Tips To Fight Against illiteracy: ಭಾರತದಲ್ಲಿರುವ ಅನಕ್ಷರತೆಯ ವಿರುದ್ಧ ಹೋರಾಡಲು ಇಲ್ಲಿದೆ ಸಲಹೆ

ಸೆಪ್ಟೆಂಬರ್ 8 ರಂದು ದೇಶದೆಲ್ಲೆಡೆ ಸಾಕ್ಷರತಾ ದಿನವನ್ನಾಗಿ ಆಚರಿಸಲಾಗುತ್ತದೆ. ಯುನೆಸ್ಕೋ ಅಕ್ಟೋಬರ್ 26, 1966 ರಲ್ಲಿ ಈ ದಿನವನ್ನು ಸಾಕ್ಷರತಾ ದಿನವನ್ನಾಗಿ ಘೋಷಿಸಿತು ನಂತರ 1967 ರಲ್ಲಿ ಈ ಆಚರಣೆ ಜಾರಿಗೆ ಬಂದಿತು. ಸಾಕ್ಷರತಾ ದಿನದ ಮೂಲ ಉದ್ದೇಶ ಶಿಕ್ಷಣ ಮಹತ್ವವನ್ನು ಸಾರುವುದು.

ಭಾರತದಲ್ಲಿರುವ ಅನಕ್ಷರತೆಯನ್ನು ತೊಲಗಿಸಲು ಇಲ್ಲಿದೆ ಸಲಹೆ

ನಮ್ಮ ದೇಶದಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸಲು ವಿಭಿನ್ನ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮಕ್ಕಳು ಅನಕ್ಷರಸ್ತರಾಗುತ್ತಿದ್ದಾರೆ ಅದಕ್ಕೆ ಕಾರಣ ಜನರಲ್ಲಿ ಶಿಕ್ಷಣದ ಮಹತ್ವ ಅರಿವಿಲ್ಲದಿರುವುದು ಹಾಗಾಗಿ ಈ ಸಾಕ್ಷರತಾ ದಿನದಂದು ಭಾರತದ ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸಲು ಯಾವೆಲ್ಲಾ ಉಪಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಇಲ್ಲಿ ಸಲಹೆ ನೀಡಲಾಗಿದೆ.

ಭಾರತದಲ್ಲಿರುವ ಅನಕ್ಷರತೆಯನ್ನು ತೊಲಗಿಸಲು ಇಲ್ಲಿದೆ ಸಲಹೆ

ಅಂತರರಾಷ್ಟ್ರೀಯ ಸಾಕ್ಷರತಾ ದಿನ 2022: ಭಾರತದ ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸುವ ಉಪಕ್ರಮಗಳು:

1. 2009 ರಲ್ಲಿ ಸಂಸತ್ತು ಅಂಗೀಕರಿಸಿದ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ನೀಡಿದೆ. ಆದರೆ ಈ ವಯಸ್ಸಿನವರಲ್ಲಿ ಬಾರದ ಮಕ್ಕಳ ಬಗ್ಗೆಯೂ ನಾವು ಯೋಚಿಸಬೇಕು. ಶಿಕ್ಷಣವಿಲ್ಲದೆ 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಬಾಲ ಕಾರ್ಮಿಕ ಪದ್ಧತಿಗೆ ಗುರಿಯಾಗುತ್ತಿದ್ದಾರೆ ಹಾಗಾಗಿ ಅವರಿಗೆ ಉಚಿತ ಶಿಕ್ಷಣ ನೀಡಲು ಉಪಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

ಭಾರತದಲ್ಲಿರುವ ಅನಕ್ಷರತೆಯನ್ನು ತೊಲಗಿಸಲು ಇಲ್ಲಿದೆ ಸಲಹೆ

2. ಸರ್ಕಾರಿ ಶಾಲೆಗಳು ಮತ್ತು ಎನ್‌ಜಿಒಗಳು ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವ ರೀತಿಯಲ್ಲಿ ನಿಗದಿತ ಸಮಯದಲ್ಲಿ ತರಗತಿಗಳನ್ನು ಆರಂಭಿಸಬೇಕು. ಏಕೆಂದರೆ ಮಕ್ಕಳು ಶಾಲೆಗೆ ಬರುವ ಮುಂಚೆ ತನ್ನ ಕುಟುಂಬಕ್ಕೆ ಸಹಾಯ ಮಾಡಬೇಕಿರುತ್ತದೆ ಹಾಗಾಗಿ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ತರಗತಿಗಳ ಸಮಯ ನಿಗದಿ ಮಾಡಬೇಕು.

ಭಾರತದಲ್ಲಿರುವ ಅನಕ್ಷರತೆಯನ್ನು ತೊಲಗಿಸಲು ಇಲ್ಲಿದೆ ಸಲಹೆ

3. ಶಿಕ್ಷಣದ ಮುಖ್ಯ ಉದ್ದೇಶವೆಂದರೆ ಒಬ್ಬ ವ್ಯಕ್ತಿಯು ತನ್ನ ಸುಶಿಕ್ಷಿತನಾಗಬೇಕು ಮತ್ತು ಅವನ ಜೀವನದಲ್ಲಿ ಅಭಿವೃದ್ಧಿಯನ್ನು ಕಾಣಬೇಕು ಹಾಗಾಗಿ ಶಿಕ್ಷಣದಲ್ಲಿ ವೃತ್ತಿಪರ ಕೌಶಲ್ಯಗಳ ಮಾಹಿತಿಯನ್ನು ಸೇರಿಸಬೇಕು.

ಭಾರತದಲ್ಲಿರುವ ಅನಕ್ಷರತೆಯನ್ನು ತೊಲಗಿಸಲು ಇಲ್ಲಿದೆ ಸಲಹೆ

4. ಈ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಕೆಲವು ಕುಟುಂಬಗಳು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ನಿರಾಕರಿಸಬಹುದು. ಆದ್ದರಿಂದ, ನಾವು ಅಂತಹ ಕುಟುಂಬಗಳಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಅವರ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಪ್ರೇರೇಪಿಸಬೇಕು. ಸರಿಯಾದ ಜ್ಞಾನವಿಲ್ಲದೆ ಅವರು ಶಿಕ್ಷಣದ ಮಹತ್ವವನ್ನು ಅರ್ಥಮಾಡಿಕೊಂಡಿರುವುದಿಲ್ಲ ಹಾಗಾಗಿ ಅವರಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಬೇಕು.

ಭಾರತದಲ್ಲಿರುವ ಅನಕ್ಷರತೆಯನ್ನು ತೊಲಗಿಸಲು ಇಲ್ಲಿದೆ ಸಲಹೆ

5. ಉತ್ತಮ ಶಿಕ್ಷಣ ಮತ್ತು ಕಲಿಕೆಯನ್ನು ನೀಡುವ ಉತ್ತಮ ಮತ್ತು ಅರ್ಹ ಶಿಕ್ಷಕರನ್ನು ಶಾಲೆಗಳಿಗೆ ನೇಮಕಾತಿ ಮಾಡಬೇಕು. ಆಗ ಮಾತ್ರ ಕಲಿಕೆಯಲ್ಲಿ ವಿದ್ಯಾರ್ಥಿಗಳು ಮುನ್ನುಗ್ಗಲು ಸಹಕಾರಿಯಾದೀತು.

For Quick Alerts
ALLOW NOTIFICATIONS  
For Daily Alerts

English summary
Here we are giving information how to fight against illiteracy in india during world literacy day 2022
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X