International Tiger Day 2022 : ಈ ದಿನದ ಇತಿಹಾಸ, ಮಹತ್ವ, ಉಲ್ಲೇಖ ಮತ್ತು ಘೋಷಣೆಗಳು ಇಲ್ಲಿವೆ

ಅಂತಾರಾಷ್ಟ್ರೀಯ ಹುಲಿ ದಿನದ ಇತಿಹಾಸ, ಮಹತ್ವ, ಘೋಷಣೆ ಮತ್ತು ಉಲ್ಲೇಖಗಳು

International Tiger Day 2022 : ಭಾರತದ ರಾಷ್ಟ್ರೀಯ ಪ್ರಾಣಿ 'ಟೈಗರ್' ಅನ್ನು ವೈಜ್ಞಾನಿಕವಾಗಿ ಪ್ಯಾಂಥೆರಾ ಟೈಗ್ರಿಸ್ ಎಂದು ಕರೆಯಲಾಗುತ್ತದೆ. ಅವುಗಳನ್ನು ಬೆಕ್ಕಿನ ಕುಟುಂಬದಲ್ಲಿ ಅತಿದೊಡ್ಡ ಪ್ರಾಣಿ ಎಂದು ಕರೆಯಲಾಗುತ್ತದೆ.

 

ಪ್ರಪಂಚದಾದ್ಯಂತ ಅನೇಕ ಜಾತಿಯ ಹುಲಿಗಳಿವೆ. 2010 ರಲ್ಲಿ ದೇಶದ ರಾಷ್ಟ್ರೀಯ ಪ್ರಾಣಿ ಹುಲಿಯ ಬಗ್ಗೆ ಆತಂಕದ ವಿಚಾರ ಎದುರಾಯಿತು ಅದೇನೆಂದರೆ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿ ಹುಲಿ ಕೂಡ ಇದೆ ಎಂದು ತಿಳಿಯಿತು. ಹೀಗಾಗಿ ಹುಲಿಯನ್ನು ಸಂರಕ್ಷಿಸುವ ಸಲುವಾಗಿ ಅಂತಾರಾಷ್ಟ್ರೀಯ ಹುಲಿ ದಿನವನ್ನು 2010 ರಲ್ಲಿ ರಚಿಸಲಾಯಿತು.

ಅಂತಾರಾಷ್ಟ್ರೀಯ ಹುಲಿ ದಿನದ ಇತಿಹಾಸ, ಮಹತ್ವ, ಘೋಷಣೆ ಮತ್ತು ಉಲ್ಲೇಖಗಳು

ಅಂತಾರಾಷ್ಟ್ರೀಯ ಹುಲಿ ದಿನ 2022 : ದಿನಾಂಕ

ಪ್ರತಿ ವರ್ಷ ಜುಲೈ 29 ರಂದು ಅಂತಾರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಹನ್ನೊಂದನೇ ಅಂತಾರಾಷ್ಟ್ರೀಯ ಹುಲಿ ದಿನದ ಆಚರಣೆಯನ್ನು ಮಾಡಲಿದ್ದೇವೆ. ಹುಲಿಗಳ ನೈಸರ್ಗಿಕ ಆವಾಸಸ್ಥಾನಗಳನ್ನು ರಕ್ಷಿಸಲು ಜಾಗತಿಕ ವ್ಯವಸ್ಥೆಯನ್ನು ಉತ್ತೇಜಿಸುವುದು ಮತ್ತು ಹುಲಿ ಸಂರಕ್ಷಣಾ ವಿಷಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಬೆಂಬಲವನ್ನು ನೀಡುವುದು ಈ ದಿನದ ಹಿಂದಿನ ಮುಖ್ಯ ಉದ್ದೇಶವಾಗಿದೆ.

ಪ್ರಸ್ತುತ ವಿಶ್ವ ವನ್ಯಜೀವಿ ನಿಧಿಯ ಪ್ರಕಾರ, ಭಾರತ, ನೇಪಾಳ, ಭೂತಾನ್, ರಷ್ಯಾ ಮತ್ತು ಚೀನಾದಲ್ಲಿ ಹುಲಿಗಳ ಸಂಖ್ಯೆ ಸ್ಥಿರವಾಗಿದೆ ಅಥವಾ ಹೆಚ್ಚುತ್ತಿದೆ. ಆದರೆ ಆಗ್ನೇಯ ಏಷ್ಯಾದ ಹೆಚ್ಚಿನ ಭಾಗ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಹುಲಿಗಳು ಇನ್ನೂ ಬಿಕ್ಕಟ್ಟಿನಲ್ಲಿದೆ ಮತ್ತು ಅವುಗಳ ಸಂಖ್ಯೆ ಕ್ಷೀಣಿಸುತ್ತಿದೆ.

