International Nurses Day 2021: ದಾದಿಯರ ದಿನದ ಥೀಮ್, ಇತಿಹಾಸ ಮತ್ತು ಮಹತ್ವವೇನು ?

ಅಂತರಾಷ್ಟ್ರೀಯ ದಾದಿಯರ ದಿನದ ಇತಿಹಾಸ ಮತ್ತು ಮಹತ್ವ ತಿಳಿಯಿರಿ

ಪ್ರತಿ ವರ್ಷ ಮೇ 12 ರಂದು ನಮ್ಮ ಸಮಾಜದಲ್ಲಿ ದಾದಿಯರ ಕೊಡುಗೆಗಳನ್ನು ಗುರುತಿಸಲು ನಾವು ಅಂತರರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸುತ್ತೇವೆ. ಈ ದಿನ ಆಧುನಿಕ ಶುಶ್ರೂಷೆಯ ಸಂಸ್ಥಾಪಕ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನವೂ ಆಗಿದೆ.

ಆಸ್ಪತ್ರೆಗಳಲ್ಲಿ ದಾದಿಯರು ಪ್ರಮುಖ ಪಾತ್ರವಹಿಸುತ್ತಾರೆ ಮತ್ತು ರೋಗಿಗಳು ಚೇತರಿಕೆಗೊಳ್ಳಲು ಸಹಾಯ ಮಾಡುತ್ತಾರೆ. ಜನರ ರಕ್ಷಣೆಗಾಗಿ ಅವರು ದಣಿವರಿಯಿಲ್ಲದೆ ಕೆಲಸ ಮಾಡುತ್ತಾರೆ. COVID-19 ಸಾಂಕ್ರಾಮಿಕ ರೋಗದ ವಿರುದ್ಧ ಶುಶ್ರೂಷಾ ವೃತ್ತಿಪರರು ಫ್ರಂಟ್‌ಲೈನ್ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸುತ್ತಿರುವುದು ಈ ವರ್ಷ ಪ್ರಮುಖದ ಸಂಗತಿಯಾಗಿದೆ.

ಈ ದಿನ ವಿವಿಧೆಡೆ ಸೆಮಿನಾರ್‌ಗಳು, ವಿವಿಧ ಸಮುದಾಯ ಕಾರ್ಯಕ್ರಮಗಳು, ಶಿಕ್ಷಣ ಮತ್ತು ವೈದ್ಯಕೀಯ ಸಂಸ್ಥೆಗಳಲ್ಲಿಚರ್ಚೆಗಳು ಮತ್ತು ಸ್ಪರ್ಧೆಗಳು ನಡೆಯುತ್ತವೆ. ಅಲ್ಲಿ ದಾದಿಯರನ್ನು ಗೌರವಿಸಲಾಗುತ್ತದೆ ಮತ್ತು ಪ್ರಶಂಸಿಸಲಾಗುತ್ತದೆ. ವೈದ್ಯರು, ನಿರ್ವಾಹಕರು, ರೋಗಿಗಳು ಉಡುಗೊರೆ ಮತ್ತು ಹೂವುಗಳನ್ನು ವಿತರಿಸುತ್ತಾರೆ.

1953 ರಲ್ಲಿ ಡೊರೊಥಿ ಸದರ್ಲ್ಯಾಂಡ್ ಯುಎಸ್ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಅಂದಿನ ಅಧ್ಯಕ್ಷರನ್ನು ದಾದಿಯರ ದಿನವನ್ನು ಘೋಷಿಸಲು ಪ್ರಸ್ತಾಪಿಸಿದ್ದರು. ಆಗ ಅವರು ಅದನ್ನು ಅಂಗೀಕರಿಸಲಿಲ್ಲ.

ತದನಂತರದಲ್ಲಿ ಮೊದಲ ಅಂತರರಾಷ್ಟ್ರೀಯ ದಾದಿಯರ ದಿನವನ್ನು 1965 ರಲ್ಲಿ ಆಚರಿಸಲಾಯಿತು. ಜನವರಿ 1974 ರಲ್ಲಿ ಮೇ 12 ಅನ್ನು 'ದಾದಿಯರ ದಿನ' ವನ್ನಾಗಿ ಆಚರಿಸಲು ಸೂಚಿಸಲಾಯಿತು.

ಪ್ರತಿ ವರ್ಷ ಭಾರತೀಯ ದಾದಿಯರ ಪರಿಷತ್ತು (ಐಸಿಎನ್) ದಾದಿಯರಿಗಾಗಿ ಕಿಟ್‌ಗಳನ್ನು ಸಿದ್ಧಪಡಿಸಿ ವಿತರಿಸುತ್ತದೆ. ಇದು ಶೈಕ್ಷಣಿಕ ಮತ್ತು ಸಾರ್ವಜನಿಕ ಮಾಹಿತಿ ಸಾಮಗ್ರಿಗಳನ್ನು ಒಳಗೊಂಡಿರುತ್ತದೆ ಹಾಗೂ ದಾದಿಯರು ಇದನ್ನು ಎಲ್ಲೆಡೆ ಬಳಸಬಹುದು.

ರೋಗಿಯ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ದಾದಿಯರಿಗೆ ಹಲವಾರು ತರಬೇತಿಗಳನ್ನು ನೀಡಲಾಗುತ್ತದೆ. ರೋಗಿಯನ್ನು ಸರಿಯಾಗಿ ನಿಭಾಯಿಸುವ ಬಗ್ಗೆ ಅವರಿಗೆ ಸರಿಯಾದ ಜ್ಞಾನವಿದೆ. ಉತ್ತಮ ಆರೋಗ್ಯ ಸೇವೆಗಳನ್ನು ತಲುಪಿಸುವ ಬಗ್ಗೆ ದಾದಿಯರಿಗೆ ಆಳವಾದ ಜ್ಞಾನವಿದೆ.

For Quick Alerts
ALLOW NOTIFICATIONS  
For Daily Alerts

English summary
International nurses day is celebrated on may 12. Here is the history, theme, history and significance of the day.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X