JEE Advanced 2021 : ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಏನೆಲ್ಲಾ ಮಾಡಬೇಕು ?

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಖರಗ್‌ಪುರ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) 2021 ಅನ್ನು ಅಕ್ಟೋಬರ್ 3, 2021 ರಂದು ನಡೆಸುತ್ತಿದೆ. ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಸಂಸ್ಥೆಯು ಈಗಾಗಲೇ ಬಿಡುಗಡೆ ಮಾಡಿದೆ. ಕೋವಿಡ್ ನಡುವೆಯೇ ಪರೀಕ್ಷೆ ನಡೆಸಲಾಗುತ್ತಿದ್ದು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮಾರ್ಗಸೂಚಿಗಳನ್ನು ಮತ್ತು ಕೋವಿಡ್ -19ಗೆ ಸಂಬಂಧಿಸಿದ ಸಲಹೆಗಳನ್ನು ಬಿಡುಗಡೆ ಮಾಡಲಾಗಿದೆ.

ಜೆಇಇ ಅಡ್ವಾನ್ಸ್ಡ್ 2021 ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಈ ಮಾಹಿತಿ ತಪ್ಪದೇ ಓದಿ

"ಕೋವಿಡ್ -19 ಸಂಬಂಧಿತ ಪ್ರೋಟೋಕಾಲ್‌ಗಳನ್ನು ಜೆಇಇ (ಅಡ್ವಾನ್ಸ್ಡ್) 2021 ಪರೀಕ್ಷೆಯ ವೇಳೆ ಅನುಸರಿಸಲಾಗುವುದು. ಪ್ರಸ್ತುತ ಕೋವಿಡ್ -19 ರ ಸನ್ನಿವೇಶದಲ್ಲಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಭಾರತ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲರಿಗೂ ಸುರಕ್ಷತೆಗಾಗಿ ಸಾಕಷ್ಟು ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಪರೀಕ್ಷೆಗೆ ಬರುವ ಅಭ್ಯರ್ಥಿಗಳ ಸುರಕ್ಷತೆ ಮತ್ತು ಆರೋಗ್ಯವನ್ನು ಖಾತ್ರಿಪಡಿಸಿಕೊಳ್ಳಲು ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ "ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜೆಇಇ ಅಡ್ವಾನ್ಸ್ಡ್ 2021: ಸಾಮಾನ್ಯ ಮಾರ್ಗಸೂಚಿಗಳು :

ಜೆಇಇ ಅಡ್ವಾನ್ಸ್ಡ್ 2021: ಸಾಮಾನ್ಯ ಮಾರ್ಗಸೂಚಿಗಳು :

ಪ್ರತಿ ಪತ್ರಿಕೆ ಆರಂಭದ ಮೊದಲು ಕೀಬೋರ್ಡ್, ಮಾನಿಟರ್, ವೆಬ್‌ಕ್ಯಾಮ್, ಮೌಸ್, ಮೇಜು ಮತ್ತು ಕುರ್ಚಿ ಸೇರಿದಂತೆ ಆಸನ ಪ್ರದೇಶವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ. ಎಲ್ಲಾ ಡೋರ್ ಹ್ಯಾಂಡಲ್‌ಗಳು, ಮೆಟ್ಟಿಲುಗಳ ರೇಲಿಂಗ್, ಲಿಫ್ಟ್ ಬಟನ್‌ಗಳು ಇತ್ಯಾದಿಗಳನ್ನು ಸೋಂಕುರಹಿತಗೊಳಿಸಲಾಗುತ್ತದೆ.

ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ಪ್ರವೇಶ ಕೇಂದ್ರಗಳಲ್ಲಿ ಮತ್ತು ವಿಶ್ರಾಂತಿ ಕೇಂದ್ರದ ಒಳಗೆ ವಿವಿಧ ಸ್ಥಳಗಳಲ್ಲಿ ನೀಡಲಾಗುತ್ತದೆ.

ಜೆಇಇ ಅಡ್ವಾನ್ಸ್ಡ್ ಅಡ್ಮಿಟ್ ಕಾರ್ಡ್‌ನಲ್ಲಿ ಬಾರ್‌ಕೋಡ್ ಸ್ಕ್ಯಾನ್ ಮಾಡಲು ಬಾರ್‌ಕೋಡ್ ರೀಡರ್‌ಗಳು ಪ್ರವೇಶ ಬಿಂದುವಿನಲ್ಲಿ ಲಭ್ಯವಿರುತ್ತಾರೆ. ಬಾರ್‌ಕೋಡ್ ಓದಿದ ನಂತರ ಲ್ಯಾಬ್, ಹಾಲ್ ಅಥವಾ ರೋಲ್ ಸಂಖ್ಯೆಯನ್ನು ಅಭ್ಯರ್ಥಿಗೆ ತಿಳಿಸಲಾಗುತ್ತದೆ. ಇದನ್ನು ಸೂಚನಾ ಫಲಕದಲ್ಲಿ ಪ್ರದರ್ಶಿಸಲಾಗುವುದಿಲ್ಲ.

