JEE Advanced 2022 Preparation Tips : ಜೆಇಇ ಅಡ್ವಾನ್ಸ್ಡ್ ಪರೀಕ್ಷಾ ತಯಾರಿಗೆ ಸಲಹೆಗಳು ಇಲ್ಲಿವೆ

ಜಂಟಿ ಪ್ರವೇಶ ಪರೀಕ್ಷೆ, JEE ಅಡ್ವಾನ್ಸ್ಡ್ 2022 ಅನ್ನು ಆಗಸ್ಟ್ 28,2022 ರಂದು ನಿಗದಿಪಡಿಸಲಾಗಿದೆ. ಪರೀಕ್ಷೆಯ ಪತ್ರಿಕೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳನ್ನು ಒಳಗೊಂಡಿರುತ್ತದೆ. ಪರೀಕ್ಷೆಯು ಏಕ ಅಥವಾ ಬಹು ಸರಿಯಾದ ಉತ್ತರಗಳೊಂದಿಗೆ ವಸ್ತುನಿಷ್ಠ ಪ್ರಶ್ನೆಗಳನ್ನು ಒಳಗೊಂಡಿದ್ದು, ಗ್ರಹಿಕೆಯ ಸಮಸ್ಯೆಗಳು, ಮ್ಯಾಟ್ರಿಕ್ಸ್ ಹೊಂದಾಣಿಕೆ ಮತ್ತು ಪೂರ್ಣಾಂಕ ಪ್ರಕಾರದ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ.

ಜೆಇಇ ಅಡ್ವಾನ್ಸ್ಡ್ 2022 ಪರೀಕ್ಷೆಗೆ ಅಂತಿಮ ಕ್ಷಣದ ತಯಾರಿಗೆ ಸಲಹೆಗಳು ಇಲ್ಲಿವೆ

JEE ಅಡ್ವಾನ್ಸ್ಡ್ 2022 ಕಠಿಣ ಪ್ರವೇಶ ಪರೀಕ್ಷೆಗಳಲ್ಲಿ ಒಂದಾಗಿದ್ದರೂ, ವಿದ್ಯಾರ್ಥಿಗಳು ಸತತವಾಗಿ ತಯಾರಿ ನಡೆಸಿದರೆ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಉಳಿದ ಕೆಲವು ದಿನಗಳಲ್ಲಿ ಅಧ್ಯಯನ ನಡೆಸುವುದು ಹೇಗೆ ಎಂದು ಇಲ್ಲಿ ಸಲಹೆಗಳನ್ನು ನೀಡಲಾಗಿದೆ ಓದಿ ತಯಾರಿ ನಡೆಸಿ.

1. ಸಮಯ ನಿರ್ವಹಣೆ :

1. ಸಮಯ ನಿರ್ವಹಣೆ :

JEE ಅಡ್ವಾನ್ಸ್ಡ್ 2022 ಪರೀಕ್ಷೆಯು 3 ಗಂಟೆಗಳ ಅವಧಿಯದ್ದಾಗಿರುವುದರಿಂದ ಆಕಾಂಕ್ಷಿಗಳು ಪ್ರತಿ ವಿಷಯಕ್ಕೆ ಅನುಗುಣವಾಗಿ ತಮ್ಮ ಅಧ್ಯಯನ ಮಾಡಬೇಕಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಪರೀಕ್ಷೆಯಲ್ಲಿ ಯಾವುದೇ ವಿಭಾಗಕ್ಕೆ ಸಮಯಕ್ಕೆ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಆಕಾಂಕ್ಷಿಗಳು ಮೊದಲ ಸುತ್ತಿನಲ್ಲಿ ಪ್ರತಿ ವಿಷಯಕ್ಕೆ 45 ನಿಮಿಷಗಳನ್ನು ಮೀಸಲಿಡಿ, ಕ್ವಾರ್ಟರ್ ನಿಯಮದ ಪ್ರಕಾರ ವಿಷಯಗಳನ್ನು ಅಭ್ಯಾಸ ಮಾಡಬೇಕು ಎಂದು ಸೂಚಿಸಲಾಗಿದೆ. ಹೀಗೆ ಮಾಡುವ ಮೂಲಕ ಅಭ್ಯರ್ಥಿಯು ತಮ್ಮ ಒಟ್ಟಾರೆ ಸ್ಕೋರ್ ನಲ್ಲಿ ಉತ್ತಮ ಅಂಕಗಳನ್ನು ಪಡೆಯಬಹುದು.

2. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ ಮತ್ತು ಅಣಕು ಪರೀಕ್ಷೆಗಳ ಅಧ್ಯಯನ :

2. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ ಮತ್ತು ಅಣಕು ಪರೀಕ್ಷೆಗಳ ಅಧ್ಯಯನ :

ಅಣಕು ಪರೀಕ್ಷೆಗಳು ಮತ್ತು ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರಾಯೋಗಿಕ ಆವೃತ್ತಿಗಳಾಗಿದ್ದು, ಆಕಾಂಕ್ಷಿಗಳು ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತಾರೆ. ಆಕಾಂಕ್ಷಿಗಳು ಹಿಂದಿನ ವರ್ಷದ ಪೇಪರ್ ಮಾದರಿಯನ್ನು ತಿಳಿದುಕೊಳ್ಳುವುದರ ಜೊತೆಗೆ ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳುವ ಮೂಲಕ ಜೆಇಇ ಅಡ್ವಾನ್ಸ್‌ಗೆ ಸಿದ್ಧರಾಗುವುದು ಒಳಿತು.

ಅದಾಗ್ಯೂ ನೀವು ಸಾವಯವ ಮತ್ತು ಅಜೈವಿಕ ರಸಾಯನಶಾಸ್ತ್ರವನ್ನು ಹೆಚ್ಚು ಪರಿಷ್ಕರಿಸುವುದನ್ನು ಖಚಿತಪಡಿಸಿಕೊಳ್ಳಿ, ಏಕೆಂದರೆ ಈ ಭಾಗಗಳಿಗೆ ಕೊನೆಯಲ್ಲಿ ಹೆಚ್ಚಿನ ಪರಿಷ್ಕರಣೆ ಅಗತ್ಯವಿರುತ್ತದೆ. ಪರೀಕ್ಷೆಗೆ ಸಮರ್ಪಕವಾಗಿ ತಯಾರಾಗಲು ಪರೀಕ್ಷೆಯ ಸಮಯದಲ್ಲಿ ಅಣಕು ಪರೀಕ್ಷೆಗಳು ಮತ್ತು ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದು ಸೂಕ್ತವಾಗಿದೆ.

3. ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಿ :
 

3. ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸಿ :

ಆಕಾಂಕ್ಷಿಗಳು ಸಾಮಾನ್ಯವಾಗಿ ಪರೀಕ್ಷೆಯ ಸಮಯದಲ್ಲಿ ಅತಿಯಾದ ಒತ್ತಡವನ್ನು ಅನುಭವಿಸುತ್ತಾರೆ. ನೀವು ಅತಿಯಾಗಿ ಯೋಚಿಸಿದಾಗಲೆಲ್ಲಾ ನಿಮ್ಮನ್ನು ಬೇರೆ ಚಟುವಟಿಕೆಗಳಿಗೆ ಒಗ್ಗಿಸಿಕೊಳ್ಳಿ, ಹೀಗೆ ಮಾಡುವ ಮೂಲಕ ನಿಮ್ಮಲ್ಲಿರುವ ನಕಾರಾತ್ಮಕ ಆಲೋಚನೆಗಳನ್ನು ತಪ್ಪಿಸುವುದು ಮುಖ್ಯ.

4. ಆರೋಗ್ಯಕರ ಜೀವನಶೈಲಿ :

4. ಆರೋಗ್ಯಕರ ಜೀವನಶೈಲಿ :

ಅಭ್ಯಾಸ ಮತ್ತು ಅಧ್ಯಯನ ಮುಖ್ಯ, ಆದರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಆಕಾಂಕ್ಷಿಗಳು ತಮ್ಮ ಜೀವನಶೈಲಿಯಲ್ಲಿ ಆರೋಗ್ಯಕರ ಆಹಾರ ಯೋಜನೆ ಮತ್ತು ಕನಿಷ್ಠ ಆರರಿಂದ ಎಂಟು ಗಂಟೆಗಳ ನಿದ್ರೆಯನ್ನು ಒಳಗೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು ಏಕೆಂದರೆ ಅದು ಉತ್ತಮ ಗಮನ ಮತ್ತು ಕಾರ್ಯಕ್ಷಮತೆಗೆ ಕಾರಣವಾಗುತ್ತದೆ.

5. ಉತ್ತಮವಾದ ನಿದ್ರೆ :

5. ಉತ್ತಮವಾದ ನಿದ್ರೆ :

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಸಾಕಷ್ಟು ನಿದ್ರೆಯನ್ನು ಮಾಡುವುದು ಮುಖ್ಯವಾಗಿದೆ. ಆಕಾಂಕ್ಷಿಗಳು ತಯಾರಿಯ ಹಂತದಲ್ಲಿ ವಿಶೇಷವಾಗಿ ಕೊನೆಯ ತಿಂಗಳಲ್ಲಿ ಬೇಗನೆ ಏಳುವುದನ್ನು ರೂಢಿಸಿಕೊಳ್ಳಬೇಕು, ಇದರಿಂದ ಅವರು ಪರೀಕ್ಷೆಯ ಸಮಯದಲ್ಲಿ ಸಕ್ರಿಯರಾಗಿರುತ್ತಾರೆ.

For Quick Alerts
ALLOW NOTIFICATIONS  
For Daily Alerts

English summary
JEE advanced 2022 is scheduled on august 28. Here is the preparation tips for exam in Kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X