ಅಂತಾರಾಷ್ಟ್ರೀಯ ಹುಲಿ ದಿನದ ಇತಿಹಾಸ, ಮಹತ್ವ, ಘೋಷಣೆ ಮತ್ತು ಉಲ್ಲೇಖಗಳು

ಅಂತಾರಾಷ್ಟ್ರೀಯ ಹುಲಿ ದಿನ 2022 : ಇತಿಹಾಸ

ಕಳೆದ ಶತಮಾನದಲ್ಲಿ 97%ರಷ್ಟು ಕಾಡು ಹುಲಿಗಳು ಕಣ್ಮರೆಯಾಗಿವೆ ಎಂಬ ಆಘಾತಕಾರಿ ಸುದ್ದಿಯಿಂದಾಗಿ 2010 ರಲ್ಲಿ ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ ಟೈಗರ್ ಶೃಂಗಸಭೆಯಲ್ಲಿ ಈ ದಿನವನ್ನು ಆಚರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಆಗಿನ ಸಂದರ್ಭದಲ್ಲಿ ಕೇವಲ 3,000 ಹುಲಿಗಳು ಮಾತ್ರ ಜೀವಂತವಾಗಿವೆ ಎಂಬ ವರದಿ ಇತ್ತು.

2010 ರಲ್ಲಿ ವಿವಿಧ ದೇಶದ ಸರ್ಕಾರಗಳು ಮುಂದೆ ಬಂದು ಮುಂದಿನ ವರ್ಷಗಳಲ್ಲಿ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಪ್ರತಿಜ್ಞೆ ಮಾಡಿದವು.

ಅಂತಾರಾಷ್ಟ್ರೀಯ ಹುಲಿ ದಿನದ ಇತಿಹಾಸ, ಮಹತ್ವ, ಘೋಷಣೆ ಮತ್ತು ಉಲ್ಲೇಖಗಳು

ಅಂತಾರಾಷ್ಟ್ರೀಯ ಹುಲಿ ದಿನ 2022 : ಮಹತ್ವ

ವಿಶ್ವ ವನ್ಯಜೀವಿ ನಿಧಿ (ಡಬ್ಲ್ಯುಡಬ್ಲ್ಯುಎಫ್) ಪ್ರಕಾರ 20ನೇ ಶತಮಾನದ ಆರಂಭದಿಂದಲೂ ಹುಲಿಗಳ ಸಂಖ್ಯೆಯಲ್ಲಿ ಸುಮಾರು 95%ರಷ್ಟು ಕಡಿಮೆಯಾಗಿದೆ. ಸುಮಾರು 3,900 ಹುಲಿಗಳು ಜಗತ್ತಿನಾದ್ಯಂತ ಕಾಡಿನಲ್ಲಿ ಉಳಿದಿವೆ ಹಾಗೂ ಹುಲಿಗಳ ಸಂಖ್ಯೆ ಕಡಿಮೆಯಾಗಲು ಮುಖ್ಯವಾಗಿ ಕಾರಣಗಳೆಂದರೆ ಬೇಟೆಯಾಡುವುದು, ಹವಾಮಾನ ಬದಲಾವಣೆ ಮತ್ತು ಆವಾಸಸ್ಥಾನದಲ್ಲಿ ಆಗುವ ಹಾನಿಗಳು.

WWF, IFAW ಮತ್ತು ಸ್ಮಿತ್‌ಸೋನಿಯನ್ ಸಂಸ್ಥೆಯಂತಹ ಪ್ರಾಣಿ ಸಂಸ್ಥೆಗಳಿಂದ ಪ್ರತಿವರ್ಷ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಅಂತಾರಾಷ್ಟ್ರೀಯ ಹುಲಿ ದಿನ 2021 : ಉಲ್ಲೇಖಗಳು

ಅಂತಾರಾಷ್ಟ್ರೀಯ ಹುಲಿ ದಿನ 2021 : ಉಲ್ಲೇಖಗಳು

"ಹುಲಿಗಳನ್ನು ಶಾಶ್ವತವಾಗಿ ಕಳೆದುಕೊಳ್ಳುವ ಮೊದಲು ಉಳಿಸಲು ಪ್ರಯತ್ನಿಸಿ, ಹುಲಿಗಳನ್ನು ಕೊಲ್ಲುವುದು ಅಗತ್ಯವಲ್ಲ ಅದು ದುರಾಸೆ. ಹುಲಿಯನ್ನು ಉಳಿಸಿ! ಪ್ರಕೃತಿಯನ್ನು ರಕ್ಷಿಸಿ" - ಸನಯ

