಯ ಎರಡೂ ಬದಿಗಳಲ್ಲಿರುವ ರಾಷ್ಟ್ರಗಳು ದಿನದ 24 ಗಂಟೆಗಳು, ವಾರದ ಏಳು ದಿನಗಳು ಅಹಿಂಸೆ ಮತ್ತು ಕದನ ವಿರಾಮದ ಅಭ್ಯಾಸಗಳನ್ನು ಮಾಡುವುದನ್ನು ಒಂದು ಆಚರಣೆಯಾಗಿ ಪ್ರಾರಂಭಿಸಿದವು.

ಅಂತರರಾಷ್ಟ್ರೀಯ ಶಾಂತಿ ದಿನ 2021 ಥೀಮ್:

ಈ ವರ್ಷದ ಶಾಂತಿ ದಿನಾಚರಣೆಯ ವಿಷಯವು "ಸಮನಾದ ಮತ್ತು ಸುಸ್ಥಿರ ಜಗತ್ತಿಗೆ ಉತ್ತಮವಾದ ಚೇತರಿಕೆ" ಎಂಬುದು. ಈಗಿನ ಪರಿಸ್ಥಿತಿಯಲ್ಲಿ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ನಾವು ಚೇತರಿಸಿಕೊಳ್ಳುತ್ತಿದ್ದೇವೆ ಹಾಗಾಗಿ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ದ್ವೇಷದ ಕೃತ್ಯಗಳ ವಿರುದ್ಧ ಮಾತನಾಡುವ ಮೂಲಕ ಮತ್ತು ಸಹಾನುಭೂತಿ, ಔದಾರ್ಯ ಮತ್ತು ಆಶಾವಾದವನ್ನು ಹಂಚಿಕೊಳ್ಳುವ ಮೂಲಕ ಶಾಂತಿ ದಿನವನ್ನು ಆಚರಿಸಬಹುದು.

ಅಂತರರಾಷ್ಟ್ರೀಯ ಶಾಂತಿ ದಿನದ ಮಹತ್ವ :

ಶಾಂತಿಯನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದೇ ಸಮಯದಲ್ಲಿ ನಿಯಮಗಳನ್ನು ಅನುಸರಿಸಲು ಮತ್ತು ಯುದ್ಧವನ್ನು ನಿಲ್ಲಿಸಲು ಹಾಗೂ ಶಾಂತಿಯನ್ನು ಉತ್ತೇಜಿಸಲು ಅತ್ಯಂತ ಕಷ್ಟಪಟ್ಟು ಮತ್ತು ಪಟ್ಟುಬಿಡದೆ ಕೆಲಸ ಮಾಡಿದ ವ್ಯಕ್ತಿಗಳನ್ನು ಗೌರವಿಸಲು ಮರೆಯದೆ ಅಂತರರಾಷ್ಟ್ರೀಯ ಶಾಂತಿ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
International day of peace is celebrated on september 21. Here is the history and significance of the day in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X