ಅಭ್ಯರ್ಥಿಗಳಿಗೆ ತಮ್ಮ ರಫ್ ವರ್ಕ್ ಗಾಗಿ ಪ್ರತಿ ಪೇಪರ್ ಪ್ರಾರಂಭವಾಗುವ ಮೊದಲು ಪ್ರತಿ ಅಭ್ಯರ್ಥಿಯ ಮೇಜಿನ ಮೇಲೆ ಒಂದು ಸ್ಕ್ರಿಬಲ್ ಪ್ಯಾಡ್ ಅನ್ನು ಇರಿಸಲಾಗುತ್ತದೆ. ಅಭ್ಯರ್ಥಿಗಳು ಯಾವುದೇ ರೀತಿಯ ಪೇಪರ್ ಅನ್ನು ಪರೀಕ್ಷೆಗೆ ತರಬೇಡಿ.

ಜೆಇಇ ಅಡ್ವಾನ್ಸ್ಡ್ 2021: ಪರೀಕ್ಷೆಗೆ ಹಾಜರಾಗುವ ಮುನ್ನ ಅಭ್ಯರ್ಥಿಗಳು ಮಾಡಬೇಕಾದ ಕೆಲಸಗಳು :
 

ಜೆಇಇ ಅಡ್ವಾನ್ಸ್ಡ್ 2021: ಪರೀಕ್ಷೆಗೆ ಹಾಜರಾಗುವ ಮುನ್ನ ಅಭ್ಯರ್ಥಿಗಳು ಮಾಡಬೇಕಾದ ಕೆಲಸಗಳು :

ಪರೀಕ್ಷೆಯ ಹಿಂದಿನ ದಿನ ಎಸ್ಎಂಎಸ್ ಮೂಲಕ ನಿಮಗೆ ತಿಳಿಸಲಾದ ಪ್ರವೇಶ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ. ಪರೀಕ್ಷಾ ಕೇಂದ್ರದಲ್ಲಿ ಜನದಟ್ಟಣೆ ತಪ್ಪಿಸಲು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈ ನಿಯಮ ಪಾಲಿಸಿ.

ಒದಗಿಸಿದ ಸೂಚನೆಗಳ ಪ್ರಕಾರ ಪ್ರವೇಶ ಪತ್ರದಲ್ಲಿ ಕೋವಿಡ್ -19 ಸ್ವಯಂ ಘೋಷಣೆಯನ್ನು (ಅಂಡರ್‌ಟೇಕಿಂಗ್) ಭರ್ತಿ ಮಾಡಿ.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಎಲ್ಲಾ ಸಮಯದಲ್ಲೂ ನಿಮ್ಮದೇ ಮಾಸ್ಕ್ ಧರಿಸಿ. ಸ್ಯಾನಿಟೈಜರ್ ಮತ್ತು ಪಾರದರ್ಶಕ ಬಾಟಲ್ ನೀರನ್ನು ಒಯ್ಯಿರಿ.

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಎಲ್ಲಾ ಸಮಯದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಪರೀಕ್ಷಾ ಕೇಂದ್ರದ ಸಿಬ್ಬಂದಿ ನೀಡಿದ ಸೂಚನೆಗಳನ್ನು ಅನುಸರಿಸಿ.

ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮೊದಲು ಕೈಗಳನ್ನು ಸಾಬೂನಿನಿಂದ ತೊಳೆಯಿರಿ ಮತ್ತು ಹ್ಯಾಂಡ್ ಸ್ಯಾನಿಟೈಸರ್ ಬಳಸಿ ಸ್ವಚ್ಛಗೊಳಿಸಿ.

ಪರೀಕ್ಷೆಗೆ ಪ್ರವೇಶದ ಸಮಯದಲ್ಲಿ, ಪ್ರವೇಶ ಪತ್ರದಲ್ಲಿ ಭರ್ತಿ ಮಾಡಿದ ಸ್ವಯಂ ಘೋಷಣೆ ನಮೂನೆ ಮತ್ತು ದೇಹದ ಉಷ್ಣತೆಯನ್ನು ಪರಿಶೀಲಿಸಲಾಗುತ್ತದೆ. ಪರೀಕ್ಷಾ ಕೇಂದ್ರದ ಸಿಬ್ಬಂದಿ ಅಭ್ಯರ್ಥಿಯ ಪ್ರವೇಶ ಪತ್ರದಲ್ಲಿನ ಬಾರ್‌ಕೋಡ್ ಸ್ಕ್ಯಾನ್ ಮಾಡಿದ ನಂತರ ಆಯಾ ಎಬಿಎಸ್‌ಗೆ ಮಾರ್ಗದರ್ಶನ ನೀಡುತ್ತಾರೆ.