ಅಂತಾರಾಷ್ಟ್ರೀಯ ಹುಲಿ ದಿನ 2021 : ಉಲ್ಲೇಖಗಳು

ಅಂತಾರಾಷ್ಟ್ರೀಯ ಹುಲಿ ದಿನ 2021 : ಉಲ್ಲೇಖಗಳು

"ಕಾಡನ್ನು ಉಳಿಸಲು ನಾವು ಹುಲಿಯನ್ನು ಸಂರಕ್ಷಿಸಬೇಕು" - ರಾಹುಲ್ ವಾಸುಲ್ಕರ್

ಅಂತಾರಾಷ್ಟ್ರೀಯ ಹುಲಿ ದಿನ 2021 : ಉಲ್ಲೇಖಗಳು
 

ಅಂತಾರಾಷ್ಟ್ರೀಯ ಹುಲಿ ದಿನ 2021 : ಉಲ್ಲೇಖಗಳು

"ಮನುಷ್ಯನು ಹುಲಿಯನ್ನು ಕೊಲ್ಲಲು ಬಯಸಿದಾಗ ಅವನು ಅದನ್ನು ಕ್ರೀಡೆ ಎಂದು ಕರೆಯುತ್ತಾನೆ, ಹುಲಿ ಅವನನ್ನು ಕೊಲ್ಲಲು ಬಯಸಿದಾಗ ಮನುಷ್ಯ ಅದನ್ನು ಕ್ರೂರ ಪ್ರಾಣಿ ಎಂದು ಕರೆಯುತ್ತಾನೆ" - ಜಾರ್ಜ್ ಬರ್ನಾರ್ಡ್ ಶಾ

ಅಂತಾರಾಷ್ಟ್ರೀಯ ಹುಲಿ ದಿನ 2021 : ಉಲ್ಲೇಖಗಳು

ಅಂತಾರಾಷ್ಟ್ರೀಯ ಹುಲಿ ದಿನ 2021 : ಉಲ್ಲೇಖಗಳು

"ಹುಲಿ ಸೌಂದರ್ಯ, ಶೌರ್ಯ, ಶಕ್ತಿ ಮತ್ತು ರಾಷ್ಟ್ರೀಯತೆಯ ಸಂಕೇತವಾಗಿದೆ ಆದ್ದರಿಂದ ಹುಲಿಯನ್ನು ಉಳಿಸಿ. ರಾಷ್ಟ್ರದ ಹೆಮ್ಮೆಯನ್ನು ಹೆಚ್ಚಿಸಿ" - ಉಜ್ಮಾ

ಅಂತಾರಾಷ್ಟ್ರೀಯ ಹುಲಿ ದಿನ 2021 : ಉಲ್ಲೇಖಗಳು

ಅಂತಾರಾಷ್ಟ್ರೀಯ ಹುಲಿ ದಿನ 2021 : ಉಲ್ಲೇಖಗಳು

"ನಾವು ಹುಲಿಗಳ ಸಂತತಿಯನ್ನು ಅಳಿವಿನಿಂದ ರಕ್ಷಿಸಬೇಕು. ಇದು ಭವಿಷ್ಯದಲ್ಲಿ ನಮ್ಮ ಗ್ರಹದ ಮೇಲೆ ಅವಲಂಬಿತವಾಗಿರುತ್ತದೆ" - ಮಿಚೆಲ್ ಯೆಹೋ

ಅಂತಾರಾಷ್ಟ್ರೀಯ ಹುಲಿ ದಿನ 2022 : ಘೋಷಣೆಗಳು

1. ನಮ್ಮ ಹುಲಿಗಳನ್ನು ಉಳಿಸಿ, ಭೂಮಿಯನ್ನು ರಕ್ಷಿಸಿ

2. ನಮಗೆ ಹುಲಿಗಳ ಸಂತತಿ ಹೆಚ್ಚಬೇಕು

3. ಅದುಶಾಶ್ವತವಾಗಿ ಕಣ್ಮರೆಯಾಗುವ ಮೊದಲು ಎಚ್ಚರವಹಿಸಿ

4. ಕಾಡಿನ ರಾಜನನ್ನು ಉಳಿಸಿ

5. ಹುಲಿ ಇತಿಹಾಸವಾದಲ್ಲಿ ಅದನ್ನು ಮರುಸೃಷ್ಟಿಸಲು ಸಾಧ್ಯವಿಲ್ಲ

6. ಹುಲಿಗಳನ್ನು ಉಳಿಸಲು ನಿಮ್ಮ ಧ್ವನಿಯನ್ನು ಏರಿಸಿ

7. ಹುಲಿಗಳ ಸಂತತಿ ಉಳಿಸಲು ಕೈ ಜೋಡಿಸಿ

8. ಹುಲಿಗಳನ್ನು ಉಳಿಸಿ

9. ಹುಲಿಗಳ ಹಕ್ಕಿಗಾಗಿ ಹೋರಾಡಿ.

For Quick Alerts
ALLOW NOTIFICATIONS  
For Daily Alerts

English summary
International tiger day is on july 29, here is the history, significance, quotes and slogans of the day.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X