JEE Advanced 2022 Tips : ಜೆಇಇ ಪರೀಕ್ಷಾರ್ಥಿಗಳಿಗೆ ಅಂತಿಮ ಕ್ಷಣದ ತಯಾರಿಗೆ ಕಿವಿಮಾತು

JEE ಅಡ್ವಾನ್ಸ್ಡ್ 2022 ಪರೀಕ್ಷೆಯನ್ನು ಆಗಸ್ಟ್ 28ರ ಭಾನುವಾರದಂದು ನಡೆಸಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳು JEE ಅಡ್ವಾನ್ಸ್ಡ್ ಪರೀಕ್ಷೆಗೆ ಈಗಾಗಲೇ ಅತ್ಯುತ್ತಮ ರೀತಿಯಲ್ಲಿ ತಯಾರಿ ನಡೆಸುತ್ತಿದ್ದು, ಕೊನೆಯ ಕ್ಷಣದ ತಯಾರಿಯನ್ನು ನಡೆಸುತ್ತಿರುತ್ತಾರೆ.

ಭಾರತದ ಅತ್ಯುತ್ತಮ ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ಸೀಟು ಪಡೆದುಕೊಳ್ಳಲು ಆಸೆ ಹೊಂದಿರುವ ಅಭ್ಯರ್ಥಿಗಳು ಪರೀಕ್ಷೆಗೆ ಇನ್ನೆರಡು ದಿನಗಳು ಉಳಿದಿರುವುದರಿಂದ ಯಾವುದೇ ಹೊಸ ಅಧ್ಯಯನಗಳನ್ನು ಕೈಗೊಳ್ಳದಿರುವುದು ಒಳಿತು. ಬದಲಿಗೆ ವಿದ್ಯಾರ್ಥಿಗಳು ಇಲ್ಲಿಯವರೆಗೆ ಕಲಿತದ್ದನ್ನು ಪರಿಷ್ಕರಿಸಿ ಅಭ್ಯಾಸ ಮಾಡಬೇಕು ಮತ್ತು ತಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಬೇಕು.

ಗಣಿತಶಾಸ್ತ್ರಕ್ಕೆ ತಯಾರಾಗಲು ವಿದ್ಯಾರ್ಥಿಗಳು ಸಮಸ್ಯೆಗಳನ್ನು ಪರಿಹರಿಸಬೇಕು ಮತ್ತು ಎಲ್ಲಾ ಪ್ರಮುಖ ತಂತ್ರಗಳನ್ನು ಪರಿಷ್ಕರಿಸಬೇಕು. ರಸಾಯನಶಾಸ್ತ್ರದ ತಯಾರಿಗಾಗಿ ಸೂತ್ರಗಳು ಮತ್ತು ವಿಷಯ ಪರಿಷ್ಕರಣೆ ಮೇಲೆ ಕೇಂದ್ರೀಕರಿಸಿ. ವಿದ್ಯಾರ್ಥಿಗಳು ಭೌತಶಾಸ್ತ್ರದ ವಿಷಯಗಳ ಬಗ್ಗೆ ಸ್ಪಷ್ಟತೆಯನ್ನು ಹೊಂದಿರಬೇಕು ಮತ್ತು NCERT ಪುಸ್ತಕಗಳಿಂದ ಅಧ್ಯಯನವನ್ನು ಮಾಡಬೇಕು.

JEE ಅಡ್ವಾನ್ಸ್ಡ್ 2022 ಪರೀಕ್ಷೆಯು ಪೇಪರ್ 1 ಮತ್ತು ಪೇಪರ್ 2 ಎಂಬ ಎರಡು ಪತ್ರಿಕೆಗಳಿಗೆ ಆನ್‌ಲೈನ್ ಮೋಡ್‌ನಲ್ಲಿ ನಡೆಯುತ್ತದೆ. JEE ಅಡ್ವಾನ್ಸ್ಡ್ ಪರೀಕ್ಷೆಯ ಪೇಪರ್ 1 ಬೆಳಿಗ್ಗೆ 9 ರಿಂದ 12 ರವರೆಗೆ ಮತ್ತು ಪತ್ರಿಕೆ 2 ಮಧ್ಯಾಹ್ನ 2:30 ರಿಂದ ಸಂಜೆ 5:30 ರವರೆಗೆ ನಡೆಯಲಿದೆ. ಪರೀಕ್ಷೆಯ ಪ್ರವೇಶ ಪತ್ರವು ಅಧಿಕೃತ ವೆಬ್‌ಸೈಟ್ - jeeadv.ac.in ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ.

ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ಕೊನೆಯ ಕ್ಷಣದ ತಯಾರಿಗೆ ಸಲಹೆಗಳು

JEE ಅಡ್ವಾನ್ಸ್ಡ್ 2022 ಪರೀಕ್ಷೆ: ಕೊನೆಯ ಕ್ಷಣದಲ್ಲಿ ನೆನಪಿಡಬೇಕಾದ ಅಂಶಗಳು ಇಲ್ಲಿವೆ :

* ಪರೀಕ್ಷೆಯು ಆರು ಗಂಟೆಗಳ ಅವಧಿಯದ್ದಾಗಿರುವುದರಿಂದ ವಿದ್ಯಾರ್ಥಿಗಳು ಪರೀಕ್ಷೆಯ ಕೇಂದ್ರದಲ್ಲಿ ಆರು ಗಂಟೆಗಳ ಕಾಲ ತಮ್ಮ ಗಮನವನ್ನು ತಾವು ಕೇಂದ್ರೀಕರಿಸಿಕೊಳ್ಳಬೇಕು ಎಂಬುದನ್ನು ನೆನಪಿನಲ್ಲಿಡಬೇಕು.

* ಈಗಾಗಲೇ ಪ್ರಯತ್ನಿಸಿದ ಅಣಕು ಪತ್ರಿಕೆ ಮತ್ತು ಪ್ರಶ್ನೆಗಳನ್ನು ಅಭ್ಯಾಸ ಮಾಡುವುದು ಈ ಸಮಯದಲ್ಲಿ ಉತ್ತಮವಾದ ಅಧ್ಯಯನವಾಗಿದೆ.

* ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಸೂತ್ರಗಳು, ಪ್ರಮೇಯಗಳು ಮತ್ತು ಪ್ರತಿಕ್ರಿಯೆಗಳನ್ನು ಕೇಂದ್ರೀಕರಿಸಬೇಕು ಮತ್ತು ಪರಿಷ್ಕರಿಸಬೇಕು.

JEE ಅಡ್ವಾನ್ಸ್ಡ್ ಪರೀಕ್ಷೆಯ ಪತ್ರಿಕೆಗೆ ನಿಗದಿತ ಸಮಯದಲ್ಲಿ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವ ಬಗ್ಗೆ ಗಮನಕೊಡುವುದಲ್ಲ, ನಿಗದಿಪಡಿಸಿದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವ ಬಗ್ಗೆ ವಿದ್ಯಾರ್ಥಿಗಳು ಸಮಯವನ್ನು ಹೇಗೆ ನಿರ್ವಹಿಸಬೇಕು ಎಂದು ತಿಳಿದಿರಬೇಕು.

ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಬಹುದಾದ ವಿಷಯಗಳ ಮೇಲೆ ಕೇಂದ್ರೀಕರಿಸುವ ಮೂಲಕ ತಮ್ಮ ಕೊನೆಯ ನಿಮಿಷದ JEE ಅಡ್ವಾನ್ಸ್ಡ್ ಸಿದ್ಧತೆಯನ್ನು ಅತ್ಯುತ್ತಮವಾಗಿಸಿಕೊಳ್ಳಬೇಕು.

ಎಲ್ಲಕ್ಕಿಂತ ಹೆಚ್ಚಾಗಿ ಆಹಾರ ಮತ್ತು ನಿದ್ರೆಯ ಕೊರತೆಯು ದೇಹ ಮತ್ತು ಮನಸ್ಸಿಗೆ ಅಡ್ಡಿಯಾಗುವುದರಿಂದ ಪರೀಕ್ಷಾರ್ಥಿಗಳು ಸರಿಯಾದ ಆಹಾರ ಮತ್ತು ಕನಿಷ್ಠ ಎಂಟು ಗಂಟೆಗಳ ನಿದ್ದೆ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
JEE advanced 2022 is scheduled on august 28. Here is the tips for aspirants during last minute preparation.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X