ಯಾವುದೇ ಅಭ್ಯರ್ಥಿಯು ಕೋವಿಡ್ -19 ಮಾರ್ಗಸೂಚಿಗಳನ್ನು ಉಲ್ಲಂಘಿಸದ ಹೊರತು ಪರೀಕ್ಷೆಗೆ ಹಾಜರಾಗಲು ಅನುಮತಿ ನಿರಾಕರಿಸಲಾಗುವುದಿಲ್ಲ.

ಜೆಇಇ ಅಡ್ವಾನ್ಸ್ಡ್ 2021: ಪರೀಕ್ಷೆ ಸಮಯದಲ್ಲಿ ಅನುಸರಿಸಬೇಕಾದ ಸೂಚನೆಗಳು:

ಜೆಇಇ ಅಡ್ವಾನ್ಸ್ಡ್ 2021: ಪರೀಕ್ಷೆ ಸಮಯದಲ್ಲಿ ಅನುಸರಿಸಬೇಕಾದ ಸೂಚನೆಗಳು:

ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗೆ ಕೇವಲ ಒಂದು ಸ್ಕ್ರಿಬಲ್ ಪ್ಯಾಡ್ ಅನ್ನು ನೀಡಲಾಗುತ್ತದೆ. ಒದಗಿಸಿದ ಜಾಗದಲ್ಲಿ ಅಭ್ಯರ್ಥಿಯು ತನ್ನ ಹೆಸರು ಮತ್ತು ಜೆಇಇ ಅಡ್ವಾನ್ಸ್ಡ್ 2021 ನೋಂದಣಿ ಸಂಖ್ಯೆಯನ್ನು ನಮೂದಿಸಿದ ನಂತರ ಸ್ಕ್ರಿಬಲ್ ಪ್ಯಾಡ್‌ಗೆ ಸಹಿ ಹಾಕಬೇಕು.

ಎರಡೂ ಪೇಪರ್‌ಗಳ ಸಮಯದಲ್ಲಿ ರೋಲ್ ಪಟ್ಟಿಯಲ್ಲಿ ಸಹಿ ಮಾಡುವ ಮೂಲಕ ನಿಮ್ಮ ಹಾಜರಾತಿಯನ್ನು ಗುರುತಿಸಿ.

ಪೇಪರ್ 2 ಆರಂಭವಾದ ನಂತರ, ಅಡ್ಮಿಟ್ ಕಾರ್ಡ್ ಅನ್ನು ಸರಿಯಾಗಿ ಭರ್ತಿ ಮಾಡಿದ ಮತ್ತು ಸಹಿ ಮಾಡಿದ ಸ್ವಯಂ ಘೋಷಣಾ ನಮೂನೆಯನ್ನು ಇನ್ವಿಜಿಲೇಟರ್‌ಗೆ ನೀಡಿ. ಯಾವುದೇ ಅಭ್ಯರ್ಥಿಯು ಪ್ರವೇಶ ಪತ್ರವನ್ನು ಹಸ್ತಾಂತರಿಸಲು ತಪ್ಪಿದಲ್ಲಿ ಪರೀಕ್ಷೆಯಿಂದ ಅನರ್ಹತೆ ಸೇರಿದಂತೆ ಕ್ರಮ ತೆಗೆದುಕೊಳ್ಳಬಹುದು.

ಜೆಇಇ ಅಡ್ವಾನ್ಸ್ಡ್ 2021: ಪರೀಕ್ಷೆ ಮುಗಿದ ನಂತರ ಮಾಡಬೇಕಾದ ಕೆಲಸಗಳು :

ಜೆಇಇ ಅಡ್ವಾನ್ಸ್ಡ್ 2021: ಪರೀಕ್ಷೆ ಮುಗಿದ ನಂತರ ಮಾಡಬೇಕಾದ ಕೆಲಸಗಳು :

ಪರೀಕ್ಷೆ ಮುಗಿದ ನಂತರ ಪರೀಕ್ಷಾ ಕೇಂದ್ರದಿಂದ ಕ್ರಮಬದ್ಧವಾಗಿ ಹೊರಹೋಗಿ. ಒಂದು ಸಮಯದಲ್ಲಿ ಒಬ್ಬ ಅಭ್ಯರ್ಥಿಯಂತೆ ಹೊರನಡೆಯಿರಿ.

ಮೇಲ್ವಿಚಾರಕರಿಂದ ಸೂಚನೆಗಳಿಗಾಗಿ ಕಾಯಿರಿ ಮತ್ತು ಅವರು ಸಲಹೆ ನೀಡುವವರೆಗೂ ತಮ್ಮ ಆಸನಗಳಿಂದ ಎದ್ದೇಳಬೇಡಿ.

For Quick Alerts
ALLOW NOTIFICATIONS  
For Daily Alerts

English summary
JEE Advanced 2021 is scheduled on october 3. Here is the things to do during, before and after the exam.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X